logo
ಕನ್ನಡ ಸುದ್ದಿ  /  ಕ್ರೀಡೆ  /  Fifa World Cup Winner Prize Money: ಫಿಫಾ ವಿಶ್ವಕಪ್ ಫೈನಲ್: ಫ್ರಾನ್ಸ್ Vs ಅರ್ಜೆಂಟೀನಾ..ಯಾರಿಗೆ ಸಿಗುತ್ತೆ ಗೆಲುವಿನ ಈ ಮೊತ್ತ?

FIFA World Cup winner Prize money: ಫಿಫಾ ವಿಶ್ವಕಪ್ ಫೈನಲ್: ಫ್ರಾನ್ಸ್ vs ಅರ್ಜೆಂಟೀನಾ..ಯಾರಿಗೆ ಸಿಗುತ್ತೆ ಗೆಲುವಿನ ಈ ಮೊತ್ತ?

HT Kannada Desk HT Kannada

Dec 16, 2022 09:25 AM IST

ಇದೇ ಭಾನುವಾರು (ಡಿ.18) ಫಿಫಾ ವಿಶ್ವಕಪ್ ಫೈನಲ್ ಪಂದ್ಯ ಅರ್ಜೆಂಟೀನಾ ಮತ್ತು ಫ್ರಾನ್ಸ್ ನಡುವೆ ನಡೆಯಲಿದೆ.

  • Prize money for FIFA World Cup winner: ಫಿಫಾ ವಿಶ್ವಕಪ್ 2022 ಚಾಂಪಿಯನ್ಸ್ ದೊಡ್ಡ ಬಹುಮಾನದ ಹಣವನ್ನು ಪಡೆಯುತ್ತಾರೆ. ಫಿಫಾ ಇತ್ತೀಚೆಗೆ ಈ ಮೆಗಾ ಟೂರ್ನಮೆಂಟ್‌ನ ವಿಜೇತ ಮತ್ತು ರನ್ನರ್‌ಅಪ್‌ನ ಬಹುಮಾನ ಮೊತ್ತದ ವಿವರಗಳನ್ನು ಬಹಿರಂಗಪಡಿಸಿದೆ.

ಇದೇ ಭಾನುವಾರು (ಡಿ.18) ಫಿಫಾ ವಿಶ್ವಕಪ್ ಫೈನಲ್ ಪಂದ್ಯ ಅರ್ಜೆಂಟೀನಾ ಮತ್ತು ಫ್ರಾನ್ಸ್ ನಡುವೆ ನಡೆಯಲಿದೆ.
ಇದೇ ಭಾನುವಾರು (ಡಿ.18) ಫಿಫಾ ವಿಶ್ವಕಪ್ ಫೈನಲ್ ಪಂದ್ಯ ಅರ್ಜೆಂಟೀನಾ ಮತ್ತು ಫ್ರಾನ್ಸ್ ನಡುವೆ ನಡೆಯಲಿದೆ.

ದೋಹಾ(ಕತಾರ್): ಪ್ರಪಂಚದಾದ್ಯಂತ ಫುಟ್‌ಬಾಲ್‌ಗೆ ಎಷ್ಟು ಕ್ರೇಜ್ ಇದೆ ಎಂಬುದು ಗೊತ್ತಿರುವಂತ ವಿಚಾರ. ಆ ವ್ಯಾಮೋಹಕ್ಕೆ ಫುಟ್ಬಾಲ್ ಆಟಗಾರರ ಗಳಿಕೆಯೂ ಅಷ್ಟೇ ಹೆಚ್ಚಾರುತ್ತದೆ.

ಟ್ರೆಂಡಿಂಗ್​ ಸುದ್ದಿ

Bengaluru Weather: ಆರ್‌ಸಿಬಿ ಅಭಿಮಾನಿಗಳು ಚಿಂತಿಸಬೇಕಾದ್ದಿಲ್ಲ, ಚಿನ್ನಸ್ವಾಮಿ ಸ್ಟೇಡಿಯಂನಲ್ಲಿದೆ ಸಬ್‌ಏರ್‌ ಸಿಸ್ಟಮ್‌, ಏನದು

42 ವರ್ಷದ ಎಂಎಸ್‌ ಧೋನಿ ಫಿಟ್ನೆಸ್ ಸೀಕ್ರೆಟ್ ಏನು; ಕೂಲ್ ಕ್ಯಾಪ್ಟನ್ ಡಯಟ್, ವರ್ಕೌಟ್ ಪ್ಲಾನ್ ಹೀಗಿರುತ್ತೆ

RCB vs CSK IPL 2024: ಆರ್‌ಸಿಬಿ ವಿರುದ್ಧದ ಪಂದ್ಯಕ್ಕೆ ಸಿಎಸ್‌ಕೆ ರಣತಂತ್ರ; ಚೆನ್ನೈ ಸೂಪರ್ ಕಿಂಗ್ಸ್ ಆಡುವ ಸಂಭಾವ್ಯ 11ರ ಬಳಗ ಹೀಗಿದೆ

ತಂದೆ-ತಾಯಿಯೂ ಕ್ರೀಡಾಪಟುಗಳು, ಕೋಚ್​ ಮಗಳನ್ನೇ ಪಟಾಯಿಸಿದ್ರು; ಇದು ನಿವೃತ್ತಿ ಘೋಷಿಸಿದ ಸುನಿಲ್ ಛೆಟ್ರಿ ಲೈಫ್​ಸ್ಟೋರಿ

ಹೊರಗಿನ ಗಳಿಕೆಯ ಹೊರತಾಗಿ ಫುಟ್ಬಾಲ್ ಆಟಗಾರರು ತಾವಾಡುವ ಪಂದ್ಯಾವಳಿಗಳಲ್ಲಿ ಆಡುವುದಕ್ಕಾಗಿ ದೊಡ್ಡ ಮೊತ್ತದ ಬಹುಮಾನದ ಹಣವನ್ನು ಪಡೆಯುತ್ತಾರೆ. ಇತ್ತೀಚೆಗೆ, ಫಿಫಾ ವಿಶ್ವಕಪ್ 2022 ವಿಜೇತರಿಗೆ ದೊಡ್ಡ ಬಹುಮಾನವನ್ನು ಘೋಷಿಸಲಾಗಿದೆ.

ಮುಂದಿನ ಭಾನುವಾರ (ಡಿಸೆಂಬರ್ 18) ಅರ್ಜೆಂಟೀನಾ ಮತ್ತು ಫ್ರಾನ್ಸ್ ನಡುವೆ ಫೈನಲ್ ನಡೆಯಲಿದ್ದು, ಈ ಎರಡು ತಂಡಗಳು ಈ ಹಿಂದೆ ಎರಡು ಬಾರಿ ಚಾಂಪಿಯನ್ ಆಗಿದ್ದವು.

ಅರ್ಜೆಂಟೀನಾ 1978 ಮತ್ತು 1986 ರಲ್ಲಿ ಮತ್ತು ಫ್ರಾನ್ಸ್ 1998 ಮತ್ತು 2018 ರಲ್ಲಿ ವಿಶ್ವಕಪ್ ಗೆದ್ದಿದೆ. ವಿಜೇತ ತಂಡವು 4.2 ಕೋಟಿ ಡಾಲರ್ (ಸುಮಾರು ರೂ. 347 ಕೋಟಿ) ಬಹುಮಾನವಾಗಿ ಪಡೆಯುತ್ತವೆ. ರನ್ನರ್ ಅಪ್ ತಂಡಕ್ಕೆ 3 ಕೋಟಿ ಡಾಲರ್ (ಸುಮಾರು 246 ಕೋಟಿ ರೂ.) ಸಿಗಲಿದೆ. ವಿಶ್ವದಲ್ಲಿ ಅತಿ ಹೆಚ್ಚು ವೀಕ್ಷಕರನ್ನು ಹೊಂದಿರುವ ಪಂದ್ಯಗಳ ಪೈಕಿ ವಿಶ್ವಕಪ್ ಅತ್ಯುತ್ತಮ ಪಂದ್ಯಾವಳಿಯಾಗಿದೆ.

ಅದಕ್ಕೆ ತಕ್ಕಂತೆ ಬಹುಮಾನದ ಮೊತ್ತವೂ ದೊಡ್ಡದಿದೆ. ಟೂರ್ನಿಯಲ್ಲಿ ಮೂರನೇ ಸ್ಥಾನ ಪಡೆಯುವ ತಂಡಕ್ಕೆ 2.7 ಕೋಟಿ ಡಾಲರ್ ಹಾಗೂ ನಾಲ್ಕನೇ ಸ್ಥಾನ ಪಡೆಯುವ ತಂಡಕ್ಕೆ 2.5 ಕೋಟಿ ಡಾಲರ್ ನೀಡಲಾಗುವುದು.

ತೃತೀಯ ಸ್ಥಾನದ ಪಂದ್ಯ ಶನಿವಾರ ಹಾಗೂ ಫೈನಲ್ ಭಾನುವಾರ ನಡೆಯಲಿದೆ. ಕ್ವಾರ್ಟರ್ ಫೈನಲ್ ಗೆದ್ದ ಬ್ರೆಜಿಲ್, ನೆದರ್ಲೆಂಡ್ಸ್, ಪೋರ್ಚುಗಲ್ ಮತ್ತು ಇಂಗ್ಲೆಂಡ್ ತಂಡಗಳಿಗೆ ತಲಾ 1.7 ಕೋಟಿ ಡಾಲರ್ ಬಹುಮಾನ ನೀಡಲಾಗುವುದು.

16ರ ಸುತ್ತಿನಲ್ಲಿ ಸೋತ ಅಮೆರಿಕ, ಸೆನೆಗಲ್, ಆಸ್ಟ್ರೇಲಿಯಾ, ಪೋಲೆಂಡ್, ಸ್ಪೇನ್, ಜಪಾನ್, ಸ್ವಿಟ್ಜರ್ಲೆಂಡ್ ಮತ್ತು ದಕ್ಷಿಣ ಕೊರಿಯಾ 1.3 ಕೋಟಿ ಡಾಲರ್ ಪಡೆಯಲಿವೆ.

ಕತಾರ್, ಈಕ್ವೆಡಾರ್, ವೇಲ್ಸ್, ಇರಾನ್, ಮೆಕ್ಸಿಕೊ, ಸೌದಿ ಅರೇಬಿಯಾ, ಡೆನ್ಮಾರ್ಕ್, ಟುನೀಶಿಯಾ, ಕೆನಡಾ, ಬೆಲ್ಜಿಯಂ, ಜರ್ಮನಿ, ಕೋಸ್ಟರಿಕಾ, ಸೆರ್ಬಿಯಾ, ಕ್ಯಾಮರೂನ್, ಘಾನಾ, ಉರುಗ್ವೆ ತಂಡಗಳು ಗುಂಪು ಹಂತದಲ್ಲಿ ಟೂರ್ನಿಯಿಂದ ನಿರ್ಗಮಿಸಿದವು. ತಂಡಗಳಿಗೆ ತಲಾ 90 ಲಕ್ಷ ಡಾಲರ್ ನೀಡಲಾಗುತ್ತದೆ.

ಬುಧವಾರ ಮಧ್ಯರಾತ್ರಿ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಮೊರಾಕೊ ವಿರುದ್ಧ 2-0 ಗೋಲುಗಳಿಂದ ಗೆದ್ದ ಫ್ರಾನ್ಸ್ ಫೈನಲ್ ಪ್ರವೇಶಿಸಿತು. ಹಾಲಿ ಚಾಂಪಿಯನ್ ಫ್ರಾನ್ಸ್‌ಗೆ ತೀವ್ರ ಪೈಪೋಟಿ ನೀಡುವಲ್ಲಿ ಮೊರೊಕೊ ಸಂಪೂರ್ಣವಾಗಿ ವಿಫಲವಾಯಿತು.

ಫ್ರಾನ್ಸ್ ಸತತ ಎರಡನೇ ಬಾರಿ ಫೈನಲ್ ತಲುಪುವ ಮೂಲಕ ಇತಿಹಾಸ ನಿರ್ಮಿಸಿದೆ. ಈ ಪಂದ್ಯದಲ್ಲಿ ಫ್ರಾನ್ಸ್ ಆಟಗಾರರು ಆರಂಭದಿಂದಲೇ ಆಕ್ರಮಣಕಾರಿ ಆಟ ಪ್ರದರ್ಶಿಸಿದರು.

ಐದನೇ ನಿಮಿಷದಲ್ಲಿ ಗ್ರೀಜ್‌ಮನ್ ಮತ್ತು ಎಂಬಪ್ಪೆ ನೀಡಿದ ಪಾಸ್ ಅನ್ನು ಹೆರ್ನಾಂಡೆಜ್ ಗೋಲಾಗಿ ಪರಿವರ್ತಿಸಿದರು. ಈ ಸ್ಕೋರ್ ಅನ್ನು ಸಮಗೊಳಿಸಲು ಮೊರೊಕನ್ ಆಟಗಾರರು ಸಾಕಷ್ಟು ಪ್ರಯತ್ನಿಸಿದರು.

ಫ್ರಾನ್ಸ್ ಮತ್ತು ಮೊರಾಕೊ ನಡುವಿನ ಪಂದ್ಯಕ್ಕೂ ಮುನ್ನ ಅಂದರೆ ಕಳೆದ ಮಂಗಳವಾರ (ಡಿ.13) ನಡೆದ ಮೊದಲ ಸೆಮಿ ಫೈನಲ್ಸ್ ನಲ್ಲಿ ಕ್ರೊಯೆಷಿಯಾ ವಿರುದ್ಧ 3-0 ಗೋಲುಗಳ ಅಂತರಿಂದ ಗೆದ್ದ ಅರ್ಜೆಂಟೀನಾ ಫೈನಲ್ ಪ್ರವೇಶಿಸಿತ್ತು.

ಸ್ಟಾರ್ ಆಟಗಾರ ಲಿಯೊನೆಲ್ ಮೆಸ್ಸಿ ಅವರ ಮ್ಯಾಜಿಕ್ ಮತ್ತು ಜೂಲಿಯನ್ ಅಲ್ವಾರೆಜ್ ಅವರ ಡಬಲ್ ಗೋಲ್‌ ಗಳೊಂದಿಗೆ ಕ್ರೊಯೆಷಿಯಾ ವಿರುದ್ಧ ಅರ್ಜೆಂಟೀನಾ ಭರ್ಜರಿ ಜಯಭೇರಿ ಬಾರಿಸಿತ್ತು.

ಮಂಗಳವಾರ ಮಧ್ಯರಾತ್ರಿ ನಡೆದ ಸೆಮಿಫೈನಲ್‌ನಲ್ಲಿ ಕ್ರೊಯೆಷಿಯಾವನ್ನು 3-0 ಅಂತರದಿಂದ ಸೋಲಿಸಿತು. ಬ್ರೆಜಿಲ್‌ನಂತಹ ಅಗ್ರ ತಂಡಗಳನ್ನು ಸೋಲಿಸಿ ಸೆಮಿಸ್‌ ಪ್ರವೇಶಿಸಿದ್ದ ಕ್ರೊಯೆಷಿಯಾಗೆ ಅರ್ಜೆಂಟೀನಾ ವಿರುದ್ಧ ಆ ವೇಗವನ್ನು ಮುಂದುವರಿಸಲು ಸಾಧ್ಯವಾಗಲೇ ಇಲ್ಲ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