ಕನ್ನಡ ಸುದ್ದಿ  /  Sports  /  Injury Scare: Injury List Grows Longer Before Ipl 2023

Injury Scare: ಐಪಿಎಲ್​ಗೂ ಮುನ್ನ ಹೆಚ್ಚಾಗ್ತಿದೆ ಆಟಗಾರರ ಇಂಜುರಿ ಪಟ್ಟಿ.​. ಪ್ರಮುಖರೇ ಔಟ್​?

Injury Scare: ಸದ್ಯ 16ನೇ ಆವೃತ್ತಿಯ IPL​​ಗೂ ಮುನ್ನ ಇಂಜುರಿ ಕಾಟ ಹೆಚ್ಚಾಗಿದೆ. ಫ್ರಾಂಚೈಸಿಗಳು ಆತಂಕದಲ್ಲಿ ದಿನ ದೂಡುತ್ತಿವೆ. ಮಾರ್ಚ್​​ 31 ರಿಂದ ಮತ್ತಷ್ಟು ರಂಗೇರುತ್ತಿದ್ದ ಕಲರ್​​​ಫುಲ್​ ಲೀಗ್​ಗೆ ಈಗ ಇಂಜುರಿ ಕೊಳ್ಳಿ ಇಡುತ್ತಿದೆ. ಈಗಾಗಲೇ ಪ್ರಮುಖ ಆಟಗಾರರೇ ಟೂರ್ನಿಯಿಂದ ಹೊರ ಬಿದ್ದು, ಇಂಜುರಿ ಆಟಗಾರರ ಪಟ್ಟಿ ದಿನದಿಂದ ದಿನ ಬೆಳೆಯುತ್ತಲೇ ಇದೆ.

ಐಪಿಎಲ್
ಐಪಿಎಲ್

ಇಂಡಿಯನ್​ ಪ್ರೀಮಿಯರ್ ಲೀಗ್ (Indian Premier League)​​ ಅಂದರೆ, ಕ್ರಿಕೆಟಿಗರ ಸ್ವರ್ಗ. ಇಲ್ಲಿ ಝಣ, ಝಣ ಕಾಂಚಾಣ ಹರಿಯುತ್ತದೆ.! ಈ ಟೂರ್ನಿಯಲ್ಲಿ ವಿಶ್ವದ ಘಟಾನುಘಟಿ ಕ್ರಿಕೆಟಿಗರು ಭಾಗವಹಿಸುತ್ತಾರೆ. ಕೋಟಿ, ಕೋಟಿ ಹಣವನ್ನ ಜೇಬಿಗಿಳಿಸಿಕೊಳ್ಳುತ್ತಾರೆ.! ರಾಷ್ಟ್ರೀಯ ತಂಡದಲ್ಲಿ ಅವಕಾಶ​ ಸಿಗದಿದ್ದರೂ ಪರವಾಗಿಲ್ಲ, ಐಪಿಎಲ್​ ಆಡಿದರೆ ಸಾಕು ಎಂಬುದರ ಮಟ್ಟಿಗೆ ಕ್ರಿಕೆಟಿಗರನ್ನು ಆವರಿಸಿ ಬಿಟ್ಟಿದೆ ಈ ಕಲರ್​ಫುಲ್​ ಲೀಗ್​!

ವಿಶ್ವದ ಕ್ರಿಕೆಟ್​ ದೊಡ್ಡಣ್ಣ ಬಿಸಿಸಿಐ ನಡೆಸುವ ಈ ಲೀಗ್​ಗೆ ಅಷ್ಟೊಂದು ಮೌಲ್ಯ ಇದೆ. ಇಲ್ಲಿ ಹರಿಯುವ ಆದಾಯ ವಿಶ್ವದ ಯಾವ ರಾಷ್ಟ್ರ ಆಯೋಜಿಸುವ ಕ್ರಿಕೆಟ್​​ ಲೀಗ್​ನಲ್ಲೂ ಇಲ್ಲ. ಅದಕ್ಕೆ ಇರಬೇಕು, ಆಡಿದರೆ ಐಪಿಎಲ್​ ಆಡುತ್ತೇವೆ ಅಂತ ವಿದೇಶಿ ಕ್ರಿಕೆಟಿಗರು ಕೂಡ ಭಾರತಕ್ಕೆ ಓಡೋಡಿ ಬರೋದು. ಇಷ್ಟೆಲ್ಲಾ ಇರುವ ಈ ಹೊಡಿ ಬಡಿ ಆಟದಲ್ಲಿ ಗಾಯಗಳು ಸರಣಿಯಾಗಿ ಕಾಣಿಸಿಕೊಳ್ಳುತ್ತಿವೆ.

ಸದ್ಯ 16ನೇ ಆವೃತ್ತಿಯ IPL​​ಗೂ ಮುನ್ನ ಇಂಜುರಿ ಕಾಟ ಹೆಚ್ಚಾಗಿದೆ. ಫ್ರಾಂಚೈಸಿಗಳು ಆತಂಕದಲ್ಲಿ ದಿನ ದೂಡುತ್ತಿವೆ. ಮಾರ್ಚ್​​ 31 ರಿಂದ ಮತ್ತಷ್ಟು ರಂಗೇರುತ್ತಿದ್ದ ಕಲರ್​​​ಫುಲ್​ ಲೀಗ್​ಗೆ ಈಗ ಇಂಜುರಿ ಕೊಳ್ಳಿ ಇಡುತ್ತಿದೆ. ಈಗಾಗಲೇ ಪ್ರಮುಖ ಆಟಗಾರರೇ ಟೂರ್ನಿಯಿಂದ ಹೊರ ಬಿದ್ದು, ಗಾಯದ ಆಟಗಾರರ ಪಟ್ಟಿ ದಿನದಿಂದ ದಿನ ಬೆಳೆಯುತ್ತಲೇ ಇದೆ. ಶ್ರೇಯಸ್​ ಅಯ್ಯರ್​ ಕೂಡ ಈಗ ಈ ಲೀಸ್ಟ್​ಗೆ ಸೇರಿದ್ದಾರೆ. ಹಾಗಾದರೆ ಈ IPLಗೆ ಯಾರೆಲ್ಲಾ ಮಿಸ್​ ಆಗಲಿದ್ದಾರೆ ಬನ್ನಿ ನೋಡೋಣ.!

ಮುಂಬೈ ತಂಡಕ್ಕೆ ಭಾರಿ ಹೊಡೆತ.!

ಟೂರ್ನಿಗೂ ಮುನ್ನ 5 ಬಾರಿಯ ಚಾಂಪಿಯನ್​ ಮುಂಬೈ ಇಂಡಿಯನ್ಸ್​ಗೆ (Mumbai Indians) ಈ ಭಾರಿ ಆಘಾತವಾಗಿದೆ. ಯಾರ್ಕರ್​ ಸ್ಪೆಷಲಿಸ್ಟ್​, ಮ್ಯಾಚ್​ ವಿನ್ನರ್​​ ಟೀಮ್​ ಇಂಡಿಯಾ ವೇಗಿ ಜಸ್​ಪ್ರಿತ್​ ಬೂಮ್ರಾ (Jasprit Bumrah), ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದು, 6 ತಿಂಗಳ ಕಾಲ ಕ್ರಿಕೆಟ್​ ಸೇವೆಗೆ ದೂರ ಇರಲಿದ್ದಾರೆ. ಸದ್ಯ ಬೆನ್ನಿನ ಗಾಯಕ್ಕೆ ಯಶಸ್ವಿ ಶಸ್ತ್ರಚಿಕಿತ್ಸೆಯಾಗಿದ್ದು, ಸದ್ಯ ವಿಶ್ರಾಂತಿ ಪಡೆಯುತ್ತಿದ್ದಾರೆ. ಇನ್ನು ಆಸಿಸ್​ ವೇಗಿ ಜಾಯ್​ ರಿಚರ್ಡ್​ಸನ್ (Jhye Richardson)​ ಗಾಯದ ಸಮಸ್ಯೆಯಿಂದ ಈ ಬಾರಿ ಐಪಿಎಲ್​ನಿಂದ ಹೊರಗುಳಿಯಲಿದ್ದಾರೆ. ಇದು ಮುಂಬೈಗೆ ಹೊಡೆತ ನೀಡಿದೆ.

ಡೆಲ್ಲಿ ಕ್ಯಾಪಿಟಲ್ಸ್​​ಗೆ ತ್ರಿಬಲ್​ ಶಾಕ್​!

ಮುಂಬೈಗೆ ಡಬಲ್​ ಶಾಕ್​ ಆದರೆ, ಡೆಲ್ಲಿ ಕ್ಯಾಪಿಟಲ್ಸ್​ಗೆ (Delhi Capitals) ತ್ರಿಬಲ್​ ಶಾಕ್​. ತಂಡದ ನಾಯಕನೇ ಐಪಿಎಲ್​ನಿಂದ ಹೊರ ಬಿದ್ದಿದ್ದು, ಹಿನ್ನಡೆ ತಂದಿದೆ. ಡಿಸೆಂಬರ್​ 30ರಂದು ಭೀಕರ ಅಪಘಾತಕ್ಕೆ ಒಳಗಾಗಿದ್ದರು. ರಿಷಭ್​ ಪಂತ್ (Rishabh Pant) ರಿಕವರ್​​ ಆಗಲು ಇನ್ನೂ ಕನಿಷ್ಠ ಒಂದು ವರ್ಷವಾದರೂ ಬೇಕಾಗುತ್ತದೆ. ಇನ್ನು ಬೌಲಿಂಗ್​​ ಬಲವಾಗಿದ್ದ ಆ್ಯನ್ರಿಚ್ ನೋಕಿಯಾ (Anrich Nortje)​ ಸಹ ಗಾಯದಿಂದ ಈ ಆವೃತ್ತಿಯಿಂದ ಹೊರ ಬೀಳುವ ಸಾಧ್ಯತೆ ಇದೆ. ಜೊತೆಗೆ ಸರ್ಫರಾಜ್​​ ಖಾನ್​ಗೂ (Sarfaraz Khan) ಇಂಜುರಿಯಾಗಿದ್ದು, ಕಣಕ್ಕಿಳಿಯುವುದು ಕಷ್ಟ ಎನ್ನಲಾಗಿದೆ.

