logo
ಕನ್ನಡ ಸುದ್ದಿ  /  ಕ್ರೀಡೆ  /  Volleyball Club World Championships: ಇದೇ ಮೊದಲ ಬಾರಿಗೆ ವಾಲಿಬಾಲ್ ಕ್ಲಬ್ ವಿಶ್ವ ಚಾಂಪಿಯನ್‌ಶಿಪ್‌ಗೆ ಭಾರತದ ಆತಿಥ್ಯ; ಯಾವಾಗ?

Volleyball Club World Championships: ಇದೇ ಮೊದಲ ಬಾರಿಗೆ ವಾಲಿಬಾಲ್ ಕ್ಲಬ್ ವಿಶ್ವ ಚಾಂಪಿಯನ್‌ಶಿಪ್‌ಗೆ ಭಾರತದ ಆತಿಥ್ಯ; ಯಾವಾಗ?

HT Kannada Desk HT Kannada

Feb 01, 2023 07:35 PM IST

ವಾಲಿಬಾಲ್ ಕ್ಲಬ್ ವಿಶ್ವ ಚಾಂಪಿಯನ್‌ಶಿಪ್ ಭಾರತದಲ್ಲಿ ನಡೆಯಲಿದೆ

    • ಡಿಸೆಂಬರ್ 6ರಿಂದ 10ರವರೆಗೆ ಚಾಂಪಿಯನ್‌ಶಿಪ್‌ ನಡೆಯಲಿವೆ. ಭಾರತ ಆತಿಥ್ಯ ವಹಿಸುವುದು ಖಚಿತವಾಗಿದ್ದು, ಯಾವ ನಗರವು ಪಂದ್ಯಗಳಿಗೆ ಆತಿಥ್ಯ ವಹಿಸಲಿದೆ ಎಂಬುದು ಮುಂದಿನ ದಿನಗಳಲ್ಲಿ ಪ್ರಕಟಿಸಲಾಗುತ್ತದೆ.
ವಾಲಿಬಾಲ್ ಕ್ಲಬ್ ವಿಶ್ವ ಚಾಂಪಿಯನ್‌ಶಿಪ್ ಭಾರತದಲ್ಲಿ ನಡೆಯಲಿದೆ
ವಾಲಿಬಾಲ್ ಕ್ಲಬ್ ವಿಶ್ವ ಚಾಂಪಿಯನ್‌ಶಿಪ್ ಭಾರತದಲ್ಲಿ ನಡೆಯಲಿದೆ

ಇದೇ ಮೊದಲ ಬಾರಿಗೆ ಭಾರತವು ವಾಲಿಬಾಲ್ ಕ್ಲಬ್ ವಿಶ್ವ ಚಾಂಪಿಯನ್‌ಶಿಪ್‌(Volleyball Club World Championships)ಗೆ ಆತಿಥ್ಯ ವಹಿಸಲಿದೆ. ವಾಲಿಬಾಲ್ ವರ್ಲ್ಡ್(Volleyball World) ಮತ್ತು ಅಂತಾರಾಷ್ಟ್ರೀಯ ವಾಲಿಬಾಲ್ ಫೆಡರೇಶನ್ (International Volleyball Federation), ಪುರುಷರ ಕ್ಲಬ್ ವಿಶ್ವ ಚಾಂಪಿಯನ್‌ಶಿಪ್‌ಗೆ ಭಾರತವನ್ನು ಆತಿಥೇಯ ರಾಷ್ಟ್ರವಾಗಿ ಘೋಷಿಸಿದೆ.

ಟ್ರೆಂಡಿಂಗ್​ ಸುದ್ದಿ

ತಂದೆ-ತಾಯಿಯೂ ಕ್ರೀಡಾಪಟುಗಳು, ಕೋಚ್​ ಮಗಳನ್ನೇ ಪಟಾಯಿಸಿದ್ರು; ಇದು ನಿವೃತ್ತಿ ಘೋಷಿಸಿದ ಸುನಿಲ್ ಛೆಟ್ರಿ ಲೈಫ್​ಸ್ಟೋರಿ

ಅಂತಾರಾಷ್ಟ್ರೀಯ ಫುಟ್ಬಾಲ್​ಗೆ ಕಾಲ್ಚೆಂಡಿನ ಚತುರ ಸುನಿಲ್ ಛೆಟ್ರಿ ನಿವೃತ್ತಿ; ಈ ದಿನವೇ ದಿಗ್ಗಜ ಆಟಗಾರನ ಕೊನೆಯ ಪಂದ್ಯ

ಫೆಡರೇಶನ್ ಕಪ್‌ನಲ್ಲಿ ಬಂಗಾರ ಗೆದ್ದ ನೀರಜ್‌ ಚೋಪ್ರಾ; ಕೂದಲೆಳೆ ಅಂತರದಲ್ಲಿ ಬೆಳ್ಳಿಗೆ ತೃಪ್ತಿ ಪಟ್ಟ ಡಿಪಿ ಮನು

