logo
ಕನ್ನಡ ಸುದ್ದಿ  /  ಕ್ರೀಡೆ  /  Cwf 2022: ಕುಸ್ತಿಯಲ್ಲಿ ಭಜರಂಗ್‌ ಪೂನಿಯಾಗೆ ಚಿನ್ನ, ಭಾರತಕ್ಕೆ ಮತ್ತೊಂದು ಬಂಗಾರದ ಕಿರೀಟ

CWF 2022: ಕುಸ್ತಿಯಲ್ಲಿ ಭಜರಂಗ್‌ ಪೂನಿಯಾಗೆ ಚಿನ್ನ, ಭಾರತಕ್ಕೆ ಮತ್ತೊಂದು ಬಂಗಾರದ ಕಿರೀಟ

Praveen Chandra B HT Kannada

Aug 05, 2022 11:04 PM IST

ಕುಸ್ತಿಯಲ್ಲಿ ಚಿನ್ನ ಗೆದ್ದ ಭಜರಂಗ ಪೂನಿಯಾ (PTI Photo/Swapan Mahapatra)(PTI08_05_2022_000387B)

    • ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಭಾರತಕ್ಕೆ ಮತ್ತೊಂದು ಚಿನ್ನ ದೊರಕಿದೆ. ಭಾರತದ ಸ್ಟಾರ್‌ ಕುಸ್ತಿಪಟು ಭಜರಂಗ್‌ ಪೂನಿಯಾ (Bajrang Punia) ಅವರು ಕೆನಡಾದ ಲಾಚ್ಲನ್‌ ಮೆಕ್‌ನೆಲ್‌ ವಿರುದ್ಧ ಪುರುಷರ 65 ಕೆ.ಜಿ. ವಿಭಾಗದಲ್ಲಿ ಇಂದು ಚಿನ್ನಕ್ಕೆ (gold medal) ಮುತ್ತಿಕ್ಕಿದ್ದಾರೆ. ಈ ಮೂಲಕ ಸತತವಾಗಿ ಎರಡು ಬಾರಿ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಚಾಂಪಿಯನ್‌ ಪಟ್ಟ ಪಡೆದ ಖ್ಯಾತಿಗೆ ಪಾತ್ರರಾಗಿದ್ದಾರೆ. ಈ ಮೂಲಕ ಭಾರತಕ್ಕೆ ಕಾಮನ್‌ವೆಲ್ತ್‌ನ ಈ ಋತುವಿನಲ್ಲಿ ಒಟ್ಟು ಆರು ಚಿನ್ನದ ಪದಕಗಳು ದೊರಕಿವೆ.
ಕುಸ್ತಿಯಲ್ಲಿ ಚಿನ್ನ ಗೆದ್ದ ಭಜರಂಗ ಪೂನಿಯಾ (PTI Photo/Swapan Mahapatra)(PTI08_05_2022_000387B)
ಕುಸ್ತಿಯಲ್ಲಿ ಚಿನ್ನ ಗೆದ್ದ ಭಜರಂಗ ಪೂನಿಯಾ (PTI Photo/Swapan Mahapatra)(PTI08_05_2022_000387B) (PTI)

ಬರ್ಮಿಂಗ್‌ಹ್ಯಾಮ್‌: ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಭಾರತಕ್ಕೆ ಮತ್ತೊಂದು ಚಿನ್ನ ದೊರಕಿದೆ. ಭಾರತದ ಸ್ಟಾರ್‌ ಕುಸ್ತಿಪಟು ಭಜರಂಗ್‌ ಪೂನಿಯಾ (Bajrang Punia) ಅವರು ಕೆನಡಾದ ಲಾಚ್ಲನ್‌ ಮೆಕ್‌ನೆಲ್‌ ವಿರುದ್ಧ ಪುರುಷರ 65 ಕೆ.ಜಿ. ವಿಭಾಗದಲ್ಲಿ ಇಂದು ಚಿನ್ನಕ್ಕೆ (gold medal) ಮುತ್ತಿಕ್ಕಿದ್ದಾರೆ. ಈ ಮೂಲಕ ಸತತವಾಗಿ ಎರಡು ಬಾರಿ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಚಾಂಪಿಯನ್‌ ಪಟ್ಟ ಪಡೆದ ಖ್ಯಾತಿಗೆ ಪಾತ್ರರಾಗಿದ್ದಾರೆ. ಈ ಮೂಲಕ ಭಾರತಕ್ಕೆ ಕಾಮನ್‌ವೆಲ್ತ್‌ನ ಈ ಋತುವಿನಲ್ಲಿ ಒಟ್ಟು ಆರು ಚಿನ್ನದ ಪದಕಗಳು ದೊರಕಿವೆ.

