logo
ಕನ್ನಡ ಸುದ್ದಿ  /  ಕ್ರೀಡೆ  /  Sehwag On Curran: 18 ಕೋಟಿ ಕೊಟ್ರೆ ಅನುಭವ ಸಿಗಲ್ಲ; ಸ್ಯಾಮ್‌ ಕರನ್ ಆಟಕ್ಕೆ ಸೆಹ್ವಾಗ್ ಸಿಡಿಮಿಡಿ

Sehwag on Curran: 18 ಕೋಟಿ ಕೊಟ್ರೆ ಅನುಭವ ಸಿಗಲ್ಲ; ಸ್ಯಾಮ್‌ ಕರನ್ ಆಟಕ್ಕೆ ಸೆಹ್ವಾಗ್ ಸಿಡಿಮಿಡಿ

Jayaraj HT Kannada

Apr 21, 2023 03:49 PM IST

ವಿರೇಂದ್ರ ಸೆಹ್ವಾಗ್, ಸ್ಯಾಮ್‌ ಕರನ್

    • ಅವರು ಅಂತಾರಾಷ್ಟ್ರೀಯ ಆಟಗಾರ. ಹಾಗಂತಾ, 18 ಕೋಟಿಯಿಂದ ಅನುಭವವನ್ನು ಖರೀದಿಸಲು ಸಾಧ್ಯವಿಲ್ಲ. ಬಿಸಿಲಿನಲ್ಲಿ ಆಡಿ ಕೂದಲು ಬೆಳ್ಳಗಾಗದರೆ ಮಾತ್ರ ಅನುಭವ ಸಿಗುತ್ತದೆ, ಎಂದು ಕರನ್‌ ಕುರಿತಾಗಿ ಸೆಹ್ವಾಗ್ ಮಾರ್ಮಿಕವಾಗಿ ನುಡಿದಿದ್ದಾರೆ.
ವಿರೇಂದ್ರ ಸೆಹ್ವಾಗ್, ಸ್ಯಾಮ್‌ ಕರನ್
ವಿರೇಂದ್ರ ಸೆಹ್ವಾಗ್, ಸ್ಯಾಮ್‌ ಕರನ್ (File/PTI)

ಗುರುವಾರ ಮಧ್ಯಾಹ್ನ ನಡೆದ ಐಪಿಎಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ (Punjab Kings) ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ವಿರುದ್ಧ 24 ರನ್‌ಗಳಿಂದ ಸೋಲನುಭವಿಸಿತು.

ಟ್ರೆಂಡಿಂಗ್​ ಸುದ್ದಿ

Bengaluru Weather: ಆರ್‌ಸಿಬಿ ಅಭಿಮಾನಿಗಳು ಚಿಂತಿಸಬೇಕಾದ್ದಿಲ್ಲ, ಚಿನ್ನಸ್ವಾಮಿ ಸ್ಟೇಡಿಯಂನಲ್ಲಿದೆ ಸಬ್‌ಏರ್‌ ಸಿಸ್ಟಮ್‌, ಏನದು

42 ವರ್ಷದ ಎಂಎಸ್‌ ಧೋನಿ ಫಿಟ್ನೆಸ್ ಸೀಕ್ರೆಟ್ ಏನು; ಕೂಲ್ ಕ್ಯಾಪ್ಟನ್ ಡಯಟ್, ವರ್ಕೌಟ್ ಪ್ಲಾನ್ ಹೀಗಿರುತ್ತೆ

RCB vs CSK IPL 2024: ಆರ್‌ಸಿಬಿ ವಿರುದ್ಧದ ಪಂದ್ಯಕ್ಕೆ ಸಿಎಸ್‌ಕೆ ರಣತಂತ್ರ; ಚೆನ್ನೈ ಸೂಪರ್ ಕಿಂಗ್ಸ್ ಆಡುವ ಸಂಭಾವ್ಯ 11ರ ಬಳಗ ಹೀಗಿದೆ

ತಂದೆ-ತಾಯಿಯೂ ಕ್ರೀಡಾಪಟುಗಳು, ಕೋಚ್​ ಮಗಳನ್ನೇ ಪಟಾಯಿಸಿದ್ರು; ಇದು ನಿವೃತ್ತಿ ಘೋಷಿಸಿದ ಸುನಿಲ್ ಛೆಟ್ರಿ ಲೈಫ್​ಸ್ಟೋರಿ

