Astrology: ಜನ್ಮ ಕುಂಡಲಿ, ಗ್ರಹಗಳಿಗೆ ಅನುಗುಣವಾಗಿ ಹಣದ ತೊಂದರೆಗೆ ಪರಿಹಾರಗಳು ಇಲ್ಲಿವೆ-horoscope solutions for financial problems according to astrology money issue janma kundali planets sts ,ರಾಶಿ ಭವಿಷ್ಯ ಸುದ್ದಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Astrology: ಜನ್ಮ ಕುಂಡಲಿ, ಗ್ರಹಗಳಿಗೆ ಅನುಗುಣವಾಗಿ ಹಣದ ತೊಂದರೆಗೆ ಪರಿಹಾರಗಳು ಇಲ್ಲಿವೆ

Astrology: ಜನ್ಮ ಕುಂಡಲಿ, ಗ್ರಹಗಳಿಗೆ ಅನುಗುಣವಾಗಿ ಹಣದ ತೊಂದರೆಗೆ ಪರಿಹಾರಗಳು ಇಲ್ಲಿವೆ

Financial Problems: ಜ್ಯೋತಿಷ್ಯಶಾಸ್ತ್ರದ ಪ್ರಕಾರ ಹಣಕಾಸಿನ ಕೊರತೆ ಇರುವವರು ಇಲ್ಲಿ ನೀಡಲಾಗಿರುವ ನಿಯಮಗಳನ್ನು ಪಾಲಿಸಬೇಕು.(ಲೇಖನ: ಎಚ್‌. ಸತೀಶ್‌ -ಜ್ಯೋತಿಷಿ)

 ಆರ್ಥಿಕ ಸಮಸ್ಯೆಗೆ ಜ್ಯೋತಿಷ್ಯದ ಪರಿಹಾರ (ಪ್ರಾತಿನಿಧಿಕ ಚಿತ್ರ)
ಆರ್ಥಿಕ ಸಮಸ್ಯೆಗೆ ಜ್ಯೋತಿಷ್ಯದ ಪರಿಹಾರ (ಪ್ರಾತಿನಿಧಿಕ ಚಿತ್ರ)

ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯಸ್ಸಿನ ವ್ಯಕ್ತಿಗಳವರೆಗೂ ಹಣದ ಅವಶ್ಯಕತೆ ಬಹಳಷ್ಟು ಇರುತ್ತದೆ. ಕೇವಲ ಜನ್ಮ ಕುಂಡಲಿಯನ್ನು ನೋಡಿ ಹಣದ ಸ್ಥಿತಿಗತಿಯನ್ನು ನಿರ್ಧರಿಸಲು ಸಾಧ್ಯವಾಗುದಿಲ್ಲ. ಜನ್ಮ ಕುಂಡಯಲ್ಲಿಯು ಕೇವಲ ಒಬ್ಬ ವ್ಯಕ್ತಿಗೆ ಸಂಬಂಧಪಟ್ಟಿರುತ್ತದೆ. ವಾಸ್ತು ವಿಚಾರವು ಹಣಕಾಸಿನ ವಿಚಾರಕ್ಕೆ ಹೆಚ್ಚಿನ ಪ್ರಾಮುಖ್ಯತೆ ಪಡೆದಿರುತ್ತದೆ. ಇದರ ಜೊತೆಗೆ ಕುಂಡಲಿಯನ್ನು ಹೊರತುಪಡಿಸಿ ಸಾಮಾನ್ಯವಾಗಿ ತಪ್ಪುಗಳು ಸಹ ಹಣಕಾಸಿನ ಕೊರತೆ ಉಂಟು ಮಾಡುತ್ತದೆ.

ಹಣಕಾಸಿನ ವಿಚಾರಕ್ಕೆ ಮೂಲವಾಗಿ ಬುಧ ಮತ್ತು ಶುಕ್ರ ಗ್ರಹಗಳನ್ನು ಪರಿಗಣಿಸಬೇಕು. ಇದರೊಂದಿಗೆ ಧೈರ್ಯದ ಅಗತ್ಯತೆಯು ಇದೆ. ಆದ್ದರಿಂದ ಮಂಗಳ ಗ್ರಹವನ್ನು ಗ್ರಹಿಸಬೇಕು. ಆತ್ಮವಿಶ್ವಾಸವಿಲ್ಲದೆ ಯಾವುದೇ ಕೆಲಸವನ್ನು ಮಾಡಲು ಸಾಧ್ಯವಿಲ್ಲ. ಆದ್ದರಿಂದ ರವಿ ಗ್ರಹವು ಅತಿ ಮುಖ್ಯವಾಗುತ್ತದೆ. ಈ ಕಾರಣಗಳಿಂದಾಗಿ ಹಣಕಾಸಿನ ಕೊರತೆ ಇರುವವರು ಕೆಳಕಂಡ ನಿಯಮಗಳನ್ನು ಪಾಲಿಸಬೇಕು.

