logo
ಕನ್ನಡ ಸುದ್ದಿ  /  ಕ್ರೀಡೆ  /  Rajasthan Royals For Ipl 2023: ಸ್ಫೋಟಕ ಬ್ಯಾಟಿಂಗ್, ತೀಕ್ಷ್ಣ ಸ್ಪಿನ್; ಸ್ಯಾಮ್ಸನ್ ಪಡೆಗೆ ಬಲಿಷ್ಠ ಆಡುವ ಬಳಗ!

Rajasthan Royals for IPL 2023: ಸ್ಫೋಟಕ ಬ್ಯಾಟಿಂಗ್, ತೀಕ್ಷ್ಣ ಸ್ಪಿನ್; ಸ್ಯಾಮ್ಸನ್ ಪಡೆಗೆ ಬಲಿಷ್ಠ ಆಡುವ ಬಳಗ!

HT Kannada Desk HT Kannada

Mar 29, 2023 12:28 PM IST

ಜೋಸ್ ಬಟ್ಲರ್, ಯುಜ್ವೇಂದ್ರ ಚಹಾಲ್, ಆರ್ ಅಶ್ವಿನ್ ಮತ್ತು ಟ್ರೆಂಟ್ ಬೌಲ್ಟ್

  • ಅಗ್ರ ಕ್ರಮಾಂಕದಲ್ಲಿ ಬಟ್ಲರ್ ಈ ಬಾರಿಯೂ ಬ್ಯಾಟ್‌ ಬೀಸುವುದರಲ್ಲಿ ಯಾವುದೇ ಅನುಮಾನವಿಲ್ಲ. ಇದೇ ವೇಳೆ ದೇಶೀಯ ಋತುವಿನಲ್ಲಿ ಪ್ರಭಾವಶಾಲಿ ಪ್ರದರ್ಶನ ನೀಡಿರುವ ಯಶಸ್ವಿ ಜೈಸ್ವಾಲ್ ಅವರು ಬಟ್ಲರ್‌ ಜೊತೆಗೆ ಇನ್ನಿಂಗ್ಸ್‌ ತೆರೆಯಲಿದ್ದಾರೆ.

ಜೋಸ್ ಬಟ್ಲರ್, ಯುಜ್ವೇಂದ್ರ ಚಹಾಲ್, ಆರ್ ಅಶ್ವಿನ್ ಮತ್ತು ಟ್ರೆಂಟ್ ಬೌಲ್ಟ್
ಜೋಸ್ ಬಟ್ಲರ್, ಯುಜ್ವೇಂದ್ರ ಚಹಾಲ್, ಆರ್ ಅಶ್ವಿನ್ ಮತ್ತು ಟ್ರೆಂಟ್ ಬೌಲ್ಟ್

ಐಪಿಎಲ್‌ನ ಕಳೆದ ಆವೃತ್ತಿಯಲ್ಲಿ ಯಶಸ್ವಿ ಪ್ರದರ್ಶನ ನೀಡಿದ್ದ ರಾಜಸ್ಥಾನ್ ರಾಯಲ್ಸ್, ಶುಕ್ರವಾರದಿಂದ ಪ್ರಾರಂಭವಾಗುವ ಕ್ರಿಕೆಟ್‌ನ ಅತಿದೊಡ್ಡ ಹಬ್ಬದಲ್ಲಿ ಮತ್ತೊಮ್ಮೆ ಯಶಸ್ವಿಯಾಗುವ ಉತ್ಸಾಹದಲ್ಲಿದೆ. ಸಂಜು ಸ್ಯಾಮ್ಸನ್ ನೇತೃತ್ವದ ತಂಡವು, 2022ರ ಆವೃತ್ತಿಯಲ್ಲಿ ರನ್ನರ್‌ ಆಪ್‌ ಆಗಿ ಹೊರಹೊಮ್ಮಿತ್ತು. ಐಪಿಎಲ್‌ನ ಉದ್ಘಾಟನಾ ಆವೃತ್ತಿಯನ್ನು ಗೆದ್ದಿದ್ದ ರಾಯಲ್ಸ್, ಸುದೀರ್ಘ 14 ವರ್ಷಗಳ ಬಳಿಕ ಎರಡನೇ ಬಾರಿ ಫೈನಲ್‌ ಪ್ರವೇಶಿಸಿತ್ತು. ಆದರೆ ಸೀಸನ್‌ ಅನ್ನು ರನ್ನರ್ ಅಪ್ ಆಗಿ ಮುಗಿಸುವಲ್ಲಿ ಮಾತ್ರ ಶಕ್ತವಾಯ್ತು. ಸದ್ಯ ಹೊಚ್ಚಹೊಸ ಆವೃತ್ತಿಗೆ ದಿನಗಣನೆ ಆರಂಭವಾಗಿರುವಂತೆ, ರಾಯಲ್ಸ್ ಈ ಆವೃತ್ತಿಯಲ್ಲೂ ಬಲಿಷ್ಠ ಪ್ರದರ್ಶನ ನೀಡುವ ಸುಳಿವು ನೀಡುತ್ತಿದೆ.

