logo
ಕನ್ನಡ ಸುದ್ದಿ  /  ಕ್ರೀಡೆ  /  Kl Rahul On Batting Position: 'ರೋಹಿತ್ ನನ್ನ ಬ್ಯಾಟಿಂಗ್‌ ಕ್ರಮಾಂಕದ ಬಗ್ಗೆ ಸ್ಪಷ್ಟವಾಗಿದ್ದಾರೆ'; ವಿಶ್ವಕಪ್‌ನಲ್ಲಿ ರಾಹುಲ್‌ಗೆ ಈ ಸ್ಥಾನ

KL Rahul on batting position: 'ರೋಹಿತ್ ನನ್ನ ಬ್ಯಾಟಿಂಗ್‌ ಕ್ರಮಾಂಕದ ಬಗ್ಗೆ ಸ್ಪಷ್ಟವಾಗಿದ್ದಾರೆ'; ವಿಶ್ವಕಪ್‌ನಲ್ಲಿ ರಾಹುಲ್‌ಗೆ ಈ ಸ್ಥಾನ

HT Kannada Desk HT Kannada

Jan 13, 2023 01:12 PM IST

ಕೆ ಎಲ್ ರಾಹುಲ್

    • ಐದನೇ ಕ್ರಮಾಂಕದಲ್ಲಿ ಬ್ಯಾಟ್‌ ಬೀಸಿದ ಕೆ ಎಲ್‌ ತಾಳ್ಮೆಯ ಆಟವಾಡಿದರು. ಇವರು ಅಯ್ಯರ್, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್ ಮತ್ತು ಕುಲದೀಪ್ ಯಾದವ್ ಅವರೊಂದಿಗೆ ಜೊತೆಯಾಟವಾಡಿದರು. ಅಂತಿಮವಾಗಿ ಭಾರತವು ಪಂದ್ಯದ ಜತೆಗೆ ಮೂರು ಪಂದ್ಯಗಳ ಸರಣಿಯಲ್ಲಿ 2-0 ಅಂತರದಿಂದ ಸರಣಿ ಗೆದ್ದುಕೊಂಡಿತು.
ಕೆ ಎಲ್ ರಾಹುಲ್
ಕೆ ಎಲ್ ರಾಹುಲ್ (PTI)

ಗುರುವಾರ ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ ಮೈದಾನದಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ, ಭಾರತವು ನಾಲ್ಕು ವಿಕೆಟ್‌ಗಳ ಅಂತರದಿಂದ ಜಯ ಸಾಧಿಸಿತು. ಪಂದ್ಯದಲ್ಲಿ ಕೆ ಎಲ್ ರಾಹುಲ್ 103 ಎಸೆತಗಳಲ್ಲಿ 64 ರನ್ ಗಳಿಸಿ ಅಜೇಯರಾಗಿ ಉಳಿದರು. ಚೇಸಿಂಗ್ ವೇಳೆ ಅಗ್ರ ಕ್ರಮಾಂಕ ಕುಸಿದರೂ, ರಾಹುಲ್‌ ತಾಳ್ಮೆಯ ಆಟವಾಡಿ ಭಾರತದ ರಕ್ಷಣೆಗೆ ನಿಂತರು.

ಟ್ರೆಂಡಿಂಗ್​ ಸುದ್ದಿ

Bengaluru Weather: ಆರ್‌ಸಿಬಿ ಅಭಿಮಾನಿಗಳು ಚಿಂತಿಸಬೇಕಾದ್ದಿಲ್ಲ, ಚಿನ್ನಸ್ವಾಮಿ ಸ್ಟೇಡಿಯಂನಲ್ಲಿದೆ ಸಬ್‌ಏರ್‌ ಸಿಸ್ಟಮ್‌, ಏನದು

42 ವರ್ಷದ ಎಂಎಸ್‌ ಧೋನಿ ಫಿಟ್ನೆಸ್ ಸೀಕ್ರೆಟ್ ಏನು; ಕೂಲ್ ಕ್ಯಾಪ್ಟನ್ ಡಯಟ್, ವರ್ಕೌಟ್ ಪ್ಲಾನ್ ಹೀಗಿರುತ್ತೆ

RCB vs CSK IPL 2024: ಆರ್‌ಸಿಬಿ ವಿರುದ್ಧದ ಪಂದ್ಯಕ್ಕೆ ಸಿಎಸ್‌ಕೆ ರಣತಂತ್ರ; ಚೆನ್ನೈ ಸೂಪರ್ ಕಿಂಗ್ಸ್ ಆಡುವ ಸಂಭಾವ್ಯ 11ರ ಬಳಗ ಹೀಗಿದೆ