ಹಣದ ತೊಂದರೆಗೆ ಪರಿಹಾರಗಳು

ಪ್ರತಿದಿನ ಬೆಳಗಿನ ವೇಳೆ ಸೂರ್ಯೋದಯವಾದ ಮೇಲೆ ಪೂರ್ವ ದಿಕ್ಕಿನಲ್ಲಿ ಇರುವ ಕೆಂಪು ಹೂ ಬಿಡುವ ಸಸ್ಯಗಳಿಗೆ ತಾಮ್ರದ ಚಿಕ್ಕ ಪಾತ್ರೆಯಿಂದ 12 ಬಾರಿ ನೀರನ್ನು ಹಾಕಬೇಕು. ಪ್ರತಿಯೊಂದು ಬಾರಿ ಸೂರ್ಯನ ದ್ವಾದಶ ನಾಮಗಳಲ್ಲಿ ಒಂದೊಂದು ನಾಮವನ್ನು ಜಿಪಿಸಬೇಕು. ಇದರಿಂದ ಕಾನೂನಿನಿಂದ ಎದುರಾಗುವ ತೊಂದರೆಗಳು ಇರುವುದಿಲ್ಲ. ಕುಟುಂಬದ ಹಿರಿಯರ ಬೆಂಬಲ ದೊರೆಯುತ್ತದೆ. ಆತ್ಮವಿಶ್ವಾಸವು ಹೆಚ್ಚುತ್ತದೆ.

ಧೈರ್ಯ ಮತ್ತು ಸಾಹಸದ ಗುಣಕ್ಕೆ ಕುಜನೂ (ಮಂಗಳ ಗ್ರಹ) ಮುಖ್ಯನಾಗುತ್ತಾನೆ. ಕುಜನ ಅತಿ ದೇವತೆಯು ಶ್ರೀ ಸುಬ್ರಹ್ಮಣ್ಯ ಸ್ವಾಮಿ ಮತ್ತು ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ. ಈ ಕಾರಣದಿಂದಾಗಿ ಹಣಕಾಸಿನ ಕೊರತೆ ಉಂಟಾದಾಗ ಮಾಡುವ ಉದ್ಯೋಗ ಮತ್ತು ವ್ಯಾಪಾರವನ್ನು ಅವಹೇಳನ ಮಾಡಬಾರದು. ಪ್ರತಿದಿನ ಸ್ನಾನ ಆದ ನಂತರ ಹಣೆಯಲ್ಲಿ ಕುಂಕುಮ ಮುಖ್ಯವಾಗಿ ವಿಭೂತಿಯನ್ನು ಧರಿಸಬೇಕು. ಆನಂತರ ಕುಲದೇವರಿಗೆ ನಮಸ್ಕರಿಸಿದಲ್ಲಿ ಧೈರ್ಯದಿಂದ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದೆ.

ಬುಧನು ಕೇವಲ ವಿದ್ಯಾಭ್ಯಾಸವಲ್ಲದೆ ಬುದ್ಧಿಶಕ್ತಿಗೂ ಅಧಿಪತಿಯಾಗುತ್ತಾನೆ. ಹಣಕಾಸಿನ ನಿರ್ವಹಣೆಗೆ ಬುದ್ಧಿಶಕ್ತಿಯು ಮುಖ್ಯವಾಗುತ್ತದೆ. ಆದ್ದರಿಂದ ಪ್ರತಿದಿನ ವಿಷ್ಣು ಸಹಸ್ರನಾಮವನ್ನು ಪಠಿಸುವುದು ಅಥವಾ ಕೇಳುವುದು ಒಳ್ಳೆಯದು. ಒಂದು ವೇಳೆ ಹಣದ ತೊಂದರೆ ಹೆಚ್ಚಾದಲ್ಲಿ ಪುರುಷ ಸೂಕ್ತ ಹೋಮವನ್ನು ಮಾಡಿಸಬೇಕಾಗುತ್ತದೆ.

