logo
ಕನ್ನಡ ಸುದ್ದಿ  /  Photo Gallery  /  Shani Jayanti Rituals Do Not Buy All These Things Today Friday You May Be In Dire Danger Hindu Ritual Detail Kannada Uks

Shani Jayanti Rituals: ಇಂದು ಶುಕ್ರವಾರ, ಶನಿ ಜಯಂತಿ; ವಿಶೇಷ ದಿನ ಈ ವಸ್ತುಗಳನ್ನು ಖರೀದಿಸದಿದ್ದರೆ ಒಳಿತು

May 19, 2023 06:15 AM IST

Shani Jayanti 2023 Rituals: ಇಂದು ಶುಕ್ರವಾರ (ಮೇ 19) ವಿಶೇಷ ದಿನ. ಶನಿ ಜಯಂತಿ. ಈ ದಿನ ಈ ವಸ್ತುಗಳನ್ನು ಖರೀದಿಸಿದರೆ ಅಪಾಯ ತಪ್ಪಿದ್ದಲ್ಲ ಎನ್ನುತ್ತಾರೆ ಈ ಬಗ್ಗೆ ನಂಬಿಕೆ ಉಳ್ಳವರು.

  • Shani Jayanti 2023 Rituals: ಇಂದು ಶುಕ್ರವಾರ (ಮೇ 19) ವಿಶೇಷ ದಿನ. ಶನಿ ಜಯಂತಿ. ಈ ದಿನ ಈ ವಸ್ತುಗಳನ್ನು ಖರೀದಿಸಿದರೆ ಅಪಾಯ ತಪ್ಪಿದ್ದಲ್ಲ ಎನ್ನುತ್ತಾರೆ ಈ ಬಗ್ಗೆ ನಂಬಿಕೆ ಉಳ್ಳವರು.
ಶನಿ ದೇವರನ್ನು ನ್ಯಾಯದ ದೇವರು ಮತ್ತು ಕರ್ಮವನ್ನು ಕೊಡುವ ದೇವರು ಎಂದು ಪರಿಗಣಿಸಲಾಗಿದೆ. ಪ್ರತಿಯೊಬ್ಬ ಮನುಷ್ಯನಿಗೆ ಅವನ ಕಾರ್ಯಗಳಿಗೆ ಅನುಗುಣವಾಗಿ ಒಳ್ಳೆಯ ಮತ್ತು ಕೆಟ್ಟ ಫಲಿತಾಂಶಗಳನ್ನು ನೀಡುವವನೇ ಈ ಶನಿದೇವ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಶನಿಯ ಆಶೀರ್ವಾದ ಪಡೆದರೆ ಜನರು ದೈಹಿಕವಾಗಿ, ಮಾನಸಿಕವಾಗಿ ಮತ್ತು ಆರ್ಥಿಕವಾಗಿ ಸದೃಢರಾಗುತ್ತಾರೆ ಎಂಬುದು ನಂಬಿಕೆ. ಮತ್ತೊಂದೆಡೆ, ಶನಿಯ ಅಶುಭ ನೆರಳಿಗೆ ಬಿದ್ದರೆ ರಾಜನು ಕೂಡ ಫಕೀರನಾಗಬಹುದು ಎಂಬುದು ಇನ್ನೊಂದು ನಂಬಿಕೆ.
(1 / 9)

ಪಂಚಾಂಗದ ಪ್ರಕಾರ, ಸೂರ್ಯದೇವ ಮತ್ತು ಛಾಯಾ ದಂಪತಿಗಳ ಮಗನಾದ ಶನಿದೇವನು ಜ್ಯೇಷ್ಠ ಮಾಸದ ಅಮವಾಸ್ಯೆಯ ತಿಥಿಯಂದು ಜನಿಸಿದ. ಈ ಕಾರಣಕ್ಕಾಗಿ ಈ ದಿನವನ್ನು ಶನಿ ಜಯಂತಿ ಎಂದು ಆಚರಿಸಲಾಗುತ್ತದೆ. ಈ ವರ್ಷ ಶನಿ ಜಯಂತಿ ಮೇ 19 ಶುಕ್ರವಾರ. ಈ ದಿನದಂದು ಶನಿದೇವನನ್ನು ಪೂಜಿಸಿ ವಿಶೇಷ ಕ್ರಮಗಳನ್ನು ಕೈಗೊಳ್ಳುವುದರಿಂದ ಶನಿಗ್ರಹದ ಸಂಕಷ್ಟದಿಂದ ಮುಕ್ತಿ ಪಡೆಯಬಹುದು ಎಂಬುದು ನಂಬಿಕೆ.
(2 / 9)

ಈ ದಿನ ಮತ್ತು ಶನಿವಾರದಂದು ಕೆಲವು ಕೆಲಸಗಳನ್ನು ಮಾಡಬಾರದು. ಶನಿವಾರದಂದು ಈ ವಸ್ತುಗಳನ್ನು ಖರೀದಿಸಿದರೆ ಶನಿದೇವನ ಕೋಪ ಬರುತ್ತದೆ ಎಂಬುದು ಜನರ ಒಂದು ನಂಬಿಕೆ. ಆದ್ದರಿಂದ ಪ್ರತಿ ಶನಿವಾರ ಮತ್ತುಇಂದು ಶುಕ್ರವಾರ ಈ ವಸ್ತುಗಳನ್ನು ಖರೀದಿಸಬೇಡಿ ಎನ್ನುತ್ತಾರೆ ಈ ಬಗ್ಗೆ ನಂಬಿಕೆ ಇರುವಂಥವರು.
(3 / 9)

