logo
ಕನ್ನಡ ಸುದ್ದಿ  /  ಕ್ರೀಡೆ  /  Rohit On 2011 World Cup: ಆ ಒಂದು ಕಾರಣಕ್ಕೆ ಒಂದು ತಿಂಗಳು ಮಾನಸಿಕ ಖಿನ್ನತೆಗೆ ಒಳಗಾಗಿದ್ದೆ; ಬಿಕ್ಕಿ ಬಿಕ್ಕಿ ಅತ್ತಿದ್ದೆ ಎಂದ ರೋಹಿತ್​​

Rohit on 2011 World Cup: ಆ ಒಂದು ಕಾರಣಕ್ಕೆ ಒಂದು ತಿಂಗಳು ಮಾನಸಿಕ ಖಿನ್ನತೆಗೆ ಒಳಗಾಗಿದ್ದೆ; ಬಿಕ್ಕಿ ಬಿಕ್ಕಿ ಅತ್ತಿದ್ದೆ ಎಂದ ರೋಹಿತ್​​

Prasanna Kumar P N HT Kannada

Apr 30, 2023 03:46 PM IST

ರೋಹಿತ್​ ಶರ್ಮಾ

    • ಇಂದು (ಏಪ್ರಿಲ್​ 30) 36ನೇ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ರೋಹಿತ್​ ಶರ್ಮಾ (Rohit Sharma Birthday), ಒಂದು ಕಾರಣಕ್ಕೆ ಒಂದು ತಿಂಗಳ ಕಾಲ ಮಾನಸಿಕ ಖಿನ್ನತೆಗೆ ಒಳಗಾಗಿದ್ದಂತೆ. ಕಣ್ಣೀರು ಹಾಕಿದ್ದರಂತೆ. ಈ ಬಗ್ಗೆ ಹಿಟ್​ಮ್ಯಾನ್​ ಹೇಳಿರೋದೇನು ಎಂಬುದನ್ನು ಈ ಮುಂದೆ ನೋಡೋಣ.
ರೋಹಿತ್​ ಶರ್ಮಾ
ರೋಹಿತ್​ ಶರ್ಮಾ

2011ರ ಏಕದಿನ ವಿಶ್ವಕಪ್ (2011 ODI World Cup)​​ ಭಾರತ ಗೆದ್ದಿದ್ದು ಯಾರಿಗೆ ತಾನೆ ನೆನಪಿಲ್ಲ ಹೇಳಿ. ಏಪ್ರಿಲ್​ 2, ಭಾರತ ಕ್ರಿಕೆಟ್ ಪ್ರೇಮಿಗಳ ಪಾಲಿಗೆ ಅಜರಾಮರ. ಆ ವರ್ಷ 28 ವರ್ಷಗಳು ಅಂದರೆ 1983ರ ಬಳಿಕ ಭಾರತ ಏಕದಿನ ವಿಶ್ವಕಪ್​ ಟ್ರೋಫಿಗೆ ಮುತ್ತಿಕ್ಕಿತ್ತು. ಇಡೀ ಭಾರತವೇ ವಿಜಯೋತ್ಸವ ಸಂಭ್ರಮದಲ್ಲಿ ಮಿಂದೆದಿತ್ತು. ವಿಶೇಷ ಅಂದರೆ, ಈ ಐಸಿಸಿ ಏಕದಿನ ವಿಶ್ವಕಪ್​ ಟೂರ್ನಿ ಜರುಗಿದ್ದು, ಭಾರತದಲ್ಲೇ. ಭಾರತ ವಿಶ್ವಕಪ್​ ಗೆದ್ದಾಗ ರೋಹಿತ್​ ಶರ್ಮಾ (Rohit Sharma) ಸಂಭ್ರಮದ ಜೊತೆಗೆ ದುಃಖದಲ್ಲೂ ಇದ್ದರಂತೆ.

ಟ್ರೆಂಡಿಂಗ್​ ಸುದ್ದಿ

42 ವರ್ಷದ ಎಂಎಸ್‌ ಧೋನಿ ಫಿಟ್ನೆಸ್ ಸೀಕ್ರೆಟ್ ಏನು; ಕೂಲ್ ಕ್ಯಾಪ್ಟನ್ ಡಯಟ್, ವರ್ಕೌಟ್ ಪ್ಲಾನ್ ಹೀಗಿರುತ್ತೆ

ತಂದೆ-ತಾಯಿಯೂ ಕ್ರೀಡಾಪಟುಗಳು, ಕೋಚ್​ ಮಗಳನ್ನೇ ಪಟಾಯಿಸಿದ್ರು; ಇದು ನಿವೃತ್ತಿ ಘೋಷಿಸಿದ ಸುನಿಲ್ ಛೆಟ್ರಿ ಲೈಫ್​ಸ್ಟೋರಿ

