logo
ಕನ್ನಡ ಸುದ್ದಿ  /  ಕ್ರೀಡೆ  /  Sri Lanka Vs Namibia: ಐಸಿಸಿ ಟಿ20 ವಿಶ್ವಕಪ್ ನ ಮೊದಲ ಪಂದ್ಯದಲ್ಲಿ ಲಂಕಾಗೆ ಶಾಕ್; ನಮೀಬಿಯಾಗೆ 55 ರನ್ ಗಳ ಭರ್ಜರಿ ಗೆಲುವು

Sri Lanka vs Namibia: ಐಸಿಸಿ ಟಿ20 ವಿಶ್ವಕಪ್ ನ ಮೊದಲ ಪಂದ್ಯದಲ್ಲಿ ಲಂಕಾಗೆ ಶಾಕ್; ನಮೀಬಿಯಾಗೆ 55 ರನ್ ಗಳ ಭರ್ಜರಿ ಗೆಲುವು

HT Kannada Desk HT Kannada

Oct 16, 2022 01:24 PM IST

ಶ್ರೀಲಂಕಾ ವಿರುದ್ಧ ನಮೀಬಿಯಾಗೆ 55 ರನ್ ಗಳ ಗೆಲುವು

  • ಗೀಲಾಂಗ್ ನ ಸೈಮಂಡ್ಸ್ ಸ್ಟೇಡಿಯಂನಲ್ಲಿ ನಡೆದ ನಮೀಬಿಯಾ ವಿರುದ್ಧದ ಪಂದ್ಯದಲ್ಲಿ ಶ್ರೀಲಂಕಾ ಹೀನಾಯ ಸೋಲು ಕಂಡಿದೆ. ಲಂಕಾ ವಿರುದ್ಧ ನಮೀಬಿಯಾ 55 ರನ್ ಗಳ ಭರ್ಜರಿ ಗೆಲುವಿನೊಂದಿಗೆ ಐಸಿಸಿ ಟಿ20 ವಿಶ್ವಕಪ್ ನ 8ನೇ ಆವೃತ್ತಿಯ ಮೊದಲ ಪಂದ್ಯದಲ್ಲೇ ಗೆಲುವಿನ ಶುಭಾರಂಭ ಮಾಡಿದೆ.

ಶ್ರೀಲಂಕಾ ವಿರುದ್ಧ ನಮೀಬಿಯಾಗೆ 55 ರನ್ ಗಳ ಗೆಲುವು
ಶ್ರೀಲಂಕಾ ವಿರುದ್ಧ ನಮೀಬಿಯಾಗೆ 55 ರನ್ ಗಳ ಗೆಲುವು

ಗೀಲಾಂಗ್(ಆಸ್ಟ್ರೇಲಿಯಾ): ಗೀಲಾಂಗ್ ನ ಸೈಮಂಡ್ಸ್ ಸ್ಟೇಡಿಯಂನಲ್ಲಿ ನಡೆದ ನಮೀಬಿಯಾ ವಿರುದ್ಧ ಪಂದ್ಯದಲ್ಲಿ ಶ್ರೀಲಂಕಾ ಹೀನಾಯ ಸೋಲು ಕಂಡಿದೆ. ಲಂಕಾ ವಿರುದ್ಧ ನಮೀಬಿಯಾ 55 ರನ್ ಗಳ ಭರ್ಜರಿ ಗೆಲುವಿನೊಂದಿಗೆ ಐಸಿಸಿ ಟಿ20 ವಿಶ್ವಕಪ್ ನ 8ನೇ ಆವೃತ್ತಿಯ ಮೊದಲ ಪಂದ್ಯದಲ್ಲೇ ಗೆಲುವಿನ ಶುಭಾರಂಭ ಮಾಡಿದೆ.

