logo
ಕನ್ನಡ ಸುದ್ದಿ  /  Sports  /  Mi W Vs Ggw Wpl 2023 Harleen Deol Sensational Direct Hit Run Out From Mumbai Indians Vs Gujarat Titans Video

MI vs GG: ಅಬ್ಬಬ್ಬಾ.. ಫೆಂಟಾಸ್ಟಿಕ್​ ರನೌಟ್​​.. ಹರ್ಲೀನ್​​​​ ಡೈರೆಕ್ಟ್​ ಹಿಟ್​ಗೆ ಕ್ರಿಕೆಟ್​​​ ಲೋಕವೇ ಫಿದಾ!

HT Kannada Desk HT Kannada

Mar 15, 2023 10:05 AM IST

ಹರ್ಲೀನ್​ ಡಿಯೋಲ್​ ರನೌಟ್​​

    • MI vs GG: ಗುಜರಾತ್​ ಜೈಂಟ್ಸ್​ ತಂಡವನ್ನು 55 ರನ್​ಗಳಿಂದ ಮಣಿಸಿದ ಮುಂಬೈ, ಪ್ಲೆ ಆಫ್​ಗೂ ಪ್ರವೇಶ ನೀಡಿದೆ. ಆದರೆ ಈ ಪಂದ್ಯದಲ್ಲಿ ಗುಜರಾತ್​ ಆಟಗಾರ್ತಿಯೊಬ್ಬರ ಬೆಂಕಿ ರನೌಟ್​ ಒಂದು ಸೋಷಿಯಲ್​ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸುತ್ತಿದೆ.
ಹರ್ಲೀನ್​ ಡಿಯೋಲ್​ ರನೌಟ್​​
ಹರ್ಲೀನ್​ ಡಿಯೋಲ್​ ರನೌಟ್​​

ಮುಂಬೈನ ಬ್ರಬೋರ್ನ್​ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಮಹಿಳಾ ಪ್ರೀಮಿಯರ್ ಲೀಗ್​ನ (Indian Premier League) 12ನೇ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ (Gujarat Giants) ವಿರುದ್ಧ ಮುಂಬೈ ಇಂಡಿಯನ್ಸ್ (Mumbai Indians) ಭರ್ಜರಿ ಜಯ ಸಾಧಿಸಿದೆ. ಐದು ಪಂದ್ಯಗಳನ್ನು ಗೆದ್ದಿರುವ ಹರ್ಮನ್​ ಪಡೆ ಗೆಲುವಿನ ನಾಗಾಲೋಟದಲ್ಲಿ ತೇಲಾಡುತ್ತಿದೆ. ಗುಜರಾತ್​ ಜೈಂಟ್ಸ್​ ತಂಡವನ್ನು 55 ರನ್​ಗಳಿಂದ ಮಣಿಸಿದ ಮುಂಬೈ, ಪ್ಲೆ ಆಫ್​ಗೂ ಪ್ರವೇಶ ನೀಡಿದೆ.

ಟ್ರೆಂಡಿಂಗ್​ ಸುದ್ದಿ

ನಾನು ಹೇಳಿದ್ದು ತುಂಬಾ ಕಡಿಮೆ, ಆದರೂ ನಾನು ಮೌನಿಯಾಗಿದ್ದೇನೆ; ಸಾನಿಯಾ ಮಿರ್ಜಾ ಪೋಸ್ಟ್​ನ ಅರ್ಥವೇನು?

ದೇಶಕ್ಕಾಗಿ ಪದಕ ಗೆಲ್ಲುವುದೇ ನನ್ನ ಗುರಿ; ಅದಕ್ಕಾಗಿ ತೂಕ ಕಾಪಾಡಿಕೊಳ್ಳಬೇಕು ಎಂದ ವಿನೇಶ್ ಫೋಗಟ್

ಪ್ಯಾರಿಸ್ ಒಲಿಂಪಿಕ್ಸ್​ಗೆ ಅರ್ಹತೆ ಗಳಿಸಿದ ಭಾರತದ 7 ಷಟ್ಲರ್​​ಗಳು; ಅರ್ಹತೆ; ಕನ್ನಡತಿ ಅಶ್ವಿನಿ ಪೊನ್ನಪ್ಪ, ಪಿವಿ ಸಿಂಧುಗೆ ಅವಕಾಶ

1900 ರಿಂದ 2020ರ ತನಕ; 120 ವರ್ಷಗಳ ಒಲಿಂಪಿಕ್ಸ್ ಇತಿಹಾಸದಲ್ಲಿ ಭಾರತ ಗೆದ್ದಿರುವ ಪದಕಗಳೆಷ್ಟು? ವರ್ಷವಾರು ಒಂದು ನೋಟ

ಆದರೆ ಈ ಪಂದ್ಯದಲ್ಲಿ ಗುಜರಾತ್​​​ ಜೈಂಟ್ಸ್​​ ಕಳಪೆ ಪ್ರದರ್ಶನ ನೀಡಿತು. ಬ್ಯಾಟಿಂಗ್ ​​- ಬೌಲಿಂಗ್​​​​​ನಲ್ಲಿ ವೈಫಲ್ಯ ಅನುಭವಿಸಿದ ಗುಜರಾತ್​​, ಪ್ಲೇ ಆಫ್​ ಹಾದಿಯ ಸಂಕಷ್ಟಕ್ಕೆ ಸಿಲುಕಿದೆ. ಆದರೆ ಈ ಪಂದ್ಯದಲ್ಲಿ ಗುಜರಾತ್​ ಆಟಗಾರ್ತಿಯೊಬ್ಬರ ಬೆಂಕಿ ರನೌಟ್​ ಒಂದು ಸೋಷಿಯಲ್​ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸುತ್ತಿದೆ.

ನಂಬಲು ಅಸಾಧ್ಯವಾದ ರನೌಟ್​.!

ಮುಂಬೈ ಇಂಡಿಯನ್ಸ್ ಇನ್ನಿಂಗ್ಸ್‌ನ 18ನೇ ಓವರ್‌ನಲ್ಲಿ ಹುಮೈರಾ ಕಾಜಿ, ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರೊಂದಿಗೆ ಬ್ಯಾಟಿಂಗ್ ಮಾಡುತ್ತಿದ್ದರು. ಅನ್ನಾಬೆಲ್​ ಸದರ್ಲ್ಯಾಂಡ್ ಅವರ​ ಬೌಲಿಂಗ್​​​ನಲ್ಲಿ ಹರ್ಮನ್​ ಪ್ರೀತ್​ ಕೌರ್​ ಮಿಡ್​ ಆನ್​ ಬೌಂಡರಿ ಕಡೆಗೆ ಶಾಟ್​ ಮಾಡಿದರು. ಈ ವೇಳೆ 2 ರನ್​ಗೆ ಹರ್ಮನ್ ಪ್ರಯತ್ನಿಸಿದರು.

ಆದರೆ, ಬೌಂಡರಿ ಗೆರೆಯಲ್ಲಿ ಅದ್ಭುತ ಫೀಲ್ಡಿಂಗ್​ ಮಾಡಿದ ಹರ್ಲೀನ್ ಡಿಯೋಲ್, ಶಾರ್ಪ್​ ಶೂಟರ್​​​ನಂತೆ ನೇರವಾಗಿ ವಿಕೆಟ್‌ಗೆ ಹೊಡೆದರು. ಇದರೊಂದಿಗೆ ಬ್ಯಾಟರ್​ಗೆ ಪೆವಿಲಿಯನ್ ಹಾದಿ ತೋರಿಸಿದರು. ಹರ್ಲೀನ್ ಡಿಯೋಲ್ ಅವರ ಡೈರೆಕ್ಟ್​​​​ ಥ್ರೋ ಕಂಡು ಬ್ಯಾಟರ್​​ ಸೇರಿದಂತೆ ಗುಜರಾತ್ ಜೈಂಟ್ಸ್ ಆಟಗಾರರಿಗೂ ನಂಬಲು ಸಾಧ್ಯವಾಗಲಿಲ್ಲ. ನಾನ್​ ಸ್ಟೈಕ್​​​​​ಗೆ ಓಡುತ್ತಿದ್ದ ಹುಮೈರಾ ಆಘಾತದಿಂದ ಕಾಜಿ ಪೆವಿಲಿಯನ್ ಸೇರಿದರು.

ಹರ್ಲೀನ್ ಡಿಯೋಲ್ ಅವರ ಥ್ರೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಪವರ್​​ಪ್ಯಾಕ್​ ರನೌಟ್​ಗೆ ಫಿದಾ ಆಗಿರುವ ಫ್ಯಾನ್ಸ್​ ತಮ್ಮದೇ ರೀತಿಯಲ್ಲಿ ಕಾಮೆಂಟ್​​​ಗಳ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಈ ಅದ್ಭುತ ರನೌಟ್​ ನಡುವೆಯೂ ಗುಜರಾತ್​ ಪಂದ್ಯವನ್ನು ಕೈಚೆಲ್ಲಿತು. ಆ ಮೂಲಕ ಟೂರ್ನಿಯಲ್ಲಿ 4ನೇ ಸೋಲು ಅನುಭವಿಸಿತು.

