ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Rama Navami 2024: ರಾಮ ದರ್ಬಾರ್‌ ಫೋಟೋವನ್ನು ಮನೆಯ ಯಾವ ದಿಕ್ಕಿನಲ್ಲಿಟ್ಟರೆ ಶುಭ? ಇಲ್ಲಿದೆ ವಾಸ್ತು ಸಲಹೆ

Rama Navami 2024: ರಾಮ ದರ್ಬಾರ್‌ ಫೋಟೋವನ್ನು ಮನೆಯ ಯಾವ ದಿಕ್ಕಿನಲ್ಲಿಟ್ಟರೆ ಶುಭ? ಇಲ್ಲಿದೆ ವಾಸ್ತು ಸಲಹೆ

Ram Darbar Photo: ಶ್ರೀರಾಮನನ್ನು ಆರಾಧಿಸುವ ಬಹುತೇಕ ಹಿಂದೂಗಳ ಮನೆಯಲ್ಲಿ ರಾಮ ದರ್ಬಾರ್‌ ಫೋಟೋ ಇದ್ದೇ ಇರುತ್ತದೆ. ಆದರೆ ಈ ಫೋಟೋವನ್ನು ನಿರ್ದಿಷ್ಟ ಸ್ಥಳದಲ್ಲಿ , ದಿಕ್ಕಿನಲ್ಲಿ ಇರಿಸಿದರೆ ಮನೆಯಲ್ಲಿ ಎಲ್ಲರಿಗೂ ಒಳಿತಾಗುತ್ತದೆ. ರಾಮ ದರ್ಬಾರ್‌ ಫೋಟೋಗೆ ಸಂಬಂಧಿಸಿದಂತೆ ಕೆಲವೊಂದು ವಾಸ್ತು ನಿಯಮಗಳು ಈ ರೀತಿ ಇವೆ.

ರಾಮ ದರ್ಬಾರ್‌ ಫೋಟೋಗೆ ವಾಸ್ತು ನಿಯಮಗಳು
ರಾಮ ದರ್ಬಾರ್‌ ಫೋಟೋಗೆ ವಾಸ್ತು ನಿಯಮಗಳು

ವಾಸ್ತು ಸಲಹೆಗಳು: ದೇಶಾದ್ಯಂತ ರಾಮನವಮಿ ಸಂಭ್ರಮ ಮನೆ ಮಾಡಿದೆ. ಉತ್ತರ ಪ್ರದೇಶದ ಅಯೋಧ್ಯೆ ಜೊತೆಗೆ ದೇಶದ ಶ್ರೀರಾಮನ ದೇವಾಲಯಗಳಲ್ಲಿ ರಾಮಚಂದ್ರನಿಗೆ ವಿಶೇಷ ಪೂಜೆ ಮಾಡಲಾಗುತ್ತಿದೆ. ಮನೆಗಳಲ್ಲಿ ಕೂಡಾ ಭಕ್ತರು ಪೂಜೆ, ಪುನಸ್ಕಾರಗಳಲ್ಲಿ ಭಾಗಿಯಾಗಿದ್ದಾರೆ.

ಬಹುತೇಕ ಹಿಂದೂಗಳ ಮನೆಯಲ್ಲಿ ಶ್ರೀರಾಮನ ಫೋಟೋ ಇರುತ್ತದೆ. ಆದರೆ ಮನೆಯಲ್ಲಿ ರಾಮ ದರ್ಬಾರ್‌ ಫೋಟೋ ಇದ್ದರೆ ಶುಭವೆಂದು ಪರಿಗಣಿಸಲಾಗಿದೆ. ಅದರಲ್ಲೂ ರಾಮನವಮಿ ದಿನ ರಾಮ್ ದರ್ಬಾರ್ ಫೋಟೋವನ್ನು ಪೂಜಿಸುವುದು ಅತ್ಯಂತ ಮಂಗಳಕರ ಮತ್ತು ಫಲಪ್ರದವೆಂದು ಪರಿಗಣಿಸಲಾಗಿದೆ. ಆದರೆ ಮನೆಯಲ್ಲಿ ರಾಮ್ ದರ್ಬಾರ್ ಚಿತ್ರವನ್ನು ಇಡುವಾಗ ನೀವು ಮರೆಯದೆ ವಾಸ್ತುವಿನ ಬಗ್ಗೆ ಗಮನ ಹರಿಸಬೇಕು.

