logo
ಕನ್ನಡ ಸುದ್ದಿ  /  ಕ್ರೀಡೆ  /  Brett Lee On Umran Malik: 'ಆತ ಮುಂದಿನ ಸೂಪರ್‌ಸ್ಟಾರ್'; ಉಮ್ರಾನ್ ಮಲಿಕ್ ಟೆಸ್ಟ್‌ ಪದಾರ್ಪಣೆ ಕುರಿತು ಬ್ರೆಟ್ ಲೀ ಮುತ್ತಿನಂಥಾ ಮಾತು

Brett Lee on Umran Malik: 'ಆತ ಮುಂದಿನ ಸೂಪರ್‌ಸ್ಟಾರ್'; ಉಮ್ರಾನ್ ಮಲಿಕ್ ಟೆಸ್ಟ್‌ ಪದಾರ್ಪಣೆ ಕುರಿತು ಬ್ರೆಟ್ ಲೀ ಮುತ್ತಿನಂಥಾ ಮಾತು

HT Kannada Desk HT Kannada

Mar 13, 2023 05:24 PM IST

ಉಮ್ರಾನ್ ಮಲಿಕ್, ಬ್ರೆಟ್ ಲೀ

    • ಭಾರತವು ಟೆಸ್ಟ್ ತಂಡದಲ್ಲಿ ಉಮ್ರಾನ್‌ ಅವರನ್ನು ಸೇರಿಸಿಕೊಳ್ಳುವ ಮೂಲಕ ವೇಗ‌ದ ದಾಳಿಯನ್ನು ರೂಪಿಸಬೇಕೇ ಎಂಬ ಕುರಿತು ಹಿಂದೂಸ್ತಾನ್ ಟೈಮ್ಸ್ ಕೇಳಿದ ಪ್ರಶ್ನೆಗೆ ಲೀ ಉತ್ತರಿಸಿದ್ದಾರೆ. ಈ ವೇಳೆ ಯುವ ಆಟಗಾರನನ್ನು ಅವರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
ಉಮ್ರಾನ್ ಮಲಿಕ್, ಬ್ರೆಟ್ ಲೀ
ಉಮ್ರಾನ್ ಮಲಿಕ್, ಬ್ರೆಟ್ ಲೀ

ಐಪಿಎಲ್‌ನಲ್ಲೇ ತಮ್ಮ ವೇಗದ ಬೌಲಿಂಗ್‌ನಿಂದಾಗಿ ಸೆನ್ಸೇಷನ್‌ ಸೃಷ್ಟಿಸಿದ್ದ ಜಮ್ಮು ಮತ್ತು ಕಾಶ್ಮೀರದ ಯುವ ವೇಗಿ, ಯಶಸ್ವಿ ಪ್ರದರ್ಶನ ನೀಡಿದ ಬೆನ್ನಲ್ಲೇ ಟೀಮ್‌ ಇಂಡಿಯಾದಲ್ಲಿ ಸ್ಥಾನ ಪಡೆದರು. ಸನ್‌ರೈಸರ್ಸ್ ಹೈದರಾಬಾದ್‌ ಪರ ಆಡಿದ 14 ಪಂದ್ಯಗಳಲ್ಲಿ ಐದು ವಿಕೆಟ್‌ಗಳ ಸಾಧನೆಯೊಂದಿಗೆ ಒಟ್ಟು 22 ವಿಕೆಟ್‌ಗಳನ್ನು ಪಡೆದರು. ಅಲ್ಲದೆ ಐಪಿಎಲ್ ಇತಿಹಾಸದಲ್ಲೇ ಅತ್ಯಂತ ವೇಗದ ಎಸೆತದ ದಾಖಲೆ ಕೂಡಾ ನಿರ್ಮಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ತಂದೆ-ತಾಯಿಯೂ ಕ್ರೀಡಾಪಟುಗಳು, ಕೋಚ್​ ಮಗಳನ್ನೇ ಪಟಾಯಿಸಿದ್ರು; ಇದು ನಿವೃತ್ತಿ ಘೋಷಿಸಿದ ಸುನಿಲ್ ಛೆಟ್ರಿ ಲೈಫ್​ಸ್ಟೋರಿ

ಅಂತಾರಾಷ್ಟ್ರೀಯ ಫುಟ್ಬಾಲ್​ಗೆ ಕಾಲ್ಚೆಂಡಿನ ಚತುರ ಸುನಿಲ್ ಛೆಟ್ರಿ ನಿವೃತ್ತಿ; ಈ ದಿನವೇ ದಿಗ್ಗಜ ಆಟಗಾರನ ಕೊನೆಯ ಪಂದ್ಯ