ರೆಸ್ಲರ್ ಅಮನ್ ಸೆಹ್ರಾವತ್​ಗೆ ಪ್ಯಾರಿಸ್ ಒಲಿಂಪಿಕ್ಸ್​ ಟಿಕೆಟ್; ಮೊದಲ ಬಾರಿಗೆ ಐವರು ಮಹಿಳಾ ಕುಸ್ತಿಪಟುಗಳು ಅರ್ಹತೆ

ಭಾರತದ ಆತಿಥ್ಯದಲ್ಲಿ ನಡೆಯುವ ಪಂದ್ಯಾವಳಿಯಲ್ಲಿ ಪ್ರೈಮ್‌ ವಾಲಿಬಾಲ್ ಲೀಗ್‌(Prime Volleyball League)ನ ಚಾಂಪಿಯನ್‌ಗಳು(ಭಾರತ) ಇಟಲಿ, ಬ್ರೆಜಿಲ್ ಮತ್ತು ಇರಾನ್‌ನಂತಹ ದೇಶಗಳ ಕೆಲವು ಉನ್ನತ ತಂಡಗಳ ವಿರುದ್ಧ ಕ್ಲಬ್ ವರ್ಲ್ಡ್ ಚಾಂಪಿಯನ್‌ಶಿಪ್‌ನಲ್ಲಿ ಸ್ಪರ್ಧಿಸಲಿದ್ದಾರೆ.

ಡಿಸೆಂಬರ್ 6ರಿಂದ 10ರವರೆಗೆ ಚಾಂಪಿಯನ್‌ಶಿಪ್‌ ನಡೆಯಲಿವೆ. ಭಾರತ ಆತಿಥ್ಯ ವಹಿಸುವುದು ಖಚಿತವಾಗಿದ್ದು, ಯಾವ ನಗರವು ಪಂದ್ಯಗಳಿಗೆ ಆತಿಥ್ಯ ವಹಿಸಲಿದೆ ಎಂಬುದು ಮುಂದಿನ ದಿನಗಳಲ್ಲಿ ಪ್ರಕಟಿಸಲಾಗುತ್ತದೆ.

ಈ ಪಂದ್ಯಾವಳಿಯು ಭಾರತಕ್ಕೆ ಅಂತಾರಾಷ್ಟ್ರೀಯ ದರ್ಜೆಯ ವಾಲಿಬಾಲ್ ಕ್ರೀಡೆಯನ್ನು ತರಲಿದೆ. ದೇಶದಲ್ಲಿ 2022ರಲ್ಲಿ ಪ್ರೈಮ್ ವಾಲಿಬಾಲ್ ಲೀಗ್ ಪ್ರಾರಂಭವಾಗಿದ್ದು, ಅಂದಿನಿಂದ ಕ್ರೀಡೆಯು ಜನಪ್ರಿಯತೆ ಪಡೆಯುತ್ತಿದೆ. ಲೀಗ್‌ನ ಮೊದಲ ಸೀಸನ್ ಭಾರತದಲ್ಲಿ 133 ಮಿಲಿಯನ್ ಸಂಚಿತ ಟಿವಿ ವೀಕ್ಷಕರನ್ನು ಪಡೆದಿದೆ. ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ 84 ಮಿಲಿಯನ್ ಅಭಿಮಾನಿಗಳು ಸಿಕ್ಕಿದ್ದು, ದೇಶಾದ್ಯಂತ ಜನರನ್ನು ತಲುಪುವಲ್ಲಿ ಯಶಸ್ವಿಯಾಗಿದೆ.

ವಾಲಿಬಾಲ್ ಕ್ಲಬ್ ವಿಶ್ವ ಚಾಂಪಿಯನ್‌ಶಿಪ್‌ ಎರಡು ದಶಕಗಳಿಂದ ನಡೆಯುತ್ತಿದ್ದು, ಪ್ರಪಂಚದಾದ್ಯಂತದ ಪುರುಷರ ವೃತ್ತಿಪರ ಕ್ಲಬ್‌ಗಳು ಇದರಲ್ಲಿ ಪಾಲ್ಗೊಳ್ಳುತ್ತವೆ. ವಿಶ್ವ ಚಾಂಪಿಯನ್‌ ಪಟ್ಟಕ್ಕಾಗಿ ಜಾಗತಿಕ ತಂಡಗಳು ಸ್ಪರ್ಧಿಸುತ್ತಿದ್ದು, ಬಹುಮಾನವಾಗಿ ಬರೋಬ್ಬರಿ 350,000 ಡಾಲರ್‌ ಹಣವನ್ನು ನೀಡಲಾಗುತ್ತದೆ.

