logo
ಕನ್ನಡ ಸುದ್ದಿ  /  ಕ್ರೀಡೆ  /  Jasprit Bumrah: ನ್ಯೂಜಿಲ್ಯಾಂಡ್‌ನಲ್ಲಿ ಬುಮ್ರಾ ಬೆನ್ನಿನ ಶಸ್ತ್ರಚಿಕಿತ್ಸೆ ಯಶಸ್ವಿ; ಮತ್ತೆ 6 ತಿಂಗಳ ಕಾಲ ಆಡೋದು ಅನುಮಾನ

Jasprit Bumrah: ನ್ಯೂಜಿಲ್ಯಾಂಡ್‌ನಲ್ಲಿ ಬುಮ್ರಾ ಬೆನ್ನಿನ ಶಸ್ತ್ರಚಿಕಿತ್ಸೆ ಯಶಸ್ವಿ; ಮತ್ತೆ 6 ತಿಂಗಳ ಕಾಲ ಆಡೋದು ಅನುಮಾನ

HT Kannada Desk HT Kannada

Mar 08, 2023 10:11 PM IST

ಜಸ್ಪ್ರೀತ್‌ ಬುಮ್ರಾ

  • ಕ್ರೈಸ್ಟ್‌ಚರ್ಚ್‌ನಲ್ಲಿ ಶಸ್ತ್ರಚಿಕಿತ್ಸೆಯನ್ನು ಪೂರ್ಣಗೊಳಿಸಿದ ನಂತರ, ಈ ವರ್ಷದ ಕೊನೆಯಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ಗೆ ಮುಂಚಿತವಾಗಿ ಬುಮ್ರಾ ತಂಡಕ್ಕೆ ಪುನರಾಗಮನ ಮಾಡುವ ಭರವಸೆಯಲ್ಲಿದ್ದಾರೆ.

ಜಸ್ಪ್ರೀತ್‌ ಬುಮ್ರಾ
ಜಸ್ಪ್ರೀತ್‌ ಬುಮ್ರಾ (Reuters)

ಭಾರತ ತಂಡದ ವೇಗಿ ಜಸ್ಪ್ರೀತ್ ಬುಮ್ರಾ ಅವರು ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ (IPL) 2023ರ ಆವೃತ್ತಿಗೂ ಮುಂಚಿತವಾಗಿ ನ್ಯೂಜಿಲ್ಯಾಂಡ್‌ನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ನಿರಂತರ ಬೆನ್ನುನೋವಿನ ಸಮಸ್ಯೆಗಳಿಂದಾಗಿ ಬುಮ್ರಾ ಅವರು ಶಸ್ತ್ರಚಿಕಿತ್ಸೆಯನ್ನು ಪೂರ್ಣಗೊಳಿಸಿದ್ದಾರೆ. ಸದ್ಯ ಬುಮ್ರಾ ಅವರ ಸರ್ಜರಿ ಯಶಸ್ವಿಯಾಗಿದೆ. ಆದರೂ, ವೇಗದ ಬೌಲರ್‌ ಮುಂದಿನ ಸುಮಾರು ಆರು ತಿಂಗಳ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ಹೊರಗುಳಿಯಬೇಕಾಗಿದೆ.

ಟ್ರೆಂಡಿಂಗ್​ ಸುದ್ದಿ

ತಂದೆ-ತಾಯಿಯೂ ಕ್ರೀಡಾಪಟುಗಳು, ಕೋಚ್​ ಮಗಳನ್ನೇ ಪಟಾಯಿಸಿದ್ರು; ಇದು ನಿವೃತ್ತಿ ಘೋಷಿಸಿದ ಸುನಿಲ್ ಛೆಟ್ರಿ ಲೈಫ್​ಸ್ಟೋರಿ

ಅಂತಾರಾಷ್ಟ್ರೀಯ ಫುಟ್ಬಾಲ್​ಗೆ ಕಾಲ್ಚೆಂಡಿನ ಚತುರ ಸುನಿಲ್ ಛೆಟ್ರಿ ನಿವೃತ್ತಿ; ಈ ದಿನವೇ ದಿಗ್ಗಜ ಆಟಗಾರನ ಕೊನೆಯ ಪಂದ್ಯ

