logo
ಕನ್ನಡ ಸುದ್ದಿ  /  ಕ್ರೀಡೆ  /  Ab De Villiers News: Ab ಡಿವಿಲಿಯರ್ಸ್‌ ಫ್ಯಾನ್ಸ್‌ಗೆ ಕೆಟ್ಟ ಸುದ್ದಿ; ಮೈದಾನದಿಂದ ಶಾಶ್ವತವಾಗಿ ಹಿಂದೆ ಸರಿದ ಸ್ಫೋಟಕ ಆಟಗಾರ

AB de Villiers News: AB ಡಿವಿಲಿಯರ್ಸ್‌ ಫ್ಯಾನ್ಸ್‌ಗೆ ಕೆಟ್ಟ ಸುದ್ದಿ; ಮೈದಾನದಿಂದ ಶಾಶ್ವತವಾಗಿ ಹಿಂದೆ ಸರಿದ ಸ್ಫೋಟಕ ಆಟಗಾರ

HT Kannada Desk HT Kannada

Oct 04, 2022 08:52 AM IST

AB ಡಿವಿಲಿಯರ್ಸ್‌ ಫ್ಯಾನ್ಸ್‌ಗೆ ಕೆಟ್ಟ ಸುದ್ದಿ; ಮೈದಾನದಿಂದ ಶಾಶ್ವತವಾಗಿ ಹಿಂದೆ ಸರಿದ ಸ್ಫೋಟಕ ಆಟಗಾರ

    • ಅಚ್ಚರಿಯ ಸುದ್ದಿಯೊಂದು ಹೊರಬಿದ್ದಿದೆ. ಅದೇನೆಂದರೆ, ಇನ್ಯಾವತ್ತೂ ಎಬಿಡಿ ಬ್ಯಾಟ್‌ ಮುಟ್ಟುವುದಿಲ್ಲ. ಕ್ರಿಕೆಟ್‌ ಅಂಗಳಕ್ಕಿಳಿದು ಬ್ಯಾಟ್‌ ಬೀಸುವುದಿಲ್ಲ!
AB ಡಿವಿಲಿಯರ್ಸ್‌ ಫ್ಯಾನ್ಸ್‌ಗೆ ಕೆಟ್ಟ ಸುದ್ದಿ; ಮೈದಾನದಿಂದ ಶಾಶ್ವತವಾಗಿ ಹಿಂದೆ ಸರಿದ ಸ್ಫೋಟಕ ಆಟಗಾರ
AB ಡಿವಿಲಿಯರ್ಸ್‌ ಫ್ಯಾನ್ಸ್‌ಗೆ ಕೆಟ್ಟ ಸುದ್ದಿ; ಮೈದಾನದಿಂದ ಶಾಶ್ವತವಾಗಿ ಹಿಂದೆ ಸರಿದ ಸ್ಫೋಟಕ ಆಟಗಾರ

ದಕ್ಷಿಣ ಆಫ್ರಿಕಾದ ದಂತಕಥೆ ಎಬಿ ಡಿವಿಲಿಯರ್ಸ್ ಅವರಿಗೆ ವಿಶ್ವಾದ್ಯಂತ ಕೋಟಿಗಟ್ಟಲೆ ಅಭಿಮಾನಿಗಳಿದ್ದಾರೆ. ಅವರ ಬ್ಯಾಟಿಂಗ್‌ ನೋಡಲು ಹವಣಿಸುವ ಫ್ಯಾನ್ಸ್‌ ಇದ್ದಾರೆ. ಕೇವಲ ಅಂತಾರಾಷ್ಟ್ರೀಯ ಕ್ರಿಕೆಟ್‌ ಮೂಲಕ ಮಾತ್ರವಲ್ಲ, ಐಪಿಎಲ್‌ನಲ್ಲಿಯೂ ಅವರ ಸಾಧನೆ ಸಣ್ಣದಲ್ಲ. ಎಲ್ಲವೂ ಚೆನ್ನಾಗಿಯೇ ಹೋಗುತ್ತಿತ್ತು ಎನ್ನುವಷ್ಟರಲ್ಲಿಯೇ 2018ಕ್ಕೆ ಎಲ್ಲ ಫಾರ್ಮೆಟ್‌ನ ಕ್ರಿಕೆಟ್‌ಗೆ ಎಬಿ ನಿವೃತ್ತಿ ಘೋಷಿಸಿದ್ದರು. ಕ್ರಿಕೆಟ್‌ ಲೋಕವೇ ಈ ಸುದ್ದಿಯಿಂದ ದಿಗ್ಭ್ರಮೆಗೊಂಡಿತ್ತು.

