logo
ಕನ್ನಡ ಸುದ್ದಿ  /  Sports  /  Royal Challengers Bangalore Women Vs Gujarat Giants Match Preview

Women's Premier League: ಇಂದು ವೀಕೆಂಡ್ ಡಬಲ್ ಧಮಾಕಾ; ಎರಡನೇ ಪಂದ್ಯದಲ್ಲಿ ಗುಜರಾತ್-ಬೆಂಗಳೂರು ಮುಖಾಮುಖಿ

HT Kannada Desk HT Kannada

Mar 18, 2023 11:45 AM IST

ರಾಯಲ್ ಚಾಲೆಂಜರ್ಸ್ ಬೆಂಗಳೂರು

    • ಇಂದಿನ ಪಂದ್ಯವು ಉಭಯ ತಂಡಗಳಿಗೂ ಮಾಡು ಇಲ್ಲವೇ ಮಡಿ ಎಂಬಂತಾಗಿದೆ. ಟೂರ್ನಿಯಲ್ಲಿ ಉಳಿಯಲು ಎರಡೂ ತಂಡಗಳಿಗೆ ಗೆಲುವು ಅನಿವಾರ್ಯ. ಅದರಲ್ಲೂ, ಇಂದಿನ ಪಂದ್ಯದಲ್ಲಿ ಸೋತರೆ ಆರ್‌ಸಿಬಿ ಟೂರ್ನಿಯಿಂದ ಹೊರಬೀಳಲಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು
ರಾಯಲ್ ಚಾಲೆಂಜರ್ಸ್ ಬೆಂಗಳೂರು (PTI)

ವಿಮೆನ್ಸ್‌ ಪ್ರೀಮಿಯರ್‌ ಲೀಗ್‌ನಲ್ಲಿ ಇಂದು ಡಬಲ್‌ ಧಮಾಕಾ. ವೀಕೆಂಡ್‌ ಎಂಜಾಯ್‌ ಮಾಡುವವರಿಗೆ ಇಂದು ಮಧ್ಯಾಹ್ನದ ಬಳಿಕ ಕ್ರಿಕೆಟ್‌ ಹಬ್ಬವನ್ನು ಸವಿಯುವ ಅವಕಾಶವಿದೆ. ಡಬ್ಲ್ಯೂಪಿಎಲ್‌ನಲ್ಲಿ ಇಂದು ಎರಡು ಪಂದ್ಯಗಳು ನಡೆಯುತ್ತಿದ್ದು, ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ಗೆ ಯುಪಿ ವಾರಿಯರ್ಸ್‌ ಸವಾಲೊಡ್ಡಲಿದೆ.

ಟ್ರೆಂಡಿಂಗ್​ ಸುದ್ದಿ

ನಾನು ಹೇಳಿದ್ದು ತುಂಬಾ ಕಡಿಮೆ, ಆದರೂ ನಾನು ಮೌನಿಯಾಗಿದ್ದೇನೆ; ಸಾನಿಯಾ ಮಿರ್ಜಾ ಪೋಸ್ಟ್​ನ ಅರ್ಥವೇನು?

ದೇಶಕ್ಕಾಗಿ ಪದಕ ಗೆಲ್ಲುವುದೇ ನನ್ನ ಗುರಿ; ಅದಕ್ಕಾಗಿ ತೂಕ ಕಾಪಾಡಿಕೊಳ್ಳಬೇಕು ಎಂದ ವಿನೇಶ್ ಫೋಗಟ್

ಪ್ಯಾರಿಸ್ ಒಲಿಂಪಿಕ್ಸ್​ಗೆ ಅರ್ಹತೆ ಗಳಿಸಿದ ಭಾರತದ 7 ಷಟ್ಲರ್​​ಗಳು; ಅರ್ಹತೆ; ಕನ್ನಡತಿ ಅಶ್ವಿನಿ ಪೊನ್ನಪ್ಪ, ಪಿವಿ ಸಿಂಧುಗೆ ಅವಕಾಶ

1900 ರಿಂದ 2020ರ ತನಕ; 120 ವರ್ಷಗಳ ಒಲಿಂಪಿಕ್ಸ್ ಇತಿಹಾಸದಲ್ಲಿ ಭಾರತ ಗೆದ್ದಿರುವ ಪದಕಗಳೆಷ್ಟು? ವರ್ಷವಾರು ಒಂದು ನೋಟ

