logo
ಕನ್ನಡ ಸುದ್ದಿ  /  Sports  /  Viral: Shubman Gill Reacts To Crush Rumors On Rashmika Mandanna

Shubman Gill: ರಶ್ಮಿಕಾ ಮೇಲೆ ಶುಭ್ಮನ್​ಗೆ ಕ್ರಶ್​​​​; ನಾನ್ಯಾವಾಗ ಹೇಳಿದ್ದೆ, ಇದು ಸುಳ್ಳು ಎಂದು ಗಿಲ್​ ಸ್ಪಷ್ಟನೆ.!

HT Kannada Desk HT Kannada

Mar 07, 2023 02:49 PM IST

ಶುಭ್ಮನ್‌ ಗಿಲ್‌, ರಶ್ಮಿಕಾ ಮಂದಣ್ಣ

    • Shubman Gill: ನಾನು ರಶ್ಮಿಕ ಮಂದಣ್ಣ ಅವರು ನನ್ನ ಕ್ರಶ್​ ಎಂಬುದನ್ನು ಎಲ್ಲಿಯೂ ಪ್ರಸ್ತಾಪ ಮಾಡಿಯೇ ಇಲ್ಲವಲ್ಲ. ಅದೊಂದು ಮಾಧ್ಯಮ ಸಂವಾದವಾಗಿತ್ತು. ನನಗೇನು ಗೊತ್ತೇ ಇಲ್ಲ ಎಂದು ಕಾಮೆಂಟ್​​​​ ಮೂಲಕ ಸ್ಪಷ್ಟನೆ ನೀಡಿದ್ದಾರೆ. ಆ ಮೂಲಕ ಇಷ್ಟು ದಿನದ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.
ಶುಭ್ಮನ್‌ ಗಿಲ್‌, ರಶ್ಮಿಕಾ ಮಂದಣ್ಣ
ಶುಭ್ಮನ್‌ ಗಿಲ್‌, ರಶ್ಮಿಕಾ ಮಂದಣ್ಣ

ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರ ಮೇಲೆ ನನಗೆ ಕ್ರಶ್​ ಇದೆ ಎಂಬ ವದಂತಿಗೆ ಟೀಮ್​ ಇಂಡಿಯಾ ಫ್ಯೂಚರ್​​​​ ಸ್ಟಾರ್​ ಶುಭ್​ಮನ್​ ಗಿಲ್ (Shubman Gill)​​​​​​​ ಸ್ಪಷ್ಟನೆ ನೀಡಿದ್ದಾರೆ. ಇದು ಸತ್ಯಕ್ಕೆ ದೂರವಾದ ಸುದ್ದಿ ಎಂದು​​​ ಹಬ್ಬಿರುವ ಗಾಸಿಪ್​ ಅನ್ನು ಯಂಗ್​ ಕ್ರಿಕೆಟರ್​ ತಳ್ಳಿ ಹಾಕಿದ್ದಾರೆ. ನಾನು ಎಲ್ಲೂ ಈ ವಿಚಾರವನ್ನು ಪ್ರಸ್ತಾಪ ಮಾಡಿಯೇ ಇಲ್ಲ ಎಂದು ಊಹಾಪೋಹಾ ಸುದ್ದಿಗಳಿಗೆ ಫುಲ್​ಸ್ಟಾಪ್​ ಇಟ್ಟಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ದೇಶಕ್ಕಾಗಿ ಪದಕ ಗೆಲ್ಲುವುದೇ ನನ್ನ ಗುರಿ; ಅದಕ್ಕಾಗಿ ತೂಕ ಕಾಪಾಡಿಕೊಳ್ಳಬೇಕು ಎಂದ ವಿನೇಶ್ ಫೋಗಟ್

ಪ್ಯಾರಿಸ್ ಒಲಿಂಪಿಕ್ಸ್​ಗೆ ಅರ್ಹತೆ ಗಳಿಸಿದ ಭಾರತದ 7 ಷಟ್ಲರ್​​ಗಳು; ಅರ್ಹತೆ; ಕನ್ನಡತಿ ಅಶ್ವಿನಿ ಪೊನ್ನಪ್ಪ, ಪಿವಿ ಸಿಂಧುಗೆ ಅವಕಾಶ

1900 ರಿಂದ 2020ರ ತನಕ; 120 ವರ್ಷಗಳ ಒಲಿಂಪಿಕ್ಸ್ ಇತಿಹಾಸದಲ್ಲಿ ಭಾರತ ಗೆದ್ದಿರುವ ಪದಕಗಳೆಷ್ಟು? ವರ್ಷವಾರು ಒಂದು ನೋಟ

ಆರ್ಚರಿ ವಿಶ್ವಕಪ್ 2024: ಭಾರತಕ್ಕೆ ಹ್ಯಾಟ್ರಿಕ್ ಚಿನ್ನ, ಪುರುಷರ-ಮಹಿಳೆಯರ ಮತ್ತು ಮಿಶ್ರ ತಂಡ ಸ್ಪರ್ಧೆಯಲ್ಲಿ ಸ್ವರ್ಣ