ಟ್ರೆಂಡಿಂಗ್​ ಸುದ್ದಿ

ಮಲೇಷ್ಯಾ ಫುಟ್ಬಾಲ್ ಆಟಗಾರ ಫೈಸಲ್ ಹಲೀಮ್ ಮೇಲೆ ಆ್ಯಸಿಡ್ ದಾಳಿ; ಮೈಮೇಲೆ ಸುಟ್ಟ ಗಾಯ, ಆರೋಪಿ ಅರೆಸ್ಟ್

ಮೊದಲು ರಾಯ್​ಬರೇಲಿ ಗೆಲ್ಲಿ; ತನ್ನ ನೆಚ್ಚಿನ ಚೆಸ್ ದಿಗ್ಗಜ ಆಟಗಾರನಿಂದಲೇ ಟೀಕೆಗೊಳಗಾದ ರಾಹುಲ್ ಗಾಂಧಿ

Hamida Banu: ಭಾರತದ ಮೊದಲ ಮಹಿಳಾ ವೃತ್ತಿಪರ ಕುಸ್ತಿಪಟು ಹಮೀದಾ ಬಾನು ಅವರಿಗೆ ಇಂದು ಗೂಗಲ್ ಡೂಡಲ್ ಗೌರವ, 5 ಆಸಕ್ತಿದಾಯಕ ಅಂಶಗಳು

ಕೇಳ್ರಪ್ಪೋ ಕೇಳಿ; ನೀವೂ ಬೆಂಗಳೂರು ಬುಲ್ಸ್ ತಂಡ ಸೇರಲು ಇಲ್ಲಿದೆ ಸುವರ್ಣಾವಕಾಶ, ನಿಯಮ ಮತ್ತು ಷರತ್ತುಗಳು ಅನ್ವಯ

ನಿವೃತ್ತಿ ಬಳಿಕ ಅವರ ಆಟ ಶುರುವಾಗಿದ್ದು ಐಪಿಎಲ್‌ನಲ್ಲಿ. 2011ರಿಂದ 2021ರ ವರೆಗೆ ಆರ್‌ಸಿಬಿ ತಂಡದಲ್ಲಿದ್ದು ಸ್ಫೋಟಕ ಬ್ಯಾಟ್ಸ್‌ಮನ್‌ ಆಗಿ ಗುರುತಿಸಿಕೊಂಡಿದ್ದರು. ಮರಳಿ ಅಂತಾರಾಷ್ಟ್ರೀಯ ತಂಡಕ್ಕೆ ಸೇರ್ಪಡೆಯಾಗಲಿದ್ದಾರೆ ಎಂಬ ಸುದ್ದಿಯೂ ದೊಡ್ಡ ಮಟ್ಟದಲ್ಲಿ ಹರಿದಾಡಿತ್ತು. ಇದೀಗ ಅಚ್ಚರಿಯ ಸುದ್ದಿಯೊಂದು ಹೊರಬಿದ್ದಿದೆ. ಅದೇನೆಂದರೆ, ಇನ್ಯಾವತ್ತೂ ಎಬಿಡಿ ಬ್ಯಾಟ್‌ ಮುಟ್ಟುವುದಿಲ್ಲ. ಕ್ರಿಕೆಟ್‌ ಅಂಗಳಕ್ಕಿಳಿದು ಬ್ಯಾಟ್‌ ಬೀಸುವುದಿಲ್ಲ!

