ಕನ್ನಡ ಸುದ್ದಿ  /  ಕ್ರೀಡೆ  /  Bcci Contracts 2022-23: ಜಡೇಜಾಗೆ ಭರ್ಜರಿ ಬಡ್ತಿ ನೀಡಿದ ಬಿಸಿಸಿಐ; ಕನ್ನಡಿಗ ರಾಹುಲ್ ಸಂಭಾವನೆ ಕಡಿತ!

BCCI contracts 2022-23: ಜಡೇಜಾಗೆ ಭರ್ಜರಿ ಬಡ್ತಿ ನೀಡಿದ ಬಿಸಿಸಿಐ; ಕನ್ನಡಿಗ ರಾಹುಲ್ ಸಂಭಾವನೆ ಕಡಿತ!

ಹಾಗಿದ್ದರೆ, ಬಿಸಿಸಿಐನ ವಾರ್ಷಿಕ ಒಪ್ಪಂದದಲ್ಲಿ ಅಧಿಕ ಲಾಭ ಪಡೆದವರು ಯಾರ್ಯಾರು? ಯಾರು ಒಪ್ಪಂದ ಪಟ್ಟಿಯಿಂದ ಹೊರಬಿದ್ದಿದ್ದಾರೆ? ಹೊಸದಾಗಿ ಒಪ್ಪಂದ ಪಟ್ಟಿಗೆ ಸೇರಿಕೊಂಡವರು ಯಾರು? ಎಲ್ಲಾ ವಿವರ ಕೆಳಗಿದೆ?

ಅಕ್ಷರ್ ಪಟೇಲ್ ಜೊತೆಗೆ ರವೀಂದ್ರ ಜಡೇಜಾ; ಅಜಿಂಕ್ಯ ರಹಾನೆ
ಅಕ್ಷರ್ ಪಟೇಲ್ ಜೊತೆಗೆ ರವೀಂದ್ರ ಜಡೇಜಾ; ಅಜಿಂಕ್ಯ ರಹಾನೆ

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(BCCI)ಯು 2022-23ರ ಋತುವಿಗಾಗಿ ಕೇಂದ್ರೀಯ ಗುತ್ತಿಗೆ ಒಪ್ಪಂದ(Annual Player Contract)ದಲ್ಲಿ ಸ್ಥಾನ ಪಡೆದ ಆಟಗಾರರ ಪಟ್ಟಿಯನ್ನು ಭಾನುವಾರ ಪ್ರಕಟಿಸಿದೆ. ಈ ಒಪ್ಪಂದವು 2022ರ ಅಕ್ಟೋಬರ್ ತಿಂಗಳಿನಿಂದ 2023ರ ಸೆಪ್ಟೆಂಬರ್ ಅವಧಿಗೆ ಅನ್ವಯವಾಗಲಿದೆ.

ಟ್ರೆಂಡಿಂಗ್​ ಸುದ್ದಿ

ವಾರ್ಷಿಕ ಕಾಂಟ್ರ್ಯಾಂಕ್ಟ್‌ ಪಟ್ಟಿಯಲ್ಲಿ ಹೆಸರಿಸಲಾದ ಒಟ್ಟು 26 ಆಟಗಾರರನ್ನು ನಾಲ್ಕು ಶ್ರೇಣಿ ಅಥವಾ ಗ್ರೇಡ್‌ಗಳಾಗಿ ವಿಂಗಡಿಸಲಾಗಿದೆ. ಅವುಗಳೇ A+, A, B ಮತ್ತು C. ಗ್ರೇಡ್ A+ನಲ್ಲಿರುವ ಆಟಗಾರರು 7 ಕೋಟಿ ರೂಪಾಯಿ ಸಂಭಾವನೆ ಪಡೆದರೆ, ಗ್ರೇಡ್ A ಪಟ್ಟಿಯಲ್ಲಿ ಬರುವ ಆಟಗಾರರು 5 ಕೋಟಿ ರೂಪಾಯಿ ಪಡೆಯುತ್ತಾರೆ. ಇದೇ ವೇಳೆ ಗ್ರೇಡ್ Bಯಲ್ಲಿರುವ ಆಟಗಾರರ ಸಂಭಾವನೆ 3 ಕೋಟಿ ರೂಪಾಯಿ ಆಗಿದ್ದರೆ, ಗ್ರೇಡ್ Cಯಲ್ಲಿರುವ ಆಟಗಾರರು 1 ಕೋಟಿ ರೂಪಾಯಿ ಮಾತ್ರ ಪಡೆಯುತ್ತಾರೆ.

