ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಐಪಿಎಲ್‌ನಲ್ಲಿ ಸುನಿಲ್‌ ನರೈನ್‌ ವಿಶೇಷ ಮೈಲಿಗಲ್ಲು; ಜಡೇಜಾ, ಬ್ರಾವೋ ಬಳಿಕ ಈ ಸಾಧನೆ ಮಾಡಿದ 3ನೇ ಆಲ್‌ರೌಂಡರ್

ಐಪಿಎಲ್‌ನಲ್ಲಿ ಸುನಿಲ್‌ ನರೈನ್‌ ವಿಶೇಷ ಮೈಲಿಗಲ್ಲು; ಜಡೇಜಾ, ಬ್ರಾವೋ ಬಳಿಕ ಈ ಸಾಧನೆ ಮಾಡಿದ 3ನೇ ಆಲ್‌ರೌಂಡರ್

  • ಐಪಿಎಲ್‌ 2024ರಲ್ಲಿ ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ಎರಡರಲ್ಲೂ ಕೋಲ್ಕತ್ತಾ ನೈಟ್‌ ರೈಡರ್ಸ್‌ ಸ್ಪಿನ್ನರ್‌ ಸುನಿಲ್‌ ನರೈನ್‌ ಪ್ರಚಂಡ ಫಾರ್ಮ್‌ನಲ್ಲಿದ್ದಾರೆ. ಲಕ್ನೋ ವಿರುದ್ಧದ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿದ ಅವರು ಆಕರ್ಷಕ ಅರ್ಧಶತಕ ಸಿಡಿಸಿದರು. ಇದರೊಂದಿಗೆ ಐಪಿಎಲ್‌ನಲ್ಲಿ ವಿಶೇಷ ದಾಖಲೆಯೊಂದು ನಿರ್ಮಿಸಿದರು.

ಲಕ್ನೋದ ಏಕಾನ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದ ನರೈನ್‌, ಕೇವಲ 39 ಎಸೆತಗಳಲ್ಲಿ 6 ಬೌಂಡರಿ ಹಾಗೂ 7 ಸ್ಫೋಟಕ ಸಿಕ್ಸರ್‌ಗಳ ನೆರವಿಂದ 81 ರನ್‌ ಪೇರಿಸಿದರು. ಇದರೊಂದಿಗೆ ಐಪಿಎಲ್‌ನಲ್ಲಿ 1507 ರನ್‌ ಪೂರ್ಣಗೊಳಿಸಿದರು. 
icon

(1 / 6)

ಲಕ್ನೋದ ಏಕಾನ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದ ನರೈನ್‌, ಕೇವಲ 39 ಎಸೆತಗಳಲ್ಲಿ 6 ಬೌಂಡರಿ ಹಾಗೂ 7 ಸ್ಫೋಟಕ ಸಿಕ್ಸರ್‌ಗಳ ನೆರವಿಂದ 81 ರನ್‌ ಪೇರಿಸಿದರು. ಇದರೊಂದಿಗೆ ಐಪಿಎಲ್‌ನಲ್ಲಿ 1507 ರನ್‌ ಪೂರ್ಣಗೊಳಿಸಿದರು. (AP)

ಐಪಿಎಲ್‌ ಇತಿಹಾಸದಲ್ಲಿ ನರೈನ್‌ ಈಗಾಗಲೇ 150 ವಿಕೆಟ್‌ಗಳ ಗಡಿ ದಾಟಿದ್ದಾರೆ. ಒಟ್ಟು 176 ವಿಕೆಟ್‌ ಕಬಳಿಸಿರುವ ನರೈನ್‌, ಡೇಂಜರಸ್‌ ಬೌಲರ್‌ಗಳಲ್ಲಿ ಒಬ್ಬರು. ಇದೀಗ ಲಕ್ನೋ ವಿರುದ್ಧದ ಇನ್ನಿಂಗ್ಸ್‌ ಬಳಿಕ ಅವರು ವಿಶೇಷ ಮೈಲಿಗಲ್ಲು ತಲುಪಿದ್ದಾರೆ.
icon

(2 / 6)

ಐಪಿಎಲ್‌ ಇತಿಹಾಸದಲ್ಲಿ ನರೈನ್‌ ಈಗಾಗಲೇ 150 ವಿಕೆಟ್‌ಗಳ ಗಡಿ ದಾಟಿದ್ದಾರೆ. ಒಟ್ಟು 176 ವಿಕೆಟ್‌ ಕಬಳಿಸಿರುವ ನರೈನ್‌, ಡೇಂಜರಸ್‌ ಬೌಲರ್‌ಗಳಲ್ಲಿ ಒಬ್ಬರು. ಇದೀಗ ಲಕ್ನೋ ವಿರುದ್ಧದ ಇನ್ನಿಂಗ್ಸ್‌ ಬಳಿಕ ಅವರು ವಿಶೇಷ ಮೈಲಿಗಲ್ಲು ತಲುಪಿದ್ದಾರೆ.(ANI )

ಐಪಿಎಲ್‌ನಲ್ಲಿ 150ಕ್ಕೂ ಅಧಿಕ ವಿಕೆಟ್‌ಗಳು ಹಾಗೂ 1500ಕ್ಕೂ ಅಧಿಕ ರನ್‌ ಗಳಿಸಿದ ಕೇವಲ ಮೂರನೇ ಆಟಗಾರ ಎಂಬ ವಿಶೇಷ ಶ್ರೇಯಸ್ಸಿಗೆ ಕೆಕೆಆರ್‌ ಆಟಗಾರ ಪಾತ್ರರಾಗಿದ್ದಾರೆ.
icon

