logo
ಕನ್ನಡ ಸುದ್ದಿ  /  Photo Gallery  /  Bollywood News Musical Block Buster Aashiqui Hindi Movie Actress Anu Aggarwal Photo Gallery Mahesh Bhatt Direction Rsm

Anu Aggarwal: ಒಂದು ಕಾಲದ ಅತಿಲೋಕ ಸುಂದರಿ ಆಶಿಕಿ ಹಿಂದಿ ಸಿನಿಮಾ ನಟಿ ಅನು ಅಗರ್‌ವಾಲ್‌ ಮುಖ ಈ ರೀತಿ ಬದಲಾಗಿದ್ದು ಏಕೆ

May 18, 2023 11:49 AM IST

ಮೇ ದುನಿಯಾ ಬುಲಾದೂಂಗಿ ತೇರೆ ಆಶಿಕ್‌ ಮೇ… ಆಶಿಕಿ ಚಿತ್ರದ ಈ ಹಾಡನ್ನು ಯಾವ ಸಿನಿಮಾ ಪ್ರೇಮಿಗಳಿಂದಲೂ ಮರೆಯಲು ಸಾಧ್ಯವಿಲ್ಲ. ಅದರಲ್ಲೂ ಪ್ರೇಮಿಗಳಿಗಂತೂ ಈ ಹಾಡು ಮೋಸ್ಟ್‌ ಫೇವರೆಟ್‌. 

ಆಶಿಕಿ ಸಿನಿಮಾ 1990ರಲ್ಲಿ ತೆರೆ ಕಂಡು ಬ್ಲಾಕ್‌ ಬಸ್ಟರ್‌ ಆಗಿತ್ತು. ಅಂದಿನ ಕಾಲೇಜು ಯುವಕ-ಯುವತಿಯರು ಈ ಸಿನಿಮಾವನ್ನು ಸಾಕಷ್ಟು ಬಾರಿ ನೋಡಿ ಬಂದಿದ್ದರು. ಸಿನಿಮಾ ಕಥೆ, ಹಾಡುಗಳು, ನಾಯಕ-ನಾಯಕಿಯ ಕೆಮಿಸ್ಟ್ರಿ ಎಲ್ಲವೂ ಜನರಿಗೆ ಬಹಳ ಇಷ್ಟವಾಗಿತ್ತು. 
(1 / 13)
ಆಶಿಕಿ ಸಿನಿಮಾ 1990ರಲ್ಲಿ ತೆರೆ ಕಂಡು ಬ್ಲಾಕ್‌ ಬಸ್ಟರ್‌ ಆಗಿತ್ತು. ಅಂದಿನ ಕಾಲೇಜು ಯುವಕ-ಯುವತಿಯರು ಈ ಸಿನಿಮಾವನ್ನು ಸಾಕಷ್ಟು ಬಾರಿ ನೋಡಿ ಬಂದಿದ್ದರು. ಸಿನಿಮಾ ಕಥೆ, ಹಾಡುಗಳು, ನಾಯಕ-ನಾಯಕಿಯ ಕೆಮಿಸ್ಟ್ರಿ ಎಲ್ಲವೂ ಜನರಿಗೆ ಬಹಳ ಇಷ್ಟವಾಗಿತ್ತು. (PC: Anu Aggarwal social media)
ಮಹೇಶ್‌ ಭಟ್‌ ನಿರ್ದೇಶಿಸಿದ್ದ ಈ ಚಿತ್ರದಲ್ಲಿ ಅನು ಅಗರ್‌ವಾಲ್‌ ಹಾಗೂ ರಾಹುಲ್‌ ರಾಯ್‌ ಗಮನ ಸೆಳೆದಿದ್ದರು. ಇಬ್ಬರ ಕೆಮಿಸ್ಟ್ರಿ ತೆರೆ ಮೇಲೆ ಚೆನ್ನಾಗಿ ವರ್ಕೌಟ್‌ ಆಗಿತ್ತು. 
(2 / 13)