ಅಂತಾರಾಷ್ಟ್ರೀಯ ಫುಟ್ಬಾಲ್​ಗೆ ಕಾಲ್ಚೆಂಡಿನ ಚತುರ ಸುನಿಲ್ ಛೆಟ್ರಿ ನಿವೃತ್ತಿ; ಈ ದಿನವೇ ದಿಗ್ಗಜ ಆಟಗಾರನ ಕೊನೆಯ ಪಂದ್ಯ

ಫೆಡರೇಶನ್ ಕಪ್‌ನಲ್ಲಿ ಬಂಗಾರ ಗೆದ್ದ ನೀರಜ್‌ ಚೋಪ್ರಾ; ಕೂದಲೆಳೆ ಅಂತರದಲ್ಲಿ ಬೆಳ್ಳಿಗೆ ತೃಪ್ತಿ ಪಟ್ಟ ಡಿಪಿ ಮನು

36ನೇ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿರುವ ಟೀಮ್​​ ಇಂಡಿಯಾ ಕ್ಯಾಪ್ಟನ್​​ ರೋಹಿತ್ ಶರ್ಮಾ (Team India Captain Rohit Sharma Birthday) ಬಗ್ಗೆ ಶಾಕಿಂಗ್​ ಸುದ್ದಿಯೊಂದು ಹೊರ ಬಿದ್ದಿದೆ. ಹಿಟ್​ಮ್ಯಾನ್​ ತನ್ನ ಕ್ರಿಕೆಟ್ ಕರಿಯರ್​ನಲ್ಲಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದರಂತೆ. ಒಂದು ಕಾರಣದಿಂದ ಮುಂಬೈಕರ್​ ತನ್ನ ರೂಮ್​​ನಲ್ಲಿ ಒಂಟಿಯಾಗಿ ಬಿಕ್ಕಿ ಬಿಕ್ಕಿ ಅಳುತ್ತಿದ್ದರಂತೆ. ಈ ಸಮಯದಲ್ಲಿ ಯಾವೊಬ್ಬ ಟೀಮ್​ ಇಂಡಿಯಾದ ಸಮಾಧಾನಿಸಲು ಬರಲಿಲ್ಲ ಎಂಬ ಮಾಹಿತಿ ಬೆಳಕಿಗೆ ಬಂದಿದೆ. ಆದರೆ ಈ ಹಂತದಲ್ಲಿ ಆ ಒಬ್ಬ ಅನುಭವಿ ಆಟಗಾರ ಮಾತ್ರ ಸದಾ ರೋಹಿತ್​ ಬೆನ್ನಿಗೆ ನಿಂತಿದ್ದರಂತೆ.

ರೋಹಿತ್​ ಕುರಿತು ಯಾರಿಗೂ ತಿಳಿಯದ ವಿಚಾರಗಳನ್ನು ಟೀಮ್​ ಇಂಡಿಯಾ ಮಹಿಳಾ ತಂಡದ ಮಧ್ಯಮ ಕ್ರಮಾಂಕದ ಆಟಗಾರ್ತಿ ಜೆಮಿಮಾ ರೋಡ್ರಿಗಸ್ (Jemimah Rodrigues) ರಿವೀಲ್​ ಮಾಡಿದ್ದಾರೆ. ರೋಹಿತ್​​ ಜೊತೆಗೆ ನಡೆಸಿದ್ದ ಸಂಭಾಷಣೆಯನ್ನು 'ಬ್ರೇಕ್‌ಫಾಸ್ಟ್ ವಿತ್ ಚಾಂಪಿಯನ್ಸ್' ಕಾರ್ಯಕ್ರಮದಲ್ಲಿ ರೋಡ್ರಿಗಸ್​ ಹಂಚಿಕೊಂಡಿದ್ದಾರೆ. ಭಾರತದಲ್ಲಿ0 2011ರಲ್ಲಿ ಏಕದಿನ ವಿಶ್ವಕಪ್​ಗೆ ರೋಹಿತ್ ಶರ್ಮಾ ಆಯ್ಕೆಯಾಗಿರಲಿಲ್ಲ. ಇದೇ ಕಾರಣಕ್ಕೆ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಅಲ್ಲದೆ ಕಠಿಣ ದಿನಗಳನ್ನೂ ಎದುರಿಸಿದ್ದಾರೆ ಎಂದು ಜೆಮಿಮಾ ರೋಡ್ರಿಗಸ್ ಹೇಳಿದ್ದಾರೆ. ಈ ಕುರಿತು ರೋಹಿತ್​ ಜೊತೆಗೆ ನಡೆದಿದ್ದ ಸಂಭಾಷಣೆಯನ್ನು ವಿವರಿಸಿದ್ದಾರೆ.