(3 / 6)

ಐಪಿಎಲ್‌ನಲ್ಲಿ 150ಕ್ಕೂ ಅಧಿಕ ವಿಕೆಟ್‌ಗಳು ಹಾಗೂ 1500ಕ್ಕೂ ಅಧಿಕ ರನ್‌ ಗಳಿಸಿದ ಕೇವಲ ಮೂರನೇ ಆಟಗಾರ ಎಂಬ ವಿಶೇಷ ಶ್ರೇಯಸ್ಸಿಗೆ ಕೆಕೆಆರ್‌ ಆಟಗಾರ ಪಾತ್ರರಾಗಿದ್ದಾರೆ.(ANI )

ಈಗಾಗಲೇ ಸಿಎಸ್‌ಕೆ ಆಲ್‌ರೌಂಡರ್‌ ರವೀಂದ್ರ ಜಡೇಜಾ (2894 ರನ್‌, 160 ವಿಕೆಟ್) ಹಾಗೂ ಮಾಜಿ ಆಟಗಾರ ಡ್ವೇನ್‌ ಬ್ರಾವೋ‌ (1560 ರನ್‌, 183 ವಿಕೆಟ್)‌ ಮಾತ್ರ ಈ ಸಾಧನೆ ಮಾಡಿದ್ದಾರೆ. ಇದೀಗ ಈಪಟ್ಟಿಗೆ ಸುನಿಲ್‌ ನರೈನ್‌ ಸೇರ್ಪಡೆಗೊಂಡಿದ್ದಾರೆ. ಅವರು 1507 ರನ್‌ ಹಾಗೂ 176* ವಿಕೆಟ್‌ ಪಡೆದಿದ್ದಾರೆ.
icon

(4 / 6)

ಈಗಾಗಲೇ ಸಿಎಸ್‌ಕೆ ಆಲ್‌ರೌಂಡರ್‌ ರವೀಂದ್ರ ಜಡೇಜಾ (2894 ರನ್‌, 160 ವಿಕೆಟ್) ಹಾಗೂ ಮಾಜಿ ಆಟಗಾರ ಡ್ವೇನ್‌ ಬ್ರಾವೋ‌ (1560 ರನ್‌, 183 ವಿಕೆಟ್)‌ ಮಾತ್ರ ಈ ಸಾಧನೆ ಮಾಡಿದ್ದಾರೆ. ಇದೀಗ ಈಪಟ್ಟಿಗೆ ಸುನಿಲ್‌ ನರೈನ್‌ ಸೇರ್ಪಡೆಗೊಂಡಿದ್ದಾರೆ. ಅವರು 1507 ರನ್‌ ಹಾಗೂ 176* ವಿಕೆಟ್‌ ಪಡೆದಿದ್ದಾರೆ.(IPL)

ಪ್ರಸಕ್ತ ಆವೃತ್ತಿಯಲ್ಲಿ ಬ್ಯಾಟಿಂಗ್‌ನಲ್ಲಿ ಅಮೋಘ ಫಾರ್ಮ್‌ನಲ್ಲಿರುವ ನರೈನ್‌ ಆಡಿದ 11 ಪಂದಗ್ಯಗಳಲ್ಲಿ 461 ರನ್‌ ಸಿಡಿಸಿದ್ದಾರೆ. ಇದರಲ್ಲಿ ಒಂದು ಶತಕ ಕೂಡಾ ಸೇರಿದೆ. 
icon

(5 / 6)

ಪ್ರಸಕ್ತ ಆವೃತ್ತಿಯಲ್ಲಿ ಬ್ಯಾಟಿಂಗ್‌ನಲ್ಲಿ ಅಮೋಘ ಫಾರ್ಮ್‌ನಲ್ಲಿರುವ ನರೈನ್‌ ಆಡಿದ 11 ಪಂದಗ್ಯಗಳಲ್ಲಿ 461 ರನ್‌ ಸಿಡಿಸಿದ್ದಾರೆ. ಇದರಲ್ಲಿ ಒಂದು ಶತಕ ಕೂಡಾ ಸೇರಿದೆ. (PTI)

ಅತ್ತ ಲಕ್ನೋ ವಿರುದ್ಧದ ಮೊದಲ ಇನ್ನಿಂಗ್ಸ್‌ ಬಳಿಕ, ನರೈನ್‌ ಪ್ರಸಕ್ತ ಆವೃತ್ತಿಯಲ್ಲಿ ಒಟ್ಟು 13 ವಿಕೆಟ್‌ ಕಬಳಿಸಿದ್ದಾರೆ.
icon

(6 / 6)

ಅತ್ತ ಲಕ್ನೋ ವಿರುದ್ಧದ ಮೊದಲ ಇನ್ನಿಂಗ್ಸ್‌ ಬಳಿಕ, ನರೈನ್‌ ಪ್ರಸಕ್ತ ಆವೃತ್ತಿಯಲ್ಲಿ ಒಟ್ಟು 13 ವಿಕೆಟ್‌ ಕಬಳಿಸಿದ್ದಾರೆ.(ANI )


IPL_Entry_Point

ಇತರ ಗ್ಯಾಲರಿಗಳು