ಶುಕ್ರನು ಕೇವಲ ವಿವಾಹದ ಬಗ್ಗೆ ಮಾತ್ರವಲ್ಲ ಆದಾಯದ ಬಗ್ಗೆಯೂ ತಿಳಿಸುತ್ತಾನೆ. ಶುಕ್ರನಿಗೆ ಇಷ್ಟ ದೈವ ಎಂದರೆ ಶ್ರೀ ಲಕ್ಷ್ಮಿ. ಆದ್ದರಿಂದ ಪ್ರತಿ ಶುಕ್ರವಾರಗಳಂದು ಸಂಜೆಯ ವೇಳೆ, ಆದರೆ ಸೂರ್ಯನು ಮುಳುಗುವ ಮುನ್ನ ಶ್ರೀ ಲಕ್ಷ್ಮಿಯ ಪೂಜೆಯನ್ನು ಮಾಡಬೇಕು. ಹಣದ ಕೊಂರತೆ ಹೆಚ್ಚಾಗಿದ್ದಲ್ಲಿ ಶ್ರೀಸೂಕ್ತ ಪೂರ್ವಕ ಹೋಮವನ್ನು ಮಾಡಿಸಬೇಕು.

ಜನ್ಮ ಕುಂಡಲಿಯಲ್ಲಿ ರವಿ ಮತ್ತು ಕುಜ ಗ್ರಹಗಳ ಸಂಯೋಗವಿದ್ದಲ್ಲಿ ಕುಟುಂಬದಲ್ಲಿನ ಹಿರಿಯರ ಆಶೀರ್ವಾದ ಬಲು ಮುಖ್ಯವಾಗುತ್ತದೆ. ತಂದೆ ಮತ್ತು ಕಿರಿ ಸೋದರ ಅಥವಾ ಸೋದರಿಯ ನಡುವೆ ಉತ್ತಮ ಹೊಂದಾಣಿಕೆ ಇರಬೇಕು. ಇದಕ್ಕಾಗಿ ಶ್ರಮಿಸಬೇಕು. ಇದರಿಂದ ಹಣಕಾಸಿನ ತೊಂದರೆ ಕಡಿಮೆಯಾಗುತ್ತದೆ.

ಕುಂಡಲಿಯಲ್ಲಿ ಕುಜ ಮತ್ತು ಬುಧರ ನಡುವೆ ಸಂಯೋಗವಿದ್ದಲ್ಲಿ ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಸಹಾಯ ಮಾಡಬೇಕು. ರವಿ ಮತ್ತು ಗುಜರ ನಡುವೆ ಸಂಯೋಗವಿದ್ದಲ್ಲಿ ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳಬಾರದು.

ಕುಜ ಮತ್ತು ಶುಕ್ರ ಗ್ರಹಗಳ ಸಂಯೋಜನೆ ಇದ್ದಲ್ಲಿ ಮನೆಯಲ್ಲಿರುವ ಹೆಣ್ಣು ಮಕ್ಕಳು ಹಣೆಯಲ್ಲಿ ಕುಂಕುಮ ಧರಿಸಬೇಕು. ಬಡವರ ಮನೆಯ ಕನ್ಯಾ ದಾನಕ್ಕೆ ಸಹಾಯ ಮಾಡಬೇಕು. ಇದರಿಂದ ಉತ್ತಮ ಅನ್ಯೋನ್ಯತೆ ಎಲ್ಲರೊಂದಿಗೆ ಉಂಟಾಗುತ್ತದೆ. ಬಲು ಮುಖ್ಯವಾದ ವಿಚಾರವೆಂದರೆ ಕುಟುಂಬದಲ್ಲಿರುವ ದಂಪತಿಗಳು ಪರಸ್ಪರ ಉತ್ತಮ ಬಾಂಧವ್ಯ ಹೊಂದಿರಬೇಕು.

ಕುಂಡಲಿಯಲ್ಲಿ ಬುಧ ಮತ್ತು ಶುಕ್ರರು ಸಂಯೋಜನೆಯಲ್ಲಿ ಇದ್ದಲ್ಲಿ ಮಾತಿನಲ್ಲಿ ಶುದ್ಧತೆ ಇರಬೇಕು. ಬಡ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಸಹಾಯ ನೀಡಬೇಕು.. ಹಣದ ಕೊರತೆ ಹೆಚ್ಚಾದಲ್ಲಿ ಶ್ರೀ ಸರಸ್ವತಿಗೆ ಮಲ್ಲಿಗೆ ಹೂವಿನಿಂದ ಪೂಜಿಸಬೇಕು. ಇದರಿಂದಾಗಿ ಹಣಕಾಸಿನ ಕೊರತೆಯೂ ಕಡಿಮೆಯಾಗಿ ಉತ್ತಮ ಆದಾಯ ದೊರೆಯುತ್ತದೆ.

ಜ್ಯೋತಿಷಿ: ಎಚ್‌. ಸತೀಶ್‌, ಬೆಂಗಳೂರು

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

mysore-dasara_Entry_Point
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.