ಟ್ರೆಂಡಿಂಗ್​ ಸುದ್ದಿ

Bengaluru Weather: ಆರ್‌ಸಿಬಿ ಅಭಿಮಾನಿಗಳು ಚಿಂತಿಸಬೇಕಾದ್ದಿಲ್ಲ, ಚಿನ್ನಸ್ವಾಮಿ ಸ್ಟೇಡಿಯಂನಲ್ಲಿದೆ ಸಬ್‌ಏರ್‌ ಸಿಸ್ಟಮ್‌, ಏನದು

42 ವರ್ಷದ ಎಂಎಸ್‌ ಧೋನಿ ಫಿಟ್ನೆಸ್ ಸೀಕ್ರೆಟ್ ಏನು; ಕೂಲ್ ಕ್ಯಾಪ್ಟನ್ ಡಯಟ್, ವರ್ಕೌಟ್ ಪ್ಲಾನ್ ಹೀಗಿರುತ್ತೆ

RCB vs CSK IPL 2024: ಆರ್‌ಸಿಬಿ ವಿರುದ್ಧದ ಪಂದ್ಯಕ್ಕೆ ಸಿಎಸ್‌ಕೆ ರಣತಂತ್ರ; ಚೆನ್ನೈ ಸೂಪರ್ ಕಿಂಗ್ಸ್ ಆಡುವ ಸಂಭಾವ್ಯ 11ರ ಬಳಗ ಹೀಗಿದೆ

ತಂದೆ-ತಾಯಿಯೂ ಕ್ರೀಡಾಪಟುಗಳು, ಕೋಚ್​ ಮಗಳನ್ನೇ ಪಟಾಯಿಸಿದ್ರು; ಇದು ನಿವೃತ್ತಿ ಘೋಷಿಸಿದ ಸುನಿಲ್ ಛೆಟ್ರಿ ಲೈಫ್​ಸ್ಟೋರಿ

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಗೆರ್ಹಾರ್ಡ್ ಎರಾಸ್ಮಸ್ ನಾಯಕತ್ವದ ನಮೀಬಿಯಾ ಆರಂಭಿಕ ಆಘಾತದ ನಡುವೆಯೂ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 163 ರನ್ ಗಳಿಸಿತು.

2ನೇ ಓವರ್ ನಲ್ಲೇ ಮೈಕೆಲ್ ವ್ಯಾನ್ ಲಿಂಗೆನ್ ಅವರ(3) ವಿಕೆಟ್ ಕಳೆದುಕೊಂಡಿತು. ನಂತರ 3ನೇ ಓವರ್ ನ ಕೊನೆಯ ಎಸೆತದಲ್ಲಿ ದಿವಾನ್ ಲಾ ಕಾಕ್ (9) ವಿಕೆಟ್ ಕಳೆದು ಕೊಂಡು ಸಂಕಷ್ಟಕ್ಕೆ ಸಿಕುಲಿತು. ಈ ವೇಳೆ ಕ್ರೀಸ್ ಗೆ ಬಂದ ಜಾನ್ ನಿಕೋಲ್ ಲಾಫ್ಟಿ ಈಟನ್ ಹಾಗೂ ಸ್ಟೀಫನ್ ಬಾರ್ಡ್ ದಿಟ್ಟ ಹೋರಾಟವನ್ನು ಮಾಡಿದರು. ಈಟನ್ 12 ಎಸೆತಗಳಲ್ಲಿ 1 ಬೌಂಡರಿ ಹಾಗೂ 2 ಸಿಕ್ಸರ್ ಸೇರಿ 20 ರನ್ ಗಳಿಸಿ ಔಟಾದರು. ಬಾರ್ಡ್ 26 ರನ್ ಗಳಿಸಿ ಪ್ರಮೋದ್ ಮದುಶನ್ ಗೆ ವಿಕೆಟ್ ಒಪ್ಪಿಸಿದರು. ನಾಯಕ ಎರಾಸ್ಮಸ್ 20ರನ್ ಗಳಿಸಿದರು.

ಕೊನೆಯಲ್ಲಿ ಜಾನ್ ಫ್ರೀಲಿಂಗ್ ಮತ್ತು ಜೆಜೆ ಸ್ಮಿತ್ ಬ್ಯಾಟಿಂಗೂ ಮೂಲಕ ಮಿಂಚಿದರು. ಫ್ರಿಲಿಂಕ್ 28 ಎಸೆತಗಳಿಂದ 4 ಬೌಂಡರಿ ಸೇರಿ 44 ರನ್ ಗಳಿಸಿದರೆ, ಸ್ಮಿತ್ ಕೇವಲ 16 ಎಸೆತಗಳಲ್ಲಿ ತಲಾ 2 ಬೌಂಡರಿ ಹಾಗೂ ಸಿಕ್ಸರ್ ಗಳೊಂದಿಗೆ 31 ರನ್ ಚಚ್ಚಿದರು. ಲಂಕಾ ಪರ ಪ್ರಮೋದ್ ಮದುಶನ್ ಎರಡು ವಿಕೆಟ್ ಕಿತ್ತರು. ಮಹೀಶ್ ತೀಕ್ಷಣ, ವನಿಂದು ಹಸರಂಗ, ದುಷ್ಮಂತ ಚಮೀರ ಹಾಗೂ ಚಮಿಕ ಕರುಣಾರತ್ನೆ ತಲಾ 1 ವಿಕೆಟ್ ಪಡೆದರು.

164 ರನ್ ಗಳ ಗುರಿ ಬೆನ್ನತ್ತಿದ ಶ್ರೀಲಂಕಾ, ನಮೀಬಿಯಾ ಬೌಲರ್ ಗಳ ಮಾರಕ ದಾಳಿ ಎದುರು ನಿರುತ್ತರವಾಯಿತು. 3.3 ಓವರ್ ಗಳು ಆಗುವಷ್ಟರಲ್ಲಿ 21 ರನ್ ಗಳಿಸುವಷ್ಟರಲ್ಲಿ ಪ್ರಮುಖ 3 ವಿಕೆಟ್ ಗಳನ್ನು ಕಳೆದುಕೊಂಡಿತು. ಪಾತುಮ್ ನಿಸ್ಸಾಂಕ (9), ವಿಕೆಟ್ ಕೀಪರ್ ಕುಸಲ್ ಮೆಂಡಿಸ್ (6), ಧನಂಜಯ ಡಿ ಸಿಲ್ವ (12) ಬೇಗ ಪೆವಿಲಿಯನ್ ಸೇರಿಕೊಂಡರು.

ಭಾನುಕ ರಾಜಪಕ್ಷೆ ಹಾಗೂ ನಾಯಕ ದುಸುನ್ ಶನಕ ಕೆಲವೊತ್ತು ನಿಂತು ನಮೀಬಿಯಾ ಬೌಲರ್ ಗಳನ್ನು ಎದುರಿಸಿದರು. ರಾಜಪಕ್ಷೆ 20 ರನ್ ಹಾಗೂ ಶನಕ 29 ರನ್ ಗಳಿಸಿದ್ದೇ ವೈಯಕ್ತಿಕ ಗರಿಷ್ಠ ರನ್ ಎನಿಸಿತು. ಯಾವೊಬ್ಬ ಆಟಗಾರ ಹೆಚ್ಚು ಹೊತ್ತು ಕ್ರೀಸ್ ನಲ್ಲಿ ಉಳಿಯಲಿಲ್ಲ. ದನುಷ್ಕ ಗುಣತಿಲಕ (0), ವನಿಂದು ಹಸರಂಗ (4), ಚಮಿಕ ಕರುಣಾರತ್ನೆ (5), ದುಷ್ಮಂತ ಚಮೀರ (8 ), ಪ್ರಮೋದ್ ಮದುಶನ್ (0), ಮಹೀಶ್ ತೀಕ್ಷಣ ಔಟಾಗದೆ 11 ರನ್ ಗಳಿಸಿದರು.

ನಮೀಬಿಯಾ ಪರ ಡೇವಿಡ್ ವೈಸ್ , ಬರ್ನಾರ್ಡ್ ಸ್ಕೋಲ್ಟ್ ಜ್ , ಬೆನ್ ಶಿಕೊಂಗೊ, ಜಾನ್ ಫ್ರಿಲಿಂಕ್ ತಲಾ 2 ವಿಕೆಟ್ ಕಿತ್ತರು. ಏಷ್ಯ ಕಪ್ ಚಾಂಪಿಯನ್ ಗಳಿಗೆ ಟಿ20 ವಿಶ್ವಕಪ್ ನ ಆರಂಭದಲ್ಲೇ ಸೋಲಿನ ಕಹಿ ಅನುಭವವಾಗಿದೆ. ಮುಂದಿನ ಪಂದ್ಯದಲ್ಲಾದ್ರೂ ನಾಯಕ ದುಸುನ್ ಶನಕ ನೇತೃತ್ವದ ಶ್ರೀಲಂಕಾ ತಂಡ ಗೆಲುವಿನ ಲಯಕ್ಕೆ ಬರುತ್ತಾ ಅನ್ನೋದನ್ನು ಕಾದು ನೋಡಬೇಕಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