logo
ಕನ್ನಡ ಸುದ್ದಿ  /  ಕ್ರೀಡೆ  /  1960ರ ಸ್ಟೈಲ್‌ನಲ್ಲಿ ದೇಹದಾರ್ಢ್ಯ ಮಾಡಿದ್ರೆ ಹೇಗಿರುತ್ತೆ? ಜಿಮ್ ಕ್ಲಾಸ್ ಮರುಸೃಷ್ಟಿಸಿ ವರ್ಕೌಟ್ ಮಾಡಿದ ಬಾಡಿ ಬಿಲ್ಡ್ ಸಹೋದರರು

1960ರ ಸ್ಟೈಲ್‌ನಲ್ಲಿ ದೇಹದಾರ್ಢ್ಯ ಮಾಡಿದ್ರೆ ಹೇಗಿರುತ್ತೆ? ಜಿಮ್ ಕ್ಲಾಸ್ ಮರುಸೃಷ್ಟಿಸಿ ವರ್ಕೌಟ್ ಮಾಡಿದ ಬಾಡಿ ಬಿಲ್ಡ್ ಸಹೋದರರು

Raghavendra M Y HT Kannada

Aug 16, 2023 10:24 AM IST

ದಶಕಗಳ ಹಿಂದಿನ ಶೈಲಿಯಲ್ಲಿ ವರ್ಕೌಟ್ ಮಾಡಿ ಗಮನ ಸೆಳೆದ ಬಾಡಿ ಬಿಲ್ಡ್ ಸಹೋದರರು.

  • 1960 ಸ್ಟೈಲ್‌ನಲ್ಲಿ ದೇಹವನ್ನು ದಂಡಿಸಿದರೆ ಹೇಗಿರುತ್ತದೆ? ವರ್ಕೌಟ್ ಮಾಡಲು ಹಿಂದೆ ಏನೆಲ್ಲಾ ಮಾಡುತ್ತಿದ್ದರು ಎಂಬುದನ್ನು ಅರಿತ ಇಬ್ಬರು ಬಾಡಿ ಬಿಲ್ಡ್ ಸಹೋದರರು ಹಳೆಯ ಶೈಲಿನಲ್ಲಿ ವರ್ಕೌಟ್ ಮಾಡಿ ಗಮನ ಸೆಳೆದಿದ್ದಾರೆ.

ದಶಕಗಳ ಹಿಂದಿನ ಶೈಲಿಯಲ್ಲಿ ವರ್ಕೌಟ್ ಮಾಡಿ ಗಮನ ಸೆಳೆದ ಬಾಡಿ ಬಿಲ್ಡ್ ಸಹೋದರರು.
ದಶಕಗಳ ಹಿಂದಿನ ಶೈಲಿಯಲ್ಲಿ ವರ್ಕೌಟ್ ಮಾಡಿ ಗಮನ ಸೆಳೆದ ಬಾಡಿ ಬಿಲ್ಡ್ ಸಹೋದರರು.

ಜಿಮ್ ಮಾಡಲು ಇವತ್ತು ಸಾಕಷ್ಟು ಆಧುನಿಕ ತಂತ್ರಜ್ಞಾನದಿಂದ ಕೂಡಿದ ಉಪಕರಣಗಳಿವೆ. ಆದರೆ 60 ವರ್ಷಗಳ ಹಿಂದೆ ದೇಹವನ್ನು ದಂಡಿಸಲು ಏನೆಲ್ಲಾ ಮಾಡುತ್ತಿದ್ದರು. ಹೇಗೆ ಜಿಮ್ ಮಾಡುತ್ತಿದ್ದರು ಎಂಬುದರ ಕುತೂಹಲ ಹೆಚ್ಚಿಸಿಕೊಂಡಿದ್ದ ಇಬ್ಬರು ಬಾಡಿ ಬಿಲ್ಡ್ ಸಹೋದರರು 1960ರ ಸ್ಟೈಲ್‌ನಲ್ಲಿ ವರ್ಕೌಟ್ ಮಾಡಿ ಗಮನ ಸೆಳೆದಿದ್ದಾರೆ.

