Monkeys Scrolling Smartphone: ಮೊಬೈಲ್ನಲ್ಲಿ ಮುಳುಗಿದ ಕೋತಿಗಳು.. ಏನ್ ನೋಡ್ತಾ ಇರ್ಬೋದು?
Jan 30, 2023 10:26 PM IST
- ಕೋತಿಗಳ ತರಲೆ ಹಾಗೂ ಅದರ ಬುದ್ಧಿಶಕ್ತಿ ಪ್ರದರ್ಶಿಸುವ ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತವೆ. ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಡಿಯೋವೊಂದರಲ್ಲಿ ಕೋತಿಗಳು ಸ್ಮಾರ್ಟ್ಫೋನ್ ಹಿಡಿದುಕೊಂಡು ಸ್ಕ್ರಾಲ್ ಮಾಡುತ್ತಿವೆ. ಒಬ್ಬ ವ್ಯಕ್ತಿ ಕೈಯಲ್ಲಿ ಮೊಬೈಲ್ ಹಿಡಿದು ಕೋತಿಗಳಿಗೆ ತೋರಿಸುತ್ತಿದ್ದಾನೆ, ಕೋತಿಗಳೂ ಸಹ ಮೊಬೈಲ್ ಸ್ಕ್ರಾಲ್ ಮಾಡುತ್ತಾ ಸ್ಕ್ರೀನ್ ಮೇಲೆ ಬರುವುದನ್ನು ಕುತೂಹಲಕಾರಿಯಾಗಿ ನೋಡುತ್ತಿವೆ. ಈ ವಿಡಿಯೋವನ್ನು ಟ್ವಿಟರ್ನಲ್ಲಿ ಶೇರ್ ಮಾಡಿರುವ ಕೇಂದ್ರ ಸಚಿವ ಕಿರಣ್ ರಿಜಿಜು, "ನಂಬಲಸಾಧ್ಯವಾದ ಮಟ್ಟವನ್ನು ತಲುಪುತ್ತಿರುವ ಡಿಜಿಟಲ್ ಸಾಕ್ಷರತೆಯ ಜಾಗೃತಿಯ ಯಶಸ್ಸನ್ನು ನೋಡಿ" ಎಂದು ಕ್ಯಾಪ್ಶನ್ ನೀಡಿದ್ದಾರೆ.