ಕನ್ನಡ ಸುದ್ದಿ  /  Astrology  /  Good Friday 2024 Celebration On March 29th All Over World Importance Of 40 Days In Bible Christ Community Rsm

Good Friday 2024: ಇಂದು ಕ್ರೈಸ್ತ ಬಾಂಧವರಿಂದ ಗುಡ್‌ ಫ್ರೈಡೇ ಆಚರಣೆ; ಬೈಬಲ್‌ನಲ್ಲಿ 40 ದಿನಗಳ ಮಹತ್ವವೇನು? ಇಲ್ಲಿದೆ ಮಾಹಿತಿ

Good Friday 2024: ಯೇಸುಕ್ತಿಸ್ತನನ್ನು ಶಿಲುಬೆಗೆ ಏರಿಸಿದ ದಿನವನ್ನು ಪ್ರತಿವರ್ಷ ಗುಡ್‌ ಫ್ರೈಡೇ ಎಂದು ಆಚರಿಸಲಾಗುತ್ತದೆ. ಗುಡ್‌ ಫ್ರೈಡೇ ಆಚರಣೆಗಳು ಫೆಬ್ರವರಿ 14 ರಂದು ಆರಂಭವಾಗಿ ಮಾರ್ಚ್‌ 29ಕ್ಕೆ ಮುಕ್ತಾಯವಾಗುತ್ತದೆ. ಬೈಬಲ್‌ನಲ್ಲಿ 40 ದಿನಗಳಿಗೆ ಮಹತ್ವವಿದ್ದು ಅಷ್ಟೂ ದಿನಗಳು ಕ್ರೈಸ್ತರು ಉಪವಾಸ ಮಾಡುವ ಮೂಲಕ ದೇವರಿಗೆ ಪ್ರಾರ್ಥನೆ ಸಲ್ಲಿಸುತ್ತಾರೆ.

ಗುಡ್‌ ಫ್ರೈಡೇ ಆಚರಣೆ, ಮಹತ್ವ
ಗುಡ್‌ ಫ್ರೈಡೇ ಆಚರಣೆ, ಮಹತ್ವ (PC: Unsplash)

Good Friday 2024: ಕ್ರೈಸ್ತ ಧರ್ಮದವರಿಗೆ ಕ್ರಿಸ್‌ಮಸ್‌ ಎಷ್ಟು ಮುಖ್ಯವೋ ಗುಡ್‌ ಫ್ರೈಡೇ ಕೂಡಾ ಅಷ್ಟೇ ಮುಖ್ಯ. ಇಂದು( ಮಾರ್ಚ್‌ 29) ಗುಡ್‌ ಫ್ರೈಡೇ ಆಚರಿಸಲಾಗುತ್ತಿದೆ. ಕ್ರೈಸ್ತ ಬಾಂಧವರು ಇಂದು ಚರ್ಚ್‌ಗಳಿಗೆ ಹೋಗಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಯೇಸುಕ್ತಿಸ್ತ‌ ಜನಿಸದ ದಿನವನ್ನು ಕ್ರಿಸ್‌ಮಸ್‌ ಆಗಿ ಆಚರಣೆ ಮಾಡಿದರೆ, ಶಿಲುಬೆಗೆ ಏರಿಸಿದ ಈ ದಿನವನ್ನು ಗುಡ್‌ ಫ್ರೈಡೇಯನ್ನಾಗಿ ಆಚರಿಸಲಾಗುತ್ತದೆ. ಇದನ್ನು ಹೋಲಿ ಫ್ರೈಡೇ, ಗ್ರೇಟ್‌ ಫ್ರೈಡೇ ಎಂದೂ ಕರೆಯಲಾಗುತ್ತದೆ.