ಪಂಜಾಬ್‌ ತಂಡದ ಸ್ಟ್ಯಾಂಡ್ ಇನ್ ನಾಯಕ ಸ್ಯಾಮ್ ಕರನ್ (Sam Curran), ಟಾಸ್‌ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಮೊದಲು ಬ್ಯಾಟಿಂಗ್‌ ಮಾಡಿದ ಆರ್‌ಸಿಬಿ 4 ವಿಕೆಟ್‌ ಕಳೆದುಕೊಂಡು 174 ರನ್‌ ದಾಖಲಿಸಿತು. ವಿರಾಟ್ ಕೊಹ್ಲಿ ಮತ್ತು ಫಾಫ್ ಡು ಪ್ಲೆಸಿಸ್ ಮೊದಲ ವಿಕೆಟ್‌ಗೆ 137 ರನ್‌ಗಳ ಜೊತೆಯಾಟ ನೀಡಿದರು. ಇದಕ್ಕೆ ಉತ್ತರವಾಗಿ, ಕಿಂಗ್ಸ್ ಇನ್ನೂ ಹತ್ತು ಎಸೆತಗಳು ಬಾಕಿ ಇರುವಂತೆಯೇ 150 ರನ್ ಗಳಿಸಿ ಆಲೌಟ್‌ ಆಯ್ತು.

ಪಂಜಾಬ್‌ ಕಿಂಗ್ಸ್ ತಂಡವು ಬ್ಯಾಟಿಂಗ್‌ ವೇಳೆ ಅಗ್ರ ಮತ್ತು ಮಧ್ಯಮ ಕ್ರಮಾಂಕದ ಕುಸಿತವನ್ನು ಅನುಭವಿಸಿತು. ಪವರ್‌ಪ್ಲೇ ಒಳಗೆ ತಂಡವು 43 ರನ್‌ ಗಳಿಸುವಷ್ಟರಲ್ಲೇ ಪ್ರಮುಖ 4 ವಿಕೆಟ್‌ ಕಳೆದುಕೊಂಡಿತು. ಕಳಪೆ ಬ್ಯಾಟಿಂಗ್ ಪ್ರದರ್ಶನದಿಂದಾಗಿ ತಂಡವು ಸೋಲೊಪ್ಪಿತು. ಪ್ರಭ್‌ಸಿಮ್ರಾನ್ ಸಿಂಗ್ ತಂಡದ ಮೊತ್ತವನ್ನು ಹೆಚ್ಚಿಸಲು ಪ್ರಯತ್ನಿಸಿದರು. ಆದರೆ ಇತರ ಬ್ಯಾಟರ್‌ಗಳು ಅವರೊಂದಿಗೆ ಉತ್ತಮ ಜೊತೆಯಾಟ ನೀಡುವಲ್ಲಿ ವಿಫಲರಾದರು. ನಾಯಕ ಕರಾನ್ ಕೂಡಾ ಸ್ಥಿರ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಲಿಲ್ಲ. ಅಂತಿಮವಾಗಿ ಸ್ಟ್ಯಾಂಡ್-ಇನ್ ನಾಯಕ 10ನೇ ಓವರ್‌ನಲ್ಲಿ 10 ರನ್‌ ಗಳಿಸಿ ವಿಕೆಟ್ ಒಪ್ಪಿಸಿದರು.

ಭಾರತದ ಮಾಜಿ ಆರಂಭಿಕ ಆಟಗಾರ ವಿರೇಂದ್ರ ಸೆಹ್ವಾಗ್ (Virender Sehwag), ಈ ಹಿಂದೆ ಪಂಜಾಬ್ ಕಿಂಗ್ಸ್‌ ತಂಡದ ಪರ ಆಡಿದ್ದರು. ಈ ಹಿಂದೆ ತಂಡದ ಆಟಗಾರನಾಗಿ ಬಳಿಕ ತರಬೇತುದಾರರಾಗಿ ಕೆಲಸ ಮಾಡಿದ್ದ ವೀರು, ಸ್ಯಾಮ್‌ ಕರನ್‌ ಅವರ ಆಟದ ಬಗ್ಗೆ ಟೀಕಿಸಿದ್ದಾರೆ. ಅದರಲ್ಲೂ ವಿಕೆಟ್‌ಗಳ ನಡುವೆ ಓಡುವಾಗ ಸೋಮಾರಿತನ ತೋರಿಸಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ಅವರು ಅಂತಾರಾಷ್ಟ್ರೀಯ ಆಟಗಾರ. ಹಾಗಂತಾ, 18 ಕೋಟಿಯಿಂದ ಅನುಭವವನ್ನು ಖರೀದಿಸಲು ಸಾಧ್ಯವಿಲ್ಲ. ನೀವು ಆಡಿದಾಗ ಮಾತ್ರ, ಬಿಸಿಲಿನಲ್ಲಿ ಆಡಿ ಕೂದಲು ಬೆಳ್ಳಗಾಗದರೆ ಮಾತ್ರ ಅನುಭವ ಸಿಗುತ್ತದೆ,” ಎಂದು ಕರನ್‌ ಕುರಿತಾಗಿ ಸೆಹ್ವಾಗ್ ಮಾರ್ಮಿಕವಾಗಿ ನುಡಿದಿದ್ದಾರೆ. ಈ ಬಗ್ಗೆ ಅವರು ಕ್ರಿಕ್‌ಬಜ್‌ಗೆ ತಿಳಿಸಿದ್ದಾರೆ.

