logo
ಕನ್ನಡ ಸುದ್ದಿ  /  Sports  /  Cricket News Ipl 2023 Rajasthan Royals To Bowl Against Punjab Kings Toss Update Indian Premier League Pbks Vs Rr Jra

PBKS vs RR: ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಬ್ಯಾಟಿಂಗ್‌ಗಿಳಿದ ಪಂಜಾಬ್;‌ ಬೇಕಿದೆ ಬೃಹತ್ ಅಂತರದ ಗೆಲುವು

Jayaraj HT Kannada

May 19, 2023 07:13 PM IST

ಪಂಜಾಬ್‌ ಆಟಗಾರರು

    • ಮಹತ್ವದ ಪಂದ್ಯದಲ್ಲಿ ಟಾಸ್‌ ಗೆದ್ದ ರಾಜಸ್ಥಾನ ರಾಯಲ್ಸ್, ಬೌಲಿಂಗ್‌ ಆಯ್ಕೆ ಮಾಡಿಕೊಂಡಿದೆ. ಬೆನ್ನು ನೋವಿನ ಕಾರಣದಿಂದಾಗಿ ಈ ಪಂದ್ಯದಲ್ಲಿ ಸ್ಪಿನ್ನರ್‌ ಅಶ್ವಿನ್‌ ಆಡುತ್ತಿಲ್ಲ. ಮತ್ತೊಂದು ಕಡೆ, ಬ್ಯಾಟಿಂಗ್‌ ಮಾಡುತ್ತಿರುವ ಶಿಖರ್‌ ಧವನ್‌ ಬಳಗವು, ಕಳೆದ ಪಂದ್ಯದಲ್ಲಿ ಕಣಕ್ಕಿಳಿದ ಆಡುವ ಬಳಗದೊಂದಿಗೆ ಇಂದು ಕೂಡಾ ಆಡುತ್ತಿದೆ.
ಪಂಜಾಬ್‌ ಆಟಗಾರರು
ಪಂಜಾಬ್‌ ಆಟಗಾರರು

ಐಪಿಎಲ್‌ನ ಪ್ರಸಕ್ತ ಆವೃತ್ತಿಯು ಪ್ಲೇ ಆಫ್‌ ಹಂತಕ್ಕೆ ಸಮೀಪಿಸಿದೆ. ಲೀಗ್‌ ಹಂತದ ಕೊನೆಯ ಕೆಲವೇ ಪಂದ್ಯಗಳು ಬಾಕಿ ಉಳಿದಿದ್ದು, ಇಂದಿನ ಪಂದ್ಯದಲ್ಲಿ ಹಾಲಿ ರನ್ನರ್ ಅಪ್​ ರಾಜಸ್ಥಾನ ರಾಯಲ್ಸ್ (Rajasthan Royals)​​ ಮತ್ತು ಪಂಜಾಬ್​ ಕಿಂಗ್ಸ್​ (Punjab Kings) ತಂಡಗಳು ಮುಖಾಮುಖಿಯಾಗುತ್ತಿವೆ. ಉಭಯ ತಂಡಗಳಿಗೂ ಇದು ತಮ್ಮ ಪಾಲಿನ ಅಂತಿಮ ಲೀಗ್​​ ಪಂದ್ಯವಾಗಿದೆ.

ಟ್ರೆಂಡಿಂಗ್​ ಸುದ್ದಿ

ಕ್ಯಾಂಡಿಡೇಟ್ಸ್ ಗೆದ್ದು ಭಾರತಕ್ಕೆ ಮರಳಿದ ಗುಕೇಶ್‌ಗೆ ಸಂಭ್ರಮದ ಸ್ವಾಗತ-ಸನ್ಮಾನ; ಅಮ್ಮನ ಅಪ್ಪುಗೆ, ಮಮತೆಯ ಮುತ್ತಿನ ಧಾರೆ

T20 World Cup 2024: ಟಿ20 ವಿಶ್ವಕಪ್ ಟೂರ್ನಿಗೆ ಒಲಿಂಪಿಕ್ ಲೆಜೆಂಡ್ ಉಸೇನ್ ಬೋಲ್ಟ್ ರಾಯಭಾರಿಯಾಗಿ ನೇಮಕ

ಕಿರಿಯ ವಿಶ್ವ ಚೆಸ್ ಚಾಂಪಿಯನ್ ಆಗುವುದೇ ನನ್ನ ಗುರಿ; ಕ್ಯಾಂಡಿಡೇಟ್ಸ್ ಗೆದ್ದ ಬೆನ್ನಲ್ಲೇ ಗುಕೇಶ್ ಹಳೆಯ ವಿಡಿಯೊ ವೈರಲ್

D Gukesh Profile: ಕ್ಯಾಂಡಿಡೇಟ್ಸ್ ಚೆಸ್ ಟೂರ್ನಿ ಗೆದ್ದು ಐತಿಹಾಸಿಕ ಸಾಧನೆ ಮಾಡಿದ ಡಿ ಗುಕೇಶ್ ಯಾರು? ಚೆನ್ನೈ ಹುಡುಗನ ಜೀವನಗಾಥೆ

ಐಪಿಎಲ್​ 16ನೇ ಆವೃತ್ತಿಯಲ್ಲಿ ಪ್ಲೇ ಆಫ್​ ರೇಸ್​ನಲ್ಲಿ ಉಳಿದುಕೊಳ್ಳಲು ಉಭಯ ತಂಡಗಳಿಗೂ ಇಂದು ಗೆಲುವು ಅನಿವಾರ್ಯ. ಅದು ಕೂಡಾ ಬೃಹತ್​ ಅಂತರದ ಜಯ ಸಾಧಿಸುವ ಅನಿವಾರ್ಯತೆ ಇದೆ. ಇಂದು ಸೋಲುವು ತಂಡವು ಟೂರ್ನಿಯಿಂದ ಅಧಿಕೃತವಾಗಿ ಹೊರ ಬೀಳಲಿದ್ದು, ಗೆಲ್ಲುವ ತಂಡವು ಅದೃಷ್ಟದ ಮೇಲೆ ಪ್ಲೇ ಆಫ್‌‌ ಟಿಕೆಟ್‌ ಪಡೆದುಕೊಳ್ಳಲಿದೆ.

ಮಹತ್ವದ ಪಂದ್ಯದಲ್ಲಿ ಟಾಸ್‌ ಗೆದ್ದ ರಾಜಸ್ಥಾನ ರಾಯಲ್ಸ್, ಬೌಲಿಂಗ್‌ ಆಯ್ಕೆ ಮಾಡಿಕೊಂಡಿದೆ. ಬೆನ್ನು ನೋವಿನ ಕಾರಣದಿಂದಾಗಿ ಈ ಪಂದ್ಯದಲ್ಲಿ ಸ್ಪಿನ್ನರ್‌ ಅಶ್ವಿನ್‌ ಆಡುತ್ತಿಲ್ಲ. ಮತ್ತೊಂದು ಕಡೆ, ಬ್ಯಾಟಿಂಗ್‌ ಮಾಡುತ್ತಿರುವ ಶಿಖರ್‌ ಧವನ್‌ ಬಳಗವು, ಕಳೆದ ಪಂದ್ಯದಲ್ಲಿ ಕಣಕ್ಕಿಳಿದ ಆಡುವ ಬಳಗದೊಂದಿಗೆ ಇಂದು ಕೂಡಾ ಆಡುತ್ತಿದೆ.

ಪಿಚ್‌ ವರದಿ

ಭಾರತದ ಅತ್ಯಂತ ಸುಂದರವಾದ ಕ್ರಿಕೆಟ್‌ ಮೈದಾನ ಎನಿಸಿಕೊಂಡಿರುವ ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ​​ಮೈದಾನವು, ಬ್ಯಾಟಿಂಗ್ ಸ್ನೇಹಿಯಾಗಿದೆ. ಬ್ಯಾಟರ್​​ಗಳು ನಿರಾಯಾಸವಾಗಿ ರನ್ ಗಳಿಸಲಿದ್ದಾರೆ. ಪಂದ್ಯ ಮುಂದುವರೆದಂತೆ ಸ್ಪಿನ್ನರ್‌ಗಳಿಗೂ ಕೊಂಚ ಮಟ್ಟಿಗೆ ನೆರವಾಗಲಿದೆ. ಟಾಸ್ ಗೆದ್ದ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಇದೆ. ಕಳೆದ ಪಂದ್ಯದಲ್ಲಿ ಕೂಡಾ ಇಲ್ಲಿ ರನ್‌ ಮಳೆ ಹರಿದಿತ್ತು.