ಟ್ರೆಂಡಿಂಗ್​ ಸುದ್ದಿ

42 ವರ್ಷದ ಎಂಎಸ್‌ ಧೋನಿ ಫಿಟ್ನೆಸ್ ಸೀಕ್ರೆಟ್ ಏನು; ಕೂಲ್ ಕ್ಯಾಪ್ಟನ್ ಡಯಟ್, ವರ್ಕೌಟ್ ಪ್ಲಾನ್ ಹೀಗಿರುತ್ತೆ

RCB vs CSK IPL 2024: ಆರ್‌ಸಿಬಿ ವಿರುದ್ಧದ ಪಂದ್ಯಕ್ಕೆ ಸಿಎಸ್‌ಕೆ ರಣತಂತ್ರ; ಚೆನ್ನೈ ಸೂಪರ್ ಕಿಂಗ್ಸ್ ಆಡುವ ಸಂಭಾವ್ಯ 11ರ ಬಳಗ ಹೀಗಿದೆ

ತಂದೆ-ತಾಯಿಯೂ ಕ್ರೀಡಾಪಟುಗಳು, ಕೋಚ್​ ಮಗಳನ್ನೇ ಪಟಾಯಿಸಿದ್ರು; ಇದು ನಿವೃತ್ತಿ ಘೋಷಿಸಿದ ಸುನಿಲ್ ಛೆಟ್ರಿ ಲೈಫ್​ಸ್ಟೋರಿ

ಅಂತಾರಾಷ್ಟ್ರೀಯ ಫುಟ್ಬಾಲ್​ಗೆ ಕಾಲ್ಚೆಂಡಿನ ಚತುರ ಸುನಿಲ್ ಛೆಟ್ರಿ ನಿವೃತ್ತಿ; ಈ ದಿನವೇ ದಿಗ್ಗಜ ಆಟಗಾರನ ಕೊನೆಯ ಪಂದ್ಯ

ಸ್ಟಾರ್‌ ಆಟಗಾರರ ದೊಡ್ಡ ಬಳಗ ಹೊಂದಿರುವ ರಾಯಲ್ಸ್‌ ತಂಡದಲ್ಲಿ, ಕಳೆದ ವರ್ಷ ಆರೆಂಜ್ ಕ್ಯಾಪ್‌ ಮತ್ತು ಪರ್ಪಲ್ ಕ್ಯಾಪ್ ಗೆದ್ದಿದ್ದಇಬ್ಬರೂ ಆಟಗಾರರಿದ್ದಾರೆ. ಜೋಸ್ ಬಟ್ಲರ್ ಮತ್ತು ಯಜುವೇಂದ್ರ ಚಾಹಲ್ ಮತ್ತೊಮ್ಮೆ ಜೈಪುರ ಮೂಲದ ಫ್ರಾಂಚೈಸಿ ಪರ ಅತ್ಯುತ್ತಮ ಪ್ರದರ್ಶನ ನೀಡಿ ಮತ್ತೊಮ್ಮೆ ಅದೇ ಕ್ಯಾಪ್‌ ಅನ್ನು ತಮ್ಮದಾಗಿಸುವ ಪ್ರಯತ್ನದಲ್ಲಿದ್ದಾರೆ.