ಕಳೆದ ಬಾರಿಗೆ ಹೋಲಿಸಿದರೆ, ಸದ್ಯ ಒಟ್ಟು 26 ಆಟಗಾರರಲ್ಲಿ ಐವರು ಆಟಗಾರರು ವಾರ್ಷಿಕ ಒಪ್ಪಂದದಲ್ಲಿ ಬಡ್ತಿ ಪಡೆದಿದ್ದಾರೆ. ಇದೇ ವೇಳೆ ಇಬ್ಬರು ಸ್ಟಾರ್‌ ಆಟಗಾರರು ಕಾಂಟ್ಯಾಕ್ಟ್‌ ಪಟ್ಟಿಯಲ್ಲಿ ಸ್ಥಾನ ಉಳಿಸಿಕೊಂಡರೂ, ಗ್ರೇಡಿಂಗ್ ಕಳೆದುಕೊಂಡಿದ್ದಾರೆ. ಇದೇ ವೇಳೆ ಈ ಹಿಂದಿನ ಋತುವಿನ ಒಪ್ಪಂದ ಪಟ್ಟಿಯಲ್ಲಿ ಸ್ಥಾನ ಪಡೆಯದ ಆರು ಮಂದಿಯನ್ನು ಪ್ರಸ್ತುತ ಪಟ್ಟಿಯಲ್ಲಿ ಸೇರಿಸಲಾಗಿದೆ. ಅಲ್ಲದೆ ಕಳೆದ ಬಾರಿ ಪಟ್ಟಿಯಲ್ಲಿದ್ದ ಏಳು ಆಟಗಾರರು ತಮ್ಮ ಒಪ್ಪಂದಗಳನ್ನು ಕಳೆದುಕೊಂಡಿದ್ದಾರೆ.

ಹಾಗಿದ್ದರೆ, ಬಿಸಿಸಿಐನ ವಾರ್ಷಿಕ ಒಪ್ಪಂದದಲ್ಲಿ ಅಧಿಕ ಲಾಭ ಪಡೆದವರು ಯಾರ್ಯಾರು? ಯಾರು ಒಪ್ಪಂದ ಪಟ್ಟಿಯಿಂದ ಹೊರಬಿದ್ದಿದ್ದಾರೆ? ಹೊಸದಾಗಿ ಒಪ್ಪಂದ ಪಟ್ಟಿಗೆ ಸೇರಿಕೊಂಡವರು ಯಾರು? ಎಲ್ಲಾ ವಿವರ ಕೆಳಗಿದೆ?

ಹೆಚ್ಚು ಲಾಭ ಗಳಿಸಿದ ಆಟಗಾರರು ಮತ್ತು ಅವರ ಸಂಭಾವನೆ(ಬ್ರಾಕೆಟ್‌ನಲ್ಲಿ)

ರವೀಂದ್ರ ಜಡೇಜಾ: ಗ್ರೇಡ್ ಎ (5 ಕೋಟಿ ರೂ.)ಯಿಂದ A+ಗೆ (7 ಕೋಟಿ ರೂ.) ಬಡ್ತಿ ನೀಡಲಾಗಿದೆ.

ಹಾರ್ದಿಕ್ ಪಾಂಡ್ಯ: ಗ್ರೇಡ್ C (1 ಕೋಟಿ ರೂ.)ಯಿಂದ A (5 ಕೋಟಿ ರೂ.)ಗೆ ಬಡ್ತಿ ನೀಡಲಾಗಿದೆ.

ಅಕ್ಸರ್ ಪಟೇಲ್: ಬಿ (3 ಕೋಟಿ ರೂ.)ಯಿಂದ A (5 ಕೋಟಿ ರೂ.)ಗೆ ಬಡ್ತಿ ನೀಡಲಾಗಿದೆ.

