logo
ಕನ್ನಡ ಸುದ್ದಿ  /  ಕ್ರೀಡೆ  /  Ramiz Raja On Shubman Gill: 'ಕೊಹ್ಲಿ ನಂತರ ಉತ್ತಮ ಬ್ಯಾಟರ್ ಅವನೇ, ಆತನಿಗೆ ಆಕಾಶವೇ ಮಿತಿ'

Ramiz Raja On Shubman Gill: 'ಕೊಹ್ಲಿ ನಂತರ ಉತ್ತಮ ಬ್ಯಾಟರ್ ಅವನೇ, ಆತನಿಗೆ ಆಕಾಶವೇ ಮಿತಿ'

Jayaraj HT Kannada

Apr 15, 2023 04:18 PM IST

ವಿರಾಟ್ ಕೊಹ್ಲಿ, ರಮೀಜ್ ರಾಜಾ, ಶುಬ್ಮನ್ ಗಿಲ್

    • ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಗಿಲ್ ಅವರ ಬ್ಯಾಟಿಂಗ್‌ ನೋಡಿ ಪಾಕಿಸ್ತಾನದ ಮಾಜಿ ನಾಯಕ ರಮೀಜ್ ರಾಜಾ ಸಂತಸ ವ್ಯಕ್ತಪಡಿಸಿದ್ದಾರೆ. ಕ್ರಿಕೆಟ್‌ನ ಎಲ್ಲಾ ಸ್ವರೂಪಗಳಲ್ಲಿ ಭಾರತದ ಮುಂದಿನ ಅಗ್ರ ಬ್ಯಾಟರ್ ಆಗಿ ವಿರಾಟ್ ಕೊಹ್ಲಿಯ ನಂತರ ಆ ಸ್ಥಾನ ತುಂಬಬಹುದು ಎಂಬ ಅಭಿಪ್ರಾಯವನ್ನು ಒಪ್ಪಿಕೊಂಡಿದ್ದಾರೆ.
ವಿರಾಟ್ ಕೊಹ್ಲಿ, ರಮೀಜ್ ರಾಜಾ, ಶುಬ್ಮನ್ ಗಿಲ್
ವಿರಾಟ್ ಕೊಹ್ಲಿ, ರಮೀಜ್ ರಾಜಾ, ಶುಬ್ಮನ್ ಗಿಲ್ (PTI/YouTube)

ಗುಜರಾತ್ ಟೈಟಾನ್ಸ್ ತಂಡವು ಗುರುವಾರ ನಡೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ರೋಚಕ ಜಯ ಸಾಧಿಸಿತು. ಇದು ಈ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಹಾಲಿ ಚಾಂಪಿಯನ್‌ಗಳ ಮೂರನೇ ಗೆಲುವು. 154 ರನ್‌ಗಳ ಸಾಧಾರಣ ಗುರಿ ಬೆನ್ನಟ್ಟಿದ ಟೈಟಾನ್ಸ್, ಅಂತಿಮ ಹಂತದಲ್ಲಿ ಬ್ಯಾಟ್‌ ಬೀಸಲು ತಿಣುಕಾಡಿತು. ಕೊನೆಯ ಎರಡು ಎಸೆತಗಳಲ್ಲಿ ಟೈಟಾನ್ಸ್ ಗೆಲ್ಲಲು ನಾಲ್ಕು ರನ್‌ ಅಗತ್ಯವಿದ್ದಾಗ, ಬೌಂಡರಿ ಬಾರಿಸುವ ಮೂಲಕ ರಾಹುಲ್ ತೆವಾಟಿಯಾ ತಂಡಕ್ಕೆ ಗೆಲುವು ತಂದುಕೊಟ್ಟರು.