2011ರ ಏಕದಿನ ವಿಶ್ವಕಪ್​​​​​​ ತಂಡಕ್ಕೆ ನೀವು ಸೆಲೆಕ್ಟ್​ ಆಗಿರಲಿಲ್ಲ. ಈಗ ಅದೇ ನೀವೇ ಟೀಮ್​ ಇಂಡಿಯಾಗೆ ನಾಯಕನಾಗುತ್ತಿದ್ದೀರಿ. ಆದರೆ ಈ ಹಂತಕ್ಕೆ ತಲುಪುದರ ಬಗ್ಗೆ ಎಂದಾದರೂ ಯೋಚಿಸಿದ್ದೀರಾ? ಎಂದು ರೋಹಿತ್​ ಅವರನ್ನು ಕೇಳಿದ್ದೆ. ಇದಕ್ಕೆ ಪ್ರತಿಕ್ರಿಯಿಸಿದ್ದ ರೋಹಿತ್​, ಅಂದು ನಾನಿದ್ದ ಪರಿಸ್ಥಿತಿ ಯಾರಿಗೂ ಬೇಡ. ಈ ಬಗ್ಗೆ ಯಾರಿಗೂ ಗೊತ್ತಿಲ್ಲ ಎಂದು ಹೇಳಿದ್ದರು. ನಾನು 2011ರ ವಿಶ್ವಕಪ್​ ಆಡುವ ಕನಸು ತುಂಬಾ ಇತ್ತು. ಆದರೆ ನಾನು ತಂಡದಿಂದ ಡ್ರಾಪ್​ ಆಗಿದ್ದೆ. ಇದರಿಂದ ನಾನು ಒಂದು ತಿಂಗಳ ಮಾನಸಿಕ ಖಿನ್ನತೆಗೆ ಒಳಗಾಗಿದ್ದೆ ಎಂದು ಬೇಸರ ವ್ಯಕ್ತಪಡಿಸಿದ್ದರು.

ನನ್ನ ರೂಮ್​ ಲಾಕ್​ ಮಾಡಿಕೊಂಡು ಒಬ್ಬನೇ ಬಿಕ್ಕಿ ಬಿಕ್ಕಿ ಅಳುತ್ತಿದ್ದೆ. ಆದರೆ ಒಬ್ಬರು ಮಾತ್ರ ನನ್ನ ಕೈಹಿಡಿದರು. ಧೈರ್ಯ ತುಂಬಿದರು. ಅವರು ಯುವರಾಜ್​ ಸಿಂಗ್​.. ಅವರು ನನ್ನ ಬಳಿಗೆ ಬಂದು ಊಟಕ್ಕೆ ಕರೆದುಕೊಂಡು ಹೋದರು. ಯುವರಾಜ್ ಸಿಂಗ್ ಬಿಟ್ಟರೆ ಯಾರೂ ಬರಲಿಲ್ಲ. ತುಂಬಾ ಧೈರ್ಯ ತುಂಬಿದರು. ನನ್ನ ಕಣ್ಣಲ್ಲೂ ನೀರು ಬಂದಿತ್ತು ಎಂದಿದ್ದರು. ಯಾರಿಗೂ ನನ್ನ ಸಾಮರ್ಥ್ಯ ಸಾಬೀತುಪಡಿಸಲು ಇಷ್ಟಪಡಲ್ಲ. ನನ್ನ ಆಟವನ್ನು ಇಷ್ಟಪಡುತ್ತೇನೆ ಎಂದು ಕಷ್ಟದ ದಿನಗಳನ್ನು ರೋಹಿತ್​ ಹೇಳಿದ್ದರು ಎಂದು ಜೆಮಿಮಾ ರೋಡ್ರಿಗಸ್ ತಿಳಿಸಿದ್ದಾರೆ.

ಆದರೆ ಈ ವಿಶ್ವಕಪ್​ಗೆ ರೋಹಿತ್​ ಶರ್ಮಾ ಬದಲಿಗೆ ವಿರಾಟ್​ ಕೊಹ್ಲಿ ಸೆಲೆಕ್ಟ್​ ಆಗಿದ್ದರು. ಅದಕ್ಕೆ ಕಾರಣವೂ ಇದೆ. ತಂಡದ ಆಯ್ಕೆಗೂ ಮೊದಲು ರೋಹಿತ್​​ ಆಡಿದ 12 ಏಕದಿನ ಪಂದ್ಯಗಳಲ್ಲಿ ಒಂದು ಅರ್ಧಶತಕವನ್ನೂ ಸಿಡಿಸಿರಲಿಲ್ಲ. ಟೀಮ್ ಇಂಡಿಯಾ ಏಕದಿನ ವಿಶ್ವಕಪ್​ ಫೈನಲ್​​ನಲ್ಲಿ ಶ್ರೀಲಂಕಾ ಜಯಭೇರಿ ಬಾರಿಸಿತ್ತು. ವಿಶ್ವಕಪ್​ ಗೆದ್ದು 2023ರ ಏಪ್ರಿಲ್​ 2ಕ್ಕೆ 12 ವರ್ಷಗಳಾಗಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