ಗುಜರಾತ್​ ಪ್ಲೇ ಆಫ್​ ಹಾದಿ ಸಂಕಷ್ಟ!

ಸತತ ಸೋಲಿನಿಂದ ಕಂಗೆಟ್ಟಿರುವ ಗುಜರಾತ್​ ಜೈಂಟ್ಸ್​​​ ಪ್ಲೇ ಆಫ್ ಹಾದಿ ಸಂಕಷ್ಟಕ್ಕೆ ಸಿಲುಕಿದೆ. ಉಳಿದೆಲ್ಲಾ ಎಂಟ್ರಿ ನೀಡಬೇಕಂದರೆ, ಉಳಿದೆಲ್ಲಾ ಪಂದ್ಯಗಳಲ್ಲೂ ಗೆಲುವು ಸಾಧಿಸುವುದು ಅನಿವಾರ್ಯ..! ಗುಜರಾತ್​ ಆಡಿದ 5 ಪಂದ್ಯಗಳಲ್ಲಿ 4 ಸೋಲು, 1 ಗೆಲುವು ಸಾಧಿಸಿದೆ. ಹಾಗಾಗಿ ಉಳಿದ ಮೂರು ಪಂದ್ಯಗಳಲ್ಲೂ ಗೆಲ್ಲುವ ಒತ್ತಡಕ್ಕೆ ಸಿಲುಕಿದೆ.

ಮುಂಬೈ ಇಂಡಿಯನ್ಸ್ ತಂಡ

ಹೇಲಿ ಮ್ಯಾಥ್ಯೂಸ್, ಯಾಸ್ತಿಕಾ ಭಾಟಿಯಾ (ವಿಕೆಟ್ ಕೀಪರ್), ನ್ಯಾಟ್ ಸಿವರ್-ಬ್ರಂಟ್, ಹರ್ಮನ್‌ಪ್ರೀತ್ ಕೌರ್ (ನಾಯಕಿ), ಧಾರಾ ಗುಜ್ಜರ್, ಅಮೆಲಿಯಾ ಕೆರ್, ಇಸ್ಸಿ ವೊಂಗ್, ಅಮನ್ಜೋತ್ ಕೌರ್, ಹುಮೈರಾ ಕಾಜಿ, ಜಿಂಟಿಮಣಿ ಕಲಿತಾ, ಸೈಕಾ ಇಶಾಕ್, ಸೋನಮ್ ಯಾದವ್, ನೀಲ್ ಬಿಶ್ತ್, ಪ್ರಿಯಾಂಕಾ ಬಾಲಾ, ಪೂಜಾ ವಸ್ತ್ರಾಕರ್, ಹೀದರ್ ಗ್ರಹಾಂ, ಕ್ಲೋಯ್ ಟ್ರಯಾನ್.

ಗುಜರಾತ್ ಜೈಂಟ್ಸ್ ತಂಡ

ಸಬ್ಬಿನೇನಿ ಮೇಘನಾ, ಲಾರಾ ವೊಲ್ವಾರ್ಡ್, ಹರ್ಲೀನ್ ಡಿಯೋಲ್, ಆಶ್ಲೀಗ್ ಗಾರ್ಡ್ನರ್, ದಯಾಲನ್ ಹೇಮಲತಾ, ಜಾರ್ಜಿಯಾ ವೇರ್ಹ್ಯಾಮ್, ಸುಷ್ಮಾ ವರ್ಮಾ (ವಿಕೆಟ್ ಕೀಪರ್), ಕಿಮ್ ಗಾರ್ತ್, ತನುಜಾ ಕನ್ವರ್, ಸ್ನೇಹ್ ರಾಣಾ (ನಾಯಕಿ), ಮಾನ್ಸಿ ಜೋಶಿ, ಸೋಫಿಯಾ ಡಂಕ್ಲೆ, ಅಶ್ವನಿಕಾ ಪಟೇಲ್, ಮೋನಿಕಾ ಪಟೇಲ್ ಕುಮಾರಿ, ಹರ್ಲಿ ಗಾಲಾ, ಶಬ್ನಮ್ ಎಂಡಿ ಶಕಿಲ್, ಪರುನಿಕಾ ಸಿಸೋಡಿಯಾ, ಅನ್ನಾಬೆಲ್ ಸದರ್ಲ್ಯಾಂಡ್.

    ಹಂಚಿಕೊಳ್ಳಲು ಲೇಖನಗಳು