logo
ಕನ್ನಡ ಸುದ್ದಿ  /  Photo Gallery  /  Amit Shah Gets Huge Applause After He Stops Speech During Azaan In Kashmir

Amit Shah: ಅಝಾನ್‌ ವೇಳೆ ಭಾಷಣ ನಿಲ್ಲಿಸಿದ ಅಮಿತ್‌ ಶಾ: ಕಣಿವೆ ಜನರಿಂದ ಕರತಾಡನ

Oct 06, 2022 11:57 AM IST

ಬಾರಾಮುಲ್ಲಾ: ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ನಡೆದ ಬಿಜೆಪಿ ರ‍್ಯಾಲಿಯ ವೇಳೆ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಅಝಾನ್‌ ವೇಳೆ ತಮ್ಮ ಭಾಷಣವನ್ನು ನಿಲ್ಲಿಸಿದ್ದಾರೆ. ಅಮಿತ್‌ ಶಾ ಅವರ ಈ ನಡೆಯನ್ನು ಕಣಿವೆಯ ಜನರು ಕರಡಾತನ ಮೂಲಕ ಸ್ವಾಗತಿಸಿದ್ದಾರೆ. ಉತ್ತರ ಕಾಶ್ಮೀರ ಜಿಲ್ಲೆಯ ಶೋಕತ್ ಅಲಿ ಸ್ಟೇಡಿಯಂನಲ್ಲಿ ಅರ್ಧ ಗಂಟೆಯ ಸುದೀರ್ಘ ಭಾಷಣದಲ್ಲಿ, ಅಮಿತ್‌ ಶಾ ಅವರು ಸಮೀಪದ ಮಸೀದಿಯಿಂದ ಅಝಾನ್‌ ಕೇಳಿ ಬಂದಿದ್ದರಿಂದ ಐದು ನಿಮಿಷಗಳ ಕಾಲ ತಮ್ಮ ಭಾಷಣವನ್ನು ನಿಲ್ಲಿಸಿದರು.