ಮುಂಬೈನ ಬ್ರಬೋರ್ನ್ ಸ್ಟೇಡಿಯಂನಲ್ಲಿ ಇಂದು ನಡೆಯಲಿರುವ ಎರಡನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಗುಜರಾತ್ ಜೈಂಟ್ಸ್ ಅನ್ನು ಎದುರಿಸುತ್ತಿದೆ. ಸ್ಮೃತಿ ಮಂಧಾನ ನೇತೃತ್ವದ ಆರ್‌ಸಿಬಿ, ಆಡಿದ ಆರು ಪಂದ್ಯಗಳಲ್ಲಿ ಕೇವಲ ಒಂದನ್ನು ಮಾತ್ರ ಗೆದ್ದಿದೆ. ಯುಪಿ ವಿರುದ್ಧದ ತನ್ನ ಕೊನೆಯ ಪಂದ್ಯ ಗೆದ್ದ ಬೆಂಗಳೂರು, ಎರಡು ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಈ ನಡುವೆ, ಗುಜರಾತ್ ಜೈಂಟ್ಸ್ ಆರು ಪಂದ್ಯಗಳಿಂದ ನಾಲ್ಕು ಅಂಕಗಳೊಂದಿಗೆ ಐದು ತಂಡಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಸ್ನೇಹಾ ರಾಣಾ ನೇತೃತ್ವದ ತಂಡವು ತಮ್ಮ ಹಿಂದಿನ ಪಂದ್ಯದಲ್ಲಿ ಎರಡನೇ ಸ್ಥಾನದಲ್ಲಿರುವ ಡೆಲ್ಲಿ ವಿರುದ್ಧ 11 ರನ್‌ಗಳ ಅಂತರದಿಂದ ಜಯಗಳಿಸಿತ್ತು. ‌

ಇಂದಿನ ಪಂದ್ಯವು ಉಭಯ ತಂಡಗಳಿಗೂ ಮಾಡು ಇಲ್ಲವೇ ಮಡಿ ಎಂಬಂತಾಗಿದೆ. ಟೂರ್ನಿಯಲ್ಲಿ ಉಳಿಯಲು ಎರಡೂ ತಂಡಗಳಿಗೆ ಗೆಲುವು ಅನಿವಾರ್ಯ. ಅದರಲ್ಲೂ, ಇಂದಿನ ಪಂದ್ಯದಲ್ಲಿ ಸೋತರೆ ಆರ್‌ಸಿಬಿ ಟೂರ್ನಿಯಿಂದ ಹೊರಬೀಳಲಿದೆ. ಒಂದು ವೇಳೆ ಗೆದ್ದರೂ, ಅದೃಷ್ಟ ಪರೀಕ್ಷೆಗೆ ಒಳಗಾಗಲಿದೆ. ಹೀಗಾಗಿ ಮುಂದಿನ ಹಂತವನ್ನು ಪ್ರವೇಶಿಸುವ ಉದ್ದೇಶದಿಂದ ಆರ್‌ಸಿಬಿಯು ಈ ಪಂದ್ಯವನ್ನು ಬೃಹತ್‌ ಅಂತರದಿಂದ ಗೆಲ್ಲಬೇಕಿದೆ.

ಕಳೆದ ಪಂದ್ಯದಲ್ಲಿ ಡೆಲ್ಲಿ ವಿರುದ್ಧ ಗುಜರಾತ್ ಗೆದ್ದಿತ್ತು. ಈ​ ಗೆಲುವು ಆರ್‌ಸಿಬಿಯ ಪ್ಲೇ ಆಫ್​ ಕನಸಿಗೆ ಅಡ್ಡಿಯಾಗಿದೆ. ಒಂದು ವೇಳೆ ಅಲ್ಲಿ ಗುಜರಾತ್‌ ಸೋತಿದ್ದರೆ, ಬೆಂಗಳೂರು ಅದೃಷ್ಟ ಪರೀಕ್ಷೆ ಸುಲಭವಾಗುತ್ತಿತ್ತು. ಹೀಗಾಗಿ ಸದ್ಯ ಬೆಂಗಳೂರು ತನ್ನ ಮುಂದಿರುವ ಎರಡೂ ಪಂದ್ಯಗಳನ್ನು ಗೆಲ್ಲಲೇಬೇಕಿದೆ. ಅದರೊಂದಿಗೆ ಯುಪಿ ಹಾಗೂ ಗುಜರಾತ್‌ ಎಲ್ಲಾ ಪಂದ್ಯಗಳನ್ನು ಸೋಲಬೇಕಿದೆ. ಹೀಗಾಗಿ ಆರ್‌ಸಿಬಿಯ ಇಂದಿನ ಸೋಲು ಗೆಲುವು ಮುಂದಿನ ಹಂತವನ್ನು ನಿರ್ಧರಿಸಲಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಂಭಾವ್ಯ ಆಡುವ ಬಳಗ

