logo
ಕನ್ನಡ ಸುದ್ದಿ  /  ಕ್ರೀಡೆ  /  Golden Boot Race In Fifa 2022: ಫಿಫಾ ವಿಶ್ವಕಪ್ ಫೈನಲ್: ಮೆಸ್ಸಿ Vs ಎಂಬಾಪೆ; ಗೋಲ್ಡನ್ ಬೂಟ್ ಗೆಲ್ಲೋರು ಯಾರು?

Golden Boot Race in Fifa 2022: ಫಿಫಾ ವಿಶ್ವಕಪ್ ಫೈನಲ್: ಮೆಸ್ಸಿ vs ಎಂಬಾಪೆ; ಗೋಲ್ಡನ್ ಬೂಟ್ ಗೆಲ್ಲೋರು ಯಾರು?

HT Kannada Desk HT Kannada

Dec 17, 2022 02:02 PM IST

ಫಿಫಾ ವಿಶ್ವಕಪ್ ನಲ್ಲಿ ಗೋಲ್ಡನ್ ಬೂಟ್ ಗಾಗಿ ಮೆಸ್ಸಿ ಮತ್ತು ಎಂಬಾಪೆ ನಡುವೆ ಫೈಪೋಟಿ ಶುರುವಾಗಿದೆ (ಫೋಟೋ-AFP)

  • Golden Boot Race in Fifa 2022: ಫಿಫಾ ವಿಶ್ವಕಪ್ 2022 ರಲ್ಲಿ ಗೋಲ್ಡನ್ ಬೂಟ್ ಪ್ರಶಸ್ತಿಯನ್ನು ಯಾರು ಗೆಲ್ಲುತ್ತಾರೆ ಎಂಬುದು ಫುಟ್ಬಾಲ್ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಈ ಪ್ರಶಸ್ತಿಗಾಗಿ ಅರ್ಜೆಂಟೀನಾ ಸ್ಟಾರ್ ಆಟಗಾರ ಮೆಸ್ಸಿ ಹಾಗೂ ಫ್ರಾನ್ಸ್ ಆಟಗಾರ ಎಂಬಾಪೆ ನಡುವೆ ಪೈಪೋಟಿ ಏರ್ಪಟ್ಟಿದೆ.

ಫಿಫಾ ವಿಶ್ವಕಪ್ ನಲ್ಲಿ ಗೋಲ್ಡನ್ ಬೂಟ್ ಗಾಗಿ ಮೆಸ್ಸಿ ಮತ್ತು ಎಂಬಾಪೆ ನಡುವೆ ಫೈಪೋಟಿ ಶುರುವಾಗಿದೆ (ಫೋಟೋ-AFP)
ಫಿಫಾ ವಿಶ್ವಕಪ್ ನಲ್ಲಿ ಗೋಲ್ಡನ್ ಬೂಟ್ ಗಾಗಿ ಮೆಸ್ಸಿ ಮತ್ತು ಎಂಬಾಪೆ ನಡುವೆ ಫೈಪೋಟಿ ಶುರುವಾಗಿದೆ (ಫೋಟೋ-AFP)

ದೋಹಾ(ಕತಾರ್): ಫಿಫಾ ವಿಶ್ವಕಪ್ 2022 ಫೈನಲ್ ಪಂದ್ಯ ನಾಳೆ (ಡಿಸೆಂಬರ್ 18, ಭಾನುವಾರ) ಜಗತ್ತಿನ ಎರಡು ಬಲಿಷ್ಠ ತಂಡಗಳಾದ ಫಾನ್ಸ್ ಹಾಗೂ ಅರ್ಜೆಂಟೀನಾ ನಡುವೆ ನಡೆಯಲಿದೆ.

ಟ್ರೆಂಡಿಂಗ್​ ಸುದ್ದಿ

Bengaluru Weather: ಆರ್‌ಸಿಬಿ ಅಭಿಮಾನಿಗಳು ಚಿಂತಿಸಬೇಕಾದ್ದಿಲ್ಲ, ಚಿನ್ನಸ್ವಾಮಿ ಸ್ಟೇಡಿಯಂನಲ್ಲಿದೆ ಸಬ್‌ಏರ್‌ ಸಿಸ್ಟಮ್‌, ಏನದು

