logo
ಕನ್ನಡ ಸುದ್ದಿ  /  ಕ್ರೀಡೆ  /  Shubman Gill On Pitch: 'ಇಂತಹ ಅವಕಾಶ ಮತ್ತೆ ಸಿಗುತ್ತೋ ಇಲ್ವೋ ಗೊತ್ತಿಲ್ಲ'; ಪಿಚ್‌ ಬಗ್ಗೆ ಗಿಲ್ 'ಪ್ರಾಮಾಣಿಕ' ಹೇಳಿಕೆ

Shubman Gill on pitch: 'ಇಂತಹ ಅವಕಾಶ ಮತ್ತೆ ಸಿಗುತ್ತೋ ಇಲ್ವೋ ಗೊತ್ತಿಲ್ಲ'; ಪಿಚ್‌ ಬಗ್ಗೆ ಗಿಲ್ 'ಪ್ರಾಮಾಣಿಕ' ಹೇಳಿಕೆ

HT Kannada Desk HT Kannada

Mar 12, 2023 09:48 PM IST

ಗಿಲ್‌-ಪೂಜಾರಾ

    • ಶತಕದ ಬಳಿಕ ನಾಲ್ಕನೇ ದಿನದಾಟದ ಆರಂಭಕ್ಕೂ ಮೊದಲು, ಗಿಲ್ ಅನುಭವಿ ಬ್ಯಾಟರ್‌ ಪೂಜಾರ ಅವರೊಂದಿಗೆ ತಮ್ಮ ಇನ್ನಿಂಗ್ಸ್‌ನ ಬಗ್ಗೆ ವಿವರವಾಗಿ ಮಾತನಾಡಿದರು. ಇದೇ ವೇಳೆ ಅಹಮದಾಬಾದ್‌ನ ಪಿಚ್ ಸ್ಥಿತಿಯ ಬಗ್ಗೆ ಸಂತಸದಿಂದ ವಿವರಿಸಿದರು.
ಗಿಲ್‌-ಪೂಜಾರಾ
ಗಿಲ್‌-ಪೂಜಾರಾ

ಆಸೀಸ್‌ ವಿರುದ್ಧದ ಸರಣಿಯ ನಾಲ್ಕನೇ ಮತ್ತು ಅಂತಿಮ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಟೀಮ್ ಇಂಡಿಯಾ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿತು. ಅಹಮದಾಬಾದ್‌ನಲ್ಲಿ ನಡೆದ ಪಂದ್ಯದಲ್ಲಿ ಭಾರತ 570 ರನ್‌ ಗಳಿಸಿ ಮೊದಲ ಇನ್ನಿಂಗ್ಸ್‌ ಮುಗಿಸಿತು. ವಿರಾಟ್ ಕೊಹ್ಲಿ 364 ಎಸೆತಗಳಲ್ಲಿ 186 ರನ್ ಗಳಿಸುವ ಮೂಲಕ ಶತಕ ಸಿಡಿಸಿದರು. ಮತ್ತೊಂದೆಡೆ ಶುಬ್ಮನ್ ಗಿಲ್ ಭಾರತದ ಪರ ಮತ್ತೊಂದು ಶತಕ ಸಿಡಿಸಿ ಮಿಂಚಿದರು. ಮೂರನೇ ದಿನದಾಟದಲ್ಲಿ ಅವರು 128 ರನ್ ಗಳಿಸುವ ಮೂಲಕ ಮೂರಂಕಿ ಮೊತ್ತ ತಲುಪಿದರು.

ಟ್ರೆಂಡಿಂಗ್​ ಸುದ್ದಿ

ಮಲೇಷ್ಯಾ ಫುಟ್ಬಾಲ್ ಆಟಗಾರ ಫೈಸಲ್ ಹಲೀಮ್ ಮೇಲೆ ಆ್ಯಸಿಡ್ ದಾಳಿ; ಮೈಮೇಲೆ ಸುಟ್ಟ ಗಾಯ, ಆರೋಪಿ ಅರೆಸ್ಟ್

ಮೊದಲು ರಾಯ್​ಬರೇಲಿ ಗೆಲ್ಲಿ; ತನ್ನ ನೆಚ್ಚಿನ ಚೆಸ್ ದಿಗ್ಗಜ ಆಟಗಾರನಿಂದಲೇ ಟೀಕೆಗೊಳಗಾದ ರಾಹುಲ್ ಗಾಂಧಿ

Hamida Banu: ಭಾರತದ ಮೊದಲ ಮಹಿಳಾ ವೃತ್ತಿಪರ ಕುಸ್ತಿಪಟು ಹಮೀದಾ ಬಾನು ಅವರಿಗೆ ಇಂದು ಗೂಗಲ್ ಡೂಡಲ್ ಗೌರವ, 5 ಆಸಕ್ತಿದಾಯಕ ಅಂಶಗಳು