ಆರಂಭಿಕ ಆಟಗಾರ ಬಟ್ಲರ್, ಕಳೆದ ವರ್ಷ ಅದ್ಭುತ ಫಾರ್ಮ್‌ನಲ್ಲಿದ್ದರು. ಆಡಿದ 17 ಪಂದ್ಯಗಳಿಂದ ಸುಮಾರು 150ರ ಸ್ಟ್ರೈಕ್ ರೇಟ್‌ನಲ್ಲಿ 863 ರನ್ ಪೇರಿಸಿದ್ದರು. ಇದೇ ವೇಳೆ ನಾಲ್ಕು ಸ್ಫೋಟಕ ಶತಕಗಳನ್ನು ಮತ್ತು ನಾಲ್ಕು ಅರ್ಧಶತಕಗಳನ್ನು ಸಹ ಸಿಡಿಸಿದ್ದರು. ಅವರು ಗಳಿಸಿದ ಗರಿಷ್ಠ ವೈಯಕ್ತಿಕ ಸ್ಕೋರ್ 116.

ಅಗ್ರ ಕ್ರಮಾಂಕದಲ್ಲಿ ಬಟ್ಲರ್ ಈ ಬಾರಿಯೂ ಬ್ಯಾಟ್‌ ಬೀಸುವುದರಲ್ಲಿ ಯಾವುದೇ ಅನುಮಾನವಿಲ್ಲ. ಇದೇ ವೇಳೆ ದೇಶೀಯ ಋತುವಿನಲ್ಲಿ ಪ್ರಭಾವಶಾಲಿ ಪ್ರದರ್ಶನ ನೀಡಿರುವ ಯಶಸ್ವಿ ಜೈಸ್ವಾಲ್ ಅವರು ಬಟ್ಲರ್‌ ಜೊತೆಗೆ ಇನ್ನಿಂಗ್ಸ್‌ ತೆರೆಯಲಿದ್ದಾರೆ. ಕನ್ನಡಿಗ ದೇವದತ್ ಪಡಿಕ್ಕಲ್ ಮೂರನೇ ಸ್ಥಾನವನ್ನು ತುಂಬಬಹುದು. ನಾಯಕ ಸಂಜು ಸ್ಯಾಮ್ಸನ್ ನಾಲ್ಕನೇ ಸ್ಥಾನದಲ್ಲಿ ಜವಾಬ್ದಾರಿಯುತ ಪಾತ್ರ ನಿರ್ವಹಿಸಬಹುದು.

ಶಿಮ್ರಾನ್ ಹೆಟ್ಮೆಯರ್ ಅವರು ರಾಯಲ್ಸ್‌ಗೆ ಮಧ್ಯ ಕ್ರಮಾಂಕದಲ್ಲಿ ಸ್ಫೋಟಕ ಆಟ ಆಡಲು ಎದುರು ನೋಡುತ್ತಿದ್ದಾರೆ. ಇದೇ ವೇಳೆ ಮುಂಬರುವ ಋತುವಿನಲ್ಲಿ ಒಂದು ಓವರ್‌ನಲ್ಲಿ ನಾಲ್ಕು ಸಿಕ್ಸರ್‌ಗಳನ್ನು ಬಾರಿಸುವುದಾಗಿ ಹೇಳಿಕೊಂಡಿರುವ ರಿಯಾನ್ ಪರಾಗ್, ವೆಸ್ಟ್ ಇಂಡೀಸ್ ಬ್ಯಾಟರ್‌ ಸ್ಥಾನಕ್ಕೆ ಬಡ್ತಿ ಪಡೆಯುತ್ತಾರೆಯೇ ಎಂಬುದು ಕುತೂಹಲಕಾರಿಯಾಗಿದೆ.

ಪರಾಗ್ ಕೂಡ ದೇಶೀಯ ಕ್ರಿಕೆಟ್‌ನಲ್ಲಿ ತಮ್ಮ ವೀರಾವೇಶದಿಂದ ಸಾಕಷ್ಟು ಗಮನ ಸೆಳೆದಿದ್ದಾರೆ. ಅಸ್ಸಾಂ ಆಲ್ ರೌಂಡರ್ ಐಪಿಎಲ್‌ನಲ್ಲೂ ಅದೇ ರೀತಿ ಪ್ರದರ್ಶನ ನೀಡಲು ಸಜ್ಜಾಗಿದ್ದಾರೆ. ಜೇಸನ್ ಹೋಲ್ಡರ್ ಅವರನ್ನು ಆಲ್ ರೌಂಡರ್ ಆಗಿ ಬಳಸಬಹುದು.

ಬೌಲಿಂಗ್‌ನಲ್ಲಿ ಸ್ಪಿನ್ ವಿಭಾಗವನ್ನು ಆರ್ ಅಶ್ವಿನ್ ಮತ್ತು ಚಹಾಲ್ ನೋಡಿಕೊಳ್ಳಬಹುದು. ಕಳೆದ ವರ್ಷ ಕೂಡಾ ಈ ಜೋಡಿ ಮೋಡಿ ಮಾಡಿತ್ತು. ಇದೇ ವೇಳೆ ಶತಕ ಪೂರೈಸಲು ಕೇವಲ ಎಂಟು ವಿಕೆಟ್‌ಗಳ ಅಂತರದಲ್ಲಿರುವ ಟ್ರೆಂಟ್ ಬೌಲ್ಟ್, ವೇಗದ ಬೌಲಿಂಗ್‌ ಅನ್ನು ಮುನ್ನಡೆಸುತ್ತಾರೆ. ಇದೇ ವೇಳೆ ಕುಲದೀಪ್ ಸೇನ್ ಎರಡನೇ ಸೀಮರ್ ಆಗಿ ತಂಡದಲ್ಲಿ ಸ್ಥಾನ ಪಡೆಯಬಹುದು.

ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ರಾಜಸ್ಥಾನ ರಾಯಲ್ಸ್‌ ತನ್ನ ಅಭಿಯಾನ ಆರಂಭಿಸಲಿದೆ.

ಐಪಿಎಲ್ 2023ಕ್ಕೆ ರಾಜಸ್ಥಾನ್ ರಾಯಲ್ಸ್ ಬಲಿಷ್ಠ ಆಡುವ ಬಳಗ

ಜೋಸ್ ಬಟ್ಲರ್, ಯಶಸ್ವಿ ಜೈಸ್ವಾಲ್, ದೇವದತ್ ಪಡಿಕ್ಕಲ್, ಸಂಜು ಸ್ಯಾಮ್ಸನ್, ರಿಯಾನ್ ಪರಾಗ್, ಶಿಮ್ರಾನ್ ಹೆಟ್ಮೆಯರ್, ಜೇಸನ್ ಹೋಲ್ಡರ್, ಆರ್ ಅಶ್ವಿನ್, ಯುಜ್ವೇಂದ್ರ ಚಾಹಲ್, ಟ್ರೆಂಟ್ ಬೌಲ್ಟ್, ಕುಲದೀಪ್ ಸೇನ್

ರಾಜಸ್ಥಾನ್ ರಾಯಲ್ಸ್ ಪೂರ್ಣ ತಂಡ

ಸಂಜು ಸ್ಯಾಮ್ಸನ್ (ನಾಯಕ & ವಿಕೆಟ್‌ ಕೀಪರ್), ಯಶಸ್ವಿ ಜೈಸ್ವಾಲ್, ಶಿಮ್ರಾನ್ ಹೆಟ್ಮೆಯರ್, ದೇವದತ್ ಪಡಿಕ್ಕಲ್, ಜೋಸ್ ಬಟ್ಲರ್, ಧ್ರುವ್ ಜುರೆಲ್, ರಿಯಾನ್ ಪರಾಗ್, ಸಂದೀಪ್ ಶರ್ಮಾ, ಟ್ರೆಂಟ್ ಬೌಲ್ಟ್, ಓಬೇದ್ ಮೆಕಾಯ್, ನವದೀಪ್ ಸೈನಿ, ಕುಲದೀಪ್‌ ಸೇನ್, ಕುಲದೀಪ್ ಯಾದವ್, ಆರ್ ಅಶ್ವಿನ್, ಯಜುವೇಂದ್ರ ಚಾಹಲ್, ಕೆಸಿ ಕಾರಿಯಪ್ಪ, ಜೇಸನ್ ಹೋಲ್ಡರ್, ಡೊನೊವನ್ ಫೆರೀರಾ, ಕುನಾಲ್ ರಾಥೋರ್, ಆಡಮ್ ಝಂಪಾ, ಕೆಎಂ ಆಸಿಫ್, ಮುರುಗನ್ ಅಶ್ವಿನ್, ಆಕಾಶ್ ವಶಿಷ್ಟ್, ಅಬ್ದುಲ್ ಪಿಎ, ಜೋ ರೂಟ್

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