ಫೆಡರೇಶನ್ ಕಪ್‌ನಲ್ಲಿ ಬಂಗಾರ ಗೆದ್ದ ನೀರಜ್‌ ಚೋಪ್ರಾ; ಕೂದಲೆಳೆ ಅಂತರದಲ್ಲಿ ಬೆಳ್ಳಿಗೆ ತೃಪ್ತಿ ಪಟ್ಟ ಡಿಪಿ ಮನು

ರೆಸ್ಲರ್ ಅಮನ್ ಸೆಹ್ರಾವತ್​ಗೆ ಪ್ಯಾರಿಸ್ ಒಲಿಂಪಿಕ್ಸ್​ ಟಿಕೆಟ್; ಮೊದಲ ಬಾರಿಗೆ ಐವರು ಮಹಿಳಾ ಕುಸ್ತಿಪಟುಗಳು ಅರ್ಹತೆ

ಶೀಘ್ರದಲ್ಲೇ ಭಾರತೀಯ ಟಿ20 ತಂಡಕ್ಕೆ ಆಯ್ಕೆಯಾದ ಅವರು, ಮತ್ತೆ ಏಕದಿನ ತಂಡಕ್ಕೂ ಪ್ರವೇಶ ಪಡೆದರು. ಆದರೆ, ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವಕಪ್ ತಂಡದಲ್ಲಿ ಅವಕಾಶ ಪಡೆಯಲು ವಿಫಲರಾದರು.

ಸದ್ಯ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ಗೆ ಭಾರತ ಲಗ್ಗೆ ಇಟ್ಟಿದೆ. ಈ ನಡುವೆ ಭಾರತ ಕ್ರಿಕೆಟ್‌ ತಂಡದ ಪ್ರಮುಖ ವೇಗಿಯಾದ ಜಸ್ಪ್ರೀತ್‌ ಬುಮ್ರಾ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ಹೊರಗುಳಿದಿದ್ದಾರೆ. ಹೀಗಾಗಿ ಆಸ್ಟ್ರೇಲಿಯಾದ ವೇಗದ ದಂತಕಥೆ ಬ್ರೆಟ್ ಲೀ ಅವರು ಮುಂದಿನ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಗಮನದಲ್ಲಿಟ್ಟುಕೊಂಡು ಜಸ್ಪ್ರೀತ್ ಬುಮ್ರಾ ಅನುಪಸ್ಥಿತಿಯಲ್ಲಿ ಉಮ್ರಾನ್ ಅವರನ್ನು ಟೆಸ್ಟ್ ತಂಡಕ್ಕೆ ಕರೆಸಿಕೊಳ್ಳಬೇಕೆಂದು ಸಲಹೆ ನೀಡಿದ್ದಾರೆ.

ಕಳೆದ ವರ್ಷದ ಜೂನ್‌ನಲ್ಲಿ ಉಮ್ರಾನ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಆಡಿದ ಪಂದ್ಯಗಳಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ. ಇದುವರೆಗೆ ಅವರು ಆಡಿದ ಎರಡು ಮಾದರಿಯ ವೈಟ್ ಬಾಲ್ ಸ್ವರೂಪಗಳ ಪಂದ್ಯದಲ್ಲಿ ಕ್ರಮವಾಗಿ 13 ಮತ್ತು 11 ವಿಕೆಟ್‌ಗಳನ್ನು ಪಡೆದಿದ್ದಾರೆ. 23ರ ಹರೆಯದ ಅವರು ಇನ್ನೂ ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿಲ್ಲ. ಕ್ರಿಕೆಟ್‌ನ ಸುದೀರ್ಘ ಹಾಗೂ ಪ್ರಮುಖ ಸ್ವರೂಪದಲ್ಲಿ ಸ್ಥಾನ ಪಡೆಯಲು ಅವರು ಇನ್ನೂ ಕೆಲ ಕಾಲ ಕಾಯಬೇಕಾಗಿ ಬರಬಹುದು.

ಭಾರತವು ಟೆಸ್ಟ್ ತಂಡದಲ್ಲಿ ಉಮ್ರಾನ್‌ ಅವರನ್ನು ಸೇರಿಸಿಕೊಳ್ಳುವ ಮೂಲಕ ವೇಗ‌ದ ದಾಳಿಯನ್ನು ರೂಪಿಸಬೇಕೇ ಎಂಬ ಕುರಿತು ಹಿಂದೂಸ್ತಾನ್ ಟೈಮ್ಸ್ ಕೇಳಿದ ಪ್ರಶ್ನೆಗೆ ಲೀ ಉತ್ತರಿಸಿದ್ದಾರೆ. ಈ ವೇಳೆ ಯುವ ಆಟಗಾರನನ್ನು ಅವರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