“ಅವರನ್ನು 18 ಕೋಟಿಗೆ ಖರೀದಿಸಿದ ಮಾತ್ರಕ್ಕೆ ಅವರು ತಂಡಕ್ಕೆ ಪಂದ್ಯಗಳನ್ನು ಗೆಲ್ಲಿಸುತ್ತಾರೆ ಎಂದು ನಾವು ಭಾವಿಸುತ್ತೇವೆ. ಆದರೆ ಅವರಿಗೆ ಆ ಅನುಭವ ಇನ್ನೂ ಬಂದಿಲ್ಲ. ಅವರದ್ದು ವಿಕೆಟ್‌ಗಳ ನಡುವೆ ಕಳಪೆ ಓಟವಾಗಿತ್ತು. ಅದರ ಅಗತ್ಯವಿರಲಿಲ್ಲ. ನಾಯಕನಾಗಿ ಅಂತಿಮ ಓವರ್‌ವರೆಗೂ ಆಡಿ ತಂಡವನ್ನು ಮುಂದೆ ಕೊಂಡೊಯ್ಯಬೇಕಿತ್ತು. ಆದರೆ, ಮತ್ತೆ ಅನುಭವದ ಕೊರತೆಯಿಂದಾಗಿ ತಂಡ ಬೆಲೆ ತೆರಬೇಕಾಯ್ತು" ಎಂದು ಸೆಹ್ವಾಗ್ ಹೇಳಿದ್ದಾರೆ.

ಪ್ರಸ್ತುತ ಗಾಯಗೊಂಡಿರುವ ಶಿಖರ್ ಧವನ್ ಅನುಪಸ್ಥಿತಿಯಲ್ಲಿ ಕರನ್ ಪಂಜಾಬ್ ಕಿಂಗ್ಸ್ ತಂಡವನ್ನು ಮುನ್ನಡೆಸಿದ್ದಾರೆ. ಧವನ್ ತಂಡದ ಕೊನೆಯ ಎರಡು ಪಂದ್ಯಗಳನ್ನು ಕಳೆದುಕೊಂಡಿದ್ದಾರೆ.

ಪಂಜಾಬ್‌ ತಂಡದಲ್ಲಿ ಯಾರಿಂದಲೂ ಸ್ಥಿರ ಪ್ರದರ್ಶನ ಹೊರಬರಲಿಲ್ಲ. ನಾಯಕ ಕರನ್‌ ವನಿಂದು ಹಸರಂಗ ಸಮಯೋಚಿತ ಆಟದಿಂದಾಗಿ ರನೌಟ್‌ ಆದರು. ಕ್ಷಣಮಾತ್ರದಲ್ಲೇ ಪಂದ್ಯ ಬದಲಿಸುವ ಸಾಮರ್ಥ್ಯವುಳ್ಳ ಶಾರುಖ್‌ ಖಾನ್‌ 7 ರನ್‌ ಗಳಿಸಿದ್ದಾಗ ಹಸರಂಗ ಮ್ಯಾಜಿಕ್‌ಗೆ ಔಟಾದರು.‌ ಜಿತೇಶ್‌ ಶರ್ಮಾ ಭಾರಿ ಹೋರಾಟ ನಡೆಸಿದರಾದರೂ, 41 ರನ್‌ ಗಳಿಸಿ ಔಟಾದರು. ಅಲ್ಲಿಗೆ ಪಂಜಾಬ್‌ ಸೋಲಿಗೆ ಮುತ್ತಿಟ್ಟಿತು. ಆರ್‌ಸಿಬಿ ಪರ ಮೊಹಮ್ಮದ್‌ ಸಿರಾಜ್‌ ಐಪಿಎಲ್‌ನ ಅತ್ಯುತ್ತಮ ಬೌಲಿಂಗ್‌ ಪ್ರದರ್ಶಿಸಿದರು. 4 ವಿಕೆಟ್‌ ಕಬಳಿಸುವುದರೊಂದಿಗೆ ಪರ್ಪಲ್‌ ಕ್ಯಾಪ್‌ ತಮ್ಮದಾಗಿಸಿಕೊಂಡರು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