logo
ಕನ್ನಡ ಸುದ್ದಿ  /  ಕ್ರೀಡೆ  /  Asia Cup 2023: ಶನಿವಾರ ಎಸಿಸಿ ತುರ್ತು ಸಭೆ; ಪಾಕ್ ಏಷ್ಯಾಕಪ್‌ ಆತಿಥ್ಯದ ಭವಿಷ್ಯ ನಿರ್ಧಾರ!

Asia Cup 2023: ಶನಿವಾರ ಎಸಿಸಿ ತುರ್ತು ಸಭೆ; ಪಾಕ್ ಏಷ್ಯಾಕಪ್‌ ಆತಿಥ್ಯದ ಭವಿಷ್ಯ ನಿರ್ಧಾರ!

HT Kannada Desk HT Kannada

Feb 03, 2023 04:52 PM IST

ಪಾಕಿಸ್ತಾನ ಕ್ರಿಕೆಟ್‌ ತಂಡ

    • ಏಷ್ಯಾಕಪ್‌ಗೆ ಪಾಕಿಸ್ತಾನ ಆತಿಥ್ಯ ವಹಿಸುವ ಕುರಿತು ಭಾರತ ಹಾಗೂ ಪಾಕ್‌ ನಡುವೆ ಹಲವು ತಿಂಗಳುಗಳ ಹಿಂದಿನಿಂದಲೇ ವಾಗ್ಯುದ್ಧ ನಡೆಯುತ್ತಿದೆ. ಇದು ನಾಳೆ ಅಂತ್ಯ ಕಾಣುವ ಸಾಧ್ಯತೆ ಇದೆ.
ಪಾಕಿಸ್ತಾನ ಕ್ರಿಕೆಟ್‌ ತಂಡ
ಪಾಕಿಸ್ತಾನ ಕ್ರಿಕೆಟ್‌ ತಂಡ (AFP)

ಶನಿವಾರ ಬಹರೇನ್‌ನಲ್ಲಿ ಏಷ್ಯನ್ ಕ್ರಿಕೆಟ್ ಕೌನ್ಸಿಲ್‌ನ (ACC) ತುರ್ತು ಸಭೆ ನಡೆಯಲಿದ್ದು, ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಮುಖ್ಯಸ್ಥ ನಜಮ್ ಸೇಥಿ ಅವರು ಸಭೆಯಲ್ಲಿ ಭಾಗವಹಿಸಲಿದ್ದಾರೆ. 2023ರ ಏಷ್ಯಾಕಪ್‌ಗೆ ಆತಿಥ್ಯ ವಹಿಸುವ ಪಾಕಿಸ್ತಾನದ ಭವಿಷ್ಯವು ಇಲ್ಲಿ ನಿರ್ಧಾರವಾಗಲಿದೆ.

ಟ್ರೆಂಡಿಂಗ್​ ಸುದ್ದಿ

ಮಲೇಷ್ಯಾ ಫುಟ್ಬಾಲ್ ಆಟಗಾರ ಫೈಸಲ್ ಹಲೀಮ್ ಮೇಲೆ ಆ್ಯಸಿಡ್ ದಾಳಿ; ಮೈಮೇಲೆ ಸುಟ್ಟ ಗಾಯ, ಆರೋಪಿ ಅರೆಸ್ಟ್

ಮೊದಲು ರಾಯ್​ಬರೇಲಿ ಗೆಲ್ಲಿ; ತನ್ನ ನೆಚ್ಚಿನ ಚೆಸ್ ದಿಗ್ಗಜ ಆಟಗಾರನಿಂದಲೇ ಟೀಕೆಗೊಳಗಾದ ರಾಹುಲ್ ಗಾಂಧಿ

Hamida Banu: ಭಾರತದ ಮೊದಲ ಮಹಿಳಾ ವೃತ್ತಿಪರ ಕುಸ್ತಿಪಟು ಹಮೀದಾ ಬಾನು ಅವರಿಗೆ ಇಂದು ಗೂಗಲ್ ಡೂಡಲ್ ಗೌರವ, 5 ಆಸಕ್ತಿದಾಯಕ ಅಂಶಗಳು

ಕೇಳ್ರಪ್ಪೋ ಕೇಳಿ; ನೀವೂ ಬೆಂಗಳೂರು ಬುಲ್ಸ್ ತಂಡ ಸೇರಲು ಇಲ್ಲಿದೆ ಸುವರ್ಣಾವಕಾಶ, ನಿಯಮ ಮತ್ತು ಷರತ್ತುಗಳು ಅನ್ವಯ

ಏಷ್ಯಾಕಪ್‌ಗೆ ಪಾಕಿಸ್ತಾನ ಆತಿಥ್ಯ ವಹಿಸುವ ಕುರಿತು ಭಾರತ ಹಾಗೂ ಪಾಕ್‌ ನಡುವೆ ಹಲವು ತಿಂಗಳುಗಳ ಹಿಂದಿನಿಂದಲೇ ವಾಗ್ಯುದ್ಧ ನಡೆಯುತ್ತಿದೆ. ಇದು ನಾಳೆ ಅಂತ್ಯ ಕಾಣುವ ಸಾಧ್ಯತೆ ಇದೆ.