ತಂದೆ-ತಾಯಿಯೂ ಕ್ರೀಡಾಪಟುಗಳು, ಕೋಚ್​ ಮಗಳನ್ನೇ ಪಟಾಯಿಸಿದ್ರು; ಇದು ನಿವೃತ್ತಿ ಘೋಷಿಸಿದ ಸುನಿಲ್ ಛೆಟ್ರಿ ಲೈಫ್​ಸ್ಟೋರಿ

216 ರನ್‌ಗಳ ಸಾಧಾರಣ ಗುರಿ ಬೆನ್ನತ್ತಿದ ಭಾರತದ ಆರಂಭಿಕರಾದ ರೋಹಿತ್ ಶರ್ಮಾ (17) ಮತ್ತು ಶುಭ್‌ಮನ್ ಗಿಲ್ (21) ಅಲ್ಪಮೊತ್ತಕ್ಕೆ ಔಟಾದರು. ಬೇಗನ ಆರಂಭಿಕರ ವಿಕೆಟ್‌ ಪತನವಾದ ಬೆನ್ನಲ್ಲೇ, ಕಳೆದ ಪಂದ್ಯದಲ್ಲಿ ಸೆಂಚುರಿ ಸಿಡಿಸಿ ಮಿಂಚಿದ್ದ ವಿರಾಟ್ ಕೊಹ್ಲಿ ಒಂಬತ್ತು ಎಸೆತಗಳಲ್ಲಿ ಕೇವಲ ನಾಲ್ಕು ರನ್ ಗಳಿಸಿ ನಿರ್ಗಮಿಸಿದರು. ಈ ನಡುವೆ, ಶ್ರೇಯಸ್ ಅಯ್ಯರ್ ಮತ್ತು ಕೆ ಎಲ್‌ ರಾಹುಲ್ ಜೊತೆಯಾಟವನ್ನು ನಿರ್ಮಿಸಲು ಪ್ರಯತ್ನಿಸಿದರು. ಆದರೆ, ಕೆಲವೇ ಹೊತ್ತಿನಲ್ಲಿ ಶ್ರೇಯಸ್‌ ಕೂಡಾ ಔಟಾದರು.

ಐದನೇ ಕ್ರಮಾಂಕದಲ್ಲಿ ಬ್ಯಾಟ್‌ ಬೀಸಿದ ಕೆ ಎಲ್‌ ತಾಳ್ಮೆಯ ಆಟವಾಡಿದರು. ಇವರು ಅಯ್ಯರ್, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್ ಮತ್ತು ಕುಲದೀಪ್ ಯಾದವ್ ಅವರೊಂದಿಗೆ ಜೊತೆಯಾಟವಾಡಿದರು. ಅಂತಿಮವಾಗಿ ಭಾರತವು ಪಂದ್ಯದ ಜತೆಗೆ ಮೂರು ಪಂದ್ಯಗಳ ಸರಣಿಯಲ್ಲಿ 2-0 ಅಂತರದಿಂದ ಸರಣಿ ಗೆದ್ದುಕೊಂಡಿತು.

ಸಾಮಾನ್ಯವಾಗಿ ಆರಂಭಿಕರಾಗಿ ಬ್ಯಾಟ್ ಮಾಡುವ ರಾಹುಲ್, ಏಕದಿನ ಕ್ರಿಕೆಟ್‌ನಲ್ಲಿ ಮಧ್ಯಮ ಕ್ರಮಾಂಕದ ಬ್ಯಾಟರ್ ಆಗಿ ಉತ್ತಮವಾಗಿ ಆಡುತ್ತಿದ್ದಾರೆ. ವಾಸ್ತವವಾಗಿ, ಅವರು 50ಕ್ಕಿಂತ ಹೆಚ್ಚು ಸರಾಸರಿ ಹೊಂದಿದ್ದಾರೆ. ಭಾರತದ ಪರ ನಾಲ್ಕು ಅಥವಾ ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವಾಗ 100 ಸ್ಟ್ರೈಕ್ ರೇಟ್ ಅನ್ನು ಹೊಂದಿದ್ದಾರೆ.

