logo
ಕನ್ನಡ ಸುದ್ದಿ  /  ಕ್ರೀಡೆ  /  Ramiz To Bcci: 'ಆ ಕಾರಣಕ್ಕೆ ನಮ್ಮ ಆತಿಥ್ಯವನ್ನು ಕಿತ್ತುಕೊಳ್ಳುವುದು ಸರಿಯಲ್ಲ' ಎಂದ ರಮೀಜ್‌ ರಾಜಾ

Ramiz to BCCI: 'ಆ ಕಾರಣಕ್ಕೆ ನಮ್ಮ ಆತಿಥ್ಯವನ್ನು ಕಿತ್ತುಕೊಳ್ಳುವುದು ಸರಿಯಲ್ಲ' ಎಂದ ರಮೀಜ್‌ ರಾಜಾ

HT Kannada Desk HT Kannada

Dec 03, 2022 04:43 PM IST

ಬಿಸಿಸಿಐ ಕಾರ್ಯದರ್ಶಿ ಜಯ್ ಶಾ; ಪಿಸಿಬಿ ಮುಖ್ಯಸ್ಥ ರಮೀಜ್ ರಾಜಾ

    • =“ನಮಗೆ ಆತಿಥ್ಯ ಹಕ್ಕು ಬೇಕು ಎಂದು ನಾವು ಮನವಿ ಮಾಡುತ್ತಿದ್ದೇವೆ” ಎಂದು ಹೇಳಿದರು. “ನಾವು ಆತಿಥ್ಯದ ಹಕ್ಕುಗಳನ್ನು ನ್ಯಾಯೋಚಿತವಾಗಿ ಗೆದ್ದಿದ್ದೇವೆ. ಭಾರತ ಬರದಿದ್ದರೆ ಬೇರೆಯವರು ಕೂಡಾ ಬರುವುದಿಲ್ಲ. ಏಷ್ಯಾಕಪ್ ಆತಿಥ್ಯವನ್ನು ಪಾಕಿಸ್ತಾನದಿಂದ ಕಿತ್ತುಕೊಂಡರೆ, ಬಹುಶಃ ನಾವು ಪಂದ್ಯಾವಳಿಯಿಂದ ಹಿಂದೆ ಸರಿಯುತ್ತೇವೆ,” ಎಂದು ರಮೀಜ್ ಹೇಳಿದ್ದಾರೆ.
ಬಿಸಿಸಿಐ ಕಾರ್ಯದರ್ಶಿ ಜಯ್ ಶಾ; ಪಿಸಿಬಿ ಮುಖ್ಯಸ್ಥ ರಮೀಜ್ ರಾಜಾ
ಬಿಸಿಸಿಐ ಕಾರ್ಯದರ್ಶಿ ಜಯ್ ಶಾ; ಪಿಸಿಬಿ ಮುಖ್ಯಸ್ಥ ರಮೀಜ್ ರಾಜಾ

ಪಾಕಿಸ್ತಾನದಲ್ಲಿ ನಡೆಯಲಿರುವ ಏಷ್ಯಾಕಪ್ 2023ರ ಕುರಿತು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರ ಹೇಳಿಕೆ ಕ್ರಿಕೆಟ್‌ ಲೋಕದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಈ ಬಗ್ಗೆ ಪಿಸಿಬಿ ಅಧ್ಯಕ್ಷ ರಮೀಜ್ ರಾಜಾ ಮತ್ತೊಮ್ಮೆ ಭಾರತದತ್ತ ಗುಂಡು ಹಾರಿಸಿದ್ದಾರೆ. ಭಾರತ ಕ್ರಿಕೆಟ್ ಮಂಡಳಿ ವಿರುದ್ಧ ಮತ್ತೊಮ್ಮೆ ಸಿಡಿಮಿಡಿಗೊಂಡಿರುವ ರಮೀಜ್, ಭಾರತವು ಪಾಕಿಸ್ತಾನಕ್ಕೆ ಬರುವುದಿಲ್ಲ ಎಂಬ ಕಾರಣದಿಂದ ಮುಂದಿನ ವರ್ಷ ಏಷ್ಯಾಕಪ್‌ ಆತಿಥ್ಯವನ್ನು ಪಾಕಿಸ್ತಾನದಿಂದ ಕಸಿದುಕೊಂಡರೆ, ಬಾಬರ್ ಅಜಮ್ ನೇತೃತ್ವದ ಪಾಕ್‌ ತಂಡವು ಸಂಪೂರ್ಣವಾಗಿ ಪಂದ್ಯಾವಳಿಯಿಂದ ಹಿಂದೆ ಸರಿಯಬಹುದು ಎಂದು ಭಾರತವನ್ನು ಎಚ್ಚರಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

