ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Horoscope Today: ದಂಪತಿ ನಡುವಿದ್ದ ಮನಸ್ತಾಪ ಕೊನೆಯಾಗಲಿದೆ, ಸಮಾಜದಲ್ಲಿ ಗೌರವ ಪ್ರತಿಷ್ಠೆ ದೊರೆಯುತ್ತದೆ; ಏ. 25ರ ದಿನ ಭವಿಷ್ಯ

Horoscope Today: ದಂಪತಿ ನಡುವಿದ್ದ ಮನಸ್ತಾಪ ಕೊನೆಯಾಗಲಿದೆ, ಸಮಾಜದಲ್ಲಿ ಗೌರವ ಪ್ರತಿಷ್ಠೆ ದೊರೆಯುತ್ತದೆ; ಏ. 25ರ ದಿನ ಭವಿಷ್ಯ

25th ಏಪ್ರಿಲ್‌ 2024: ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು ನೀಡುತ್ತವೆ. ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರಿಗೆ ಇಂದು ಏನು ಫಲ? ಇಂದಿನ ದಿನಭವಿಷ್ಯ ಇಲ್ಲಿದೆ. (25th April 2024 Daily Horoscope).

25th ಏಪ್ರಿಲ್‌ 2024ರ ದಿನ ಭವಿಷ್ಯ
25th ಏಪ್ರಿಲ್‌ 2024ರ ದಿನ ಭವಿಷ್ಯ

ಇಂದಿನ ರಾಶಿ ಭವಿಷ್ಯ: ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಪ್ರತಿದಿನ ಅಚ್ಚುಕಟ್ಟಾಗಿ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. (25th April 2024 Daily Horoscope).

ಇಂದಿನ ಪಂಚಾಂಗ

ಶ್ರೀ ಕ್ರೋಧಿನಾಮ ಸಂವತ್ಸರ-ಉತ್ತರಾಯಣ-ವಸಂತ ಋತು-ಚೈತ್ರ ಮಾಸ-ಕೃಷ್ಣಪಕ್ಷ-ಗುರುವಾರ

ತಿಥಿ : ಬಿದಿಗೆ ಬೆಳಗ್ಗೆ 06.03 ರವರೆಗೂ ಇದ್ದು ನಂತರ ತದಿಗೆ ಆರಂಭವಾಗುತ್ತದೆ.

ನಕ್ಷತ್ರ : ವಿಶಾಖ ನಕ್ಷತ್ರವು ರಾತ್ರಿ 01.01 ರವರೆಗೂ ಇದ್ದು ನಂತರ ಅನೂರಾಧ ನಕ್ಷತ್ರ ಆರಂಭವಾಗುತ್ತದೆ.

ಸೂರ್ಯೋದಯ: ಬೆಳಗ್ಗೆ 06.03

ಸೂರ್ಯಾಸ್ತ: ಸಂಜೆ 06.32

ರಾಹುಕಾಲ : ಮಧ್ಯಾಹ್ನ 01.55 ರಿಂದ 03.29

ರಾಶಿಫಲ

ಸಿಂಹ

ಆತುರದ ನಿರ್ಧಾರಗಳು ಕುಟುಂಬದಲ್ಲಿ ಸಮಸ್ಯೆಯನ್ನು ಉಂಟುಮಾಡುತ್ತದೆ. ಆರೋಗ್ಯದಲ್ಲಿ ಸಮಸ್ಯೆಯೊಂದು ಕಂಡುಬರುತ್ತದೆ. ಸ್ನೇಹಿತರು ಅಥವಾ ಬಂಧು ಬಳಗದವರು ನಿಮ್ಮಿಂದ ಹಣದ ಸಹಾಯ ಬಯಸುತ್ತಾರೆ. ಮಕ್ಕಳ ಜೊತೆಯಲ್ಲಿಅನಾವಶ್ಯಕ ವಾದ ವಿವಾದವಿರುತ್ತದೆ. ಪ್ರೀತಿ ವಿಶ್ವಾಸದಿಂದ ಎಲ್ಲರ ಮನಸ್ಸನ್ನು ಗೆಲ್ಲುವಿರಿ. ಸಂಗಾತಿಯ ಸಹಾಯ ಸಹಕಾರ ಹೊಸ ಆಸೆಯನ್ನು ಮೂಡಿಸುತ್ತದೆ. ಆತ್ಮಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಧ್ಯಾನ ಮಾರ್ಗವನ್ನು ಅನುಸರಿಸುವಿರಿ ಪ್ರಾಣಿ ಪಕ್ಷಿಗಳಿಗೆ ಆಹಾರದ ವ್ಯವಸ್ಥೆ ಮಾಡಿ. ದಾಂಪತ್ಯ ಜೀವನದಲ್ಲಿ ಯಾವುದೇ ತೊಂದರೆ ಕಾಣುವುದಿಲ್ಲ. ಕೆಲಸ ಕಾರ್ಯದ ನಡುವೆ ವಿಶ್ರಾಂತಿ ತೆಗೆದುಕೊಳ್ಳುವಿರಿ.

