ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಮುಸ್ತಫಿಜುರ್, ಚಹಾರ್ ಬಳಿಕ ಶ್ರೀಲಂಕಾ ವೇಗಿಯೂ ಔಟ್; ಸಿಎಸ್‌ಕೆ ತಂಡದಿಂದ ಹೊರನಡೆದ ಘಟಾನುಘಟಿ ಬೌಲರ್‌ಗಳು

ಮುಸ್ತಫಿಜುರ್, ಚಹಾರ್ ಬಳಿಕ ಶ್ರೀಲಂಕಾ ವೇಗಿಯೂ ಔಟ್; ಸಿಎಸ್‌ಕೆ ತಂಡದಿಂದ ಹೊರನಡೆದ ಘಟಾನುಘಟಿ ಬೌಲರ್‌ಗಳು

  • ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಭಾರಿ ಗಾಯದ ಹೊಡೆತ ಬಿದ್ದಿದೆ. ಶ್ರೀಲಂಕಾದ ಬಲಗೈ ವೇಗಿ ಮಥೀಶಾ ಪತಿರಾಣಾ ಗಾಯಗೊಂಡು ತವರಿಗೆ ಮರಳಿದ್ದಾರೆ. ಐಪಿಎಲ್‌ 2024ರಲ್ಲಿ ಉತ್ತಮ ಫಾರ್ಮ್‌ನಲ್ಲಿದ್ದ ಅವರು, ಆಡಿದ ಆರು ಪಂದ್ಯಗಳಲ್ಲಿ, 7.68 ಎಕಾನಮಿ ರೇಟ್‌ನಲ್ಲಿ 13 ವಿಕೆಟ್ ಕಬಳಿಸಿದ್ದಾರೆ. ಇದೀಗ ಸಿಎಸ್‌ಕೆ ತಂಡವು ಮತ್ತೋರ್ವ ವೇಗಿಯ ಸೇವೆ ಕಳೆದುಕೊಂಡಿದೆ.

ಈಗಾಗಲೇ ಮುಸ್ತಫಿಜುರ್ ರೆಹಮಾನ್, ಚೆನ್ನೈ ಸೂಪರ್ ಕಿಂಗ್ಸ್ ಬಳಗ ತೊರೆದು ರಾಷ್ಟ್ರೀಯ ತಂಡದ ಪರ ಆಡಲು ತವರಿಗೆ ಹಾರಿದ್ದಾರೆ. ಟೂರ್ನಿಯಲ್ಲಿ ಸಿಎಸ್‌ಕೆ ಪರ ಅವರು ಅಧಿಕ ವಿಕೆಟ್‌ ಕಬಳಿಸಿದ್ದರು. ಅತ್ತ ಗಾಯದ ಸಮಸ್ಯೆಯಿಂದಾಗಿ ದೀಪಕ್ ಚಹರ್ ಟೂರ್ನಿಯ ಉಳಿದ ಪಂದ್ಯಗಳಿಂದ ಬಹುತೇಕ ಹೊರಗುಳಿದಿದ್ದಾರೆ. ಶ್ರೀಲಂಕಾದ ವೇಗಿ ಮಥೀಶಾ ಪತಿರಾಣಾ ಕೂಡ ಸ್ನಾಯುಸೆಳೆತದ ಗಾಯದಿಂದ ಬಳಲುತ್ತಿದ್ದು, ಗಾಯದಿಂದ ಚೇತರಿಸಿಕೊಳ್ಳಲು ತವರಿಗೆ ಮರಳಿದ್ದಾರೆ. ಈ ಕುರಿತು ಚೆನ್ನೈ ಫ್ರಾಂಚೈಸಿ ಭಾನುವಾರ ದೃಢಪಡಿಸಿದೆ. ಹೀಗಾಗಿ ಮೇಲಿಂದ ಮೇಲೆ ಪ್ರಮುಖ ಆಟಗಾರರನ್ನು ಕಳೆದುಕೊಂಡು ಸಿಎಸ್‌ಕೆಗೆ ದೊಡ್ಡ ಹೊಡೆತ ಬಿದ್ದಿದೆ.
icon

(1 / 5)

