Palm Astrology: ಅಂಗೈಯಲ್ಲಿದೆ ನಮ್ಮ ಗುಣ ಧರ್ಮ; ಅಂಗೈ ಭಾಗವು ಉಬ್ಬಿದಂತೆ ಇರುವವರ ನಡವಳಿಕೆ ಈ ರೀತಿ ಇರಲಿದೆ
Palm Horoscope: ಕೈ ನೋಡಿ ಜ್ಯೋತಿಷ್ಯ ಹೇಳುವುದು ಸಾಮಾನ್ಯ. ಆದರೆ ನಮ್ಮ ಅಂಗೈ ಆಕಾರವನ್ನು ಅನುಸರಿಸಿ ನಮ್ಮ ಗುಣ ಧರ್ಮವನ್ನು ತಿಳಿಯಬಹುದು ಎಂಬುದು ಬಹಳ ಜನರಿಗೆ ಗೊತ್ತಿಲ್ಲ. ಅಂಗೈ ಉಬ್ಬಿದಂತೆ ಇರುವವರ ನಡವಳಿಕೆ ಯಾವ ರೀತಿ ಇರಲಿದೆ? ಇಲ್ಲಿದೆ ವಿವರ.
Palm Horoscope: ಕೆಲವರಿಗೆ ಅಂಗೈನ ಭಾಗವು ಬಹಳ ದಪ್ಪವಾಗಿ ಹೊರಗೆ ಬಂದಂತೆ ಇರುತ್ತದೆ. ಇವರ ಗುಣ ಧರ್ಮವು ನಿಜಕ್ಕೂ ಅನುಕರಣೀಯವಾಗಿರುತ್ತದೆ. ಮೂಲತ: ಚುರುಕಿನ ಬುದ್ಧಿ ಹೆಚ್ಚಾಗಿರುತ್ತದೆ. ಆದರೆ ಸಾಮಾನ್ಯವಾಗಿ ಇವರು ಯಾವುದೇ ತಪ್ಪು ನಿರ್ಧಾರ ತೆಗೆದುಕೊಳ್ಳುವುದಿಲ್ಲ. ಬಾಲ್ಯದಲ್ಲಿ ಹೊಂದಾಣಿಕೆಯ ಬುದ್ಧಿ ಇರುವುದಿಲ್ಲ. ಸದಾ ಕಾಲ ಮೌನಿಯಾಗಿರುತ್ತಾರೆ. ಸಭೆ ಸಮಾರಂಭಗಳಲ್ಲಿ ಮಾತನಾಡುವುದಿಲ್ಲ. ಕೆಲಸ ಮಾಡುವುದರ ಹೊರತು ಬರಿ ಮಾತಿಗೆ ಪ್ರಾಶಸ್ತ್ಯ ನೀಡುವುದಿಲ್ಲ.
ಅರ್ಥ ಮಾಡಿಕೊಳ್ಳುವುದು ಕಷ್ಟ
ಈ ರೀತಿಯ ಜನರಿಗೆ ತಂದೆ ತಾಯಿಯ ಜೊತೆಯಲ್ಲಿ ಉತ್ತಮ ಅನುಬಂಧ ಇರುವುದಿಲ್ಲ. ಹೆಣ್ಣು ಮಕ್ಕಳಿಗೆ ವಿಶೇಷ ಗೌರವ ನೀಡುತ್ತಾರೆ. ಸೋದರಿಯರ ಬಗ್ಗೆ ವಿಶೇಷವಾದ ಪ್ರೀತಿ ವಿಶ್ವಾಸ ಅನುಕಂಪ ವಿರುತ್ತದೆ. ಸೋದರರಿಗೆ ಎಲ್ಲ ರೀತಿಯ ಸಹಾಯ ಸಹಕಾರ ನೀಡುವಿರಿ. ತಂದೆ ತಾಯಿ ಬಗ್ಗೆ ಪ್ರೀತಿ ವಿಶ್ವಾಸದ ಜೊತೆಗೆ ಹೆಚ್ಚಿನ ಗೌರವವಿರುತ್ತದೆ. ಆದರೆ ಇವರ ಮನಸ್ಸನ್ನು ಅರ್ಥಮಾಡಿಕೊಳ್ಳಲು ಕುಟುಂಬದವರಿಗೆ ಸಾಧ್ಯವಾಗುವುದಿಲ್ಲ. ಚಿಕ್ಕ ವಯಸ್ಸಿನಿಂದಲೇ ಸಮಾಜದಲ್ಲಿ ವಿಶೇಷ ಸ್ಥಾನಮಾನ ಗಳಿಸುತ್ತಾರೆ. ಬೇರೆಯವರಿಗೆ ಅಸಾಧ್ಯವೆನಿಸುವ ಕೆಲಸ ಕಾರ್ಯಗಳನ್ನು ಸುಲಭವಾಗಿ ಮಾಡಬಲ್ಲರು. ಚಿತ್ರಕಲೆ ಸಂಗೀತ ನಾಟ್ಯದಂತಹ ವಿಶೇಷವಾದ ವಿದ್ಯೆಯೊಂದು ಇವರಿಗೆ ಸಿದ್ಧಿಸುತ್ತದೆ. ಇವರಿಗೆ ದೇವರಲ್ಲಿ ನಂಬಿಕೆ ಇರುತ್ತದೆ. ಆದರೆ ತಮ್ಮ ಕೆಲಸವನ್ನು ಮಾಡಿದ ನಂತರವಷ್ಟೇ ದೇವರಿಗೆ ಮೊರೆ ಹೋಗುತ್ತಾರೆ.