“ಪುರುಷರ ಕ್ಲಬ್ ವಾಲಿಬಾಲ್ ಅನ್ನು ಭಾರತದಲ್ಲಿ ಮೊದಲ ಬಾರಿಗೆ ಆಯೋಜಿಸಲು ಸಂತೋಷವಾಗಿದೆ. ಅತಿಥೇಯ ರಾಷ್ಟ್ರ ಸೇರಿದಂತೆ ವಿಶ್ವದ ಅಗ್ರ ಕ್ಲಬ್‌ಗಳು ಭಾಗವಹಿಸುವುದರೊಂದಿಗೆ, ಭಾರತ ಮತ್ತು ಪ್ರಪಂಚದಾದ್ಯಂತದ ಅಭಿಮಾನಿಗಳಿಗೆ ರೋಮಾಂಚಕ ವಾಲಿಬಾಲ್ ನೋಡುವ ಅವಕಾಶ ಸಿಗಲಿದೆ,” ಎಂದು ಅಂತಾರಾಷ್ಟ್ರೀಯ ವಾಲಿಬಾಲ್ ಫೆಡರೇಶನ್ ಅಧ್ಯಕ್ಷ ಡಾ ಆರಿ ಎಸ್. ಗ್ರಾಕಾ ಹೇಳಿದರು.

“ಭಾರತದಲ್ಲಿ ಮೊದಲ ಬಾರಿಗೆ ಕ್ಲಬ್ ವರ್ಲ್ಡ್ ಚಾಂಪಿಯನ್ಸ್ ನಡೆಯುತ್ತಿರುವುದಕ್ಕೆ ನಾವು ರೋಮಾಂಚನಗೊಂಡಿದ್ದೇವೆ” ಎಂದು ವಾಲಿಬಾಲ್ ವರ್ಲ್ಡ್ ಸಿಇಒ ಫಿನ್ ಟೇಲರ್ ಹೇಳಿದ್ದಾರೆ. “ಈ ಪಂದ್ಯಾವಳಿಯು ರೋಚಕತೆ ಮತ್ತು ತೀವ್ರ ಪೈಪೋಟಿಗೆ ಹೆಸರುವಾಸಿಯಾಗಿದೆ. ಅದನ್ನು ಅಭಿಮಾನಿಗಳಿಗೆ ಉಣಬಡಿಸಲು ನಾವು ಸಂತೋಷಪಡುತ್ತೇವೆ,” ಎಂದು ಅವರು ಹೇಳಿದ್ದಾರೆ.

“ಭಾರತೀಯ ಕ್ರೀಡೆಗೆ ಇದೊಂದು ಐತಿಹಾಸಿಕ ಕ್ಷಣ. ಪ್ರಪಂಚದ ಅತ್ಯುತ್ತಮ ಕ್ರೀಡಾಪಟುಗಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಭಾರತಕ್ಕೆ ಬರುತ್ತಾರೆ. ಇದರಿಂದ ನಮ್ಮ ಭಾರತೀಯ ಆಟಗಾರರು ಅವರ ವಿರುದ್ಧ ಸ್ಪರ್ಧಿಸಲು ಅವಕಾಶ ಪಡೆಯುತ್ತಾರೆ. 2028ರ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲು ಭಾರತೀಯ ವಾಲಿಬಾಲ್ ತಂಡಕ್ಕೆ ಸಹಾಯ ಮಾಡುವ ನಮ್ಮ ಧ್ಯೇಯಕ್ಕೆ ಇದು ಪುಷ್ಠಿ ನೀಡುತ್ತದೆ. ಭಾರತದಲ್ಲಿ ಸತತ ವರ್ಷಗಳಿಂದ ನಡೆಯಲಿರುವ ಜಾಗತಿಕ ಕಾರ್ಯಕ್ರಮದಿಂದ ನಮ್ಮ ದೇಶದ ಆಟಗಾರರಿಗೆ ಪರಿಪೂರ್ಣ ವೇದಿಕೆ ಸಿಗುತ್ತದೆ ಎಂದು ಪ್ರೈಮ್ ವಾಲಿಬಾಲ್ ಲೀಗ್‌ನ ಸಹಸ್ಥಾಪಕ ತುಹಿನ್ ಮಿಶ್ರಾ ಹೇಳಿದ್ದಾರೆ.

ಇದನ್ನೂ ಓದಿ

ಮೊದಲ ಟೆಸ್ಟ್‌ನಿಂದ ಅಯ್ಯರ್ ಹೊರಕ್ಕೆ! ತಂಡ ಸೇರ್ತಾರಾ ಅಗ್ರ ಶ್ರೇಯಾಂಕಿತ ಆಟಗಾರ?

ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗೆ ಸಿದ್ಧತೆ ನಡೆಸುತ್ತಿರುವ ಟೀಮ್ ಇಂಡಿಯಾಗೆ ಭಾರಿ ಹಿನ್ನಡೆಯಾಗಿದ್ದು, ಬೆನ್ನಿನ ಗಾಯದಿಂದ ಶ್ರೇಯಸ್ ಅಯ್ಯರ್ ಮೊದಲ ಪಂದ್ಯದಿಂದ ಹೊರಗುಳಿದಿದ್ದಾರೆ ಎಂದು ವರದಿಯಾಗಿದೆ. ಆದರೆ, ಮುಂಬೈ ಬ್ಯಾಟರ್ ಎರಡನೇ ಟೆಸ್ಟ್‌ ಪಂದ್ಯದ ವೇಳೆಗೆ ಸಂಪೂರ್ಣ ಚೇತರಿಸಿಕೊಂಡು, ತಂಡಕ್ಕೆ ಮರಳುವ ಸಾಧ್ಯತೆಯಿದೆ. ವಿವರಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