42 ವರ್ಷದ ಎಂಎಸ್‌ ಧೋನಿ ಫಿಟ್ನೆಸ್ ಸೀಕ್ರೆಟ್ ಏನು; ಕೂಲ್ ಕ್ಯಾಪ್ಟನ್ ಡಯಟ್, ವರ್ಕೌಟ್ ಪ್ಲಾನ್ ಹೀಗಿರುತ್ತೆ

RCB vs CSK IPL 2024: ಆರ್‌ಸಿಬಿ ವಿರುದ್ಧದ ಪಂದ್ಯಕ್ಕೆ ಸಿಎಸ್‌ಕೆ ರಣತಂತ್ರ; ಚೆನ್ನೈ ಸೂಪರ್ ಕಿಂಗ್ಸ್ ಆಡುವ ಸಂಭಾವ್ಯ 11ರ ಬಳಗ ಹೀಗಿದೆ

ತಂದೆ-ತಾಯಿಯೂ ಕ್ರೀಡಾಪಟುಗಳು, ಕೋಚ್​ ಮಗಳನ್ನೇ ಪಟಾಯಿಸಿದ್ರು; ಇದು ನಿವೃತ್ತಿ ಘೋಷಿಸಿದ ಸುನಿಲ್ ಛೆಟ್ರಿ ಲೈಫ್​ಸ್ಟೋರಿ

ಫ್ರಾನ್ಸ್ ಸತತ ಎರಡನೇ ಬಾರಿ ಚಾಂಪಿಯನ್ ಆಗುತ್ತಾ ಎಂಬ ಕುತೂಹಲದ ನಡುವೆಯೇ ಗೋಲ್ಡನ್ ಬೂಟ್ ಪ್ರಶಸ್ತಿಯನ್ನು ಯಾರು ಗೆಲ್ಲುತ್ತಾರೆ ಎಂಬುದು ಫುಟ್ಬಾಲ್ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಈ ಪ್ರಶಸ್ತಿಗಾಗಿ ಅರ್ಜೆಂಟೀನಾ ಸ್ಟಾರ್ ಆಟಗಾರ ಲಿಯೊನೆಲ್ ಮೆಸ್ಸಿ ಹಾಗೂ ಫ್ರಾನ್ಸ್ ಆಟಗಾರ ಎಂಬಾಪೆ ನಡುವೆ ಪೈಪೋಟಿ ಏರ್ಪಟ್ಟಿದೆ.

ಈ ವಿಶ್ವಕಪ್‌ನಲ್ಲಿ ಯಾರು ಹೆಚ್ಚು ಗೋಲು ಗಳಿಸಿ ಗೋಲ್ಡನ್ ಬೂಟ್ ಪ್ರಶಸ್ತಿ ಗೆಲ್ಲುತ್ತಾರೆ ಎಂದು ಫುಟ್ಬಾಲ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಅರ್ಜೆಂಟೀನಾದ ಸ್ಟಾರ್ ಆಟಗಾರ ಮೆಸ್ಸಿ ಈ ಬಾರಿಯ ವಿಶ್ವಕಪ್‌ನಲ್ಲಿ ಐದು ಗೋಲು ಗಳಿಸಿದ್ದರು. ಇವರೊಂದಿಗೆ ಫ್ರಾನ್ಸ್ ಆಟಗಾರ ಎಂಬಾಪೆ ಕೂಡ ಮೆಸ್ಸಿಗೆ ಸಮಾನವಾದ ಐದು ಗೋಲುಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ.

ಇವರಿಬ್ಬರಲ್ಲಿ ಯಾರಿಗೆ ಗೋಲ್ಡನ್ ಬೂಟ್ ಸಿಗಲಿದೆ ಎಂಬುದು ಅಂತಿಮ ಹೋರಾಟದಲ್ಲಿ ನಿರ್ಧಾರವಾಗಲಿದೆ. ಅವರ ನಂತರ ಜೂಲಿಯನ್ ಅಲ್ವಾರೆಜ್ (ಅರ್ಜೆಂಟೀನಾ) ಮತ್ತು ಒಲಿವಿಯರ್ ಗೆರಾಡ್ (ಫ್ರಾನ್ಸ್) ನಾಲ್ಕು ಗೋಲುಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ.