“ಯಾಕೆ ಇಲ್ಲ? ನನ್ನ ಪ್ರಕಾರ, ಟೆಸ್ಟ್‌ ತಂಡದಲ್ಲಿ ಸ್ಥಾನ ಪಡೆಯಲು ಉಮ್ರಾನ್‌ ಸೂಕ್ತ ಆಟಗಾರ. ಆತ ಉತ್ತಮ ವೇಗವನ್ನು ಹೊಂದಿದ್ದಾನೆ. ಉತ್ತಮ ಬೌಲಿಂಗ್‌ ವಿಧಾನ ಅನುಸರಿಸುತ್ತಾನೆ. ಹೀಗಾಗಿ ಆತನನ್ನು ತಂಡಕ್ಕೆ ಸೇರಿಸಬಹುದು,” ಎಂದು ಅವರು ದೋಹಾದಲ್ಲಿ ನಡೆದ ಲೆಜೆಂಡ್ಸ್ ಲೀಗ್ ಕ್ರಿಕೆಟ್‌ ಸಮಯದಲ್ಲಿ ಮಾತನಾಡಿದರು.

ಇದೇ ವೇಳೆ ಮಾತನಾಡಿದ ಲೀ. "ಆತ ಕ್ರಿಕೆಟ್‌ನ ಸೂಪರ್‌ಸ್ಟಾರ್ ಆಗುವ ಹಂತದಲ್ಲಿದ್ದಾನೆ" ಎಂದು ಹೇಳಿದರು.

ಆಸೀಸ್ ಮಾಜಿ ಕ್ರಿಕೆಟಿಗ, ಇದೇ ವೇಳೆ ಜಸ್ಪ್ರೀತ್ ಬುಮ್ರಾ ಅವರಿಗೆ ವಿಶೇಷ ಸಲಹೆಯನ್ನು ನೀಡಿದರು. ಬೆನ್ನುನೋವಿನಿಂದ ಬಳಲುತ್ತಿರುವ ಬುಮ್ರಾ, ಜೂನ್‌ನಲ್ಲಿ ನಡೆಯಲಿರುವ WTC ಫೈನಲ್‌ನಿಂದ ಹೊರಗುಳಿಯುವ ಸಾಧ್ಯತೆ ದಟ್ಟವಾಗಿದೆ. ಬುಮ್ರಾ ಅವರ ಅನುಪಸ್ಥಿತಿಯು ಭಾರತ ತಂಡಕ್ಕೆ ದೊಡ್ಡ ನಷ್ಟ ಎಂಬುದನ್ನು ಅವರು ಒಪ್ಪಿಕೊಂಡರು. 29 ವರ್ಷದ ಬೌಲರ್‌ ತಂಡಕ್ಕೆ ಹಿಂದಿರುಗಿದ ನಂತರ ಅವರ ಬೌಲಿಂಗ್ ದಿನಚರಿಯಲ್ಲಿ ಕೆಲವೊಂದಷ್ಟು ತಾಂತ್ರಿಕ ಬದಲಾವಣೆಗಳನ್ನು ಮಾಡಬೇಕಾಗಿದೆ ಎಂದು ಲೀ ಸಲಹೆ ನೀಡಿದರು.

“ನಾನು ಹೇಳುವ ಏಕೈಕ ಸಲಹೆಯೆಂದರೆ, ಬುಮ್ರಾ ಬೌಲಿಂಗ್‌ ಮಾಡುವಾಗ ಅವರ ಓಟವು ತುಂಬಾ ಚಿಕ್ಕದಾಗಿದೆ. ಅವರು ಆ ವೇಗ ಮತ್ತು ಶಕ್ತಿಯನ್ನು ಅವರ ಕ್ರಿಯೆಯಿಂದ ಕಂಡುಹಿಡಿಯಬೇಕು ಎಂದು ನಾನು ಭಾವಿಸುತ್ತೇನೆ. ಜಾಸ್ತಿ ಅಂತರ ತೆಗೆದುಕೊಂಡರೆ, ಅವರು ತಮ್ಮ ಸಮಯವನ್ನು ವಿಸ್ತರಿಸಬಹುದು. ಹೆಚ್ಚು ಓಟವನ್ನು ಕಂಡುಕೊಂಡು ಬೆನ್ನಿನಿಂದ ಒತ್ತಡವನ್ನು ಹೊರಹಾಕಲು ಪ್ರಯತ್ನಿಸಬಹುದು” ಎಂದು ಲೀ ಸಲಹೆ ನೀಡಿದ್ದಾರೆ.

ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಟಿ20 ವಿಶ್ವಕಪ್‌ನಿಂದ ಬುಮ್ರಾ ಹೊರಗುಳಿದಿದ್ದರು. ಇತ್ತೀಚೆಗೆ ಅವರು ನ್ಯೂಜಿಲೆಂಡ್‌ನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