ಪರಿಹಾರ : ಧಾರ್ಮಿಕ ಕೇಂದ್ರಕ್ಕೆ ಅಕ್ಕಿ ಬೇಳೆಯನ್ನು ನೀಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ: 12

ಅದೃಷ್ಟದ ದಿಕ್ಕು ಈಶಾನ್ಯ

ಅದೃಷ್ಟದ ಬಣ್ಣ : ನಸುಗೆಂಪು

ಕನ್ಯಾ

ಆತ್ಮವಿಶ್ವಾಸ ಗಳಿಸಲು ಯೋಗ ಪ್ರಾಣಾಯಾಮವನ್ನು ಆರಂಭಿಸುವಿರಿ. ಮಾಡುವ ಕೆಲಸವನ್ನು ಇಷ್ಟಪಟ್ಟು ಮಾಡುವ ಕಾರಣ ಯಶಸ್ಸು ದೊರೆಯುತ್ತದೆ. ಬೇರೆಯವರ ತಪ್ಪನ್ನು ಮನ್ನಿಸುವ ಗುಣ ನಿಮ್ಮಲ್ಲಿ ಇರುತ್ತದೆ. ಯಾವುದೇ ವಿಚಾರದಲ್ಲಿ ದೃಢವಾದ ನಿಲುವನ್ನು ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಕಷ್ಟದ ವೇಳೆ ಕುಟುಂಬದವರ ಸಹಾಯ ಸಹಕಾರ ಲಭಿಸುತ್ತದೆ. ಸಮಾಜದಲ್ಲಿ ಗೌರವ ಪ್ರತಿಷ್ಠೆಗಳು ಹೆಚ್ಚುತ್ತವೆ. ಮಕ್ಕಳ ಅಭಿವೃದ್ಧಿಗಾಗಿ ಹೊಸ ಯೋಜನೆಗಳನ್ನು ರೂಪಿಸುವಿರಿ. ಸಾಂಸಾರಿಕ ಜೀವನದಲ್ಲಿ ಯಾವುದೇ ತೊಂದರೆ ಇರುವುದಿಲ್ಲ. ದಂಪತಿಗಳ ನಡುವೆ ಪರಸ್ಪರ ಪ್ರೀತಿ ವಿಶ್ವಾಸವಿದೆ. ಕುಟುಂಬದ ಹಿರಿಯರ ಸಹಾಯ ಸಹಕಾರ ದೊರೆಯುತ್ತದೆ.

ಪರಿಹಾರ : ಧಾರ್ಮಿಕ ಕೇಂದ್ರಕ್ಕೆ ಪೂಜಾ ದ್ರವ್ಯಗಳನ್ನು ನೀಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 3