ಇದೀಗ ರಾಹುಲ್‌ ರಾಯ್‌ ಹಾಗೂ ಅನು ಅಗರ್‌ವಾಲ್‌ ಇಬ್ಬರೂ ನಟನೆಯಿಂದ ದೂರಾಗಿದ್ದಾರೆ. 1996ರಲ್ಲಿ ತೆರೆ ಕಂಡ ರಿಟರ್ನ್‌ ಆಫ್‌ ಜೇವಾಲ್‌ ಥೀವ್‌ ಅನು ಅಗರ್‌ವಾಗಲ್‌ ಕೊನೆಯ ಸಿನಿಮಾ ಆದರೆ, 2020 ರಲ್ಲಿ ತೆರೆ ಕಂಡ ಆಗ್ರಾ, ರಾಹುಲ್‌ ರಾಯ್‌ ಕೊನೆಯ ಸಿನಿಮಾ. 
(3 / 13)

ಅನು ಅಗರ್‌ವಾಲ್‌ ವಿಚಾರಕ್ಕೆ ಬರುವುದಾದರೆ ಈಗ ಈಕೆ ಸಂಪೂರ್ಣ ಬದಲಾಗಿದ್ದಾರೆ. ಒಂದು ಕಾಲದ ಬಾಲಿವುಡ್‌ ಚೆಲುವೆ, ತಮ್ಮ ಸೌಂದರ್ಯದಿಂದಲೇ ಹುಡುಗರ ಮನಸ್ಸು ಗೆದ್ದಿದ್ದ ಅನು ಅಗರ್‌ವಾಲ್‌ ಮುಖ ಈ ಬಹಳ ಬದಲಾಗಿದೆ. 
(4 / 13)

1999 ರಲ್ಲಿ ಅನು ಅಗರ್‌ವಾಲ್‌ ಮೇಜರ್‌ ಆಕ್ಸಿಡೆಂಟ್‌ನಿಂದಾಗಿ ಒಂದು ತಿಂಗಳ ಕಾಲ ಕೋಮಾದಲ್ಲಿದ್ದರು. ಆಕೆ ಚೇತರಿಸಿಕೊಳ್ಳಲು ಹಲವು ವರ್ಷಗಳೇ ಕಳೆದುಹೋದವು. ಹೇಗೋ ಆರೋಗ್ಯ ಸಮಸ್ಯೆಯಿಂದ ಹೊರಬಂದ ಅನು ಮುಖಕ್ಕೆ ಪ್ಲಾಸ್ಟಿಕ್‌ ಸರ್ಜರಿ ಮಾಡಿದ್ದರಿಂದ ಅವರ ಮುಖ ಚಹರೆ ಈಗ ಬದಲಾಗಿದೆ. 
(5 / 13)

ದೆಹಲಿ ಮೂಲದ ಅನು ಅಗರ್‌ವಾಲ್‌ ದೆಹಲಿ ವಿಶ್ವವಿದ್ಯಾಲಯದಿಂದ ಸಮಾಜಶಾಸ್ತ್ರದಲ್ಲಿ ಚಿನ್ನದ ಪದಕ ಪಡೆದಿದ್ದಾರೆ. ಚಿಕ್ಕಂದಿನಿಂದ ಮಾಡೆಲಿಂಗ್‌ನಲ್ಲಿ ಗುರುತಿಸಿಕೊಂಡಿದ್ದ ಅನು ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ಬಹಾನೆ ಎಂಬ ಧಾರಾವಾಹಿ ಮೂಲಕ ಬಣ್ಣದ ಬದುಕು ಆರಂಭಿಸಿದರು. 
(6 / 13)

ಧಾರಾವಾಹಿಯಲ್ಲಿ ಅನು ಅಗರ್‌ವಾಲ್‌ ನೋಡಿದ ನಿರ್ದೇಶಕ ಮಹೇಶ್‌ ಭಟ್‌ ಆಕೆಗೆ ತಮ್ಮ 'ಆಶಿಕಿ' ಸಿನಿಮಾದಲ್ಲಿ ನಟಿಸಲು ಅವಕಾಶ ನೀಡಿದರು. ವಿಶೇಷ ಎಂದರೆ ಇದು ಅನು ಹಾಗೂ ರಾಹುಲ್‌ ಇಬ್ಬರಿಗೂ ಮೊದಲ ಸಿನಿಮಾ
(7 / 13)

