logo
ಕನ್ನಡ ಸುದ್ದಿ  /  ಕ್ರೀಡೆ  /  Asian Games 2023: ಚೀನಾದಲ್ಲಿ ಇಂದಿನಿಂದ ಮಿನಿ ಒಲಿಂಪಿಕ್ಸ್ ಹಬ್ಬ; ಏಷ್ಯನ್ ಗೇಮ್ಸ್‌ನಲ್ಲಿ ಅತಿ ಹೆಚ್ಚು ಪದಕ ಗಳಿಸಿರುವ ದೇಶಗಳು ಇವೇ

Asian Games 2023: ಚೀನಾದಲ್ಲಿ ಇಂದಿನಿಂದ ಮಿನಿ ಒಲಿಂಪಿಕ್ಸ್ ಹಬ್ಬ; ಏಷ್ಯನ್ ಗೇಮ್ಸ್‌ನಲ್ಲಿ ಅತಿ ಹೆಚ್ಚು ಪದಕ ಗಳಿಸಿರುವ ದೇಶಗಳು ಇವೇ

Raghavendra M Y HT Kannada

Sep 23, 2023 10:09 AM IST

ಉತ್ತರ ಕೊರಿಯಾದ ಜಿಮ್ನಾಸ್ಟಿಕ್ ಆಟಗಾರ್ತಿಯೊಬ್ಬರು ಅಭ್ಯಾಸದ ವೇಳೆ ಕಂಡು ಬಂದಿದ್ದು ಹೀಗಿದೆ. ಚೀನಾದ ಹ್ಯಾಂಗ್‌ಝೌನಲ್ಲಿ ಇಂದಿನಿಂದ (ಸೆಪ್ಟೆಂಬರ್ 23) ಏಷ್ಯನ್ ಗೇಮ್ಸ್ ಆರಂಭವಾಗಿದೆ.

  • ಏಷ್ಯನ್ ಗೇಮ್ಸ್‌ನಲ್ಲಿ ಅತಿ ಹೆಚ್ಚು ಪದಕಗಳನ್ನು ಗಳಿಸಿದ ದೇಶಗಳು ಯಾವುವು? ಯಾವ ಆಟದಲ್ಲಿ ಯಾವ ದೇಶ ಪ್ರಾಬಲ್ಯ ಮೆರೆದಿದೆ. ಇಲ್ಲಿದೆ ಮಾಹಿತಿ.

ಉತ್ತರ ಕೊರಿಯಾದ ಜಿಮ್ನಾಸ್ಟಿಕ್ ಆಟಗಾರ್ತಿಯೊಬ್ಬರು ಅಭ್ಯಾಸದ ವೇಳೆ ಕಂಡು ಬಂದಿದ್ದು ಹೀಗಿದೆ. ಚೀನಾದ ಹ್ಯಾಂಗ್‌ಝೌನಲ್ಲಿ ಇಂದಿನಿಂದ (ಸೆಪ್ಟೆಂಬರ್ 23) ಏಷ್ಯನ್ ಗೇಮ್ಸ್ ಆರಂಭವಾಗಿದೆ.
ಉತ್ತರ ಕೊರಿಯಾದ ಜಿಮ್ನಾಸ್ಟಿಕ್ ಆಟಗಾರ್ತಿಯೊಬ್ಬರು ಅಭ್ಯಾಸದ ವೇಳೆ ಕಂಡು ಬಂದಿದ್ದು ಹೀಗಿದೆ. ಚೀನಾದ ಹ್ಯಾಂಗ್‌ಝೌನಲ್ಲಿ ಇಂದಿನಿಂದ (ಸೆಪ್ಟೆಂಬರ್ 23) ಏಷ್ಯನ್ ಗೇಮ್ಸ್ ಆರಂಭವಾಗಿದೆ. (AFP)