  • ಬಾರಾಮುಲ್ಲಾ: ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ನಡೆದ ಬಿಜೆಪಿ ರ‍್ಯಾಲಿಯ ವೇಳೆ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಅಝಾನ್‌ ವೇಳೆ ತಮ್ಮ ಭಾಷಣವನ್ನು ನಿಲ್ಲಿಸಿದ್ದಾರೆ. ಅಮಿತ್‌ ಶಾ ಅವರ ಈ ನಡೆಯನ್ನು ಕಣಿವೆಯ ಜನರು ಕರಡಾತನ ಮೂಲಕ ಸ್ವಾಗತಿಸಿದ್ದಾರೆ. ಉತ್ತರ ಕಾಶ್ಮೀರ ಜಿಲ್ಲೆಯ ಶೋಕತ್ ಅಲಿ ಸ್ಟೇಡಿಯಂನಲ್ಲಿ ಅರ್ಧ ಗಂಟೆಯ ಸುದೀರ್ಘ ಭಾಷಣದಲ್ಲಿ, ಅಮಿತ್‌ ಶಾ ಅವರು ಸಮೀಪದ ಮಸೀದಿಯಿಂದ ಅಝಾನ್‌ ಕೇಳಿ ಬಂದಿದ್ದರಿಂದ ಐದು ನಿಮಿಷಗಳ ಕಾಲ ತಮ್ಮ ಭಾಷಣವನ್ನು ನಿಲ್ಲಿಸಿದರು.
ಅಮಿತ್‌ ಶಾ ಭಾಷಣ ಮಾಡುತ್ತಿದ್ದಗ ಸಮೀಪದ ಮಸೀದಿಯಿಂದ ಅಝಾನ್‌ ಕೇಳಿಬಂದಿತು. ಆಗ ಮಸೀದಿಯಲ್ಲಿ ಏನಾದರೂ ನಡೆಯುತ್ತಿದೆಯೇ ಎಂದು ಅಮಿತ್‌ ಶಾ ಪ್ರಶ್ನಿಸಿದರು. ಅದಕ್ಕೆ ವೇದಿಕೆಯಲ್ಲಿದ್ದ ನಾಯಕರೊಬ್ಬರು, ಅಝಾನ್‌ ಪ್ರಾರ್ಥನೆ ನಡೆಯುತ್ತಿದೆ ಎಂದು ಉತ್ತರಿಸಿದರು. ಅಮಿತ್ ಶಾ ಅವರು ತಮ್ಮ ಭಾಷಣವನ್ನು ತಕ್ಷಣವೇ ನಿಲ್ಲಿಸಿದರು.
(1 / 5)
ಅಮಿತ್‌ ಶಾ ಭಾಷಣ ಮಾಡುತ್ತಿದ್ದಗ ಸಮೀಪದ ಮಸೀದಿಯಿಂದ ಅಝಾನ್‌ ಕೇಳಿಬಂದಿತು. ಆಗ ಮಸೀದಿಯಲ್ಲಿ ಏನಾದರೂ ನಡೆಯುತ್ತಿದೆಯೇ ಎಂದು ಅಮಿತ್‌ ಶಾ ಪ್ರಶ್ನಿಸಿದರು. ಅದಕ್ಕೆ ವೇದಿಕೆಯಲ್ಲಿದ್ದ ನಾಯಕರೊಬ್ಬರು, ಅಝಾನ್‌ ಪ್ರಾರ್ಥನೆ ನಡೆಯುತ್ತಿದೆ ಎಂದು ಉತ್ತರಿಸಿದರು. ಅಮಿತ್ ಶಾ ಅವರು ತಮ್ಮ ಭಾಷಣವನ್ನು ತಕ್ಷಣವೇ ನಿಲ್ಲಿಸಿದರು.(ANI)
ಸ್ವಲ್ಪ ಸಮಯದ ನಂತರ ಅಝಾನ್‌ ಪ್ರಾರ್ಥನೆ ಮುಕ್ತಾಯ ಕಂಡಿತು. ಆಗ ಅಮಿತ್‌ ಶಾ ಅವರು ನಾನು ಈಗ ಭಾಷಣವನ್ನು ಮುಂದುವರೆಸಬಹುದೇ ಎಂದು ನೆರೆದ ಜನರನ್ನು ಕೇಳಿದರು. ಇದಕ್ಕೆ ಭಾರೀ ಚಪ್ಪಾಳೆ ಮೂಲಕ ಜನರು ಭಾಷಣ ಮುಂದುವರೆಸಲು ಅನುಮತಿ ನೀಡಿದರು.
(2 / 5)
ಸ್ವಲ್ಪ ಸಮಯದ ನಂತರ ಅಝಾನ್‌ ಪ್ರಾರ್ಥನೆ ಮುಕ್ತಾಯ ಕಂಡಿತು. ಆಗ ಅಮಿತ್‌ ಶಾ ಅವರು ನಾನು ಈಗ ಭಾಷಣವನ್ನು ಮುಂದುವರೆಸಬಹುದೇ ಎಂದು ನೆರೆದ ಜನರನ್ನು ಕೇಳಿದರು. ಇದಕ್ಕೆ ಭಾರೀ ಚಪ್ಪಾಳೆ ಮೂಲಕ ಜನರು ಭಾಷಣ ಮುಂದುವರೆಸಲು ಅನುಮತಿ ನೀಡಿದರು.(ANI)
ಅಮಿತ್‌ ಶಾ ಅವರು ಅಝಾನ್‌ಗೆ ತೋರಿದ ಗೌರವ ಕಂಡು ನೆರೆದ ಸಭೀಕರು ಚಪ್ಪಾಳೆ ತಟ್ಟಿ ಸ್ವಾಗತಿಸಿದರು. ಅಲ್ಲದೇ ಭಾಷಣ ಮುಗಿಸಿ ಹೊರಡಲು ಮುಂದಾದ ಅಮಿತ್‌ ಶಾ ಅವರ ಪರ ಘೋಷಣೆಗಳನ್ನು ಕೂಗಿದರು.
(3 / 5)
ಅಮಿತ್‌ ಶಾ ಅವರು ಅಝಾನ್‌ಗೆ ತೋರಿದ ಗೌರವ ಕಂಡು ನೆರೆದ ಸಭೀಕರು ಚಪ್ಪಾಳೆ ತಟ್ಟಿ ಸ್ವಾಗತಿಸಿದರು. ಅಲ್ಲದೇ ಭಾಷಣ ಮುಗಿಸಿ ಹೊರಡಲು ಮುಂದಾದ ಅಮಿತ್‌ ಶಾ ಅವರ ಪರ ಘೋಷಣೆಗಳನ್ನು ಕೂಗಿದರು.(ANI)
ವೇದಿಕೆಯಲ್ಲಿದ್ದ ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಮತ್ತು ಪ್ರಧಾನಮಂತ್ರಿ ಕಚೇರಿಯ (ಪಿಎಂಒ) ರಾಜ್ಯ ಸಚಿವ ಜಿತೇಂದರ್ ಸಿಂಗ್ ಅವರು ಸಭೆಯನ್ನುದ್ದೇಶಿಸಿ ಮಾತನಾಡಲಿಲ್ಲ.
(4 / 5)
ವೇದಿಕೆಯಲ್ಲಿದ್ದ ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಮತ್ತು ಪ್ರಧಾನಮಂತ್ರಿ ಕಚೇರಿಯ (ಪಿಎಂಒ) ರಾಜ್ಯ ಸಚಿವ ಜಿತೇಂದರ್ ಸಿಂಗ್ ಅವರು ಸಭೆಯನ್ನುದ್ದೇಶಿಸಿ ಮಾತನಾಡಲಿಲ್ಲ.(ANI)
ಈ ಹಿಂದೆ ಪಶ್ಚಿಮ ಬಂಗಾಳದಲ್ಲಿ ನಡೆದ ಬಿಜೆಪಿಯ ಬೃಹತ್ ರ‍್ಯಾಲಿಯಲ್ಲಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಕೂಡ ಅಝಾನ್‌ ನಡುವೆ ತಮ್ಮ ಭಾಷಣ ನಿಲ್ಲಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
(5 / 5)
ಈ ಹಿಂದೆ ಪಶ್ಚಿಮ ಬಂಗಾಳದಲ್ಲಿ ನಡೆದ ಬಿಜೆಪಿಯ ಬೃಹತ್ ರ‍್ಯಾಲಿಯಲ್ಲಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಕೂಡ ಅಝಾನ್‌ ನಡುವೆ ತಮ್ಮ ಭಾಷಣ ನಿಲ್ಲಿಸಿದ್ದನ್ನು ಇಲ್ಲಿ ಸ್ಮರಿಸಬಹುದು.(ANI)

    ಹಂಚಿಕೊಳ್ಳಲು ಲೇಖನಗಳು