ಪ್ಲೇ ಆಫ್​ ಲೆಕ್ಕಾಚಾರ

ರಾಜಸ್ಥಾನ - ಪಂಜಾಬ್​ ಆಡಿರುವ 13 ಪಂದ್ಯಗಳಲ್ಲಿ 6 ಗೆಲುವು, 7 ಸೋಲಿನೊಂದಿಗೆ ತಲಾ 12 ಅಂಕ ಕಲೆ ಹಾಕಿದೆ. ರನ್​ರೇಟ್​ ಆಧಾರದಲ್ಲಿ ಆರ್​ಆರ್​​​ (+0.140), ಪಂಜಾಬ್​ಗಿಂತ (-0.256) ಮುಂದಿದೆ. ರಾಜಸ್ಥಾನ ತಂಡ ಗೆಲುವು ಸಾಧಿಸಿದರೆ ಅದರ ಭವಿಷ್ಯ ಆರ್​ಸಿಬಿ ಮತ್ತು ಮುಂಬೈ ತಂಡಗಳ ಅಂತಿಮ ಲೀಗ್​​ ಪಂದ್ಯದ ಫಲಿತಾಂಶದ ಮೇಲೆ ನಿರ್ಧಾರವಾಗಲಿದೆ. ಪಂಜಾಬ್​ಗೆ ಬೃಹತ್​​ ಅಂತರದ ಗೆಲುವಿನ ಅಗತ್ಯ ಇದೆ. ಮುಂಬೈ ಅಥವಾ ಆರ್​ಸಿಬಿ ಕೊನೆಯ ಪಂದ್ಯದಲ್ಲಿ ಗೆದ್ದರೆ, ಇವರೆಡರಲ್ಲಿ ಯಾವ ತಂಡ ಗೆದ್ದರೂ ಪ್ಲೇ ಆಫ್​ಗೇರಲ್ಲ.

ಉಭಯ ತಂಡಗಳ ಮುಖಾಮುಖಿ

ಪಂಜಾಬ್​ ಮತ್ತು ರಾಜಸ್ಥಾನ ತಂಡಗಳು ಇದುವರೆಗೆ ಒಟ್ಟು 25 ಬಾರಿ ಮುಖಾಮುಖಿಯಾಗಿವೆ. ಅದರಲ್ಲಿ ಪಂಜಾಬ್​ 11 ಗೆಲುವು ಸಾಧಿಸಿದರೆ, ರಾಜಸ್ಥಾನ 14 ಗೆಲುವು ಸಾಧಿಸಿದೆ.

ಪಂಜಾಬ್ ಕಿಂಗ್ಸ್ ಆಡುವ ಬಳಗ

ಶಿಖರ್ ಧವನ್ (ನಾಯಕ), ಪ್ರಭ್‌ಸಿಮ್ರಾನ್ ಸಿಂಗ್, ಅಥರ್ವ ಟೈಡೆ, ಲಿಯಾಮ್ ಲಿವಿಂಗ್‌ಸ್ಟನ್, ಸ್ಯಾಮ್ ಕರನ್, ಜಿತೇಶ್ ಶರ್ಮಾ (ವಿಕೆಟ್‌ ಕೀಪರ್), ಶಾರುಖ್ ಖಾನ್, ಹರ್‌ಪ್ರೀತ್ ಬ್ರಾರ್, ರಾಹುಲ್ ಚಾಹರ್, ಕಗಿಸೊ ರಬಾಡ, ಅರ್ಷದೀಪ್ ಸಿಂಗ್.

ರಾಜಸ್ಥಾನ್ ರಾಯಲ್ಸ್ ಆಡುವ ಬಳಗ

ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್, ಸಂಜು ಸ್ಯಾಮ್ಸನ್ (ವಿಕೆಟ್‌ ಕೀಪರ್), ದೇವದತ್ ಪಡಿಕ್ಕಲ್, ಶಿಮ್ರಾನ್ ಹೆಟ್ಮೆಯರ್, ರಿಯಾನ್ ಪರಾಗ್, ಆಡಮ್ ಜಂಪಾ, ಟ್ರೆಂಟ್ ಬೌಲ್ಟ್, ನವದೀಪ್ ಸೈನಿ, ಸಂದೀಪ್ ಶರ್ಮಾ, ಯಜುವೇಂದ್ರ ಚಹಾಲ್.

    ಹಂಚಿಕೊಳ್ಳಲು ಲೇಖನಗಳು