ಇತ್ತೀಚಿನ ನೀಡಿದ ಮಾಧ್ಯಮ ಸಂದರ್ಶನದಲ್ಲಿ ಶುಭ್​ಮನ್ ಗಿಲ್​​ಗೆ​ ನಿಮಗೆ ಯಾವ ನಟಿಯೆಂದರೆ ಇಷ್ಟ? ಯಾರ ಮೇಲೆ ಕ್ರಶ್ ಇದೆ ಎಂಬ ಪ್ರಶ್ನೆ ಎದುರಾಗಿತ್ತು. ಪ್ರಶ್ನೆಗೆ ಮೊದಲು ನಕ್ಕು ಸುಮ್ಮನಾಗಿದ್ದ ಗಿಲ್, ನಂತರ ಮಾಧ್ಯಮದವರು ಉತ್ತರ ಹೇಳುವಂತೆ ಒತ್ತಾಯಿಸಿದಾಗ, ನನಗೆ ನಟಿ ರಶ್ಮಿಕಾ ಮಂದಣ್ಣ ಎಂದರೆ ಬಹಳ ಇಷ್ಟ ಎಂದು ಹೇಳಿರುವ ಸುದ್ದಿ ಭಾರೀ ವೈರಲ್​ ಆಗಿತ್ತು. ಇದು ಕೆಲ ಅಭಿಮಾನಿಗಳಿಗೆ ಶಾಕ್​ ನೀಡಿತ್ತು.

ಈ ಸುದ್ದಿ ಕೇಳಿದ್ದ ರಶ್ಮಿಕಾ ಮಂದಣ್ಣ ಅಭಿಮಾನಿಗಳು ಹುಚ್ಚೆದ್ದು ಕುಣಿದಾಡಿದ್ದರು. ನ್ಯಾಷನಲ್​ ಕ್ರಶ್​​​​ ರಶ್ಮಿಕಾ ಅವರನ್ನು ಟೀಮ್​ ಇಂಡಿಯಾದ ಭವಿಷ್ಯದ ತಾರೆ ಶುಭ್​ಮನ್​ ಗಿಲ್​​​​ ಇಷ್ಟಪಟ್ಟಿದ್ದಾರೆ ಅಂದರೆ, ರಶ್ಮಿಕಾ ಎಷ್ಟು ಗ್ರೇಟ್​​ ಅಲ್ವಾ.? ಎಂಬ ಉತ್ತರಗಳೂ ಬಂದಿದ್ದವು. ಅದ್ಭುತ ಜೋಡಿ ಎಂದೆಲ್ಲಾ ಸುದ್ದಿ ಹರಡಿತ್ತು. ಈ ಹೇಳಿಕೆಗೆ ಸಂಬಂಧಿಸಿ ಯಾವುದೇ ವಿಡಿಯೋ ವೈರಲ್​ ಆಗಿರಲಿಲ್ಲ. ಆದರೂ, ತಾನು ಮೋಹಗೊಂಡಿರುವ ನಟಿಯ ಹೆಸರನ್ನು ಗಿಲ್​​​ ಬಹಿರಂಗಪಡಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು.

ಸ್ಪಷ್ಟನೆ ನೀಡಿದ ಗಿಲ್​.!

ಇನ್​​​​​ಸ್ಟಾಂಟ್​ ಬಾಲಿವುಡ್​ (InstantBollywood) ಎಂಬ ಇನ್​ಸ್ಟಾಗ್ರಾಂ ಪೇಜ್​​​ನಲ್ಲಿ ರಶ್ಮಿಕಾ ಮತ್ತು ಗಿಲ್​​ ಕೊಲ್ಯಾಜ್​ ಫೋಟೋವನ್ನು ಪೋಸ್ಟ್​ ಮಾಡಲಾಗಿದೆ. ಇತ್ತೀಚಿನ ಮಾಧ್ಯಮ ಸಂವಾದದಲ್ಲಿ ಗಿಲ್ ಅವರು ಹೆಚ್ಚು ಇಷ್ಟಪಟ್ಟ ನಟಿಯ ಬಗ್ಗೆ ಕೇಳಿದಾಗ, ರಶ್ಮಿಕಾ ಮಂದಣ್ಣ ಹೆಸರನ್ನು ಪ್ರಸ್ತಾಪಿಸಿದ್ದಾರೆ. ಆಕೆಯ ಮೇಲೆ ಕ್ರಶ್ ಇದೆ ಎಂದು ಹೇಳಿದ್ದಾರೆ. ಹಾಗಾಗಿ ಅಭಿಮಾನಿಗಳು ರಶ್ಮಿಕಾ ಇದಕ್ಕೆ ಉತ್ತರ ಏನು ಕೊಡುತ್ತಾರೆ ಎಂಬುದಕ್ಕೆ ಅಭಿಮಾನಿಗಳು ಕಾಯುತ್ತಿದ್ದಾರೆ ಎಂದು ಆ ಪೋಸ್ಟ್​ಗೆ ಕ್ಯಾಪ್ಶನ್​ ನೀಡಿತ್ತು.