ಹ್ಯಾಂಗ್‌ಝೌ (ಚೀನಾ): ಮಿನಿ ಒಲಿಂಪಿಕ್ಸ್ ಎಂದೇ ಜನಪ್ರಿಯವಾಗಿರುವ 19ನೇ ಆವೃತ್ತಿಯ ಏಷ್ಯನ್ ಗೇಮ್ಸ್ 2023 (Asian Games 2023) ಇಂದಿನಿಂದ (ಸೆಪ್ಟೆಂಬರ್ 23, ಶನಿವಾರ) ಆರಂಭವಾಗುತ್ತಿದ್ದು, ಅದ್ಧೂರಿ ಉದ್ಘಾಟನಾ ಕಾರ್ಯಕ್ರಮ ಚೀನಾದ (China) ಹ್ಯಾಂಗ್‌ಝೌನ (Hangzhou) ಒಲಿಪಿಂಕ್ಸ್ ಸ್ಪೋರ್ಟ್ಸ್ ಸೆಂಟರ್‌ನಲ್ಲಿ ಸಂಜೆ 5.30ಕ್ಕೆ (ಭಾರತೀಯ ಕಾಲಮಾನ) ನಡೆಯಲಿದೆ.

ಟ್ರೆಂಡಿಂಗ್​ ಸುದ್ದಿ

ತಂದೆ-ತಾಯಿಯೂ ಕ್ರೀಡಾಪಟುಗಳು, ಕೋಚ್​ ಮಗಳನ್ನೇ ಪಟಾಯಿಸಿದ್ರು; ಇದು ನಿವೃತ್ತಿ ಘೋಷಿಸಿದ ಸುನಿಲ್ ಛೆಟ್ರಿ ಲೈಫ್​ಸ್ಟೋರಿ

ಅಂತಾರಾಷ್ಟ್ರೀಯ ಫುಟ್ಬಾಲ್​ಗೆ ಕಾಲ್ಚೆಂಡಿನ ಚತುರ ಸುನಿಲ್ ಛೆಟ್ರಿ ನಿವೃತ್ತಿ; ಈ ದಿನವೇ ದಿಗ್ಗಜ ಆಟಗಾರನ ಕೊನೆಯ ಪಂದ್ಯ

ಫೆಡರೇಶನ್ ಕಪ್‌ನಲ್ಲಿ ಬಂಗಾರ ಗೆದ್ದ ನೀರಜ್‌ ಚೋಪ್ರಾ; ಕೂದಲೆಳೆ ಅಂತರದಲ್ಲಿ ಬೆಳ್ಳಿಗೆ ತೃಪ್ತಿ ಪಟ್ಟ ಡಿಪಿ ಮನು

ರೆಸ್ಲರ್ ಅಮನ್ ಸೆಹ್ರಾವತ್​ಗೆ ಪ್ಯಾರಿಸ್ ಒಲಿಂಪಿಕ್ಸ್​ ಟಿಕೆಟ್; ಮೊದಲ ಬಾರಿಗೆ ಐವರು ಮಹಿಳಾ ಕುಸ್ತಿಪಟುಗಳು ಅರ್ಹತೆ

45 ದೇಶಗಳಿಂದ 12,000 ಕ್ರೀಡಾಪಟುಗಳು ಭಾಗಿ

ಈ ಬಾರಿಯ ಏಷ್ಯಾಡ್‌ನಲ್ಲಿ 45 ರಾಷ್ಟ್ರಗಳಿಂದ ಒಟ್ಟು 12,000 ಕ್ರೀಡಾಪಟುಗಳು ಭಾಗವಹಿಸುತ್ತಿದ್ದಾರೆ. ಯಾವ ದೇಶ ಹೆಚ್ಚು ಕ್ರೀಡಾಪಟುಗಳನ್ನು ಸ್ಪರ್ಧೆಗೆ ಇಳಿಸುತ್ತಿದೆ ಎಂಬುದನ್ನು ನೋಡುವುದಾದರೆ ಥಾಯ್ಲೆಂಡ್ ಅತಿ ಹೆಚ್ಚು ಕ್ರೀಡಾಪಟುಗಳನ್ನು ಏಷ್ಯನ್ ಗೇಮ್ಸ್‌ಗೆ ಪದಕಗಳ ಬೇಟೆಗೆ ಇಳಿಸುತ್ತಿದೆ.