ಫೆಡರೇಶನ್ ಕಪ್‌ನಲ್ಲಿ ಬಂಗಾರ ಗೆದ್ದ ನೀರಜ್‌ ಚೋಪ್ರಾ; ಕೂದಲೆಳೆ ಅಂತರದಲ್ಲಿ ಬೆಳ್ಳಿಗೆ ತೃಪ್ತಿ ಪಟ್ಟ ಡಿಪಿ ಮನು

ರೆಸ್ಲರ್ ಅಮನ್ ಸೆಹ್ರಾವತ್​ಗೆ ಪ್ಯಾರಿಸ್ ಒಲಿಂಪಿಕ್ಸ್​ ಟಿಕೆಟ್; ಮೊದಲ ಬಾರಿಗೆ ಐವರು ಮಹಿಳಾ ಕುಸ್ತಿಪಟುಗಳು ಅರ್ಹತೆ

ಬೆನ್ನು ನೋವಿನಿಂದಾಗಿ ಕಳೆದ ವರ್ಷ ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವಕಪ್ ಅನ್ನು ಬುಮ್ರಾ ಕಳೆದುಕೊಂಡಿದ್ದರು. ಅದಕ್ಕೂ ಮುನ್ನ ನಡೆದ ಏಷ್ಯಾಕಪ್ ಟೂರ್ನಿಯನ್ನು ಕೂಡಾ ಸ್ಟಾರ್ ವೇಗಿ ಮಿಸ್‌ ಮಾಡಿಕೊಂಡಿದ್ದರು.

29 ವರ್ಷದ ಅನುಭವಿ ಯುವ ವೇಗಿ, ಟೀಮ್ ಇಂಡಿಯಾದಲ್ಲಿ 2022ರ ಸೆಪ್ಟೆಂಬರ್ ತಿಂಗಳಲ್ಲಿ ಕೊನೆಯ ಬಾರಿಗೆ ಆಡಿದ್ದರು. ಆ ಬಳಿಕ ಯಾವುದೇ ಟೂರ್ನಿಗೂ ಅವರು ಆಯ್ಕೆಯಾಗಿಲ್ಲ. ಒಂದು ಬಾರಿ ಸರಣಿಗೆ ಆಯ್ಕೆಯಾದರೂ, ಅದರ ಬೆನ್ನಲ್ಲೇ ಅವರನ್ನು ತಂಡದಿಂದ ಹೊರಗಿಡಲಾಯ್ತು. ಬೆನ್ನು ನೋವಿನಿಂದ ಚೇತರಿಸುವ ಸಲುವಾಗಿ ಈ ವರ್ಷದ ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್‌ನ ಸಂಪೂರ್ಣ ಆವೃತ್ತಿಯನ್ನು ಬುಮ್ರಾ ಕಳೆದುಕೊಳ್ಳಲಿದ್ದಾರೆ.

ನ್ಯೂಜಿಲ್ಯಾಂಡ್‌ನ ಕ್ರೈಸ್ಟ್‌ಚರ್ಚ್‌ನಲ್ಲಿ ಶಸ್ತ್ರಚಿಕಿತ್ಸೆಯನ್ನು ಪೂರ್ಣಗೊಳಿಸಿದ ನಂತರ, ಈ ವರ್ಷದ ಕೊನೆಯಲ್ಲಿ ನಡೆಯಲಿರುವ ಏಕದಿನ (ODI) ವಿಶ್ವಕಪ್‌ಗೆ ಮುಂಚಿತವಾಗಿ ಬುಮ್ರಾ ತಂಡಕ್ಕೆ ಪುನರಾಗಮನ ಮಾಡುವ ಭರವಸೆಯಲ್ಲಿದ್ದಾರೆ. ಸುದ್ದಿ ಸಂಸ್ಥೆ ಪಿಟಿಐ ವರದಿ ಪ್ರಕಾರ, ವೇಗಿ ಆರು ತಿಂಗಳವರೆಗೆ ಕ್ರಿಕೆಟ್‌ ಆಡಲು ಲಭ್ಯವಿರುವುದಿಲ್ಲ. ಹೀಗಾಗಿ ಭಾರತದ ವೇಗಿ 2023ರ ಏಷ್ಯಾಕಪ್‌ನಿಂದ ಹೊರಗುಳಿಯುವ ಸಾಧ್ಯತೆ ಇದೆ.