ಆದರೆ ಈ ಹೇಳಿಕೆ ಬಿರುಗಾಳಿಯಂತೆ ಹಬ್ಬುತ್ತಿದ್ದಂತೆ ಎಚ್ಚರಗೊಂಡ ಗಿಲ್​, ಇನ್​​​​​ಸ್ಟಾಂಟ್​ ಬಾಲಿವುಡ್​ (InstantBollywood) ಪೇಜ್​ ಹಾಕಿದ್ದ ಪೋಸ್ಟ್​​ಗೆ ಉತ್ತರಿಸಿದ್ದಾರೆ. ನಾನು ರಶ್ಮಿಕ ಮಂದಣ್ಣ ಅವರು ನನ್ನ ಕ್ರಶ್​ ಎಂಬುದನ್ನು ಎಲ್ಲಿಯೂ ಪ್ರಸ್ತಾಪ ಮಾಡಿಯೇ ಇಲ್ಲವಲ್ಲ. ಅದೊಂದು ಮಾಧ್ಯಮ ಸಂವಾದವಾಗಿತ್ತು. ನನಗೇನು ಗೊತ್ತೇ ಇಲ್ಲ ಎಂದು ಕಾಮೆಂಟ್​​​​ ಮಾಡಿ ಸ್ಪಷ್ಟನೆ ನೀಡಿದ್ದಾರೆ. ಆ ಮೂಲಕ ಇಷ್ಟು ದಿನದ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.

ಸಾರಾ ಜೊತೆಗೆ ಗಿಲ್​ ಡೇಟಿಂಗ್​​.?

ಕ್ರಿಕೆಟಿಗ ಶುಭ್‌ಮನ್ ಗಿಲ್ ಬಾಲಿವುಡ್ ಜನಪ್ರಿಯ ನಟಿ ಸಾರಾ ಅಲಿ ಖಾನ್ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳಿವೆ. ಆದರೆ, ನೆಟಿಜನ್ಸ್​ ಮಾತ್ರ ಶುಭ್‌ಮನ್ ಹೆಸರನ್ನು ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ ತೆಂಡೂಲ್ಕರ್ ಜೊತೆ ಜೋಡಿಸಿ ವೈರಲ್ ಮಾಡುತ್ತಿದ್ದಾರೆ. ಆದರೆ ಈ ಗೊಂದಲಕ್ಕೆ ಗಿಲ್​ ಯಾವಾಗ ತೆರೆ ಎಳೆಯುತ್ತಾರೆ ಎಂಬುದನ್ನು ಅಭಿಮಾನಿಗಳು ಕಾಯುತ್ತಿದ್ದಾರೆ.

ಅಹಮದಾಬಾದ್​​​ನಲ್ಲಿ ಗಿಲ್​​​​ ಪ್ರಾಕ್ಟೀಸ್​​.!

ಸದ್ಯ 4ನೇ ಟೆಸ್ಟ್​ ಪಂದ್ಯಕ್ಕಾಗಿ ಶುಭ್​​ಮನ್​ ಗಿಲ್​, ಅಹ್ಮದಾಬಾದ್​​ಗೆ ಬಂದಿದ್ದಾರೆ. ಇಲ್ಲಿ ಅಂತಿಮ ಟೆಸ್ಟ್​ ಕದನಕ್ಕೆ ಭರ್ಜರಿ ತಯಾರಿ ನಡೆಸುತ್ತಿದ್ದು, ಬಿಗ್​ ಇನ್ನಿಂಗ್ಸ್​ ಕಟ್ಟುವ ಲೆಕ್ಕಾಚಾರದಲ್ಲಿದ್ದಾರೆ. ಮೊದಲೆರಡು ಟೆಸ್ಟ್​​ಗಳು ಸತತ ವೈಫಲ್ಯ ಅನುಭವಿಸಿದ ಕಾರಣ, 3ನೇ ಟೆಸ್ಟ್​ಗೆ ರಾಹುಲ್​ಗೆ ಬೆಂಚ್​​ಗೆ ಸೀಮಿತಗೊಳಿಸಿ, ಅವರ ಬದಲಿಗೆ ಗಿಲ್​ಗೆ ಅವಕಾಶ ನೀಡಲಾಗಿತ್ತು. ಆದರೆ ಗಿಲ್​ ಕೂಡ ಇಂದೋರ್​​ ಟೆಸ್ಟ್​​​ನಲ್ಲಿ ವೈಫಲ್ಯ ಅನುಭವಿಸಿದರು.

    ಹಂಚಿಕೊಳ್ಳಲು ಲೇಖನಗಳು