ಥಾಯ್ಲೆಂಡ್‌ನ 934 ಕ್ರೀಡಾಪಟುಗಳು ಕಣಕ್ಕಿಳಿಯಲಿದ್ದಾರೆ. ಇನ್ನೂ ಆತಿಥೇಯ ಚೀನಾ 887 ಕ್ರೀಡಾಪಟುಗಳನ್ನು ಸ್ಪರ್ಧೆಗೆ ಇಳಿಸಲಿದೆ. ಅದೇ ರೀತಿಯಾಗಿ ಜಪಾನ್ 773 ಕ್ರೀಡಾಪಟುಗಳನ್ನು ಪದಕಗಳ ಬೇಟೆಗೆ ಕಳಿಸಿದರೆ, ಭಾರತದ 653 ಕ್ರೀಡಾಪಟುಗಳು ಪೈಪೋಟಿ ನಡೆಸಲಿದ್ದಾರೆ.

ವಿಶೇಷ ಅಂದರೆ ಏಷ್ಯಾಗೇಮ್ಸ್ 2023 ಇಂದು (ಸೆಪ್ಟೆಂಬರ್ 23) ಅದ್ಧೂರಿಯಾಗಿ ಉದ್ಘಾಟನೆಯಾಗುತ್ತಿದೆ. ಆದರೆ ಮಹಿಳಾ ಕ್ರಿಕೆಟ್, ಫುಟ್ಬಾಲ್ ಸೇರಿದಂತೆ ಕೆಲವು ಸ್ಪರ್ಧೆಗಳು 3 ದಿನಗಳ ಹಿಂದೆಯೇ ಆರಂಭವಾಗಿವೆ. ಅಕ್ಟೋಬರ್ 8 ರಂದು ಮಿನಿ ಒಲಿಂಪಿಕ್ಸ್ ಸಮಾರೋಪಗೊಳ್ಳಲಿದೆ. 16 ದಿನಗಳ ಕ್ರೀಡಾಕೂಟದಲ್ಲಿ 40 ಕ್ರೀಡೆಗಳು ನಡೆಯಲಿವೆ. ಇದೇ ಮೊದಲ ಬಾರಿಗೆ ಕ್ರಿಕೆಟ್ ಅನ್ನು ಸೇರಿಸಲಾಗಿದೆ.

ಉದ್ಘಾಟನೆಯಲ್ಲಿ ಚೀನಾದ ಕಲೆ, ಸಾಂಸ್ಕೃತಿ ವೈಭವ ಅನಾವರಣಗೊಳ್ಳಲಿದೆ. ಅತ್ಯಾಧುನಿಕ ಲೇಸರ್ ಶೋಗಳು, ತಾರೆಯರ ನೃತ್ಯ, ಸಿಡಿಮದ್ದುಗಳ ಶಬ್ದ, ಬೆಳಕಿನ ಚಿತ್ತಾರ ನೋಡುಗರ ಕಣ್ಮನ ಸೆಳೆಯಲಿದೆ. ಈ ಸಮಾರಂಭದ ಪ್ರಮುಖ ಆಕರ್ಷಣೆಗಳಲ್ಲಿ ಕ್ರೀಡಾಪಟುಗಳ ಪಥ ಸಂಚಲನವೂ ಗಮನ ಸೆಳೆಯಲಿದ್ದು, ಭಾರತದಿಂದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ, ಒಲಿಂಪಿಕ್ಸ್‌ನಲ್ಲಿ ಕಂಚು ವಿಜೇತ ಬಾಕ್ಸರ್ ಲವ್ಲೀನಾ ಬೊರ್ಗೊಹೈನ್, ಹಾಕಿ ತಂಡದ ನಾಯಕ ಹರ್ಮನ್‌ಪ್ರೀತ್ ಸಿಂಗ್ ಭಾರತದ ಧ್ವಜಧಾರಿಗಳಾಗಿದ್ದಾರೆ.