CSK, ಪಂಜಾಬ್​ಗೆ ಸ್ಟಾರ್​ಗಳೇ ಅಲಭ್ಯ!

CSK ತಂಡವೂ ಇಂಜುರಿ ಆಘಾತಕ್ಕೆ ಒಳಗಾಗಿದೆ. ಕೈಲ್​​ ಜೆಮಿಸನ್ (Kyle Jamieson)​ ಗಾಯದ ಸಮಸ್ಯೆಯಿಂದ IPL​ನಿಂದ ಹಿಂದೆ ಸರಿದಿದ್ದಾರೆ. ಕಳೆದೊಂದು ವರ್ಷದಿಂದಲೂ ಜೆಮಿಸನ್​ ಮೈದಾನಕ್ಕೆ ಎಂಟ್ರಿ ನೀಡಲಿಲ್ಲ. ಇನ್ನು ಪಂಜಾಬ್​ ಕಿಂಗ್ಸ್​​​ ತಂಡಕ್ಕೆ ಜಾನಿ ಬೈರ್​ಸ್ಟೋ (Jonny Bairstow) ಅಲಭ್ಯರಾಗುವ ಸಾಧ್ಯತೆ ಇದೆ. ಕಳೆದ ವರ್ಷ ಕಾಲಿನ ಗಾಯದ ಸಮಸ್ಯೆಗೆ ಸಿಲುಕಿದ್ದ ಬೈರ್​ಸ್ಟೋಗೆ ಕಳೆದ ವರ್ಷವೇ ಶಸ್ತ್ರ ಚಿಕಿತ್ಸೆ ನಡೆದಿದ್ದು, ರಿಕವರ್​ ಆಗಿರುವ ಕುರಿತು ಯಾವುದೇ ಮಾಹಿತಿ ಹೊರ ಬಿದ್ದಿಲ್ಲ.

ರಾಜಸ್ಥಾನ್​​, ಆರ್​ಸಿಬಿ, ಕೆಕೆಆರ್​​​​​ಗೂ ತಪ್ಪಲಿಲ್ಲ.!

ರಾಜಸ್ಥಾನ್​ ರಾಯಲ್ಸ್​, ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಮತ್ತು ಕೊಲ್ಕತ್ತಾ ನೈಟ್​​ ರೈಡರ್ಸ್​ ತಂಡಗಳಿಗೂ ಭಾರಿ ನಷ್ಟವಾಗಲಿದೆ. ರಾಜಸ್ಥಾನ್​ಗೆ ವೇಗಿ ಪ್ರಸಿದ್ಧ್​ ಕೃಷ್ಣ (Prasidh Krishna) ಕೈ ಕೊಟ್ಟರೆ, ಬೆಂಗಳೂರಿಗೆ ವಿಲ್​​ ಜಾಕ್ಸ್​​​​ ಶಾಕ್​ ನೀಡಿದ್ದಾರೆ. ಜೋಶ್​ ಹೇಜಲ್​ವುಡ್​ ಕೂಡ ಗಾಯದ ಸಮಸ್ಯೆಗೆ ಒಳಗಾಗಿದ್ದು, ಟೂರ್ನಿಯೊಳಗೆ ಚೇತರಿಸಿಕೊಳ್ಳುವುದು ಅನುಮಾನ ಎನ್ನಲಾಗಿದೆ. ಹಾಗೆಯೇ ಕೊಲ್ಕತ್ತಾ ತಂಡಕ್ಕೆ ನಾಯಕ ಶ್ರೇಯಸ್​ ಅಯ್ಯರ್ (Shreyas Iyer)​​ ಅವರೇ ಆಘಾತ ನೀಡಿದ್ದಾರೆ ಎನ್ನಲಾಗಿದೆ. ಪ್ರಸ್ತುತ ಅಯ್ಯರ್​​​​ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಿಂದ ಹೊರ ಬೀಳಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಆದರೆ ಐಪಿಎಲ್​ನಿಂದ ಹೊಗುಳಿಯುತ್ತಾರಾ ಎಂಬುದರ ಬಗ್ಗೆ ಇನ್ನಷ್ಟೇ ಮಾಹಿತಿ ಲಭ್ಯವಾಗಬೇಕಿದೆ.