ಗುಡ್‌ ಫ್ರೈಡೇಯನ್ನು ಬ್ಲಾಕ್‌ ಫ್ರೈಡೇ ಎಂದೂ ಕರೆಯಲಾಗುತ್ತದೆ. ಯೇಸುವನ್ನು ಶಿಲುಬೆಗೆ ಏರಿಸಿದ 3 ದಿನಗಳ ನಂತರವನ್ನು ಈಸ್ಟರ್‌ ಆಗಿ ಭಾನುವಾರ ಸೆಲಬ್ರೇಟ್‌ ಮಾಡಲಾಗುತ್ತದೆ. ಜನರ ಉದ್ಧಾರಕ್ಕಾಗಿ ಯೇಸುವು ತನ್ನ ಜೀವನವನ್ನು ತ್ಯಾಗ ಮಾಡಿದನೆಂಬ ನಂಬಿಕೆ ಇದೆ. ಗುಡ್‌ ಫ್ರೈಡೇಯಂದು ಕ್ರೈಸ್ತರು ಉಪವಾಸದೊಂದಿಗೆ ಪ್ರಾರ್ಥನೆ ಮಾಡುತ್ತಾರೆ. ದಿನಕ್ಕೆ ಒಂದು ದಿನ ಮಾತ್ರ ಆಹಾರ ಸೇವಿಸುತ್ತಾರೆ. ಯೇಸುವು ಶಿಲುಬೆಗೆ ಏರಿದ ಈ ದಿನ, ದುಃಖವನ್ನು ವ್ಯಕ್ತಪಡಿಸಲು ಕೆಲವರು ಕಪ್ಪು ಬಟ್ಟೆಯನ್ನು ಧರಿಸುತ್ತಾರೆ. ಯೆಸುವು ಶಿಲುಬೆಗೆ ಏರುವ ಮುನ್ನ ಯಾತನೆ ಅನುಭವಿಸಿದ 40 ದಿನಗಳ ಅವಧಿಯನ್ನು ಕಷ್ಟದ ಕಾಲ ಎಂದು ಆಚರಿಸಲಾಗುತ್ತದೆ. ಇದನ್ನು ಶ್ರಮದ ಕಾಲ ಎಂದೂ ಕರೆಯುತ್ತಾರೆ. ಈ ವರ್ಷ ಫೆಬ್ರವರಿ 14 ರಂದು ಆರಂಭವಾದ ಶ್ರಮದ ಕಾಲ ಮಾರ್ಚ್‌ 29 ಗುಡ್‌ ಫ್ರೈಡೇ ದಿನಕ್ಕೆ ಮುಕ್ತಾಯವಾಗುತ್ತದೆ.

40 ದಿನಗಳು ಏಕೆ ಆಚರಿಸಲಾಗುತ್ತದೆ?

ಈ 40 ದಿನಗಳವರೆಗೂ ಕ್ರೈಸ್ತರು ಯೇಸುವನ್ನು ಸ್ತುತಿಸುವುದು, ಹಾಡುಗಳನ್ನು ಹಾಡುವುದು ಮತ್ತು ಪದಗಳ ಸಂದೇಶಗಳನ್ನು ಕೇಳುತ್ತಾರೆ. ಪ್ರತಿದಿನ ಸಂಜೆ ಚರ್ಚ್‌ಗೆ ಹೋಗಿ ಪ್ರಾರ್ಥನೆ ಮಾಡುತ್ತಾರೆ. ಹೃದಯದಲ್ಲಿ ಶುದ್ಧರಾಗಿರುವವರು ಧನ್ಯರು ಅವರು ಸಾಂತ್ವನ ಹೊಂದುತ್ತಾರೆ. ಯಾವುದೇ ಪಾಪದ ಆಲೋಚನೆಗಳಿಲ್ಲದೆ ಕಣ್ಣೀರಿನೊಂದಿಗೆ ಕ್ಷಮೆಗಾಗಿ ಪ್ರಾರ್ಥಿಸುವವರ ಮೇಲೆ ದೇವರ ಅನುಗ್ರಹವಿದೆ ಎಂದು ಬೈಬಲ್ ಹೇಳುತ್ತದೆ. ಆದ್ದರಿಂದ ಬೈಬಲ್‌ನಲ್ಲಿ 40 ನೇ ಸಂಖ್ಯೆಯು ಬಹಳ ಮುಖ್ಯವಾಗಿದೆ.

ಮನುಷ್ಯನ ಪಾಪ ಹೆಚ್ಚಾಗಿ, ಅವನ ಪಾಪದ ಕೊಡ ತುಂಬಿ ಜಲಪ್ರಳಯ ಸಂಭವಿಸುತ್ತದೆ ಎಂದು ದೇವನು ನೋಹನಿಗೆ ಮೊದಲೇ ಎಚ್ಚರಿಸುತ್ತಾನೆ. ಜಲಪ್ರಳಯ ಬರುತ್ತಿದೆ, ಈ ಪ್ರಮಾದದಿಂದ ತಪ್ಪಿಸಿಕೊಳ್ಳಲು ಒಂದು ದೊಡ್ಡ ಹಡಗನ್ನು ಸಿದ್ದ ಮಾಡಿಟ್ಟುಕೋ. ಅದರಲ್ಲಿ ದೇವರ ಬಗ್ಗೆ ಭಯ ಭಕ್ತಿ ಇರುವಂತೆ ನೋಡಿಕೊ ಎಂಬುದಾಗಿ ಹೇಳುತ್ತಾರೆ. ದೇವರು ಹೇಳಿದ ಮಾತಿನಂತೆ ನೋಹನು ಒಂದು ಹಡಗನ್ನು ಸಿದ್ದಪಡಿಸಿಕೊಳ್ಳುತ್ತಾರೆ. ಇದರ ಬಗ್ಗೆ ಜನರಿಗೂ ಹೇಳುತ್ತಾರೆ. ಆದರೆ ಜಲಪ್ರಳಯ ಆದಾಗ ಕೆಟ್ಟ ದಾರಿಯಲ್ಲಿ ನಡೆಯುತ್ತಿದ್ದವರೆಲ್ಲಾ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗುತ್ತಾರೆ. ಕೆಲವರು ಅಂಗವಿಕಲರಾಗುತ್ತಾರೆ. ಈ ಜಲಪ್ರಳಯ 40 ದಿನಗಳ ಕಾಲ ನಡೆಯುತ್ತದೆ.