ಈಗಾಗಲೇ ಮುಸ್ತಫಿಜುರ್ ರೆಹಮಾನ್, ಚೆನ್ನೈ ಸೂಪರ್ ಕಿಂಗ್ಸ್ ಬಳಗ ತೊರೆದು ರಾಷ್ಟ್ರೀಯ ತಂಡದ ಪರ ಆಡಲು ತವರಿಗೆ ಹಾರಿದ್ದಾರೆ. ಟೂರ್ನಿಯಲ್ಲಿ ಸಿಎಸ್‌ಕೆ ಪರ ಅವರು ಅಧಿಕ ವಿಕೆಟ್‌ ಕಬಳಿಸಿದ್ದರು. ಅತ್ತ ಗಾಯದ ಸಮಸ್ಯೆಯಿಂದಾಗಿ ದೀಪಕ್ ಚಹರ್ ಟೂರ್ನಿಯ ಉಳಿದ ಪಂದ್ಯಗಳಿಂದ ಬಹುತೇಕ ಹೊರಗುಳಿದಿದ್ದಾರೆ. ಶ್ರೀಲಂಕಾದ ವೇಗಿ ಮಥೀಶಾ ಪತಿರಾಣಾ ಕೂಡ ಸ್ನಾಯುಸೆಳೆತದ ಗಾಯದಿಂದ ಬಳಲುತ್ತಿದ್ದು, ಗಾಯದಿಂದ ಚೇತರಿಸಿಕೊಳ್ಳಲು ತವರಿಗೆ ಮರಳಿದ್ದಾರೆ. ಈ ಕುರಿತು ಚೆನ್ನೈ ಫ್ರಾಂಚೈಸಿ ಭಾನುವಾರ ದೃಢಪಡಿಸಿದೆ. ಹೀಗಾಗಿ ಮೇಲಿಂದ ಮೇಲೆ ಪ್ರಮುಖ ಆಟಗಾರರನ್ನು ಕಳೆದುಕೊಂಡು ಸಿಎಸ್‌ಕೆಗೆ ದೊಡ್ಡ ಹೊಡೆತ ಬಿದ್ದಿದೆ.(AFP)

ಮಥೀಶಾ ಪತಿರಾಣಾ ಸ್ನಾಯುಸೆಳೆತದ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಸಿಎಸ್‌ಕೆ ಭಾನುವಾರ ಹೇಳಿಕೆಯಲ್ಲಿ ತಿಳಿಸಿದೆ. ಸದ್ಯ ಅವರು ಗಾಯದಿಂದ ಚೇತರಿಸಿಕೊಳ್ಳಲು ಶ್ರೀಲಂಕಾಗೆ ಮರಳಿದ್ದಾರೆ. ಅವರು ಶೀಘ್ರ ಗುಣಮುಖರಾಗಲಿ ಎಂದು ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸ್ ಹಾರೈಸಿದೆ.
icon

(2 / 5)

ಮಥೀಶಾ ಪತಿರಾಣಾ ಸ್ನಾಯುಸೆಳೆತದ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಸಿಎಸ್‌ಕೆ ಭಾನುವಾರ ಹೇಳಿಕೆಯಲ್ಲಿ ತಿಳಿಸಿದೆ. ಸದ್ಯ ಅವರು ಗಾಯದಿಂದ ಚೇತರಿಸಿಕೊಳ್ಳಲು ಶ್ರೀಲಂಕಾಗೆ ಮರಳಿದ್ದಾರೆ. ಅವರು ಶೀಘ್ರ ಗುಣಮುಖರಾಗಲಿ ಎಂದು ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸ್ ಹಾರೈಸಿದೆ.(AFP)

ಬಲಗೈ ವೇಗಿ ಪ್ರಸ್ತುತ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಉತ್ತಮ ಲಯದಲ್ಲಿದ್ದರು. ಆಡಿದ ಆರು ಪಂದ್ಯಗಳಲ್ಲಿ, ಅವರು 7.68 ಎಕಾನಮಿ ರೇಟ್‌ನಲ್ಲಿ ರನ್‌ ಬಿಟ್ಟುಕೊಟ್ಟು 13 ವಿಕೆಟ್‌ ಕಬಳಿಸಿದ್ದಾರೆ. ಒಂದು ಇನ್ನಿಂಗ್ಸ್‌ನಲ್ಲಿ ನಾಲ್ಕು ವಿಕೆಟ್ ಪಡೆದಿದ್ದರು. ಮುಸ್ತಾಫಿಜುರ್ ರೆಹಮಾನ್ (14) ನಂತರ ತಂಡದ ಎರಡನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದಾರೆ.
icon

(3 / 5)

ಬಲಗೈ ವೇಗಿ ಪ್ರಸ್ತುತ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಉತ್ತಮ ಲಯದಲ್ಲಿದ್ದರು. ಆಡಿದ ಆರು ಪಂದ್ಯಗಳಲ್ಲಿ, ಅವರು 7.68 ಎಕಾನಮಿ ರೇಟ್‌ನಲ್ಲಿ ರನ್‌ ಬಿಟ್ಟುಕೊಟ್ಟು 13 ವಿಕೆಟ್‌ ಕಬಳಿಸಿದ್ದಾರೆ. ಒಂದು ಇನ್ನಿಂಗ್ಸ್‌ನಲ್ಲಿ ನಾಲ್ಕು ವಿಕೆಟ್ ಪಡೆದಿದ್ದರು. ಮುಸ್ತಾಫಿಜುರ್ ರೆಹಮಾನ್ (14) ನಂತರ ತಂಡದ ಎರಡನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದಾರೆ.(AP)