ಟ್ರೆಂಡಿಂಗ್​ ಸುದ್ದಿ

Bengaluru Weather: ಆರ್‌ಸಿಬಿ ಅಭಿಮಾನಿಗಳು ಚಿಂತಿಸಬೇಕಾದ್ದಿಲ್ಲ, ಚಿನ್ನಸ್ವಾಮಿ ಸ್ಟೇಡಿಯಂನಲ್ಲಿದೆ ಸಬ್‌ಏರ್‌ ಸಿಸ್ಟಮ್‌, ಏನದು

42 ವರ್ಷದ ಎಂಎಸ್‌ ಧೋನಿ ಫಿಟ್ನೆಸ್ ಸೀಕ್ರೆಟ್ ಏನು; ಕೂಲ್ ಕ್ಯಾಪ್ಟನ್ ಡಯಟ್, ವರ್ಕೌಟ್ ಪ್ಲಾನ್ ಹೀಗಿರುತ್ತೆ

RCB vs CSK IPL 2024: ಆರ್‌ಸಿಬಿ ವಿರುದ್ಧದ ಪಂದ್ಯಕ್ಕೆ ಸಿಎಸ್‌ಕೆ ರಣತಂತ್ರ; ಚೆನ್ನೈ ಸೂಪರ್ ಕಿಂಗ್ಸ್ ಆಡುವ ಸಂಭಾವ್ಯ 11ರ ಬಳಗ ಹೀಗಿದೆ

ತಂದೆ-ತಾಯಿಯೂ ಕ್ರೀಡಾಪಟುಗಳು, ಕೋಚ್​ ಮಗಳನ್ನೇ ಪಟಾಯಿಸಿದ್ರು; ಇದು ನಿವೃತ್ತಿ ಘೋಷಿಸಿದ ಸುನಿಲ್ ಛೆಟ್ರಿ ಲೈಫ್​ಸ್ಟೋರಿ

ಬಾಡಿ ಬಿಲ್ಡ್ ಸಹೋದರರಾದ ಬ್ರಾಂಡನ್ (Brandon) ಮತ್ತು ಹಡ್ಸನ್ ವೈಟ್ (Hudson White) ಅವರು 1960ರ ಜಿಮ್ ಕ್ಲಾಸ್, 1970ರ ಸ್ಟ್ರಾಂಗ್‌ಮ್ಯಾನ್ ಸ್ಪರ್ಧೆ ಹಾಗೂ 1930ರ ದಶಕದಲ್ಲಿ ದೇಹದಾರ್ಢ್ಯ ಕಲೆಗಳನ್ನು ಮರುಸೃಷ್ಟಿಸಿದ್ದಾರೆ.

ರೋಡ್ ವರ್ಕೌಟ್

ಹಳೆಯ ಶೈಲಿಯಲ್ಲಿ ವರ್ಕೌಟ್ ಮಾಡಿರುವ ಈ ಬಾಕ್ಸರ್‌ಗಳು ಮೊದಲು ರೋಡ್ ವರ್ಕ್ ಮಾಡಿದ್ದಾರೆ. ಅಂದರೆ ರಸ್ತೆಯಲ್ಲಿ ಓಡುವುದು. ಬರೋಬ್ಬರಿ 5 ಕಿಲೋ ಮೀಟರ್ ಓಡುವ ಮೂಲಕ ದೇಹವನ್ನು ದಂಡಿಸಿದ್ದು, ಇದರಿಂದಾಗುವ ಪ್ರಯೋಜನಗಳನ್ನು ವಿವರಿಸಿದ್ದಾರೆ. 20ನೇ ಶತಮಾನದಲ್ಲಿ ಬಾಕ್ಸರ್‌ಗಳು ರನ್ನಿಂಗ್ ವೇಳೆ ಬೂಟು ಹಾಗೂ ಧರಿಸುತ್ತಿದ್ದಂತಹ ಬಟ್ಟೆಗಳನ್ನು ಇವರು ಕೂಡ ಧರಿಸಿ ಓಡಿದ್ದಾರೆ. ಅಂತಿಮವಾಗಿ 5 ಕಿಲೋ ಮೀಟರ್ ಓಡುವುದು ಕೆಲಸ ಅಷ್ಟು ಸುಲಭವಲ್ಲ ಎಂದಿದ್ದಾರೆ.

ಮರ ಕಡಿಯುವುದು

ದೇಹವನ್ನು ದಂಡಿಸುಲು ಬಾಕ್ಸರ್‌ಗಳಿಗೆ ಈ ಹಿಂದೆ ಮರಗಳನ್ನು ಕಡಿಯುತ್ತಿದ್ದರು. ಫಿಟ್‌ನೆಸ್‌ಗೆ ಹೆಚ್ಚು ಜನಪ್ರಿಯವಾಗಿರುವ ಈ ವರ್ಟೌಕ್‌ಅನ್ನು ಟಿಂಬರ್ ಸ್ಪೋರ್ಟ್ಸ್ ಎನ್ನಲಾಗುತ್ತದೆ. ದೇಹದ ಭುಜಗಳನ್ನು ಅತ್ಯಂತ ಶಕ್ತಿಯುತವಾಗಿಸಲು ಮರ ಕಡಿಯುವ ತುಂಬಾ ಸಹಕಾರಿಯಾಗಿತ್ತು. ಮರವನ್ನು ಕಡಿಯುವ ಕೆಲಸವನ್ನೂ ಮಾಡಿದ ಹಡ್ಸನ್ ಮತ್ತುು ಬ್ರಾಂಡನ್ ಗರಗಸದಿಂದ ಮರವನ್ನು ಕಡಿಯುವ ಕೆಲಸವನ್ನು ಮಾಡಿದ್ದಾರೆ. ಇದರಿಂದ ಸಂಪೂರ್ಣವಾಗಿ ದೇಹಕ್ಕೆ ವ್ಯಾಯಾಮ ಆಗುತ್ತದೆ ಅಂತ ಹೇಳಿದ್ದಾರೆ.

ಗುಂಡಿ ಅಗೆಯುವುದು

ರಸ್ತೆಯಲ್ಲಿ ಓಡುವುದು, ಮರ ಕಡಿದ ನಂತರ ಗುಂಡಿ ಅಗೆಯುವ ಕೆಲಸ ಮಾಡಿದ್ದಾರೆ. ಸುಮಾರು 30 ನಿಮಿಷಗಳ ಕಾಲ ಗುಂಡಿ ಅಗೆಯುವುದರಿಂದ ದೇಹ ಮತ್ತಷ್ಟು ಗಟ್ಟಿಯಾಗುತ್ತದೆ ಎಂಬುದನ್ನು ಅರಿತಿದ್ದಾರೆ. ಈ ವರ್ಕೌಟ್‌ನಲ್ಲಿ ನಾನು ಅಕ್ಷರಶಃ ಭೂಮಿಯೊಂದಿಗೆ ಹೋರಾಡುತ್ತಿದ್ದೇವೆ ಎಂದು ಅನಿಸಿತು. ಕೊನೆಗೆ ಭೂಮಿಯೇ ಗೆದ್ದಿತು ಎಂದು ಹಡ್ಸನ್ ಹೇಳಿದ್ದಾರೆ.

ಜಂಪ್ ರೋಪ್

ಜಂಪ್ ರೋಪ್ ಕ್ರೀಡೆಯಲ್ಲಿ ಪ್ರಮುಖವಾಗಿದೆ. ಬ್ರಾಂಡನ್ ಮತ್ತು ಹಡ್ಸನ್ ಸ್ಕಿಪ್ಪಿಂಗ್ ಅನ್ನು ಮಾತ್ರ ಸುಲಭವಾಗಿ ಮುಗಿಸಿದ್ದಾರೆ. ಈ ವರ್ಕೌಟ್‌ನಲ್ಲಿ ಇಬ್ಬರು ಚೆನ್ನಾಗಿ ಬೆವರಿಳಿಸಿದ್ದಾರೆ.

ಮೆಡಿಸಿನ್ ಬಾಲ್ ಫೈಟ್

ಇದು ಇಬ್ಬರು ಸಹೋದರರಿಗೆ ತುಂಬಾ ಕಠಿಣ ಎಣಿಸಿದೆ. ಬಾಲಿನ ಮೇಲೆ ನನ್ನ ಹೊಟ್ಟೆ ಬಿದ್ದಾಗಲೆಲ್ಲಾ ತುಂಬಾ ನೋವು ಆಗುತ್ತಿತ್ತು. ಮೆಡಿಸಿನ್ ಬಾಲ್ ಫೈಟ್‌ನಲ್ಲಿ ತುಂಬಾ ಹೊಡೆತ ಬಿತ್ತು. ದಣಿದ ಅನುಭವ ಹಾಗೂ ನಮಗೂ ವಯಸ್ಸಾಗಿದೆ ಎಂದು ಈ ವರ್ಕೌಟ್‌ನಲ್ಲಿ ಗೊತ್ತಾಗಿದೆ ಎಂದು ಹೇಳಿದ್ದಾರೆ.

ಸದ್ಯ ಸಹೋದರರ ಈ ಹಳೆಯ ವರ್ಕೌಟ್ ವಿಡಿಯೊವನ್ನು ಯೂಟ್ಯೂಬ್‌ನಲ್ಲಿ 9 ದಿನಗಳ ಹಿಂದೆ ಅಪ್ಲೋಡ್ ಮಾಡಲಾಗಿದ್ದು, 52 ಸಾವಿರ ವೀಕ್ಷಣೆಗಳನ್ನು ಪಡೆದಿದೆ. . ಬ್ರಾಂಡನ್ ಮತ್ತು ಹಡ್ಸನ್ ಓಲ್ಡ್ ಸ್ಟೈಲ್ ವರ್ಕೌಟ್ ಹೇಗಿತ್ತು ಅನ್ನೋದನ್ನು ಈ ಕೆಳಗಿನ ವಿಡಿಯೊದಲ್ಲಿ ನೋಡಿ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