ಟ್ರೆಂಡಿಂಗ್​ ಸುದ್ದಿ

42 ವರ್ಷದ ಎಂಎಸ್‌ ಧೋನಿ ಫಿಟ್ನೆಸ್ ಸೀಕ್ರೆಟ್ ಏನು; ಕೂಲ್ ಕ್ಯಾಪ್ಟನ್ ಡಯಟ್, ವರ್ಕೌಟ್ ಪ್ಲಾನ್ ಹೀಗಿರುತ್ತೆ

RCB vs CSK IPL 2024: ಆರ್‌ಸಿಬಿ ವಿರುದ್ಧದ ಪಂದ್ಯಕ್ಕೆ ಸಿಎಸ್‌ಕೆ ರಣತಂತ್ರ; ಚೆನ್ನೈ ಸೂಪರ್ ಕಿಂಗ್ಸ್ ಆಡುವ ಸಂಭಾವ್ಯ 11ರ ಬಳಗ ಹೀಗಿದೆ

ತಂದೆ-ತಾಯಿಯೂ ಕ್ರೀಡಾಪಟುಗಳು, ಕೋಚ್​ ಮಗಳನ್ನೇ ಪಟಾಯಿಸಿದ್ರು; ಇದು ನಿವೃತ್ತಿ ಘೋಷಿಸಿದ ಸುನಿಲ್ ಛೆಟ್ರಿ ಲೈಫ್​ಸ್ಟೋರಿ

ಅಂತಾರಾಷ್ಟ್ರೀಯ ಫುಟ್ಬಾಲ್​ಗೆ ಕಾಲ್ಚೆಂಡಿನ ಚತುರ ಸುನಿಲ್ ಛೆಟ್ರಿ ನಿವೃತ್ತಿ; ಈ ದಿನವೇ ದಿಗ್ಗಜ ಆಟಗಾರನ ಕೊನೆಯ ಪಂದ್ಯ

ವಿಶೇಷವೆಂದರೆ ಭಜರಂಗ್‌ ಪೂನಿಯಾ ಅವರು ಕಳೆದ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಭಾರತಕ್ಕೆ ಸ್ವರ್ಣ ಪದಕ ತಂದುಕೊಟ್ಟಿದ್ದರು. ಮೊದಲ ಸುತ್ತಿನ ಅಂತ್ಯದಲ್ಲಿ ಮೆಕ್‌ನೀಲ್‌ ವಿರುದ್ಧ 4-0 ಮುನ್ನಡೆ ಸಾಧಿಸಿದ್ದರು. ಬಳಿಕ ಎದುರಾಳಿ ಲಾಚ್ಲನ್‌ ಪ್ರಬಲ ಪ್ರತಿರೋಧ ಒಡ್ಡಿದ್ದಾರೆ. ಬಳಿಕ ಇದು 2-4ಕ್ಕೆ ತಲುಪಿದೆ. ಮತ್ತೆ ಪೂನಿಯಾ ಅವರು ಪ್ರಬಲ ಹೊಡೆತಗಳ ಮೂಲಕ ಮುನ್ನಡೆ ಸಾಧಿಸುತ್ತ ಹೋದರು. ಕೊನೆಯ ಸುತ್ತಿನಲ್ಲಿ ಅಂತಿಮವಾಗಿ 9-2 ಅಂತರದಿಂದ ಕೆನಡಾದ ಕುಸ್ತಿಪಟುವನ್ನು ಸೋಲಿಸಿ ಚಿನ್ನಕ್ಕೆ ಮುತ್ತಿಕ್ಕಿದರು.

ಕಳೆದ ವರ್ಷ ಟೋಕಿಯೊ ಒಲಿಂಪಿಕ್ಸ್‌ನ ಪುರುಷರ 65 ಕೆ.ಜಿ. ವಿಭಾಗದಲ್ಲಿ ಪೂನಿಯಾ ಕಂಚಿನ ಪದಕ ಗೆದ್ದಿದ್ದರು. ಹರ್ಯಾಣದ ಝಜ್ಜರ ಜಿಲ್ಲೆಯ ಖುದಾನ್‌ ಗ್ರಾಂದಲ್ಲಿ ಜನಿಸಿದ ಭಜರಂಗ್‌ ಪೂನಿಯಾ ಅವರು ತನ್ನ ಏಳನೇ ವಯಸ್ಸಿನಿಂದಲೇ ಕುಸ್ತಿ ಪಂದ್ಯ ಆಡಲು ಆರಂಭಿಸಿದವರು.