ಮೆಸ್ಸಿ ಮತ್ತು ಎಂಬಾಪೆ ಗೋಲ್ಡನ್ ಬೂಟ್‌ಗಾಗಿ ಟೈ ಆಗಿದ್ದರೆ, ಗೋಲ್ಡನ್ ಬೂಟ್ ವಿಜೇತರನ್ನು ಔಟ್‌ಫೀಲ್ಡ್ ಗೋಲುಗಳ ಮೂಲಕ ಘೋಷಿಸಲಾಗುತ್ತದೆ. ಈ ರೀತಿ ನೋಡಿದರೆ ಎಂಬಾಪೆ ಗೆಲ್ಲುವ ಅವಕಾಶ ಹೆಚ್ಚಿದೆ ಅಂತಲೇ ಹೇಳಲಾಗುತ್ತಿದೆ.

ಮೆಸ್ಸಿಯ ಹೆಚ್ಚಿನ ಗೋಲುಗಳು ಪೆನಾಲ್ಟಿಗಳಿಂದ ಬಂದಿವೆ. ಅರ್ಜೆಂಟೀನಾ ನಾಯಕನಿಗೆ ಫೈನಲ್ ಪಂದ್ಯ ಕೊನೆಯ ಪಂದ್ಯವಾಗಿರುವುದರಿಂದ, ಫ್ರಾನ್ಸ್ ವಿರುದ್ಧ ಗೆದ್ದು ತಮ್ಮ ವೃತ್ತಿಜೀವನವನ್ನು ಉನ್ನತ ಮಟ್ಟದಲ್ಲಿ ಕೊನೆಗೊಳಿಸಲು ಲಿಯೊನೆಲ್ ಮೆಸ್ಸಿ ಯೋಚಿಸುತ್ತಿದ್ದಾರೆ.

ಅರ್ಜೆಂಟೀನಾ ಫೈನಲ್ ತಲುಪಿದ್ದು ಇದು ಆರನೇ ಬಾರಿ. ಇದರಲ್ಲಿ ಮೂರು ಬಾರಿ ವಿನ್ನರ್ ಹಾಗೂ ಎರಡು ಬಾರಿ ರನ್ನರ್ ಅಪ್ ಆಗಿದೆ. ಮತ್ತೊಂದೆಡೆ ಫ್ರಾನ್ಸ್ ಹಾಲಿ ಚಾಂಪಿಯನ್ ಆಗಿ ಕಣಕ್ಕೆ ಇಳಿಯುತ್ತಿದೆ. ಸತತ ಎರಡನೇ ಬಾರಿ ವಿಶ್ವಕಪ್ ಗೆಲ್ಲುವ ಉತ್ಸಾಹದಲ್ಲಿದ್ದಾರೆ. ಅಂತಿಮವಾಗಿ ಯಾರು ವಿಜಯಶಾಲಿಯಾಗುತ್ತಾರೆ ಅನ್ನೋದು ನಾಳೆ ನಿರ್ಧಾರವಾಗುತ್ತದೆ.

ಹಾಲಿ ಚಾಂಪಿಯನ್ಸ್ ಗೆ ವೈರಸ್ ಬೀತಿ

ಹಾಲಿ ಚಾಂಪಿಯನ್ ಫ್ರಾನ್ಸ್‌ ತಂಡಕ್ಕೆ ವೈರಸ್‌ ತಗುಲಿದ್ದು, ಭಾನುವಾರ ಅರ್ಜೆಂಟೀನಾ ವಿರುದ್ಧದ ವಿಶ್ವಕಪ್‌ನ ಫೈನಲ್‌ನಲ್ಲಿ ತಂಡದ ಆರಂಭಿಕ ಸೆಂಟರ್‌ಬ್ಯಾಕ್ ಜೋಡಿಯು ತಪ್ಪಿಸಿಕೊಳ್ಳಬಹುದು ಎನ್ನಲಾಗಿದೆ.

ರಾಫೆಲ್ ವರಾನೆ ವೈರಸ್‌ನ ಸೌಮ್ಯ ಲಕ್ಷಣಗಳನ್ನು ಹೊಂದಿದ್ದಾರೆ ಎಂದು ಇಎಸ್‌ಪಿಎನ್ ವರದಿ ಮಾಡಿದೆ. ಅನಾರೋಗ್ಯದ ಭಾವನೆಯಿಂದ ಸಹ ರಕ್ಷಕ ಇಬ್ರಾಹಿಮಾ ಕೊನಾಟೆ ತನ್ನ ಕೋಣೆಯನ್ನು ಹೊರಬಂದಿದಲ್ಲ ಎಂದು ಹೇಳಿದೆ. ಇದು ಫ್ರಾನ್ಸ್ ಹಿನ್ನಡೆಯಾಗುವ ಸಾಧ್ಯತೆ ಇದೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