ಸುದ್ದಿಸಂಸ್ಥೆ ಎಎನ್‌ಐಗೆ ಮೂಲಗಳಿಂದ ಲಭಿಸಿರುವ ಮಾಹಿತಿಯ ಪ್ರಕಾರ, "ಪಿಸಿಬಿಗೆ ಹೊಸದಾಗಿ ಚುನಾಯಿತರಾಗಿರುವ ಮುಖ್ಯಸ್ಥ ನಜಮ್ ಸೇಥಿ ಅವರು, ಎಸಿಸಿ ಮುಖ್ಯಸ್ಥರು ಮತ್ತು ಸದಸ್ಯರೊಂದಿಗೆ ತುರ್ತು ಸಭೆ ನಡೆಸಲು ಬಯಸಿದ್ದಾರೆ. ಈ ಬಗ್ಗೆ ಅವರು ದುಬೈನಲ್ಲಿ ನಡೆದ ಐಎಲ್‌ಟಿ 20 ಉದ್ಘಾಟನಾ ಸಮಾರಂಭದಲ್ಲಿ ಎಸಿಸಿ ಸದಸ್ಯರ ಮುಂದೆ ಆಶಯ ವ್ಯಕ್ತಪಡಿಸಿದ್ದರು. ಅದರ ಬೆನ್ನಲ್ಲೇ ಈ ಸಭೆಯು ಬಹ್ರೇನ್‌ನಲ್ಲಿ ನಡೆಯಲಿದೆ. 2023ರ ಏಷ್ಯಾಕಪ್‌ ಆತಿಥ್ಯ ಕುರಿತಂತೆ ನಿರ್ಧರಿಸುವುದು ಈ ಸಭೆಯ ಮುಖ್ಯ ಕಾರ್ಯಸೂಚಿಯಾಗಿದೆ. ಅಂದರೆ, ಟೂರ್ನಿಯನ್ನು ಪಾಕಿಸ್ತಾನದಲ್ಲಿ ನಡೆಸಬೇಕೇ ಅಥವಾ ಬೇಡವೇ ಎಂಬುದನ್ನು ನಿರ್ಧರಿಸಲಾಗುತ್ತದೆ. ಸದ್ಯದ ಮಾಹಿತಿ ಪ್ರಕಾರ, ಅದು ಪಾಕಿಸ್ತಾನಕ್ಕಿಂತ ಬೇರೆ ದೇಶದಲ್ಲಿ ನಡೆಯುವ ಸಾಧ್ಯತೆಯೇ ಹೆಚ್ಚಿದೆ.

ಎಸಿಸಿಯಲ್ಲಿ ಈಗ ಭಾರತದ್ದೇ ಪ್ರಾಬಲ್ಯವಿದೆ. ಬಿಸಿಸಿಐ ಕಾರ್ಯದರ್ಶಿಯಾಗಿರುವ ಜಯ್ ಶಾ, ಎಸಿಸಿಯ ಅಧ್ಯಕ್ಷರಾಗಿದ್ದಾರೆ. 2023ರ ಏಷ್ಯಾಕಪ್ ಅನ್ನು ಪಾಕಿಸ್ತಾನದಲ್ಲಿ ಆಯೋಜಿಸಲಾಗುವುದಿಲ್ಲ. ಬದಲಾಗಿ ಬೇರೆ ತಟಸ್ಥ ಸ್ಥಳದಲ್ಲಿ ಆಡಲಾಗುವುದು ಎಂದು ಅವರು ಈ ಹಿಂದೆಯೇ ಹೇಳಿದ್ದಾರೆ. ಕಳೆದ ವರ್ಷ ಕೂಡ ಏಷ್ಯಾಕಪ್ ಯುಎಇಯಲ್ಲಿ ನಡೆದಿದ್ದು, ಅರಬ್‌ ರಾಷ್ಟ್ರ ಮತ್ತೆ ಆತಿಥ್ಯ ವಹಿಸುವ ಸಾಧ್ಯತೆ ಹೆಚ್ಚಿದೆ.