ಕೇಳ್ರಪ್ಪೋ ಕೇಳಿ; ನೀವೂ ಬೆಂಗಳೂರು ಬುಲ್ಸ್ ತಂಡ ಸೇರಲು ಇಲ್ಲಿದೆ ಸುವರ್ಣಾವಕಾಶ, ನಿಯಮ ಮತ್ತು ಷರತ್ತುಗಳು ಅನ್ವಯ

ಗಿಲ್ ತಮ್ಮ ಇನ್ನಿಂಗ್ಸ್ ಅನ್ನು ಆಕ್ರಮಣಕಾರಿಯಾಗಿ ಪ್ರಾರಂಭಿಸಿದರು. ಆದರೆ ಇನ್ನಿಂಗ್ಸ್‌ನಲ್ಲಿ ರೋಹಿತ್ ಶರ್ಮಾ ಅವರ ವಿಕೆಟ್‌ ಪತನವಾದ ನಂತರ ನಿಧಾನವಾದ ಬ್ಯಾಟಿಂಗ್‌ ಮುಂದುವರೆಸಿದರು. ಈ ವೇಳೆ ಚೇತೇಶ್ವರ ಪೂಜಾರ ಜೊತೆಗೆ 113 ರನ್‌ಗಳ ಜೊತೆಯಾಟ ನೀಡಿದರು.

ಶತಕದ ಬಳಿಕ ನಾಲ್ಕನೇ ದಿನದಾಟದ ಆರಂಭಕ್ಕೂ ಮೊದಲು, ಗಿಲ್ ಅನುಭವಿ ಬ್ಯಾಟರ್‌ ಪೂಜಾರ ಅವರೊಂದಿಗೆ ತಮ್ಮ ಇನ್ನಿಂಗ್ಸ್‌ನ ಬಗ್ಗೆ ವಿವರವಾಗಿ ಮಾತನಾಡಿದರು. ಇದೇ ವೇಳೆ ಅಹಮದಾಬಾದ್‌ನ ಪಿಚ್ ಸ್ಥಿತಿಯ ಬಗ್ಗೆ ಸಂತಸದಿಂದ ವಿವರಿಸಿದರು.

“ಪ್ರಾಮಾಣಿಕವಾಗಿ ಹೇಳಬೇಕಂದರೆ, ನಾನು ಇಂತಹ ಪಿಚ್‌ ಮತ್ತೆ ಯಾವಾಗ ಪಡೆಯುತ್ತೇನೆ ಎಂಬ ಬಗ್ಗೆ ನನಗೆ ತಿಳಿದಿಲ್ಲ. ಹೀಗಾಗಿ ಕೆಟ್ಟ ಹೊಡೆತಕ್ಕೆ ಕೈ ಹಾಕಿ ಸಿಕ್ಕ ಅವಕಾಶವನ್ನು ವ್ಯರ್ಥ ಮಾಡಲು ನಾನು ಬಯಸುವುದಿಲ್ಲ. ಅದೇ ನನ್ನ ಮನಸ್ಸಿನಲ್ಲಿತ್ತು” ಎಂದು ಪೂಜಾರ ಜೊತೆಗೆ ಗಿಲ್ ಹೇಳಿದರು.

ಮೊದಲ ಮೂರು ಟೆಸ್ಟ್‌ಗಳಲ್ಲಿನ ಸ್ಪಿನ್ ಸ್ನೇಹಿ ಪಿಚ್‌ಗಳ ಬಗ್ಗೆ ಗಿಲ್‌ ಪರೋಕ್ಷವಾಗಿ ಉಲ್ಲೇಖಿಸಿದರು. ನಾಗ್ಪುರ, ದೆಹಲಿ ಮತ್ತು ಇಂದೋರ್‌ನಲ್ಲಿ ನಡೆದ ಎಲ್ಲಾ ಮೂರು ಪಂದ್ಯಗಳು ಮೊದಲ ಮೂರು ದಿನಗಳಲ್ಲಿ ಕೊನೆಗೊಂಡಿವೆ. ಅದರಲ್ಲಿ ಮೊದಲ ಎರಡರಲ್ಲಿ ಭಾರತ ಗೆಲುವು ದಾಖಲಿಸಿತು. ಮೊದಲೆರಡು ಟೆಸ್ಟ್‌ಗಳಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಕೆಲ್‌ ರಾಹುಲ್ ಬದಲಿಗೆ ಮೂರನೇ ಟೆಸ್ಟ್‌ನಲ್ಲಿ ಗಿಲ್‌ಗೆ ಆಡುವ ಬಳಗದಲ್ಲಿ ಅವಕಾಶ ನೀಡಲಾಯಿತು. ಆದರೆ ಅವರು ಅಲ್ಲಿ ಆಡಿದ ಎರಡೂ ಇನ್ನಿಂಗ್ಸ್‌ಗಳಲ್ಲಿ ಕ್ರಮವಾಗಿ 21 ಮತ್ತು 5 ರನ್ ಗಳಿಸಿದ್ದರು. ಹೀಗಾಗಿ ಈ ಪಂದ್ಯ ಅವರ ಪಾಲಿಗೆ ಸವಾಲಾಗಿತ್ತು.

