logo
ಕನ್ನಡ ಸುದ್ದಿ  /  ಕ್ರೀಡೆ  /  Indore Pitch Rating: ಬಿಸಿಸಿಐ ಮನವಿಯ ಬಳಿಕ ಇಂದೋರ್ ಪಿಚ್ ರೇಟಿಂಗ್ ಬದಲಿಸಿದ ಐಸಿಸಿ; ಈಗ 'ಕಳಪೆ' ಅಲ್ಲ

Indore pitch rating: ಬಿಸಿಸಿಐ ಮನವಿಯ ಬಳಿಕ ಇಂದೋರ್ ಪಿಚ್ ರೇಟಿಂಗ್ ಬದಲಿಸಿದ ಐಸಿಸಿ; ಈಗ 'ಕಳಪೆ' ಅಲ್ಲ

HT Kannada Desk HT Kannada

Mar 27, 2023 01:11 PM IST

ಇಂದೋರ್‌ ಮೈದಾನದಲ್ಲಿ ನಡೆದ ಪಂದ್ಯ

  • ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಮೇಲ್ಮನವಿಯ ನಂತರ ಐಸಿಸಿಯು ಇಂದೋರ್‌ ಪಿಚ್ ರೇಟಿಂಗ್‌ ಬದಲಾಯಿಸಿದೆ. ಸದ್ಯ 'ಸರಾಸರಿಗಿಂತ ಕಡಿಮೆ (below average)' ಎಂಬ ರೇಟಿಂಗ್‌ ನೀಡಲಾಗಿದೆ. 

ಇಂದೋರ್‌ ಮೈದಾನದಲ್ಲಿ ನಡೆದ ಪಂದ್ಯ
ಇಂದೋರ್‌ ಮೈದಾನದಲ್ಲಿ ನಡೆದ ಪಂದ್ಯ (AP)

ಈ ತಿಂಗಳ ಆರಂಭದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಟ್ರೋಫಿಯ ಮೂರನೇ ಟೆಸ್ಟ್ ಪಂದ್ಯವನ್ನು ಇಂದೋರ್ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿತ್ತು. ಪಂದ್ಯ ಮುಗಿದ ಬಳಿಕ ಇಂದೋರ್‌ ಪಿಚ್ “ಕಳಪೆ” ಎಂದು ಐಸಿಸಿ ರೇಟಿಂಗ್‌ ಕೊಟ್ಟಿತ್ತು. ಆದರೆ, ಈಗ ಈ ರೇಟಿಂಗ್‌ ಅನ್ನು ಬದಲಾಯಿಸಲಾಗಿದೆ.

ಟ್ರೆಂಡಿಂಗ್​ ಸುದ್ದಿ

Bengaluru Weather: ಆರ್‌ಸಿಬಿ ಅಭಿಮಾನಿಗಳು ಚಿಂತಿಸಬೇಕಾದ್ದಿಲ್ಲ, ಚಿನ್ನಸ್ವಾಮಿ ಸ್ಟೇಡಿಯಂನಲ್ಲಿದೆ ಸಬ್‌ಏರ್‌ ಸಿಸ್ಟಮ್‌, ಏನದು

RCB vs CSK IPL 2024: ಆರ್‌ಸಿಬಿ ವಿರುದ್ಧದ ಪಂದ್ಯಕ್ಕೆ ಸಿಎಸ್‌ಕೆ ರಣತಂತ್ರ; ಚೆನ್ನೈ ಸೂಪರ್ ಕಿಂಗ್ಸ್ ಆಡುವ ಸಂಭಾವ್ಯ 11ರ ಬಳಗ ಹೀಗಿದೆ

ತಂದೆ-ತಾಯಿಯೂ ಕ್ರೀಡಾಪಟುಗಳು, ಕೋಚ್​ ಮಗಳನ್ನೇ ಪಟಾಯಿಸಿದ್ರು; ಇದು ನಿವೃತ್ತಿ ಘೋಷಿಸಿದ ಸುನಿಲ್ ಛೆಟ್ರಿ ಲೈಫ್​ಸ್ಟೋರಿ