ಟ್ರೆಂಡಿಂಗ್​ ಸುದ್ದಿ

42 ವರ್ಷದ ಎಂಎಸ್‌ ಧೋನಿ ಫಿಟ್ನೆಸ್ ಸೀಕ್ರೆಟ್ ಏನು; ಕೂಲ್ ಕ್ಯಾಪ್ಟನ್ ಡಯಟ್, ವರ್ಕೌಟ್ ಪ್ಲಾನ್ ಹೀಗಿರುತ್ತೆ

RCB vs CSK IPL 2024: ಆರ್‌ಸಿಬಿ ವಿರುದ್ಧದ ಪಂದ್ಯಕ್ಕೆ ಸಿಎಸ್‌ಕೆ ರಣತಂತ್ರ; ಚೆನ್ನೈ ಸೂಪರ್ ಕಿಂಗ್ಸ್ ಆಡುವ ಸಂಭಾವ್ಯ 11ರ ಬಳಗ ಹೀಗಿದೆ

ತಂದೆ-ತಾಯಿಯೂ ಕ್ರೀಡಾಪಟುಗಳು, ಕೋಚ್​ ಮಗಳನ್ನೇ ಪಟಾಯಿಸಿದ್ರು; ಇದು ನಿವೃತ್ತಿ ಘೋಷಿಸಿದ ಸುನಿಲ್ ಛೆಟ್ರಿ ಲೈಫ್​ಸ್ಟೋರಿ

ಅಂತಾರಾಷ್ಟ್ರೀಯ ಫುಟ್ಬಾಲ್​ಗೆ ಕಾಲ್ಚೆಂಡಿನ ಚತುರ ಸುನಿಲ್ ಛೆಟ್ರಿ ನಿವೃತ್ತಿ; ಈ ದಿನವೇ ದಿಗ್ಗಜ ಆಟಗಾರನ ಕೊನೆಯ ಪಂದ್ಯ

ಆರಂಭಿಕ ಆಟಗಾರ ಶುಬ್ಮನ್ ಗಿಲ್, 49 ಎಸೆತಗಳಲ್ಲಿ 7 ಬೌಂಡರಿ ಮತ್ತು ಒಂದು ಸಿಕ್ಸರ್‌ ಸಹಿತ 67 ರನ್ ಗಳಿಸಿದರು. ಇದು ತಂಡದ ಪರ ದಾಖಲಾದ ಉತ್ತಮ ಪ್ರದರ್ಶನ. ಒಂದು ಕಡೆಯಿಂದ ವಿಕೆಟ್‌ಗಳು ಬೀಳುತ್ತಲೇ ಇದ್ದಾಗ, ಗಿಲ್ ಮತ್ತೊಂದು ಬದಿಯಲ್ಲಿ ವಿಕೆಟ್‌ ಉಳಿಸಿಕೊಂಡು ಉತ್ತಮ ರನ್‌ ಕಲೆ ಹಾಕಿದರು. ಸಾಯಿ ಸುದರ್ಶನ್ 20 ಎಸೆತಗಳಲ್ಲಿ 19 ರನ್‌ ಗಳಿಸಿದರೆ, ಹಾರ್ದಿಕ್ ಪಾಂಡ್ಯ 11 ಎಸೆತಗಳಲ್ಲಿ 8 ರನ್‌ ಪೇರಿಸಿದರು. ಡೇವಿಡ್ ಮಿಲ್ಲರ್ 18 ಎಸೆತಗಳಲ್ಲಿ ಅಜೇಯ 17 ರನ್ ಗಳಿಸಿದರು. ಇತ್ತ ಗಿಇಲ್‌ ಮಾತ್ರ ಬೌಲರ್‌ಗಳನ್ನು ದಂಡಿಸುತ್ತಾ ಬಂದರು.

ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಗಿಲ್ ಅವರ ಬ್ಯಾಟಿಂಗ್‌ ನೋಡಿ ಪಾಕಿಸ್ತಾನದ ಮಾಜಿ ನಾಯಕ ರಮೀಜ್ ರಾಜಾ ಸಂತಸ ವ್ಯಕ್ತಪಡಿಸಿದ್ದಾರೆ. ಕ್ರಿಕೆಟ್‌ನ ಎಲ್ಲಾ ಸ್ವರೂಪಗಳಲ್ಲಿ ಭಾರತದ ಮುಂದಿನ ಅಗ್ರ ಬ್ಯಾಟರ್ ಆಗಿ ವಿರಾಟ್ ಕೊಹ್ಲಿಯ ನಂತರ ಆ ಸ್ಥಾನ ತುಂಬಬಹುದು ಎಂಬ ಅಭಿಪ್ರಾಯಕ್ಕೆ ರಾಜಾ ಒಪ್ಪಿಗೆ ವ್ಯಕ್ತಪಡಿಸಿದ್ದಾರೆ.