42 ವರ್ಷದ ಎಂಎಸ್‌ ಧೋನಿ ಫಿಟ್ನೆಸ್ ಸೀಕ್ರೆಟ್ ಏನು; ಕೂಲ್ ಕ್ಯಾಪ್ಟನ್ ಡಯಟ್, ವರ್ಕೌಟ್ ಪ್ಲಾನ್ ಹೀಗಿರುತ್ತೆ

RCB vs CSK IPL 2024: ಆರ್‌ಸಿಬಿ ವಿರುದ್ಧದ ಪಂದ್ಯಕ್ಕೆ ಸಿಎಸ್‌ಕೆ ರಣತಂತ್ರ; ಚೆನ್ನೈ ಸೂಪರ್ ಕಿಂಗ್ಸ್ ಆಡುವ ಸಂಭಾವ್ಯ 11ರ ಬಳಗ ಹೀಗಿದೆ

ತಂದೆ-ತಾಯಿಯೂ ಕ್ರೀಡಾಪಟುಗಳು, ಕೋಚ್​ ಮಗಳನ್ನೇ ಪಟಾಯಿಸಿದ್ರು; ಇದು ನಿವೃತ್ತಿ ಘೋಷಿಸಿದ ಸುನಿಲ್ ಛೆಟ್ರಿ ಲೈಫ್​ಸ್ಟೋರಿ

ಅಂತಾರಾಷ್ಟ್ರೀಯ ಫುಟ್ಬಾಲ್​ಗೆ ಕಾಲ್ಚೆಂಡಿನ ಚತುರ ಸುನಿಲ್ ಛೆಟ್ರಿ ನಿವೃತ್ತಿ; ಈ ದಿನವೇ ದಿಗ್ಗಜ ಆಟಗಾರನ ಕೊನೆಯ ಪಂದ್ಯ

ರಾವಲ್ಪಿಂಡಿಯಲ್ಲಿ ನಡೆಯುತ್ತಿರುವ ಪಾಕಿಸ್ತಾನ-ಇಂಗ್ಲೆಂಡ್ ಟೆಸ್ಟ್‌ ಪಂದ್ಯದ ಸೈಡ್‌ಲೈನ್‌ನಲ್ಲಿ ಮಾತನಾಡಿದ ರಮೀಜ್, “ನಮಗೆ ಆತಿಥ್ಯ ಹಕ್ಕು ಬೇಕು ಎಂದು ನಾವು ಮನವಿ ಮಾಡುತ್ತಿದ್ದೇವೆ” ಎಂದು ಹೇಳಿದರು. “ನಾವು ಆತಿಥ್ಯದ ಹಕ್ಕುಗಳನ್ನು ನ್ಯಾಯೋಚಿತವಾಗಿ ಗೆದ್ದಿದ್ದೇವೆ. ಭಾರತ ಬರದಿದ್ದರೆ ಬೇರೆಯವರು ಕೂಡಾ ಬರುವುದಿಲ್ಲ. ಏಷ್ಯಾಕಪ್ ಆತಿಥ್ಯವನ್ನು ಪಾಕಿಸ್ತಾನದಿಂದ ಕಿತ್ತುಕೊಂಡರೆ, ಬಹುಶಃ ನಾವು ಪಂದ್ಯಾವಳಿಯಿಂದ ಹಿಂದೆ ಸರಿಯುತ್ತೇವೆ,” ಎಂದು ಅವರು ಹೇಳಿದ್ದಾರೆ.