ಆಶಿಕಿ ನಂತರ ಅನು ಅಗರ್‌ವಾಲ್‌ ಗಜಾಬ್‌ ತಮಾಷಾ, ತಿರುಡಾ ತಿರುಡಾ, ಕಿಂಗ್‌ ಅಂಕಲ್‌, ಕಲರ್‌ ಕ್ಲೌಡ್‌, ಜನಮ್‌ ಕುಂಡಲಿ, ರಾಮ್‌ ಶಾಸ್ತ್ರ ಸೇರಿ ಕೆಲವು ಸಿನಿಮಾಗಳಲ್ಲಿ ನಟಿಸಿದರು. 
(8 / 13)

ಬಾಲಿವುಡ್‌ನಲ್ಲಿ ದೊಡ್ಡ ನಟಿಯಾಗಿ ಬೆಳೆಯುವ ಅವಕಾಶ ಇದ್ದಾ ಅನು ಅಗರ್‌ವಾಲ್‌, ಅಪಘಾತದಿಂದ ಅವಕಾಶಗಳನ್ನು ಕಳೆದುಕೊಂಡರು. 
(9 / 13)

ಅಪಘಾತವಾಗಿ ನನ್ನ ಮುಖ ಬದಲಾದ ನಂತರ ನಾನು ಮಾನಸಿಕವಾಗಿ ಬಹಳ ನೊಂದಿದ್ದೆ. ಆದರೆ ಜನರು ನನಗೆ ಧೈರ್ಯ ತುಂಬಿದರು. ದೈಹಿಕವಾಗಿ ಸಾಧ್ಯವಾಗದಿದ್ದರೂ ಮಾನಸಿಕವಾಗಿ ಮೊದಲಿನಂತೆ ಆಗಬೇಕು ಎಂದು ನಿರ್ಧರಿಸಿ ಈ ಹಂತಕ್ಕೆ ಬಂದಿದ್ದೇನೆ ಎಂದು ಅನು ಅಗರ್‌ವಾಲ್‌ ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ. 
(10 / 13)

ಅನು ಅಗರ್‌ವಾಲ್‌ ಸುಮಾರು 25 ವರ್ಷಗಳ ಕಾಲ ಬಣ್ಣದ ಲೋಕದಿಂದ ದೂರ ಉಳಿದಿದ್ದರು. ಇದೀಗ ಅವರು ಸೋಷಿಯಲ್‌ ಮೀಡಿಯಾದಲ್ಲಿ ಸಕ್ರಿಯರಾಗಿದ್ದಾರೆ. ಫೋಟೋ ಶೂಟ್‌ ಮಾಡಿಸಿ ಫಾಲೋವರ್‌ಗಳ ಜೊತೆ ಶೇರ್‌ ಮಾಡಿಕೊಳ್ಳುತ್ತಾರೆ. 
(11 / 13)

 ಇಂಡಿಯನ್‌ ಐಡಲ್‌ 13 ಸಂಚಿಕೆಯಲ್ಲಿ ಅನು ಅಗರ್‌ವಾಲ್‌ ದೃಶ್ಯಗಳನ್ನು ವಾಹಿನಿ ಕತ್ತರಿಸಿದಾಗ ಜನರು ವಾಹಿನಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಎಲ್ಲವನ್ನೂ ಹಣದ ದೃಷ್ಟಿಯಿಂದ ನೋಡಬೇಡಿ, ಮಾನವೀಯತೆಯಿಂದ ವರ್ತಿಸಿ ಎಂದು ಕಿಡಿ ಕಾರಿದ್ದರು. 
(12 / 13)

ಅನು ಅಗರ್‌ವಾಲ್‌ ಮತ್ತೆ ನಟಿಸುವ ಆಸೆ ವ್ಯಕ್ತಪಡಿಸಿದ್ದಾರೆ. ಸಿನಿಮಾದಲ್ಲಿ ಉತ್ತಮ ಅವಕಾಶ ದೊರೆತರೆ ಮತ್ತೆ ಅನುವನ್ನು ಬೆಳ್ಳಿ ತೆರೆ ಮೇಲೆ ನೋಡಬಹುದು. 
(13 / 13)

    ಹಂಚಿಕೊಳ್ಳಲು ಲೇಖನಗಳು