ಚೈತ್ರ ಮಾಸದ ಶುಕ್ಲ ಪಕ್ಷದ 9ನೇ ದಿನ ರಾಮ ನವಮಿ

ಹಿಂದೂ ಧರ್ಮದಲ್ಲಿ, ರಾಮ ನವಮಿಯನ್ನು ಪ್ರತಿ ವರ್ಷ ಚೈತ್ರ ಮಾಸದ ಶುಕ್ಲ ಪಕ್ಷದ ಒಂಬತ್ತನೇ ದಿನ ಆಚರಿಸಲಾಗುತ್ತದೆ. ಈ ಶುಭ ದಿನದಂದು ಭಗವಾನ್ ಶ್ರೀರಾಮನು ವಿಷ್ಣುವಿನ ಏಳನೇ ಅವತಾರವಾಗಿ ಜನಿಸಿದನು ಎಂಬುದು ಧಾರ್ಮಿಕ ನಂಬಿಕೆ. ರಾಮನು ಜನಿಸಿದ ದಿನಾಂಕದಂದೇ ಪಟ್ಟಾಭಿಷೇಕ ಹಾಗೂ ಸೀತೆಯೊಂದಿಗೆ ಮದುವೆ ಆಯಿತೆಂದು ನಂಬಲಾಗಿದೆ. ಆದ್ದರಿಂದ, ಈ ದಿನ ಶ್ರೀರಾಮನ ಪೂಜೆಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಇದು ಚೈತ್ರ ನವರಾತ್ರಿಯ ಕೊನೆಯ ದಿನ. ರಾಮ ನವಮಿಯೊಂದಿಗೆ ಚೈತ್ರ ನವರಾತ್ರಿ ಸಮಾಪ್ತಿಯಾಗುತ್ತದೆ. ಈ ಬಾರಿ ನೀವು ರಾಮನವಮಿಯ ದಿನದಂದು ರಾಮ್ ದರ್ಬಾರ್‌ನ ಚಿತ್ರವನ್ನು ತರಲು ಬಯಸಿದರೆ ಅಥವಾ ಮನೆಯಲ್ಲಿ ಈಗಾಗಲೇ ರಾಮ್ ದರ್ಬಾರ್‌ನ ಫೋಟೋ ಅಥವಾ ಪ್ರತಿಮೆ ಇದ್ದರೆ, ಇಲ್ಲಿ ತಿಳಿಸುವ ಈ ವಾಸ್ತು ವಿಷಯಗಳನ್ನು ನೆನಪಿನಲ್ಲಿಡಿ. ಇದರಿಂದ ಜೀವನದಲ್ಲಿ ಸುಖ, ಸಮೃದ್ಧಿ ದೊರೆಯುತ್ತದೆ ಎಂದು ಹೇಳಲಾಗುತ್ತದೆ.

ರಾಮ್ ದರ್ಬಾರ್ ಪ್ರತಿಮೆಯಲ್ಲಿ ಭಗವಾನ್ ರಾಮನು ತಾಯಿ ಸೀತಾ, ಸಹೋದರ ಭರತ, ಲಕ್ಷ್ಮಣ, ಶತ್ರುಘ್ನ ಮತ್ತು ಅವನ ಮಹಾನ್ ಭಕ್ತ ಹನುಮಂತನೊಂದಿಗೆ ಕುಳಿತಿದ್ದಾನೆ. ಈ ಚಿತ್ರವು ಭಗವಾನ್ ರಾಮನ ರಾಜ್ಯ ಮತ್ತು ಅವನ ನಿಯಮಗಳ ಬಗ್ಗೆ ತಿಳಿಸುತ್ತದೆ. ಈ ಚಿತ್ರವನ್ನು ರಾಮ್ ದರ್ಬಾರ್ ಅಥವಾ ರಾಮ ರಾಜ್ಯ ಎಂದು ಕರೆಯಲಾಗುತ್ತದೆ. ನಂಬಿಕೆಗಳ ಪ್ರಕಾರ ರಾಮ್ ದರ್ಬಾರ್‌ನ ನಿಯಮಿತ ಪೂಜೆಯು ಮನೆ ಮನಗಳಲ್ಲಿ ಸಂತೋಷ ಮತ್ತು ಅದೃಷ್ಟವನ್ನು ಹೆಚ್ಚಿಸುತ್ತದೆ.

ರಾಮ ದರ್ಬಾರ್‌ಗೆ ಸಂಬಂಧಿಸಿದ ವಾಸ್ತು ಸಲಹೆಗಳು ಈ ರೀತಿ ಇದೆ

  • ವಾಸ್ತು ಪ್ರಕಾರ ರಾಮ್ ದರ್ಬಾರ್ ಫೋಟೋವನ್ನು ಉತ್ತರ ದಿಕ್ಕಿನಲ್ಲಿ ಇಡಬೇಕು. ಇದು ಮನೆಯಲ್ಲಿ ಧನಾತ್ಮಕತೆಯನ್ನು ಹೆಚ್ಚಿಸುತ್ತದೆ ಮತ್ತು ವಾಸ್ತು ದೋಷಗಳಿಂದ ಪರಿಹಾರವನ್ನು ನೀಡುತ್ತದೆ.
  • ಕುಟುಂಬದ ಎಲ್ಲಾ ಸದಸ್ಯರು ಪ್ರತಿದಿನ ರಾಮ್ ದರ್ಬಾರ್‌ ಫೋಟೋಗೆ ಕೈ ಮುಗಿಯಬೇಕು. ಹೀಗೆ ಮಾಡುವುದರಿಂದ ಜೀವನದಲ್ಲಿ ಸಂತೋಷ, ಸಮೃದ್ಧಿ ಮತ್ತು ಸಂಪತ್ತನ್ನು ತರುತ್ತದೆ ಎಂದು ನಂಬಲಾಗಿದೆ.
  • ಮನೆಯ ಪೂರ್ವ ದಿಕ್ಕಿನಲ್ಲಿ ರಾಮ್ ದರ್ಬಾರ್ ಚಿತ್ರವನ್ನು ಇಡುವುದರಿಂದ ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ ಮತ್ತು ಕುಟುಂಬ ಜೀವನದಲ್ಲಿ ಸಂತೋಷ ಮತ್ತು ಶಾಂತಿಯನ್ನು ಕಾಪಾಡುತ್ತದೆ ಎಂದು ನಂಬಲಾಗಿದೆ.
  • ರಾಮ ದರ್ಬಾರ್ ಫೋಟೋವನ್ನು ಪ್ರತಿದಿನ ಪೂಜಿಸುವುದರಿಂದ ಆರ್ಥಿಕ ಸಮಸ್ಯೆಗಳಿಂದ ಮುಕ್ತಿ ದೊರೆಯುತ್ತದೆ ಮತ್ತು ಜಾತಕದಲ್ಲಿರುವ ಎಲ್ಲಾ ಗ್ರಹ ದೋಷಗಳಿಂದ ಪರಿಹಾರ ದೊರೆಯುತ್ತದೆ ಎಂಬ ನಂಬಿಕೆ ಇದೆ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.