ಅಕ್ಟೋಬರ್‌ನಲ್ಲಿ, ಏಷ್ಯನ್ ಕ್ರಿಕೆಟ್ ಕೌನ್ಸಿಲ್‌ನ ಅಧ್ಯಕ್ಷರೂ ಆಗಿರುವ ಶಾ, ಬಿಸಿಸಿಐನ ವಾರ್ಷಿಕ ಸಾಮಾನ್ಯ ಸಭೆಯ ಸ್ವಲ್ಪ ಬಳಿಕ ಭಾರತ ತಂಡವು ಏಷ್ಯಾಕಪ್‌ಗಾಗಿ ಪಾಕಿಸ್ತಾನಕ್ಕೆ ಪ್ರಯಾಣಿಸುವುದಿಲ್ಲ ಎಂದು ಹೇಳಿದ್ದರು. ಅಲ್ಲದೆ ಪಂದ್ಯಾವಳಿಯನ್ನು ತಟಸ್ಥ ಸ್ಥಳದಲ್ಲಿ ಆಯೋಜಿಸಲಾಗುವುದು ಎಂದು ಹೇಳಿದ್ದರು. ಆ ಬಳಿಕ, ಮುಂದಿನ ವರ್ಷ ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಅನ್ನು ಬಹಿಷ್ಕರಿಸುತ್ತೇವೆ ಎಂಬ ಹೇಳಿಕೆಯೊಂದಿಗೆ ಪಿಸಿಬಿ ಪ್ರತೀಕಾರ ತೀರಿಸಿದೆ.

2008ರಲ್ಲಿ ಏಷ್ಯಾಕಪ್‌ಗಾಗಿ ಭಾರತ ಕೊನೆಯ ಬಾರಿಗೆ ಪಾಕಿಸ್ತಾನಕ್ಕೆ ತೆರಳಿತ್ತು. ಮತ್ತೊಂದೆಡೆ, ಪಾಕಿಸ್ತಾನವು 2016ರಲ್ಲಿ ಟಿ20 ವಿಶ್ವಕಪ್‌ಗಾಗಿ ಭಾರತಕ್ಕೆ ಬಂದಿತ್ತು. ಉಭಯ ತಂಡಗಳು 2012ರಿಂದ ಯಾವುದೇ ದ್ವಿಪಕ್ಷೀಯ ಸರಣಿಗಳಲ್ಲಿ ಆಡಿಲ್ಲ. ಆದರೆ ಐಸಿಸಿ ಈವೆಂಟ್‌ಗಳು ಮತ್ತು ಏಷ್ಯಾಕಪ್‌ಗಳಲ್ಲಿ ತಂಡಗಳು ಪರಸ್ಪರ ಮುಖಾಮುಖಿಯಾಗಿವೆ.

“ನಾವು ಉತ್ತಮ ಪಂದ್ಯಗಳನ್ನು ಆಯೋಜಿಸುವ ಸಾಮರ್ಥ್ಯವನ್ನು ತೋರಿಸಿದ್ದೇವೆ” ಎಂದು ರಮೀಜ್ ಹೇಳಿದರು. “ದ್ವಿಪಕ್ಷೀಯ ಕ್ರಿಕೆಟ್‌ಗೆ ಸಂಬಂಧಿಸಿದ ಸಮಸ್ಯೆಗಳನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ. ಆದರೆ ಏಷ್ಯಾಕಪ್ ಬಹುರಾಷ್ಟ್ರಗಳು ಭಾಗಿಯಾಗುವ ಪಂದ್ಯಾವಳಿಯಾಗಿದೆ,” ಎಂದರು.