ಪತಿರಾಣಾ ಮಾತ್ರವಲ್ಲದೆ ಶ್ರೀಲಂಕಾದ ಮತ್ತೊಬ್ಬ ಸ್ಟಾರ್ ಬೌಲರ್‌ ಮಹೇಶ್ ತೀಕ್ಷಣಾ ಕೂಡಾ ಮುಂದಿನ ಪಂದ್ಯಗಳಿಗೆ ಲಭ್ಯವಿರುವುದಿಲ್ಲ. ಮುಂದಿನ ತಿಂಗಳು ನಡೆಯಲಿರುವ ಟಿ20 ವಿಶ್ವಕಪ್ ಪಂದ್ಯಾವಳಿಗೆ ಮುಂಚಿತವಾಗಿ ಯುಎಸ್ಎ ವೀಸಾ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಶ್ರೀಲಂಕಾದ ಸ್ಪಿನ್ನರ್ ತವರಿಗೆ ಮರಳಲಿದ್ದಾರೆ ಎಂದು ವರದಿಯಾಗಿದೆ.
icon

(4 / 5)

ಪತಿರಾಣಾ ಮಾತ್ರವಲ್ಲದೆ ಶ್ರೀಲಂಕಾದ ಮತ್ತೊಬ್ಬ ಸ್ಟಾರ್ ಬೌಲರ್‌ ಮಹೇಶ್ ತೀಕ್ಷಣಾ ಕೂಡಾ ಮುಂದಿನ ಪಂದ್ಯಗಳಿಗೆ ಲಭ್ಯವಿರುವುದಿಲ್ಲ. ಮುಂದಿನ ತಿಂಗಳು ನಡೆಯಲಿರುವ ಟಿ20 ವಿಶ್ವಕಪ್ ಪಂದ್ಯಾವಳಿಗೆ ಮುಂಚಿತವಾಗಿ ಯುಎಸ್ಎ ವೀಸಾ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಶ್ರೀಲಂಕಾದ ಸ್ಪಿನ್ನರ್ ತವರಿಗೆ ಮರಳಲಿದ್ದಾರೆ ಎಂದು ವರದಿಯಾಗಿದೆ.(AFP)

ಸದ್ಯ ಚೆನ್ನೈ ಸೂಪರ್ ಕಿಂಗ್ಸ್ ಸಾಕಷ್ಟು ಒತ್ತಡದಲ್ಲಿದೆ. ಮೇಲಿಂದ ಮೇಲೆ ಬೌಲರ್‌ಗಳೇ ಹೊರಬೀಳುತ್ತಿದ್ದಾರೆ. ಭಾನುವಾರ ನಡೆದ ಮೊದಲ ಪಂದ್ಯದಲ್ಲಿ ಚೆನ್ನೈ ತಂಡ ಪಂಜಾಬ್ ತಂಡವನ್ನು ಎದುರಿಸಿತ್ತು. ಅತ್ತ ಪ್ರಮುಖ ಆಟಗಾರರಿಲ್ಲದೆ ಪಂಜಾಬ್‌ ವಿರುದ್ಧ ತಂಡವು ಭರ್ಜರಿ ಜಯ ಸಾಧಿಸಿತು. ಹೀಗಾಗಿ ತಂಡದ ಆತ್ಮವಿಶ್ವಾಸ ಹೆಚ್ಚಿದೆ.
icon

(5 / 5)

ಸದ್ಯ ಚೆನ್ನೈ ಸೂಪರ್ ಕಿಂಗ್ಸ್ ಸಾಕಷ್ಟು ಒತ್ತಡದಲ್ಲಿದೆ. ಮೇಲಿಂದ ಮೇಲೆ ಬೌಲರ್‌ಗಳೇ ಹೊರಬೀಳುತ್ತಿದ್ದಾರೆ. ಭಾನುವಾರ ನಡೆದ ಮೊದಲ ಪಂದ್ಯದಲ್ಲಿ ಚೆನ್ನೈ ತಂಡ ಪಂಜಾಬ್ ತಂಡವನ್ನು ಎದುರಿಸಿತ್ತು. ಅತ್ತ ಪ್ರಮುಖ ಆಟಗಾರರಿಲ್ಲದೆ ಪಂಜಾಬ್‌ ವಿರುದ್ಧ ತಂಡವು ಭರ್ಜರಿ ಜಯ ಸಾಧಿಸಿತು. ಹೀಗಾಗಿ ತಂಡದ ಆತ್ಮವಿಶ್ವಾಸ ಹೆಚ್ಚಿದೆ.


IPL_Entry_Point

ಇತರ ಗ್ಯಾಲರಿಗಳು