“ನಾನು ಇನ್ನೂ ಧನಾತ್ಮಕವಾಗಿರಲು ಪ್ರಯತ್ನಿಸುತ್ತಿದ್ದೆ.‌ ಸಿಂಗಲ್ಸ್‌ ತೆಗೆಯಲು ಹೆಚ್ಚು ಪ್ರಯತ್ನಿಸುತ್ತಿದ್ದೆ. ಬ್ಯಾಟಿಂಗ್ ಮಾಡುವಾಗ ಕೂಡಾ ನಾವು ಆ ಬಗ್ಗೆಯೇ ಮಾತನಾಡುತ್ತಿದ್ದೆವು. ಸಕಾರಾತ್ಮಕವಾಗಿ ಬ್ಯಾಟಿಂಗ್‌ ಮಾಡಿ ಮತ್ತು ಅವರು ಕೆಟ್ಟ ಚೆಂಡನ್ನು ಬೌಲಿಂಗ್ ಮಾಡಿದರೆ ನಮ್ಮ ಹೊಡೆತ ಆಡುವಂತೆ ಮಾತನಾಡಿಕೊಂಡೆವು,” ಎಂದು ಗಿಲ್ ಹೇಳಿದರು.

“ನಾನು ಸ್ಪಿನ್ನರ್‌ಗಳ ಎಸೆತವನ್ನು ಬ್ಲಾಕ್ ಮಾಡುತ್ತಿದ್ದೆ. ಆದರೆ ನಾನು ವೇಗದ ಬೌಲರ್‌ಗಳ ವಿರುದ್ಧವೂ ಬ್ಲಾಕ್‌ ಮಾಡಲು ಸಾಧ್ಯವಾಗಲಿಲ್ಲ. ನಾವು ಅವೆರಡನ್ನೂ ಸಮತೋಲನಗೊಳಿಸಬೇಕು. ಹೀಗಾಗಿ ನಾನು ಅದನ್ನು ಮಾಡಲು ಪ್ರಯತ್ನಿಸುತ್ತಿದ್ದೇನೆ," ಎಂದು ಗಿಲ್‌ ವಿವರಿಸಿದ್ದಾರೆ.

ಸದ್ಯ ನಾಲ್ಕನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನದಾಟಸ ಅಂತ್ಯಕ್ಕೆ ಭಾರತ ಉತ್ತಮ ಮೊತ್ತ ಪೇರಿಸಿ ಆಲೌಟ್‌ ಆಗಿದೆ. ಮೂರನೇ ದಿನದಾಟದ ಅಂತ್ಯದ ವೇಳೆಗೆ ಮೂರು ವಿಕೆಟ್ ಕಳೆದುಕೊಂಡು 289 ರನ್‌ ಗಳಿಸಿದ್ದ ಭಾರತ, ಇಂದು ಭರ್ಜರಿ ಬ್ಯಾಟಿಂಗ್‌ ಮುಂದುವರೆಸಿತು. ನಾಲ್ಕನೇ ದಿನದಾಟದ ಅಂತ್ಯಕ್ಕೂ ಮುನ್ನ 571 ರನ್‌ ಗಳಿಸಿ ಆಲೌಟ್‌ ಆಯ್ತು. ಸದ್ಯ 91 ರನ್‌ಗಳ ಮುನ್ನಡೆ ಕಾಯ್ದುಕೊಂಡಿರುವ ಭಾರತವು, ಆಸೀಸ್‌ಗೆ ಎರಡನೇ ಇನ್ನಿಂಗ್ಸ್‌ ಆಡಲು ಅವಕಾಶ ಮಾಡಿಕೊಟ್ಟಿದೆ. 91 ರನ್‌ಗಳ ಹಿನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್‌ ಆರಂಭಿಸಿದ ಆಸ್ಟ್ರೇಲಿಯಾ, ದಿನದ ಅಂತ್ಯದ ವೇಳೆಗೆ 6 ಓವರ್‌ಗಳಲ್ಲಿ 3 ರನ್‌ ಗಳಿಸಿದೆ. ಆರಂಭಿಕರಾದ ಟ್ರಾವಿಸ್‌ ಹೆಡ್‌ ಹಾಗೂ ಮ್ಯಾಥ್ಯೂ ಕುಹ್ನೆಮನ್‌, ನಾಳೆಗೆ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು