logo
ಕನ್ನಡ ಸುದ್ದಿ  /  Photo Gallery  /  Kannada Movie Update Education Minister Madhu Bangarappa Visits Ghost Movie Set Starrer Shivarajkumar Mnk

Madhu Bangarappa: ಘೋಸ್ಟ್‌ ಸಿನಿಮಾ ಸೆಟ್‌ನಲ್ಲಿ ಭಾವ ಬಾಮೈದ; ಶಿವಣ್ಣನ ಚಿತ್ರದ ಶೂಟಿಂಗ್‌ ಕಣ್ತುಂಬಿಕೊಂಡ ಮಿನಿಸ್ಟರ್‌ ಮಧು ಬಂಗಾರಪ್ಪ

Jun 03, 2023 10:10 AM IST

Ghost Movie Update: ಶ್ರೀನಿ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಘೋಸ್ಟ್‌ ಸಿನಿಮಾ ಶೂಟಿಂಗ್‌ ಹಂತದಲ್ಲಿಯೇ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಅದಕ್ಕೆ ಕಾರಣ, ಶಿವಣ್ಣನ ಲುಕ್‌, ಚಿತ್ರದ ಮೇಕಿಂಗ್.‌ ಈಗ ಈ ಸಿನಿಮಾದ ಸೆಟ್‌ಗೆ ಹೊಸ ಸರ್ಕಾರದ ಶಿಕ್ಷಣ ಸಚಿವ ಮತ್ತು ಶಿವಣ್ಣನ ಬಾಮೈದ ಮಧು ಬಂಗಾರಪ್ಪ ಭೇಟಿ ನೀಡಿದ್ದಾರೆ.

  • Ghost Movie Update: ಶ್ರೀನಿ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಘೋಸ್ಟ್‌ ಸಿನಿಮಾ ಶೂಟಿಂಗ್‌ ಹಂತದಲ್ಲಿಯೇ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಅದಕ್ಕೆ ಕಾರಣ, ಶಿವಣ್ಣನ ಲುಕ್‌, ಚಿತ್ರದ ಮೇಕಿಂಗ್.‌ ಈಗ ಈ ಸಿನಿಮಾದ ಸೆಟ್‌ಗೆ ಹೊಸ ಸರ್ಕಾರದ ಶಿಕ್ಷಣ ಸಚಿವ ಮತ್ತು ಶಿವಣ್ಣನ ಬಾಮೈದ ಮಧು ಬಂಗಾರಪ್ಪ ಭೇಟಿ ನೀಡಿದ್ದಾರೆ.
ನಟ ಶಿವರಾಜ್‌ಕುಮಾರ್‌ ಶ್ರೀನಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಘೋಸ್ಟ್‌ ಸಿನಿಮಾ ಶೂಟಿಂಗ್‌ನಲ್ಲಿ ಬಿಜಿಯಾಗಿದ್ದಾರೆ. ಚುನಾವಣೆ ಪ್ರಚಾರದ ನಿಮಿತ್ತ ಒಂದಷ್ಟು ದಿನ ಬಿಡುವು ಮಾಡಿಕೊಂಡಿದ್ದ ಶಿವಣ್ಣ ಇದೀಗ ಮತ್ತೆ ಕ್ಯಾಮರಾ ಮುಂದೆ ಎದುರಾಗಿದ್ದಾರೆ. 
(1 / 5)

ಬೆಂಗಳೂರಿನ ಚಾಮರಾಜಪೇಟೆಯ ಪೊಲೀಸ್‌ ಮೈದಾನದಲ್ಲಿ ಅದ್ದೂರಿ ಸೆಟ್‌ ಹಾಕಲಾಗಿದ್ದು, ಶೂಟಿಂಗ್‌ ನಡೆಯುತ್ತಿದೆ. ಹೀಗೆ ನಡೆಯುತ್ತಿದ್ದ ಶೂಟಿಂಗ್‌ ಸೆಟ್‌ಗೆ ನೂತನ ಕಾಂಗ್ರೆಸ್‌ ಸರ್ಕಾರದ ಶಿಕ್ಷಣ ಸಚಿವ ಮಧು ಬಂಗಾರಪ್ಪ ಭೇಟಿ ನೀಡಿದ್ದಾರೆ.
(2 / 5)

ಇದೇ ವೇಳೆ ಮಧು ಬಂಗಾರಪ್ಪ ಅವರ ಸಹೋದರಿ ಗೀತಾ ಶಿವರಾಜ್‌ಕುಮಾರ್‌, ಶಿವಣ್ಣ ಪುತ್ರಿ ನಿವೇದಿತಾ ಸೇರಿ ಹಲವರು ಸಿನಿಮಾ ಸೆಟ್‌ನಲ್ಲಿದ್ದರು. 
(3 / 5)

ಭಾವನ ಸಿನಿಮಾ ಸೆಟ್‌ನಲ್ಲಿ ಒಂದಷ್ಟು ಹೊತ್ತು ಸಮಯ ಕಳೆದ ಬಾಮೈದ ಮಧು ಬಂಗಾರಪ್ಪ, ಚಿತ್ರೀಕರಿಸಲಾದ ಬಂದು ಚಿತ್ರದ ತುಣುಕುಗಳನ್ನು ವೀಕ್ಷಣೆ ಮಾಡಿದ್ದಾರೆ. 
(4 / 5)

ಅಂದಹಾಗೆ, ಘೋಸ್ಟ್‌ ಚಿತ್ರವನ್ನು ಸಂದೇಶ್ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ಸಂದೇಶ್ ಎನ್ ನಿರ್ಮಾಣ ಮಾಡುತ್ತಿದ್ದಾರೆ. ಸೆಟ್‌ಗೆ ಭೇಟಿ ನೀಡಿದ ಸಚಿವ ಮಧು ಬಂಗಾರಪ್ಪ, ಚಿತ್ರತಂಡದ ಜೊತೆ ಮಾತುಕತೆ ನಡೆಸಿ ಚಿತ್ರ ಯಶಸ್ವಿಯಾಗಲಿ ಎಂದು ಹಾರೈಸಿದ್ದಾರೆ.
(5 / 5)

    ಹಂಚಿಕೊಳ್ಳಲು ಲೇಖನಗಳು