ಏಷ್ಯಾನ್ ಗೇಮ್ಸ್‌ನಲ್ಲಿ ಅತಿ ಹೆಚ್ಚು ಪದಕಗಳನ್ನು ಗಳಿಸಿರುವ ದೇಶಗಳು

ಏಷ್ಯಾನ್ ಗೇಮ್ಸ್‌ನಲ್ಲಿ ಈ ಬಾರಿ ಆತಿಥ್ಯವಹಿಸಿರುವ ಚೀನಾವೇ ಪದಕಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಚೀನಾದ ಕ್ರೀಡಾಪಟುಗಳು ಈವರೆಗೆ ಒಟ್ಟು 3,187 ಪದಕಗಳನ್ನು ಗೆದಿದ್ದಾರೆ. ಇದರಲ್ಲಿ 1,473 ಚಿನ್ನದ ಪದಕಗಳು ಸೇರಿವೆ. ಶೂಟಿಂಗ್, ಅಥ್ಲೆಟಿಕ್ಸ್, ಈಜು, ಜಿಮ್ನಾಸ್ಟಿಕ್‌ನಲ್ಲಿ ಚೀನಾ ಹೆಚ್ಚು ಪ್ರಾಬಲ್ಯ ಮೆರೆದಿದೆ.

ಡ್ರ್ಯಾಗನ್ ದೇಶದ ನಂತರದ ಸ್ಥಾನದಲ್ಲಿರುವ ಜಪಾನ್ 1,032 ಚಿನ್ನ ಸೇರಿ 3,054 ಪದಕಗಳನ್ನು ಜಯಿಸಿದೆ. ಈಜು, ಅಥ್ಲೇಟಿಕ್ಸ್, ಶೂಟಿಂಗ್, ಜುಡೊದಲ್ಲಿ ಜಪಾನ್ ಅಥ್ಲೆಟಿಕ್ಸ್ ಹೆಚ್ಚಿನ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ಪಟ್ಟಿಯಲ್ಲಿ ಚೀನಾ, ಜಪಾನ್ ನಂತರದ ಸ್ಥಾನದಲ್ಲಿ ದಕ್ಷಿಣ ಕೊರಿಯಾ ಇದೆ. ಈ ದೇಶ 745 ಚಿನ್ನದ ಪದಕಗಳು ಸೇರಿ 2,235 ಮೆಡಲ್‌ಗಳನ್ನು ಮುಡಿಗೇರಿಸಿಕೊಂಡಿದೆ.

ಭಾರತ ಈವರೆಗೆ ಎಷ್ಟು ಪದಕಗಳನ್ನು ಗೆದ್ದಿದೆ?

1951 ರಲ್ಲಿ ಕ್ರೀಡಾಕೂಟಗಳು ಕ್ರೀಡಾಕೂಟ ಆರಂಭವಾದಾಗಿನಿಂದ ಏಷ್ಯನ್ ಗೇಮ್ಸ್‌ನ ಎಲ್ಲಾ ಆವೃತ್ತಿಗಳಲ್ಲಿ ಸ್ಪರ್ಧಿಸಿರುವ ಬೆರಳೆಣಿಕೆಯ ದೇಶಗಳಲ್ಲಿ ಭಾರತವೂ ಒಂದಾಗಿದೆ. ಏಷ್ಯನ್ ಗೇಮ್ಸ್ ಪ್ರತಿ ಆವೃತ್ತಿಯಲ್ಲಿ ಭಾರತ ಕನಿಷ್ಠ ಒಂದು ಚಿನ್ನದ ಪದಕವನ್ನು ಗೆದ್ದಿದೆ. ಭಾರತ ಈವರೆಗೆ 665 ಪದಕಗಳನ್ನು ಗೆದ್ದುಕೊಂಡಿದೆ. ಇನ್ನೂ ಈ ಪಟ್ಟಿಯಲ್ಲಿ ಇರಾನ್, ಕಜಕಿಸ್ತಾನ್, ಥಾಯ್ಲೆಂಡ್, ಉತ್ತರ ಕೊರಿಯಾ ದೇಶಗಳೂ ಮುಂಚೂಣಿಯಲ್ಲಿವೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