“ಅವನಲ್ಲಿ ತುಂಬಾ ಸಾಮರ್ಥ್ಯವಿದೆ, ಅಲ್ಲದೆ ಅವನಿಗೆ ತುಂಬಾ ಸಮಯವೂ ಇದೆ. ಅವನು ಆಟ ತುಂಬಾ ನೈಸರ್ಗಿಕವಾಗಿದ್ದು, ನೋಡಲು ಖುಷಿಯಾಗುತ್ತದೆ. ಅವನು ಡ್ರೈವ್‌ ಆಡುವಾಗ, ಆ ಶಾಟ್‌ನಲ್ಲಿ ಕರ್ವ್ ಇರುತ್ತದೆ. ಸ್ಟ್ರೋಕ್‌ಗಳನ್ನು ಆಡಲು ಸಾಕಷ್ಟು ಸಮಯ ಇರುತ್ತದೆ. ಅವನು ಆಫ್ ಸೈಡ್, ಆನ್ ಸೈಡ್, ಹುಕ್ ಅಥವಾ ಪುಲ್‌ನಲ್ಲಿ ಸ್ಕೋರ್ ಮಾಡಿದರೂ, ಅದು ತುಂಬಾ ಸುಂದರ ಮತ್ತು ಅಚ್ಚುಕಟ್ಟಾಗಿರುತ್ತದೆ. ವಿರಾಟ್ ಕೊಹ್ಲಿ ನಂತರ ಗಿಲ್ ಮುಂದಿನ ಅತ್ಯುತ್ತಮ ಬ್ಯಾಟ್ಸ್‌ಮನ್ ಆಗಬಹುದು ಎಂದು ಹಲವರು ಭವಿಷ್ಯ ನುಡಿದಿದ್ದಾರೆ. ಈತನ ಆಟದಲ್ಲಿ ರೋಹಿತ್ ಶರ್ಮಾ ಅವರಂತೆ ಉತ್ತಮ ಸ್ಪರ್ಶ, ಕ್ಲಾಸ್ ಮತ್ತು ಸೊಬಗು‌ ಕಾಣುತ್ತದೆ. ಅಲ್ಲದೆ ಆತನ ಮನೋಧರ್ಮ ಸಾಕಷ್ಟು ಪ್ರಬಲವಾಗಿದೆ” ಎಂದು ರಾಜಾ ತಮ್ಮ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿದ್ದಾರೆ.

"ಟೆಸ್ಟ್, ಏಕದಿನ ಮತ್ತು ಟಿ20ಗಳಲ್ಲೂ ಗಿಲ್ ಬೌಲರ್‌ಗಳನ್ನು ಕಾಡಿದ್ದಾರೆ. ಅವನನ್ನು ನೋಡಿದಾಗ ಸಮಯವು ನಿಂತುಹೋಗಿದೆ ಎಂದು ತೋರುತ್ತದೆ. ಚಿಕ್ಕ ವಯಸ್ಸಿನಲ್ಲಿ, ಆತ ಹಲವು ದಾಖಲೆಗಳನ್ನು ನಿರ್ಮಿಸಿದ್ದಾನೆ. ಆತನಿಗೆ ಆಕಾಶವೇ ಮಿತಿ" ಎಂದು ಹಾಡಿ ಹೊಗಳಿದ್ದಾರೆ.

ಪ್ರಸ್ತುತ ನಡೆಯುತ್ತಿರುವ ಆವೃತ್ತಿಯಲ್ಲಿ ನಾಲ್ಕು ಪಂದ್ಯಗಳಲ್ಲಿ 183 ರನ್ ಗಳಿಸುವ ಮೂಲಕ ಗಿಲ್ ಅತಿ ಹೆಚ್ಚು ರನ್ ಗಳಿಸಿದವರ‌ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