ಸಂತೋಷ ಸಂಭ್ರಮ ಸದಾ ಕಾಲ ಕೂಡಿರುತ್ತವೆ. ಒಂದೇ ಬಾರಿ ಹಲವು ಕೆಲಸಗಳನ್ನು ಮಾಡುವ ಚಾತುರ್ಯ ಇವರಿಗಿರುತ್ತದೆ. ಬಾಲ್ಯದಿಂದಲೇ ಸಮಾಜದಲ್ಲಿ ಗೌರವಯುತ ಸ್ಥಾನಮಾನ ಗಳಿಸಬೇಕೆಂಬ ಗುರಿ ಇರುತ್ತದೆ. ಅಪರೂಪದ ವಿದ್ಯೆಯೊಂದನ್ನು ಕರಗತ ಮಾಡಿಕೊಳ್ಳುತ್ತಾರೆ. ಬೇರೆಯವರೆಲ್ಲರೂ ಇವರನ್ನು ಅವಲಂಬಿಸಬೇಕೆಂಬ ಆಸೆ ಇರುತ್ತದೆ. ಸಹಾಯ ಪಡೆದವರು ಇವರೊಂದಿಗೆ ಸ್ಪಂದಿಸುವುದಿಲ್ಲ. ಬೇರೆಯವರ ಹಂಗಿನಲ್ಲಿ ಬಾಳಲು ಇಚ್ಚಿಸದ ಇವರು ಚಿಕ್ಕ ವಯಸ್ಸಿನಲ್ಲಿಯೇ ಸಂಪಾದನೆ ಆರಂಭಿಸುತ್ತಾರೆ. ಉತ್ತಮ ಆದಾಯವಿದ್ದರೂ ಹಣ ಉಳಿಸುವುದಿಲ್ಲ. ಅವಕಾಶಗಳಿದ್ದಾಗ ಬೇರೆಯವರಿಗೆ ಹಣದ ಸಹಾಯ ಮಾಡುತ್ತಾರೆ. ಸಾಲ ಮಾಡಿ ದಾನ ಧರ್ಮ ಮಾಡುವುದಿಲ್ಲ. ಜನರಿಗೆ ಉಪಯೋಗವಾಗುವಂತಹ ಸಂಘ ಸಂಸ್ಥೆಗಳನ್ನು ಸ್ಥಾಪಿಸುವರು. ತಮ್ಮಲ್ಲಿರುವ ಜ್ಞಾನವನ್ನು ಹರಡುವುದು ಇವರ ಮೂಲ ಉದ್ದೇಶ. ಇವರ ಮನಸ್ಸನ್ನು ಗೆಲ್ಲುವಂತಹ ಸಂಗಾತಿ ದೊರೆಯುತ್ತಾರೆ. ಮುಖ್ಯವಾಗಿ ಪುರುಷರು ಪತ್ನಿ ಮಾಡುವ ತಪ್ಪುಗಳನ್ನು ಮನ್ನಿಸುತ್ತಾರೆ ಕುಟುಂಬದಲ್ಲಿ ಉತ್ತಮ ವಾತಾವರಣ ಸೃಷ್ಟಿಸಲು ಪ್ರಯತ್ನಿಸುತ್ತಾರೆ ಇವರು ಮಾಡಿದ ಸಾಲವನ್ನು ಅವಧಿಗೆ ಮುಂಚೆಯೇ ತೀರಿಸುತ್ತಾರೆ. ಕುಟುಂಬದ ಸದಸ್ಯರಿಗಾಗಿ ಯಾವುದೇ ತ್ಯಾಗವನ್ನು ಮಾಡಬಲ್ಲವರು.
ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಇರುವವರು
ಮಕ್ಕಳ ಮೇಲೆ ವಿಶೇಷ ಪ್ರೀತಿ ಇರುತ್ತದೆ. ಚಿಕ್ಕ ಮಕ್ಕಳಿಗಾಗಿ ಶಾಲೆ ಅಥವಾ ಬೋಧನಾ ಕೇಂದ್ರವನ್ನು ಆರಂಭಿಸುತ್ತಾರೆ. ಉತ್ತಮ ಸಂತಾನವಿರುತ್ತದೆ. ಕ್ರಮೇಣವಾಗಿ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳುತ್ತಾರೆ. ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಇರುತ್ತದೆ. ಸ್ವಂತ ಮನೆ ಕಟ್ಟಿಸುವ ಆಸೆ ಇರುವುದಿಲ್ಲ. ಆದರೆ ಮನೆಯನ್ನು ಕೊಳ್ಳುತ್ತಾರೆ. ಆಕರ್ಷಕ ವಸ್ತುಗಳನ್ನು ಕೊಳ್ಳಲು ಹೆಚ್ಚಿನ ಹಣ ಖರ್ಚು ಮಾಡುತ್ತಾರೆ. ಮಕ್ಕಳಿಂದ ಸಹಾಯದ ನಿರೀಕ್ಷೆ ಇರುವುದಿಲ್ಲ.
ಒಂದೇ ರೀತಿಯ ಕೆಲಸವನ್ನು ಮಾಡಲು ಇಚ್ಛಿಸದವರು ಬೇರೆ ಬೇರೆ ರೀತಿಯ ಕೆಲಸವನ್ನು ಅವಲಂಬಿಸುವರು. ಒಂದಕ್ಕಿಂತಲೂ ಹೆಚ್ಚಿನ ಆದಾಯದ ಮೂಲ ಇವರಿಗಿರುತ್ತದೆ. ಎಷ್ಟೇ ಕಷ್ಟಪಟ್ಟರೂ ಹಣ ಉಳಿಸಲು ಸಾಧ್ಯವಿಲ್ಲ. ಅವಶ್ಯಕತೆ ಇದ್ದಷ್ಟು ಹಣ ಸಂಪಾದಿಸಬಲ್ಲರು. ರುಚಿಕರ ಭೋಜನ ಇಷ್ಟಪಡುತ್ತಾರೆ. ತಮ್ಮ ಚಿಕ್ಕಮಟ್ಟದ ಆಸೆಯನ್ನು ತೀರಿಸಿಕೊಳ್ಳಲು ಲೆಕ್ಕವಿಲ್ಲದೆ ಹಣವನ್ನು ಖರ್ಚು ಮಾಡುತ್ತಾರೆ. ಮಕ್ಕಳಿಗೆ ಬೇಕಾಗುವ ಅನುಕೂಲತೆಗಳನ್ನು ಕಲ್ಪಿಸುತ್ತಾರೆ. ವಯಸ್ಸಾದರೂ ಬೇರೆಯವರ ಮೇಲೆ ಅವಲಂಬಿಸುವುದಿಲ್ಲ. ಹಂಗಿನ ಬದುಕು ಇವರಿಗೆ ಇಷ್ಟವಾಗುವುದಿಲ್ಲ. ಜನರನ್ನು ಸರಿದಾರಿಗೆ ತರುವ ಪ್ರಯತ್ನ ಮಾಡುತ್ತಾರೆ. ಸ್ವಂತ ಬಳಕೆಗಾಗಿ ಹೊಸ ವಾಹನವನ್ನು ಕೊಳ್ಳುತ್ತಾರೆ. ವಿದೇಶ ಪ್ರಯಾಣ ಯೋಗವಿದೆ. ಕೃಷಿ ಕೆಲಸದಲ್ಲಿ ವಿಶೇಷವಾದ ಆಸಕ್ತಿ ಇರುತ್ತದೆ. ಕಷ್ಟವಿಲ್ಲದ ಕೆಲಸ ಕಾರ್ಯ ಮತ್ತು ವ್ಯಾಪಾರವನ್ನು ಆಯ್ದುಕೊಳ್ಳುವಿರಿ.
ಬರಹ: ಎಚ್. ಸತೀಶ್, ಜ್ಯೋತಿಷಿ
ಮೊಬೈಲ್: 8546865832
(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).