ಬುಮ್ರಾ ಅವರ ಶಸ್ತ್ರಚಿಕಿತ್ಸೆಯನ್ನು ಮೂಳೆ ಶಸ್ತ್ರಚಿಕಿತ್ಸಕ ಡಾ ರೋವನ್ ಸ್ಚೌಟೆನ್ ಅವರು ಯಶಸ್ವಿಯಾಗಿ ನಡೆಸಿದ್ದಾರೆ ಎಂದು ವರದಿ ತಿಳಿಸಿದೆ. ಕೆಳ ಬೆನ್ನಿನಲ್ಲಿನ ಒತ್ತಡದ ಪ್ರತಿಕ್ರಿಯೆಯನ್ನು ವಿಂಗಡಿಸಲು ಸ್ಟಾರ್ ವೇಗಿ ದೀರ್ಘಕಾಲದವರೆಗೆ ಪುನರ್ವಸತಿಗೆ ಒಳಗಾಗಿದ್ದಾರೆ.

ಪುನರಾವರ್ತಿತ ಬೆನ್ನುನೋವಿನ ಕಾರಣದಿಂದ, ಕಳೆದ ವರ್ಷ ನಡೆದ ಏಷ್ಯಾಕಪ್‌ಗೆ ಭಾರತ ತಂಡದಲ್ಲಿ ಬುಮ್ರಾ ಅವರನ್ನು ಹೆಸರಿಸಲಾಗಿಲ್ಲ. ಟಿ20 ವಿಶ್ವಕಪ್‌ಗೆ ಮುಂಚಿತವಾಗಿ ಭಾರತದಲ್ಲಿ ನಡೆದ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗೆ ಬುಮ್ರಾ ಆಯ್ಕೆಯಾಗಿದ್ದರು. ಆಸ್ಟ್ರೇಲಿಯಾ ವಿರುದ್ಧದ ಟಿ20 ಪಂದ್ಯದಲ್ಲಿ ಕಾಣಿಸಿಕೊಂಡ‌ ಅವರು, ಬಳಿಕ ಬೆನ್ನುನೋವಿನಿಂದ ಸರಣಿಯಿಂದ ಹೊರಗುಳಿದರು. ದಕ್ಷಿಣ ಆಫ್ರಿಕಾ ಏಕದಿನ ಹಾಗೂ ಟಿ20 ವಿಶ್ವಕಪ್‌ನಿಂದ ಹೊರಗುಳಿದ ನಂತರ ಬುಮ್ರಾ ಶ್ರೀಲಂಕಾ ವಿರುದ್ಧದ ಸರಣಿಗಾಗಿ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದರು. ಆದರೆ, ಮತ್ತೆ ಬೆನ್ನು ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸರಣಿ ಆರಂಭಕ್ಕೂ ಮುನ್ನವೇ ಅವರನ್ನು ಮತ್ತೆ ತಂಡದಿಂದ ಕೈಬಿಡಲಾಯಿತು.

ಅನುಭವಿ ವೇಗಿ ಟೀಮ್ ಇಂಡಿಯಾ ಪರ 30 ಟೆಸ್ಟ್, 72 ಏಕದಿನ ಮತ್ತು 60 ಟಿ20 ಪಂದ್ಯಗಳನ್ನು ಆಡಿದ್ದಾರೆ. 2016 ರಲ್ಲಿ ಸಿಡ್ನಿ ಕ್ರಿಕೆಟ್ ಗ್ರೌಂಡ್ (SCG)ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಅಂತಾರಾಷ್ಟ್ರೀಯ ತಂಡಕ್ಕೆ ಅವರಯ ಪದಾರ್ಪಣೆ ಮಾಡಿದ್ದರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