ಎಬಿಡಿಗೆ ಕಣ್ಣಿನ ಶಸ್ತ್ರಚಿಕಿತ್ಸೆ

ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ ಇತ್ತೀಚೆಗೆ ಕಣ್ಣಿನ ರೆಟಿನಾ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಈ ಮೂಲಕ ಅವರು ಮತ್ತೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳುತ್ತಾರೆ ಎಂಬ ಸುದ್ದಿ ಸುಳ್ಳಾಗಿದೆ. ಅವರ ಆಟ ಕಣ್ತುಂಬಿಕೊಳ್ಳಬೇಕೆಂದು ಕಾದಿದ್ದ ಕೋಟ್ಯಂತರ ಅಭಿಮಾನಿಗಳಿಗೆ ಈ ಸುದ್ದಿ ನಿಜಕ್ಕೂ ಶಾಕ್‌ ನೀಡಿದೆ.

ಆರ್‌ಸಿಬಿ ತಂಡದ ಮೆಂಟರ್‌ ಆಗಿ ಎಬಿಡಿ?

ಐಪಿಎಲ್‌ನಿಂದಲೂ ಹೊರಗುಳಿದ ಎಬಿಡಿ, ಮುಂಬರುವ ಸೀಸನ್‌ನಲ್ಲಿ ಮೈದಾನದಲ್ಲಿ ಕಾಣಿಸಿಕೊಳ್ಳುವ ಬದಲು, ಆರ್‌ಸಿಬಿ ತಂಡದ ಜತೆಗೆ ಕಾಣಿಸಿಕೊಳ್ಳಲಿದ್ದಾರೆ. ಈ ವಿಚಾರವನ್ನು ಸ್ವತಃ ಅವರೇ ಹೇಳಿಕೊಂಡಿದ್ದರು. "ನಾನು ಮುಂದಿನ ವರ್ಷ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಮರಳುತ್ತೇನೆ. ಆಡಲು ಅಲ್ಲ ಆದರೆ ಒಂದು ದಶಕದಲ್ಲಿ ನನಗೆ ಬೆಂಬಲ ನೀಡಿದ ಎಲ್ಲ ಅಭಿಮಾನಿಗಳಿಗೆ ಧನ್ಯವಾದ ತಿಳಿಸಲು" ಎಂದು ಡಿವಿಲಿಯರ್ಸ್ ಹೇಳಿದ್ದರು. ಅದೇ ರೀತಿ ಆರ್‌ಸಿಬಿ ತಂಡದ ಮೆಂಟರ್‌ ಆಗಿಯೂ ಅವರ ಸೇವೆ ತಂಡಕ್ಕೆ ಸಿಗಲಿದೆ ಎಂದು ಹೇಳಲಾಗುತ್ತಿದೆ. ಈ ವಿಚಾರವನ್ನು ಆರ್‌ಸಿಬಿಯೇ ಅಧಿಕೃತವಾಗಿ ಘೋಷಿಸಬೇಕಿದೆ.

ಐಪಿಎಲ್‌ ಸಾಧನೆ..

ಎಬಿ ಡಿವಿಲಿಯರ್ಸ್ ಐಪಿಎಲ್ ಇತಿಹಾಸದಲ್ಲಿ ಅಗ್ರ ಆಟಗಾರರಲ್ಲಿ ಒಬ್ಬರು. ಟಿ20 ಲೀಗ್‌ನ 184 ಪಂದ್ಯಗಳಲ್ಲಿ 39.7 ರ ಸರಾಸರಿಯಲ್ಲಿ 151.7 ರ ಸ್ಟ್ರೈಕ್ ರೇಟ್‌ನಲ್ಲಿ 5,162 ರನ್ ಗಳಿಸಿದ್ದಾರೆ. ಅದೇ ರೀತಿ ದಕ್ಷಿಣ ಆಫ್ರಿಕಾ ಪರ 114 ಟೆಸ್ಟ್, 228 ODI ಮತ್ತು 78 T20I ಗಳನ್ನು ಆಡಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 18 ಸಾವಿರಕ್ಕೂ ಹೆಚ್ಚು ರನ್ ಗಳಿಸಿದ್ದಾರೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು