logo
ಕನ್ನಡ ಸುದ್ದಿ  /  ಕ್ರೀಡೆ  /  Umran And Haris Rauf: 'ಹ್ಯಾರಿಸ್‌ರಂತೆ ಉಮ್ರಾನ್ ಫಿಟ್ ಆಗಿಲ್ಲ; ಇವರಿಬ್ಬರ ಹೋಲಿಕೆಗೆ ಅರ್ಥವೇ ಇಲ್ಲ'

Umran and Haris Rauf: 'ಹ್ಯಾರಿಸ್‌ರಂತೆ ಉಮ್ರಾನ್ ಫಿಟ್ ಆಗಿಲ್ಲ; ಇವರಿಬ್ಬರ ಹೋಲಿಕೆಗೆ ಅರ್ಥವೇ ಇಲ್ಲ'

HT Kannada Desk HT Kannada

Jan 23, 2023 11:28 AM IST

ಉಮ್ರಾನ್ ಮಲಿಕ್, ಹಾರಿಸ್ ರೌಫ್

    • ಗಂಟೆಗೆ 159 ಕಿಮೀ ವೇಗದಲ್ಲಿ ಬೌಲಿಂಗ್‌ ಮಾಡಿರುವುದು ಹ್ಯಾರಿಸ್‌ ಅವರ ಅತಿ ವೇಗದ ಎಸೆತವಾಗಿದೆ. ಇತ್ತ ಭಾರತ ಕಂಡ ಅತ್ಯಂತ ವೇಗದ ಬೌಲರ್ ಆಗಿರುವ 23 ವರ್ಷ ವಯಸ್ಸಿನ ಉಮ್ರಾನ್‌, ಅಂತಾರಾಷ್ಟ್ರೀಯ ಪಂದ್ಯದಲ್ಲಿ 156 kmph ವೇಗದಲ್ಲಿ‌ ಚೆಂಡು ಎಸೆದಿದ್ದಾರೆ.
ಉಮ್ರಾನ್ ಮಲಿಕ್, ಹಾರಿಸ್ ರೌಫ್
ಉಮ್ರಾನ್ ಮಲಿಕ್, ಹಾರಿಸ್ ರೌಫ್

ಭಾರತದ ಯುವ ಯುವ ವೇಗಿ ಉಮ್ರಾನ್ ಮಲಿಕ್ ಮತ್ತು ಪಾಕಿಸ್ತಾನದ ವೇಗದ ಬೌಲರ್ ಹ್ಯಾರಿಸ್ ರೌಫ್, ಪ್ರಸ್ತುತ ವಿಶ್ವ ಕ್ರಿಕೆಟ್‌ನಲ್ಲಿ ನಿರಂತರವಾಗಿ 150 ಕಿಮೀ ವೇಗದಲ್ಲಿ ಬೌಲಿಂಗ್‌ ಮಾಡುವ ಅಗ್ರ ಬೌಲರ್‌ಗಳಾಗಿದ್ದಾರೆ. ಜಾಗತಿಕ ಕ್ರಿಕೆಟ್‌ನ ದಿಗ್ಗಜ ಹಾಗೂ ವೇಗಿ ಶೋಯೆಬ್ ಅಖ್ತರ್ ಅವರ ದಾಖಲೆಯನ್ನು ದೃಷ್ಟಿಯಲ್ಲಿಟ್ಟುಕೊಂಡು, ಈ ಇಬ್ಬರು ವೇಗಿಗಳನ್ನು ನಿರಂತರವಾಗಿ ಪರಸ್ಪರ ಹೋಲಿಸಲಾಗುತ್ತದೆ. ಆದಾಗ್ಯೂ, ಪಾಕಿಸ್ತಾನದ ಕಿಕೆಟಿಗ ಆಕಿಬ್ ಜಾವೇದ್, ಈ ಚರ್ಚೆಯಲ್ಲಿ ಯಾವುದೇ ಅರ್ಥವಿಲ್ಲ ಎಂದು ಹೇಳಿದ್ದಾರೆ.

ಟ್ರೆಂಡಿಂಗ್​ ಸುದ್ದಿ

42 ವರ್ಷದ ಎಂಎಸ್‌ ಧೋನಿ ಫಿಟ್ನೆಸ್ ಸೀಕ್ರೆಟ್ ಏನು; ಕೂಲ್ ಕ್ಯಾಪ್ಟನ್ ಡಯಟ್, ವರ್ಕೌಟ್ ಪ್ಲಾನ್ ಹೀಗಿರುತ್ತೆ

RCB vs CSK IPL 2024: ಆರ್‌ಸಿಬಿ ವಿರುದ್ಧದ ಪಂದ್ಯಕ್ಕೆ ಸಿಎಸ್‌ಕೆ ರಣತಂತ್ರ; ಚೆನ್ನೈ ಸೂಪರ್ ಕಿಂಗ್ಸ್ ಆಡುವ ಸಂಭಾವ್ಯ 11ರ ಬಳಗ ಹೀಗಿದೆ

ತಂದೆ-ತಾಯಿಯೂ ಕ್ರೀಡಾಪಟುಗಳು, ಕೋಚ್​ ಮಗಳನ್ನೇ ಪಟಾಯಿಸಿದ್ರು; ಇದು ನಿವೃತ್ತಿ ಘೋಷಿಸಿದ ಸುನಿಲ್ ಛೆಟ್ರಿ ಲೈಫ್​ಸ್ಟೋರಿ

ಅಂತಾರಾಷ್ಟ್ರೀಯ ಫುಟ್ಬಾಲ್​ಗೆ ಕಾಲ್ಚೆಂಡಿನ ಚತುರ ಸುನಿಲ್ ಛೆಟ್ರಿ ನಿವೃತ್ತಿ; ಈ ದಿನವೇ ದಿಗ್ಗಜ ಆಟಗಾರನ ಕೊನೆಯ ಪಂದ್ಯ

ಕಳೆದ ವರ್ಷ ಇಂಗ್ಲೆಂಡ್ ವಿರುದ್ಧದ ಟಿ20 ವಿಶ್ವಕಪ್‌ ಪಂದ್ಯದಲ್ಲಿ 159 ಕಿಮೀ ವೇಗದಲ್ಲಿ ಬೌಲಿಂಗ್‌ ಮಾಡಿರುವುದು ಹ್ಯಾರಿಸ್‌ ಅವರ ಅತಿ ವೇಗದ ಎಸೆತವಾಗಿದೆ. ಇತ್ತ ಭಾರತ ಕಂಡ ಅತ್ಯಂತ ವೇಗದ ಬೌಲರ್ ಆಗಿರುವ 23 ವರ್ಷ ವಯಸ್ಸಿನ ಉಮ್ರಾನ್‌, ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯವೊಂದರಲ್ಲಿ 157 kmph ವೇಗದಲ್ಲಿ ಬೌಲಿಂಗ್‌ ಮಾಡಿದ್ದರು. ಅಂತಾರಾಷ್ಟ್ರೀಯ ಪಂದ್ಯದಲ್ಲಿ ಅವರ ವೇಗವು 156 kmph ಆಗಿದೆ.

ಈವೆಂಟ್ಸ್ & ಹ್ಯಾಪನಿಂಗ್ಸ್ ಸ್ಪೋರ್ಟ್ಸ್‌ನೊಂದಿಗೆ ಮಾತನಾಡಿದ ಜಾವೇದ್‌ ಅವರಿಗೆ, ಉಮ್ರಾನ್ ಮತ್ತು ಹ್ಯಾರಿಸ್ ಬಗ್ಗೆ ಕೇಳಲಾಯಿತು. ಇವರಿಬ್ಬರ ವೇಗದ ಬೌಲಿಂಗ್‌ ಕುರಿತ ಹೋಲಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಇದು ಕೊಹ್ಲಿಯನ್ನು ವಿಶ್ವದ ಉಳಿದ ಬ್ಯಾಟರ್‌ಗಳೊಂದಿಗೆ ಹೋಲಿಸಿದಂತಿದೆ ಎಂದು ಪ್ರತಿಕ್ರಿಯಿಸಿದ್ದಾರೆ. ಆ ಮೂಲಕ ಹ್ಯಾರಿಸ್‌ಗೆ ಉಮ್ರಾನ್‌ ಹೋಲಿಕೆಯೇ ಅಲ್ಲ ಎಂದು ಹೇಳಿದ್ದಾರೆ

ಒಂದು ಪಂದ್ಯದಲ್ಲಿ ಸತತವಾಗಿ 150 kmph ವೇಗದಲ್ಲಿ ಬೌಲಿಂಗ್‌ ಮಾಡುವುದು ದೊಡ್ಡ ವಿಷಯ ಎಂದು ಜಾವೇದ್ ಅಭಿಪ್ರಾಯಪಟ್ಟಿದ್ದಾರೆ. ಉಮ್ರಾನ್ ಒಂದು ವೇಗದೊಂದಿಗೆ ಬೌಲಿಂಗ್‌ ಪ್ರಾರಂಭಿಸಲು ಒಲವು ತೋರುತ್ತಾನೆ. ಆದರೆ ಅದು ಏಳನೇ ಅಥವಾ ಎಂಟನೇ ಓವರ್‌ ವೇಳೆಗೆ ಗಂಟೆಗೆ 138 ಕಿಮೀ ವೇಗಕ್ಕೆ ಇಳಿಯುತ್ತದೆ ಎಂದು ಅವರು ಹೇಳಿದ್ದಾರೆ.

“ಹ್ಯಾರಿಸ್ ರೌಫ್‌ನಂತೆ ಉಮ್ರಾನ್ ಮಲಿಕ್ ತರಬೇತಿ ಪಡೆದಿಲ್ಲ ಮತ್ತು ಫಿಟ್ ಆಗಿಲ್ಲ. ಏಕದಿನ ಪಂದ್ಯಗಳಲ್ಲಿ ನೀವು ಅವರನ್ನು ನೋಡಿದರೆ, ಅವರ ಮೊದಲ ಸ್ಪೆಲ್‌ನಲ್ಲಿ ಅವರು ಸುಮಾರು 150 kmph ವೇಗದಲ್ಲಿ ಬೌಲಿಂಗ್‌ ಮಾಡುತ್ತಾರೆ. ಆದರೆ 7 ಅಥವಾ 8 ನೇ ಓವರ್‌ನಲ್ಲಿ ಆ ವೇಗವು 138 kmphಗೆ ಇಳಿಯುತ್ತದೆ. ಇದು, ಕೊಹ್ಲಿ ಮತ್ತು ಜಗತ್ತಿನ ಇತರ ಬ್ಯಾಟರ್‌ಗಳ ನಡುವಿನ ವ್ಯತ್ಯಾಸದಂತೆ ಇದೆ. ಹಾರಿಸ್ ತಮ್ಮ ಆಹಾರ, ತರಬೇತಿ ಮತ್ತು ಜೀವನಶೈಲಿಯ ವಿಚಾರವಾಗಿ ತುಂಬಾ ಶಿಸ್ತುಬದ್ಧರಾಗಿದ್ದಾರೆ. ಹ್ಯಾರಿಸ್ ಅವರಂತಹ ಡಯಟ್ ಹೊಂದಿರುವ ಮತ್ತೊಬ್ಬ ಪಾಕಿಸ್ತಾನದ ಬೌಲರ್ ಅನ್ನು ನಾನು ನೋಡಿಲ್ಲ. ಅವರಂತಹ ಸ್ಪಷ್ಟ ಜೀವನಶೈಲಿ ಯಾರಿಗೂ ಇಲ್ಲ. ಗಂಟೆಗೆ 160 ಕಿಮೀ ವೇಗದಲ್ಲಿ ಬೌಲಿಂಗ್ ಮಾಡುವುದು ನನಗೆ ದೊಡ್ಡ ವಿಷಯವಲ್ಲ, ಆದರೆ ಪಂದ್ಯದುದ್ದಕ್ಕೂ ಅದೇ ವೇಗದಲ್ಲಿ ಬೌಲಿಂಗ್ ಮಾಡುವುದು ಅತ್ಯಂತ ನಿರ್ಣಾಯಕ ಅಂಶವಾಗಿದೆ,” ಎಂದು ಅವರು ಹೇಳಿದರು.

ಗಮನಿಸಬಹುದಾದ ಇತರೆ ಸುದ್ದಿಗಳು

Danish Kaneria: 'ಭಾರತದಂತಹ ದೇಶಗಳಿಂದ ನೋಡಿ ಕಲಿಯಿರಿ'; ಬಾಬರ್ ಪಡೆಗೆ ಪಾಕ್ ಮಾಜಿ ಕ್ರಿಕೆಟಿಗನ ಸಲಹೆ

ರೋಹಿತ್ ಶರ್ಮಾ ನೇತೃತ್ವದ ಭಾರತವು, ತವರಿನಲ್ಲಿ ನ್ಯೂಜಿಲೆಂಡ್ ಮಣಿಸಿ ಸರಣಿ ಜಯ ಸಾಧಿಸಿದೆ. ಇತ್ತ ಭಾರತ ಕಿವೀಸ್‌ ವಿರುದ್ಧ ಗೆದ್ದರೆ, ಅತ್ತ ಪಾಕಿಸ್ತಾನ ಉರಿದು ಬೀಳುತ್ತಿದೆ. ಕೀವೀಸ್‌ ವಿರುದ್ಧ ತನ್ನ ತವರಿನಲ್ಲಿ ಭಾರತಕ್ಕೆ ಗೆಲ್ಲಲು ಸಾಧ್ಯವಾಗುತ್ತಿದೆ. ಆದರೆ, ಪಾಕ್‌ಗೆ ಇದು ಸಾಧ್ಯವಾಗುತ್ತಿಲ್ಲವಲ್ಲ ಎಂದು ಪಾಕಿಸ್ತಾನದದ ಮಾಜಿ ಕ್ರಿಕೆಟಿಗ ಡ್ಯಾನಿಶ್ ಕನೇರಿಯಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೇ ಕಾರಣಕ್ಕಾಗಿ ಕಿವೀಸ್‌ ವಿರುದ್ಧ ಪಾಕ್‌ ನೆಲದಲ್ಲಿ ನೀರಸ ಪ್ರದರ್ಶನ ನೀಡದ ಬಾಬರ್ ಅಜಮ್ ಬಳಗದ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ. ವಿವರಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