ಅಂತಾರಾಷ್ಟ್ರೀಯ ಫುಟ್ಬಾಲ್​ಗೆ ಕಾಲ್ಚೆಂಡಿನ ಚತುರ ಸುನಿಲ್ ಛೆಟ್ರಿ ನಿವೃತ್ತಿ; ಈ ದಿನವೇ ದಿಗ್ಗಜ ಆಟಗಾರನ ಕೊನೆಯ ಪಂದ್ಯ

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಮೇಲ್ಮನವಿಯ ನಂತರ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC)ಯು ಇಂದು (ಸೋಮವಾರ) ರೇಟಿಂಗ್‌ ಅನ್ನು ಬದಲಾಯಿಸಿದೆ. ಬಿಸಿಸಿಐನ ಮನವಿಯ ನಂತರ ರೇಟಿಂಗ್ ಅನ್ನು ಕಳಪೆಯಿಂದ 'ಸರಾಸರಿಗಿಂತ ಕಡಿಮೆ (below average)' ಎಂದು ಬದಲಾಯಿಸಲಾಗಿದೆ.

ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಇಂದೋರ್‌ನಲ್ಲಿ ನಡೆದ ಮೂರನೇ ಟೆಸ್ಟ್‌ ಪಂದ್ಯವು ಮೂರೇ ದಿನಗಳಲ್ಲಿ ಮುಕ್ತಾಯಗೊಂಡಿತ್ತು. ಪಂದ್ಯದಲ್ಲಿ ಆಸ್ಟ್ರೇಲಿಯಾ 9 ವಿಕೆಟ್‌ಗಳಿಂದ ಜಯ ಸಾಧಿಸಿತ್ತು. ಪಂದ್ಯ ಮುಗಿದ ಬಳಿಕ ಈ ಪಿಚ್‌ ಕಳಪೆ ಎಂದು ಘೋಷಿಸಿದ್ದ ಐಸಿಸಿಯು, ಮೂರು ಡಿಮೆರಿಟ್ ಅಂಕಗಳನ್ನು ಕೂಡಾ ನೀಡಿತ್ತು. ಆದರೆ, ಇದೀಗ ಐಸಿಸಿಯು ಕಳಪೆ ಹಣೆಪಟ್ಟಿಯನ್ನು ತೆಗೆದು ಸರಾಸರಿಗಿಂತ ಕಡಿಮೆ ಎಂಬ ರೇಟಿಂಗ್‌ ಕೊಟ್ಟಿದೆ.

ಮೂರನೇ ಟೆಸ್ಟ್‌ ಪಂದ್ಯದ ಮೊದಲ ಎರಡು ದಿನಗಳಲ್ಲಿ ಉಭಯ ತಂಡಗಳ ಒಟ್ಟು 31 ವಿಕೆಟ್‌ಗಳು ಉರುಳಿದ್ದವು. ಇದರಲ್ಲಿ 26 ವಿಕೆಟ್‌ಗಳನ್ನು ಸ್ಪಿನ್ನರ್‌ಗಳೇ ಕಬಳಿಸಿದ್ದರು. ಹೀಗಾಗಿ ಪಿಚ್‌ ಕುರಿತು ವ್ಯಾಪಕ ಟೀಕೆಗಳ ಸುರಿಮಳೆಯೇ ಹರಿದು ಬಂತು. ಪಂದ್ಯದ ಮೂರನೇ ದಿನದ ಬೆಳಗ್ಗಿನ ಅವಧಿಯಲ್ಲೇ ಆಸ್ಟ್ರೇಲಿಯಾ ಒಂಬತ್ತು ವಿಕೆಟ್‌ಗಳ ಜಯ ಸಾಧಿಸಿತು. ಹೀಗಾಗಿ ಐಸಿಸಿ ಮ್ಯಾಚ್ ರೆಫರಿ ಕ್ರಿಸ್ ಬ್ರಾಡ್, ಪಿಚ್‌ ಕುರಿತು ಕಠಿಣ ತೀರ್ಪು ನೀಡಿದ್ದರು. “ತುಂಬಾ ಶುಷ್ಕವಾಗಿದ್ದ ಈ ಪಿಚ್, ಬ್ಯಾಟ್ ಮತ್ತು ಬಾಲ್ ನಡುವೆ ಸಮತೋಲನ ಒದಗಿಸಲಿಲ್ಲ. ಅಲ್ಲದೆ ಆರಂಭದಿಂದಲೂ ಸ್ಪಿನ್ನರ್‌ಗಳಿಗೆ ಅನುಕೂಲಕರವಾಗಿತ್ತು” ಎಂದು ಬ್ರಾಡ್ ಹೇಳಿದ್ದರು.

ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯು ಮುಕ್ತಾಯವಾದ ಬೆನ್ನಲ್ಲೇ, ಪಿಚ್‌ ರೇಟಿಂಗ್‌ ಕುರಿತು ಐಸಿಸಿಗೆ ಬಿಸಿಸಿಐ ಮೇಲ್ಮನವಿ ಸಲ್ಲಿಸಿತು. ಐಸಿಸಿಯ ಜನರಲ್ ಮ್ಯಾನೇಜರ್ ವಾಸಿಮ್ ಖಾನ್ ಮತ್ತು ಐಸಿಸಿ ಪುರುಷರ ಕ್ರಿಕೆಟ್ ಸಮಿತಿಯ ಸದಸ್ಯ ರೋಜರ್ ಹಾರ್ಪರ್ ಅವರನ್ನು ಒಳಗೊಂಡ ಮಂಡಳಿಯ ಮೇಲ್ಮನವಿ ಸಮಿತಿಯು ಟೆಸ್ಟ್ ಪಂದ್ಯದ ದೃಶ್ಯಗಳನ್ನು ಮರುಪರಿಶೀಲಿಸಿತು.

ಪಿಚ್ ಮಾನಿಟರಿಂಗ್ ಪ್ರಕ್ರಿಯೆಯ 'ಅನುಬಂಧ ಎ'ಗೆ ಅನುಗುಣವಾಗಿ ಮ್ಯಾಚ್ ರೆಫರಿ ಮಾರ್ಗಸೂಚಿಗಳನ್ನು ಅನುಸರಿಸಿದರೆ, ಈ ಪಿಚ್‌ 'ಕಳಪೆ' ರೇಟಿಂಗ್ ಅನ್ನು ಸಮರ್ಥಿಸುವಂತಹ ವಿಪರೀತ ಬೌನ್ಸ್ ಇರಲಿಲ್ಲ ಎಂಬುದಾಗಿ ಇಬ್ಬರೂ ಪ್ಯಾನೆಲಿಸ್ಟ್‌ಗಳು ಅಭಿಪ್ರಾಯಪಟ್ಟಿದ್ದಾರೆ. ಹೀಗಾಗಿ, ಇಂದೋರ್ ಪಿಚ್‌ನ ರೇಟಿಂಗ್ ಅನ್ನು 'ಕಳಪೆ'ಯಿಂದ 'ಸರಾಸರಿಗಿಂತ ಕಡಿಮೆ' ಎಂದು ಬದಲಾಯಿಸಲಾಗಿದೆ. ಅಂದರೆ, ಈಗ ಡಿಮೆರಿಟ್ ಪಾಯಿಂಟ್ ಕೂಡಾ ಕಡಿಮೆಯಾಗಲಿದೆ. ಈ ಮೊದಲ ರೇಟಿಂಗ್‌ ಪ್ರಕಾರ ನೀಡಲಾಗಿದ್ದ ಮೂರು ಡಿಮೆರಿಟ್‌ ಅಂಕಗಳ ಬದಲಿಗೆ ಕೇವಲ ಒಂದು ಡಿಮೆರಿಟ್‌ ಪಾಯಿಂಟ್‌ ಅನ್ನು ಪಿಚ್‌ಗೆ ನೀಡಲಾಗಿದೆ. ಇದು ಬಿಸಿಸಿಐಗೆ ಸಮಾಧಾನ ತರಿಸಿದೆ.

ಇಂದೋರ್‌ನಲ್ಲಿ ನಡೆ ಮೂರನೇ ಟೆಸ್ಟ್‌ ಪಂದ್ಯದಲ್ಲಿ ಆಸ್ಟ್ರೇಲಿಯಾ ತನ್ನ ಇನ್ನಿಂಗ್ಸ್‌ಗಳಲ್ಲಿ ಕ್ರಮವಾಗಿ 197 ಮತ್ತು 78/1 ರನ್‌ ಗಳಿಸಿತು. ಭಾರತವು 109 ಮತ್ತು 163 ರನ್‌ ಗಳಿಸಿತ್ತು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