ಲೆಂಟ್‌ ದಿನಗಳು ಎಂದರೇನು?

ಮೋಶನು ದೇವರ ಸನ್ನಿಧಿಯಲ್ಲಿ 40 ದಿನಗಳ ಕಾಲ ಕಳೆಯುತ್ತಾನೆ. ಏಲಿಯಾ 40 ದಿನಗಳ ಕಾಲ ಉಪವಾಸ ಮಾಡಿ ಶಕ್ತಿ ಗಳಿಸುತ್ತಾನೆ. ಮೋಶನು ಸೀನಾಯಿ ಪರ್ವತದಲ್ಲಿ 40 ದಿನಗಳನ್ನು ಕಳೆದು 10 ಅನುಶಾಸನಗಳನ್ನು ಮಾಡುತ್ತಾನೆ. ಇದನ್ನೆಲ್ಲಾ ಬೈಬಲ್‌ನಲ್ಲಿ ವಿವರಿಸಲಾಗಿದೆ. ಜನರು ಈ ಅನುಶಾಸನಗಳ ಪ್ರಕಾರ ನಡೆಯುತ್ತಿದ್ದಾರೆ. ಅದೇ ರೀತಿ ಇಸ್ರಾಯೇಲ್ಯರು ಗೋಲ್ಯಾತನನ್ನು ಎದುರಿಸಿದ್ದು 40 ದಿನಗಳು. ಯೇಸುಕ್ರಿಸ್ತರು ಶಿಲುಬೆಗೆ ಏರುವ 40 ದಿನಗಳ ಮೊದಲು ದಿನಗಳ ಉಪವಾಸ ಮಾಡುತ್ತಾರೆ. ಆದ್ದರಿಂದ ಬೈಬಲ್‌ನಲ್ಲಿ 40ಕ್ಕೆ ಬಹಳ ಪ್ರಾಮುಖ್ಯತೆ ಇದೆ. ಈ 40 ದಿನಗಳ ಅವಧಿಯನ್ನು ಲೆಂಟ್‌ ದಿನಗಳು ಎಂದು ಕರೆಯಲಾಗುತ್ತದೆ.

ಯೇಸುಕ್ರಿಸ್ತರು ಮನುಷ್ಯನ ರಕ್ಷಣೆಗೆ ಕಷ್ಟಪಟ್ಟು ತನ್ನನ್ನು ತಾವು ಬಲಿದಾನ ಮಾಡಿಕೊಂಡ ದಿನವೇ ಗುಡ್‌ ಫ್ರೈಡೇ. ಶುಕ್ರವಾರದ ದಿನ ಯೇಸುವನ್ನು ಶಿಲುಬೆಗೆ ಏರಿಸುತ್ತಾರೆ. ನಾವು ಉಪವಾಸ ಮಾಡುವ ಮೂಲಕ ನೋವುಗಳನ್ನು ಮರೆತು ಪ್ರಾರ್ಥನೆಯಿಂದ ದೇವರಿಗೆ ಹತ್ತಿರವಾಗಬಹುದು. ಪಾಪದ ಆಲೋಚನೆಗಳು ಮತ್ತು ಸ್ವಾರ್ಥವಿಲ್ಲದ ಶುದ್ಧ ಹೃದಯದಿಂದ ಪ್ರಾರ್ಥಿಸಿದರೆ ಯೇಸು ಕ್ರಿಸ್ತನ ಆಶೀರ್ವಾದ ದೊರೆಯಲಿದೆ ಎಂದು ಕ್ರೈಸ್ತರು ನಂಬುತ್ತಾರೆ.