ಸೂರ್ಯಕುಮಾರ್ ಯಾದವ್: ಗ್ರೇಡ್ C (1 ಕೋಟಿ ರೂ)ನಿಂದ Bಗೆ (3 ಕೋಟಿ ರೂ.)ಗೆ ಬಡ್ತಿ ನೀಡಲಾಗಿದೆ

ಶುಬ್ಮನ್ ಗಿಲ್: ಗ್ರೇಡ್ C (1 ಕೋಟಿ ರೂ)ನಿಂದ B (3 ಕೋಟಿ ರೂ)ಗೆ ಬಡ್ತಿ ನೀಡಲಾಗಿದೆ.

ಗ್ರೇಡ್ ಕುಸಿತ ಅನುಭವಿಸಿದವರು

ಕೆಎಲ್ ರಾಹುಲ್: ಗ್ರೇಡ್ A(5 ಕೋಟಿ)ಯಿಂದ Bಗೆ (INR 3 ಕೋಟಿ) ಹಿಂಬಡ್ತಿ.

ಶಾರ್ದೂಲ್ ಠಾಕೂರ್: ಗ್ರೇಡ್ ಬಿ (3 ಕೋಟಿ)ಯಿಂದ C(INR 1 ಕೋಟಿ)ಗೆ ಹಿಂಬಡ್ತಿ.

ಒಪ್ಪಂದಕ್ಕೆ ಹೊಸ ಸೇರ್ಪಡೆ:

ಇಶಾನ್ ಕಿಶನ್, ದೀಪಕ್ ಹೂಡಾ, ಕುಲದೀಪ್ ಯಾದವ್, ಸಂಜು ಸ್ಯಾಮ್ಸನ್, ಅರ್ಷದೀಪ್ ಸಿಂಗ್, ಕೆಎಸ್ ಭರತ್ ಅವರನ್ನು ಗ್ರೇಡ್ ಸಿ ಪಟ್ಟಿಗೆ ಸೇರಿಸಲಾಗಿದೆ. ಇವರಿಗೆ ಒಪ್ಪಂದದ ಅವಧಿಯಲ್ಲಿ 1 ಕೋಟಿ ರೂಪಾಯಿ ಸಂಭಾವನೆ ನೀಡಲಾಗುತ್ತದೆ.

ತಮ್ಮ ವಾರ್ಷಿಕ ಒಪ್ಪಂದಗಳನ್ನು ಕಳೆದುಕೊಂಡ ಆಟಗಾರರು:

ಭಾರತದ ಹಿರಿಯ ಕ್ರಿಕೆಟಿಗರಾದ ಅಜಿಂಕ್ಯ ರಹಾನೆ ಮತ್ತು ಇಶಾಂತ್ ಶರ್ಮಾ ಇಬ್ಬರೂ ಹಿಂದಿನ ಬಿಸಿಸಿಐ ಒಪ್ಪಂದದ ಪಟ್ಟಿಯಲ್ಲಿ ಗ್ರೇಡ್ ಬಿ ವರ್ಗದ (5 ಕೋಟಿ ರೂಪಾಯಿ) ಭಾಗವಾಗಿದ್ದರು. ಆದರೆ 2022-23 ಹೊಸ ಗುತ್ತಿಗೆ ಪಟ್ಟಿಯಲ್ಲಿ ಇವರ ಹೆಸರಿಲ್ಲ. ಇದೇ ವೇಳೆ ಗ್ರೇಡ್ ಸಿ (1 ಕೋಟಿ ರೂಪಾಯಿ ಸಂಭಾವನೆ)ಯ ಭಾಗವಾಗಿದ್ದ ಭುವನೇಶ್ವರ್ ಕುಮಾರ್, ಮಯಾಂಕ್ ಅಗರ್ವಾಲ್, ಹನುಮ ವಿಹಾರಿ, ವೃದ್ಧಿಮಾನ್ ಸಹಾ ಮತ್ತು ದೀಪಕ್ ಚಹಾರ್ ಅವರನ್ನು ಕೂಡಾ ಪಟ್ಟಿಯಿಂದ ಕೈಬಿಡಲಾಗಿದೆ.