ಈ ವರ್ಷ ಭಾರತದಲ್ಲಿ ನಡೆಯಲಿರುವ ಮುಂಬರುವ ಏಕದಿನ ವಿಶ್ವಕಪ್‌ನಲ್ಲಿ ವಿಕೆಟ್ ‌ಕೀಪರ್ ಯಾವ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಬೇಕೆಂಬ ಬಗ್ಗೆ ನಾಯಕ ರೋಹಿತ್ ಶರ್ಮಾ ಸ್ಪಷ್ಟತೆ ಹೊಂದಿದ್ದಾರೆ. ಈ ಬಗ್ಗೆ ಪಂದ್ಯದ ಬಳಿಕ ಖುದ್ದು ರಾಹುಲ್ ಬಹಿರಂಗಪಡಿಸಿದ್ದಾರೆ. “ಐದನೇ ಕ್ರಮಾಂಕದಲ್ಲಿ ಬಂದಾಗ ಸ್ಪಿನ್ ಎದುರಿಸಬೇಕು. ನನಗೆ ಚೆಂಡು ಬ್ಯಾಟ್‌ಗೆ ಬರುವುದು ಇಷ್ಟ. ರೋಹಿತ್ ಅವರು ನಾನು ಯಾವ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಬೇಕು ಎಂಬುದನ್ನು ನನಗೆ ತಿಳಿಸಿದ್ದು, ಅದು ಬಹಳ ಸ್ಪಷ್ಟವಾಗಿದೆ,” ಎಂದು ಅವರು ಹೇಳಿದ್ದಾರೆ.

ಅವರ ಬ್ಯಾಟಿಂಗ್ ವಿಧಾನದ ಬಗ್ಗೆಯೂ ಮಾತನಾಡಿದರು, “5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವಾಗ ನಾನು ನಿಜವಾಗಿಯೂ ಆನಂದಿಸುವ ಒಂದು ವಿಷಯವೆಂದರೆ, ಓಪನರ್‌ ಪಾತ್ರಕ್ಕೆ ಹೋಲಿಸಿದರೆ ದಿಢೀರನೆ ಬ್ಯಾಟಿಂಗ್‌ಗೆ ಹೋಗಬೇಕಿಲ್ಲ. ಇನ್ನಿಂಗ್ಸ್‌ ಬಳಿಕ ಸಮಯ ಸಿಗುತ್ತದೆ. ಈ ವೇಳೆ ಸ್ನಾನ ಮಾಡಿ, ಚೆನ್ನಾಗಿ ಊಟ ಮಾಡಬಹುದು. ಅಲ್ಲದೆ ಪರಿಸ್ಥಿತಿಗೆ ತಕ್ಕನಾಗಿ ಪ್ರತಿಕ್ರಿಯಿಸಬಹುದು. ತಂಡಕ್ಕೆ ನಾನು ನಿರ್ದಿಷ್ಟ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟಿಂಗ್ ಮಾಡುವ ಅಗತ್ಯವಿದ್ದರೆ ನಾನು ಪ್ರಯತ್ನಿಸುತ್ತೇನೆ. ನನ್ನ ಸಾಮರ್ಥ್ಯಕ್ಕೆ ತಕ್ಕಂತೆ ಅದನ್ನು ಮಾಡುತ್ತೇನೆ. ಹೆಚ್ಚಾಗಿ ತಂಡವು ಬಯಸಿದ ಕೆಲಸವನ್ನು ಮಾಡುವುದು ನನ್ನ ಮನಸ್ಥಿತಿಯಾಗಿತ್ತು,” ಎಂದು ರಾಹುಲ್‌ ಹೇಳಿದ್ದಾರೆ.

ನುವಾನಿಡು ಫೆರ್ನಾಂಡೊ ಅವರ ಅರ್ಧಶತಕದ ನೆರವಿನಿಂದ, ಮೊದಲು ಬ್ಯಾಟಿಂಗ್‌ ಮಾಡಿದ ಶ್ರೀಲಂಕಾ 39.4 ಓವರ್‌ಗಳಲ್ಲಿ 215 ರನ್‌ ಗಳಿಸಿ ಆಲೌಟಾಯಿತು. ಇದೇ ವೇಳೆ ಭಾರತದ ಬೌಲಿಂಗ್ ವಿಭಾಗದ ಪರ ಮೊಹಮ್ಮದ್ ಸಿರಾಜ್ ಮತ್ತು ಕುಲದೀಪ್ ಯಾದವ್ ತಲಾ ಮೂರು ವಿಕೆಟ್ ಪಡೆದರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