“ಮೊದಲಿಗೆ ನಮಗೆ ಆತಿಥ್ಯವನ್ನು ನೀಡಿ, ನಂತರ ಭಾರತವು ಪಾಕಿಸ್ತಾನಕ್ಕೆ ಪ್ರಯಾಣಿಸುವುದಿಲ್ಲ ಎಂದು ಹೇಳಿಕೆಗಳನ್ನು ನೀಡುವುದೇಕೆ? ಭಾರತ ತಂಡ ಪಾಕಿಸ್ತಾನಕ್ಕೆ ಬರಲು ಸರ್ಕಾರ ಅವಕಾಶ ನೀಡುತ್ತಿಲ್ಲ ಎಂಬುದನ್ನು ನಾನು ಒಪ್ಪಿಕೊಳ್ಳುತ್ತೇನೆ. ಆದರೆ, ಅದರ ಆಧಾರದ ಮೇಲೆ ನಮ್ಮ ಆತಿಥ್ಯವನ್ನು ಕಿತ್ತುಕೊಳ್ಳುವುದು ಸರಿಯಲ್ಲ,” ಎಂದು ರಮೀಜ್‌ ಹೇಳಿದ್ದಾರೆ.

ಪಾಕಿಸ್ತಾನಕ್ಕೆ ತೆರಳಲು ಭಾರತ ತಂಡವನ್ನು ಮನವೊಲಿಸಲು ಪಿಸಿಬಿ ಏನು ಮಾಡುತ್ತದೆ? ಎಂಬ ಬಿಬಿಸಿಯ ಪ್ರಶ್ನೆಗೆ ಪ್ರತಿಕ್ರಿಯಿಸಿದ ರಮೀಜ್‌, “ಸಾಮಾನ್ಯ ಜ್ಞಾನ” ಎಂದು ಉತ್ತರಿಸಿದರು.

“ಭಾರತ ಮತ್ತು ಪಾಕಿಸ್ತಾನ ಆಡದಿದ್ದರೆ, ಅಲ್ಲಿ ಯಾವುದೇ ಮಜಾ ಇಲ್ಲ. ನಾನು ಅದನ್ನು ಹಲವು ಬಾರಿ ಪ್ರಸ್ತಾಪಿಸಿದ್ದೇನೆ. ನನಗೆ ಭಾರತದಲ್ಲಿ ಪ್ರತಿ ಬಾರಿಯೂ ಪ್ರೀತಿ ಸಿಕ್ಕಿದೆ. ನಾನು ಹಲವಾರು ಐಪಿಎಲ್ ಆವೃತ್ತಿಗಳಲ್ಲಿ ವೀಕ್ಷಕ ವಿವರಣೆಕಾರನಾಗಿ ಕೆಲಸ ಮಾಡಿದ್ದೇನೆ. ಭಾರತ ಮತ್ತು ಪಾಕ್‌ ಪಂದ್ಯಗಳನ್ನು ಅಭಿಮಾನಿಗಳು ನೋಡಲು ಬಯಸುತ್ತಾರೆ ಎಂದು ನನಗೆ ತಿಳಿದಿದೆ. ಇತ್ತೀಚೆಗ ನಡೆದ ವಿಶ್ವಕಪ್‌ನಲ್ಲಿ ಏನಾಯಿತು ಎಂದು ನೀವು ನೋಡಿದ್ದೀರಿ. 90,000 ಅಭಿಮಾನಿಗಳು MCG ಮೈದಾನದಲ್ಲಿ ಹಾಜರಿದ್ದರು” ಎಂದು, ಇಂಡೋ ಪಾಕ್‌ ಕದನದ ವೈಶಿಷ್ಟ್ಯದ ಬಗ್ಗೆ ರಮೀಜ್‌ ಮಾತನಾಡಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