ಅದೃಷ್ಟದ ದಿಕ್ಕು : ಪೂರ್ವ

ಅದೃಷ್ಟದ ಬಣ್ಣ : ನೀಲಿ ಮಿಶ್ರಿತ ಬಿಳಿ

ತುಲಾ

ವಯಸ್ಸಿನ ಅಂತರವಿಲ್ಲದೆ ನಿತ್ಯ ಜೀವನಕ್ಕೆ ಕುಟುಂಬದ ಹಿರಿಯರನ್ನು ಅವಲಂಬಿಸುವಿರಿ. ನಿಮ್ಮಲ್ಲಿರುವ ಕ್ರಿಯಾಶೀಲತೆಯಿಂದ ಹಲವರು ಉತ್ತೇಜಿತಗೊಳ್ಳುತ್ತಾರೆ. ಪ್ರಯಾಣದ ಮೇಲೆ ವೇಳೆ ನಿಮಗೆ ಇಷ್ಟವಾದ ವಸ್ತುವೊಂದು ಕಳುವಾಗಬಹುದು ಎಚ್ಚರಿಕೆ ಇರಲಿ. ಒಂದು ರೀತಿಯ ಭಯವು ನಿಮ್ಮಲ್ಲಿ ಮನೆ ಮಾಡಿರುತ್ತದೆ. ಕುಟುಂಬದಲ್ಲಿ ಒಮ್ಮತದ ಕೊರತೆ ಕಂಡು ಬರಲಿದೆ. ಪೂರ್ವ ನಿಯೋಜಿತ ಕೆಲಸ ಕಾರ್ಯಗಳು ಅಪೂರ್ಣಗೊಳ್ಳಲಿವೆ. ನಗುವಿನಿಂದ ಎಲ್ಲರ ಪ್ರೀತಿ ವಿಶ್ವಾಸ ಗಳಿಸಬಲ್ಲಿರಿ. ಹಣಕಾಸಿನ ವ್ಯವಹಾರದಲ್ಲಿ ಅನಿರೀಕ್ಷಿತ ಲಾಭ ಗಳಿಸುವಿರಿ. ಅತಿಯಾದ ಆಸೆ ಇಲ್ಲದ ಕಾರಣ ಮನಸ್ಸಿಗೆ ಶಾಂತಿ ನೆಮ್ಮದಿಯು ಸದಾಕಾಲ ಇರಲಿದೆ.

ಪರಿಹಾರ : ಗೋಸೇವೆ ಮಾಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 10

ಅದೃಷ್ಟದ ದಿಕ್ಕು ದಕ್ಷಿಣ

ಅದೃಷ್ಟದ ಬಣ್ಣ: ಬಿಳಿ

ವೃಶ್ಚಿಕ

ಆರಂಭಿಸುವ ಕೆಲಸ ಕಾರ್ಯಗಳಲ್ಲಿ ಸಂಗಾತಿಯ ಪಾತ್ರ ಅತಿ ಮುಖ್ಯವಾಗುತ್ತದೆ. ಆತ್ಮವಿಶ್ವಾಸದಿಂದ ಯಶಸ್ಸನ್ನು ಗಳಿಸುವಿರಿ. ಸಹೋದ್ಯೋಗಿಗಳ ಸಲಹೆಯನ್ನು ಪಾಲಿಸಿದರೆ ಉದ್ಯೋಗದಲ್ಲಿ ಯಾವುದೇ ತೊಂದರೆ ಕಂಡುಬರುವುದಿಲ್ಲ. ಹಣಕಾಸಿನ ವಿಚಾರದಲ್ಲಿ ಉತ್ತಮ ಪ್ರಗತಿ ಸಾಧಿಸುವಿರಿ. ಹೊಸ ಜನರ ಪ್ರೀತಿ ವಿಶ್ವಾಸವನ್ನು ಗಳಿಸುವಿರಿ. ದಾಂಪತ್ಯದಲ್ಲಿ ಅನ್ಯೋನ್ಯತೆ ಕಂಡು ಬರುತ್ತದೆ. ನಿಮ್ಮನ್ನು ಹೊಗಳಿ ಕಾರ್ಯ ಸಾಧಿಸುವ ಜನರ ಬಗ್ಗೆ ಎಚ್ಚರಿಕೆ ಇರಲಿ. ಸಂಗಾತಿಯೊಂದಿಗೆ ಕಿರುಪ್ರವಾಸ ಕೈಗೊಳ್ಳುವಿರಿ. ವಾಹನ ಚಾಲನೆ ಮಾಡುವ ವೇಳೆ ಎಚ್ಚರಿಕೆ ವಹಿಸಿ. ಬೇಡದ ವಿಚಾರಗಳಿಗೆ ಯೋಚಿಸದೆ ಹಗುರವಾದ ಮನಸ್ಸಿನಿಂದ ಬಾಳಿರಿ.

ಪರಿಹಾರ : ದೇವರ ಮುಂದೆ ತುಪ್ಪದ ದೀಪ ಹಚ್ಚಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 1

ಅದೃಷ್ಟದ ದಿಕ್ಕು : ನೈರುತ್ಯ

ಅದೃಷ್ಟದ ಬಣ್ಣ: ಬೂದು

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).