ಸ್ಮೃತಿ ಮಂಧನ (ನಾಯಕಿ), ಸೋಫಿ ಡಿವೈನ್, ಎಲ್ಲಿಸ್ ಪೆರಿ, ಹೀದರ್ ನೈಟ್, ರಿಚಾ ಘೋಷ್ (ವಿಕೆಟ್‌ ಕೀಪರ್), ಶ್ರೇಯಾಂಕ ಪಾಟೀಲ್, ಕನಿಕಾ ಅಹುಜಾ, ದಿಶಾ ಕಸತ್, ಮೇಗನ್ ಶುಟ್, ಆಶಾ ಶೋಬನಾ, ರೇಣುಕಾ ಠಾಕೂರ್/ಪ್ರೀತಿ ಬೋಸ್‌.

ಗುಜರಾತ್ ಜೈಂಟ್ಸ್ ಸಂಬಾವ್ಯ ಆಡುವ ಬಳಗ

ಸೋಫಿಯಾ ಡಂಕ್ಲಿ, ಲಾರಾ ವೊಲ್ವಾರ್ಡ್ಟ್, ಹರ್ಲೀನ್ ಡಿಯೋಲ್, ಆಶ್ಲೀಗ್ ಗಾರ್ಡ್ನರ್, ದಯಾಲನ್ ಹೇಮಲತಾ, ಸ್ನೇಹ ರಾಣಾ (ನಾಯಕಿ), ಸುಷ್ಮಾ ವರ್ಮಾ (ವಿಕೆಟ್‌ ಕೀಪರ್), ಕಿಮ್ ಗಾರ್ತ್, ತನುಜಾ ಕನ್ವರ್, ಮಾನ್ಸಿ ಜೋಶಿ, ಅಶ್ವನಿ ಕುಮಾರಿ.

ಮುಂಬೈ ಇಂಡಿಯನ್ಸ್‌ಗೆ ಮತ್ತು ಯುಪಿ ವಾರಿಯರ್ಸ್‌ ನಡುವಿನ ಮೊದಲ ಪಂದ್ಯವು ಮಧ್ಯಾಹ್ನ 3.30ಕ್ಕೆ ಆರಂಭವಾಗಲಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಜೈಂಟ್ಸ್ ನಡುವಿನ ವಿಮೆನ್ಸ್‌ ಪ್ರೀಮಿಯರ್‌ ಲೀಗ್‌ ಪಂದ್ಯವು ಶನಿವಾರ (ಮಾರ್ಚ್ 18) ಸಂಜೆ 7:30 ಕ್ಕೆ ಆರಂಭವಾಗಲಿದೆ. ಪಂದ್ಯವು ಮುಂಬೈನ ಬ್ರಬೋರ್ನ್ ಸ್ಟೇಡಿಯಂನಲ್ಲಿ ನಡೆಯಲಿದೆ. ಭಾರತದಲ್ಲಿ ಈ ಪಂದ್ಯವನ್ನು ಸ್ಪೋರ್ಟ್ಸ್ 18 ನೆಟ್‌ವರ್ಕ್ ಮೂಲಕ ನೇರ ಪ್ರಸಾರ ಮಾಡಲಾಗುತ್ತದೆ. ಇದೇ ವೇಳೆ ಜಿಯೋ ಸಿನಿಮಾ ಮೂಲಕ ಲೈವ್ ಸ್ಟ್ರೀಮ್ ಮಾಡಲಾಗುತ್ತದೆ. ಕನ್ನಡ ಕಾಮೆಂಟರಿಯೊಂದಿಗೆ ಕಲರ್ಸ್‌ ಕನ್ನಡ ಸಿನಿಮಾ ವಾಹಿನಿಯಲ್ಲಿ ನೇರಪ್ರಸಾರ ವೀಕ್ಷಿಸಬಹುದು.

    ಹಂಚಿಕೊಳ್ಳಲು ಲೇಖನಗಳು