ಭಾರತವು ಈ ಬಾರಿ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಸಾಕಷ್ಟು ಪದಕಗಳನ್ನು ಗೆದ್ದಿದೆ. ಭಾರತ ಗೆದ್ದ ಒಟ್ಟು ಪದಕಗಳ ಸಂಖ್ಯೆ 22ಕ್ಕೆ ತಲುಪಿದೆ. ಭಾರತದ ಟೇಬಲ್‌ ಟೆನ್ನಿಸ್‌ ತಂಡ, ತಮ್ಮ ಚಿನ್ನದ ಪದಕವನ್ನು ಈಗಾಗಲೇ ಗೆದ್ದಿದೆ. ಪುರುಷರ 79 ಕೆಜಿ ವಿಭಾಗದ ವೇಟ್‌ಲಿಫ್ಟಿಂಗ್ ಫೈನಲ್‌ನಲ್ಲಿ ಅಚಿಂತಾ ಶೆಯುಲಿ 313 ಕೆಜಿ ಭಾರ ಎತ್ತುವ ಮೂಲಕ ಚಿನ್ನದ ಪದಕ ತನ್ನದಾಗಿಸಿಕೊಂಡಿದ್ದಾರೆ.

ವೇಟ್‌ಲಿಫ್ಟಿಂಗ್‌ ವಿಭಾಗದಲ್ಲಿ ಮೀರಾಬಾಯಿ ಚಾನು ಒಟ್ಟು 201 ಕೆಜಿ ತೂಕವನ್ನು ಎತ್ತುವ ಮೂಲಕ ಮಹಿಳೆಯರ 49 ಕೆಜಿ ವಿಭಾಗದಲ್ಲಿ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ. ಲವ್ಲಿ ಚೌಬೆ, ರೂಪಾ ರಾಣಿ ಟಿರ್ಕಿ, ಪಿಂಕಿ ಮತ್ತು ನಯನ್ಮೋನಿ ಸೈಕಿಯಾ ಅವರನ್ನು ಒಳಗೊಂಡ ಭಾರತದ ಲಾನ್ಸ್ ಬೌಲ್ಸ್ ತಂಡವು, ದಕ್ಷಿಣ ಆಫ್ರಿಕಾದ ತಂಡವನ್ನು ಸೋಲಿಸುವ ಮೂಲಕ ಈ ಕ್ರೀಡೆಯಲ್ಲಿ ಭಾರತಕ್ಕೆ ಮೊದಲ ಚಿನ್ನವನ್ನು ಗೆದ್ದುಕೊಟ್ಟಿದೆ.

ಪುರುಷರ 67 ಕೆಜಿ ವಿಭಾಗದ ವೇಟ್‌ಲಿಫ್ಟಿಂಗ್ ಸ್ಪರ್ಧೆಯಲ್ಲಿ ಜೆರೆಮಿ ಲಾಲ್ರಿನ್ನುಂಗಾ 300 ಕೆಜಿ ಎತ್ತುವ ಮೂಲಕ ಚಿನ್ನದ ಪದಕ ಗೆದ್ದಿದ್ದಾರೆ. ಪುರುಷರ 96 ಕೆಜಿ ವಿಭಾಗದಲ್ಲಿ ಒಟ್ಟು 346 ಕೆಜಿ ಭಾರ ಎತ್ತುವ ಮೂಲಕ ವಿಕಾಸ್ ಠಾಕೂರ್ ಬೆಳ್ಳಿ ಪದಕ ತನ್ನದಾಗಿಸಿಕೊಂಡಿದ್ದಾರೆ. ಹೀಗೆ ಭಾರತವು ವಿವಿಧ ವಿಭಾಗಗಳಲ್ಲಿ ಇಪ್ಪತ್ತೆರಡು ಪದಕಗಳನ್ನು ಗೆದ್ದಿದ್ದು ಪದಕಗಳ ಬೇಟೆ ಮುಂದುವರೆದಿದೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