ನೆರೆಯ ರಾಷ್ಟ್ರಗಳ ನಡುವಿನ ರಾಜಕೀಯ ಉದ್ವಿಗ್ನತೆಯ ನಡುವೆ ಪಂದ್ಯಾವಳಿಯನ್ನು ಆಯೋಜಿಸಲು ಕತಾರ್ ಕೂಡ ಆಸಕ್ತಿ ತೋರಿಸಿದೆ. ಇದು ಈಗಾಗಲೇ ಕೆಲವು ಕ್ರಿಕೆಟ್ ಪಂದ್ಯಾವಳಿಗಳು ಮತ್ತು ಫ್ರಾಂಚೈಸ್ ಆಧಾರಿತ ಕ್ರಿಕೆಟ್ ಲೀಗ್‌ಗಳನ್ನು ದೇಶದಲ್ಲಿ ಆಯೋಜಿಸಿದೆ. ಅಲ್ಲದೆ ಇತ್ತೀಚೆಗೆ ಫಿಫಾ ವಿಶ್ವಕಪ್‌ಗೂ ಅದ್ಧೂರಿ ವೇದಿಕೆಯನ್ನು ಕತಾರ್‌ ನಿರ್ಮಿಸಿತ್ತು.

2023ರ ಏಷ್ಯಾಕಪ್ ಆತಿಥೇಯರ ಬಗ್ಗೆ ನಿರ್ಧರಿಸುವ ನಾಳಿನ ಸಭೆಯ ಮೇಲೆ ವಿವಿಧ ರಾಷ್ಟ್ರಗಳು ದೃಷ್ಟಿ ನೆಟ್ಟಿವೆ. ಪಿಸಿಬಿ ವಿರುದ್ಧದ ನಡೆಯ ಬಗ್ಗೆ ಸುಳಿವುಗಳಿದ್ದರೂ, ಅಧ್ಯಕ್ಷ ನಜಮ್ ಸೇಥಿ ಅವರು ಆತಿಥ್ಯದ ಹಕ್ಕುಗಳನ್ನು ಉಳಿಸಿಕೊಳ್ಳಲು ಎಲ್ಲಾ ರೀತಿಯ ಪ್ರಯತ್ನಗಳನ್ನು ನಡೆಸುವುದಂತೂ ಸತ್ಯ.

ಪಿಸಿಬಿಯ ಮಾಜಿ ಅಧ್ಯಕ್ಷ ರಮೀಜ್ ರಾಜಾ ಅವರ ಅವಧಿಯಲ್ಲಿ, ಭಾರತ ಹಾಗೂ ಪಾಕಿಸ್ತಾನದ ಎರಡು ಮಂಡಳಿಗಳ ನಡುವೆ ಉದ್ವಿಗ್ನತೆ ಉಂಟಾಗಿತ್ತು. ವಿಶೇಷವಾಗಿ ಸೆಪ್ಟೆಂಬರ್‌ನಲ್ಲಿ ಪಾಕಿಸ್ತಾನದಲ್ಲಿ ನಡೆಯಲಿರುವ 2023ರ ಏಷ್ಯಾಕಪ್‌ ಆತಿಥ್ಯದ ಬಗ್ಗೆ ಬಹಿರಂಗ ಹೇಳಿಕೆಗಳು ಹೊರಬಿದ್ದಿದ್ದವು. ಭದ್ರತೆಯ ಕಾರಣಕ್ಕೆ ಭಾರತವು ಪಾಕಿಸ್ತಾನಕ್ಕೆ ಪ್ರಯಾಣಿಸಲು ನಿರಾಕರಿಸಿದೆ. ಅಕ್ಟೋಬರ್‌ನಲ್ಲಿ ನಡೆದ ಬಿಸಿಸಿಐ ಸಭೆಯ ನಂತರ, ಭಾರತವು ಪಾಕಿಸ್ತಾನಕ್ಕೆ ಪ್ರಯಾಣಿಸಲು ಸಾಧ್ಯವಿಲ್ಲ. ಹೀಗಾಗಿ, ಪಂದ್ಯಾವಳಿಯನ್ನು ತಟಸ್ಥ ಸ್ಥಳಕ್ಕೆ ಸ್ಥಳಾಂತರಿಸುವುದಾಗಿ ಬಿಸಿಸಿಐ ಕಾರ್ಯದರ್ಶಿ ಶಾ ಘೋಷಣೆ ಮಾಡಿದ್ದರು. ಆ ಬಳಿಕ ಉಭಯ ರಾಷ್ಟ್ರಗಳ ನಡುವೆ ಗುದ್ದಾಟ ಆರಂಭವಾಗಿವೆ. ನಾಳೆ ಇದಕ್ಕೆ ಅಂತ್ಯ ಬೀಳುವ ಸಾಧ್ಯತೆ ಇದೆ.

    ಹಂಚಿಕೊಳ್ಳಲು ಲೇಖನಗಳು