ಕಪ್ಪು ಎಳ್ಳು: ಶನಿ ದೇವರಿಗೆ ಕಪ್ಪು ಎಳ್ಳನ್ನು ಅರ್ಪಿಸುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ, ಆದರೆ ಶನಿ ಜಯಂತಿಯಂದು ಕಪ್ಪು ಎಳ್ಳು ಖರೀದಿಸಬಾರದು. ಒಂದೊಮ್ಮೆ ಖರೀದಿ ಮಾಡಿದರೆ ಈ ಕಾರಣದಿಂದಾಗಿ, ಖರೀದಿ ಮಾಡಿದವರು ಪ್ರತಿಯೊಂದು ಕೆಲಸದಲ್ಲೂ ಕೆಲವು ಅಥವಾ ಇತರ ಅಡಚಣೆಗಳನ್ನು ಎದುರಿಸುತ್ತಲೇ ಇರುತ್ತಾರೆ ಎಂಬುದು ನಂಬಿಕೆ.
(4 / 9)

ಕಪ್ಪು ಪಾದರಕ್ಷೆ: ಶನಿ ಜಯಂತಿಯಂದು ಕಪ್ಪು ಬಣ್ಣದ ಪಾದರಕ್ಷೆಗಳನ್ನು ಖರೀದಿಸಬಾರದು. ಹೀಗೆ ಖರೀದಿ ಮಾಡಿದರೆ ಆ  ವ್ಯಕ್ತಿ ಎಲ್ಲ ಕ್ಷೇತ್ರಗಳಲ್ಲಿ ಸೋಲನ್ನು ಎದುರಿಸಬಹುದು. ಈ ದಿನ ಕಪ್ಪು ಬೂಟುಗಳನ್ನು ಧರಿಸದೇ ಇರಲು ಪ್ರಯತ್ನಿಸಿ ಎಂದು ಹೇಳುತ್ತಾರೆ ಈ ಬಗ್ಗೆ ನಂಬಿಕೆ ಇರುವಂಥವರು.
(5 / 9)

ಸಾಸಿವೆ ಎಣ್ಣೆ: ಶನಿ ಜಯಂತಿ ಮತ್ತು ಶನಿವಾರದಂದು ಸಾಸಿವೆ ಎಣ್ಣೆಯನ್ನು ಖರೀದಿಸಬಾರದು. ಈ ದಿನ ಸಾಸಿವೆ ಎಣ್ಣೆಯನ್ನು ಖರೀದಿಸುವುದರಿಂದ ಮನೆಯಲ್ಲಿ ಅನೇಕ ಸಮಸ್ಯೆಗಳು ಬರುತ್ತವೆ ಎಂದು ನಂಬಲಾಗಿದೆ.
(6 / 9)

ಕಬ್ಬಿಣದ ವಸ್ತುಗಳು: ಶಾಸ್ತ್ರಗಳ ಪ್ರಕಾರ, ಶನಿ ದೇವನು ನೇರವಾಗಿ ಕಬ್ಬಿಣದ ವಸ್ತುಗಳೊಂದಿಗೆ ಸಂಬಂಧ ಹೊಂದಿದ್ದಾನೆ. ಆದ್ದರಿಂದ, ಶನಿವಾರ ಮತ್ತು ಶನಿ ಮಹೋತ್ಸವದಂದು ಕಬ್ಬಿಣದ ವಸ್ತುಗಳನ್ನು ಖರೀದಿಸಬಾರದು. ಇದರಿಂದ ಶನಿದೇವ ಕೋಪಗೊಳ್ಳಬಹುದು ಎನ್ನುತ್ತಾರೆ ಈ ಆಚರಣೆ ಮೇಲೆ ನಂಬಿಕೆ ಇರುವಂಥವರು.
(7 / 9)

ಉಪ್ಪು: ಶನಿವಾರ ಅಥವಾ ಶನಿ ಜಯಂತಿಯಂದು ಉಪ್ಪನ್ನು ಖರೀದಿಸುವುದನ್ನು ತಪ್ಪಿಸಿ. ಈ ದಿನದಂದು ಉಪ್ಪನ್ನು ಖರೀದಿಸುವುದು ಸಾಲವನ್ನು ಹೆಚ್ಚಿಸುತ್ತದೆ. ಅಲ್ಲದೆ ಆರ್ಥಿಕ ಪರಿಸ್ಥಿತಿಗಳ ಮೇಲೆ ಕೆಟ್ಟ ಪರಿಣಾಮ ಬೀರಬಹುದು ಎಂದು ನಂಬಲಾಗಿದೆ.
(8 / 9)

ಬೇರೇನು?: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶನಿ ಜಯಂತಿಯಂದು ಈ ವಸ್ತುಗಳನ್ನು ಹೊರತುಪಡಿಸಿ ಕಪ್ಪು ಬಣ್ಣದ ಬಟ್ಟೆ, ಕಲ್ಲಿದ್ದಲು, ಕಾಡಿಗೆ, ಕಪ್ಪು ನಾಡಿ ಇತ್ಯಾದಿಗಳನ್ನು ಸಹ ಖರೀದಿಸಬಾರದು. ಶನಿವಾರವೂ ಅವುಗಳನ್ನು ಖರೀದಿಸಬೇಡಿ ಎನ್ನುತ್ತಾರೆ ಈ ಆಚರಣೆಯನ್ನು ನಂಬುವವರು.
(9 / 9)

    ಹಂಚಿಕೊಳ್ಳಲು ಲೇಖನಗಳು