ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Tomorrow Horoscope: ವ್ಯಾಪಾರ ವ್ಯವಹಾರದಲ್ಲಿ ಉತ್ತಮ ಲಾಭ, ಮತ್ತೊಬ್ಬರ ಹಣಕಾಸಿನ ವ್ಯವಹಾರದಲ್ಲಿ ಭಾಗಿಯಾಗದಿರಿ; ನಾಳೆಯ ದಿನ ಭವಿಷ್ಯ

Tomorrow Horoscope: ವ್ಯಾಪಾರ ವ್ಯವಹಾರದಲ್ಲಿ ಉತ್ತಮ ಲಾಭ, ಮತ್ತೊಬ್ಬರ ಹಣಕಾಸಿನ ವ್ಯವಹಾರದಲ್ಲಿ ಭಾಗಿಯಾಗದಿರಿ; ನಾಳೆಯ ದಿನ ಭವಿಷ್ಯ

26th April 2024 Horoscope: ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ನಿಮಗೆ ಫಲಾಫಲಗಳನ್ನು ನೀಡುತ್ತವೆ. ನಾಳೆ ಯಾವ ರಾಶಿಯವರಿಗೆ ಶುಭ..? ಯಾರಿಗೆ ಅಶುಭ..? ಎಂಬುದನ್ನು ನೋಡೋಣ, ನಾಳೆಯ ದಿನ ಭವಿಷ್ಯ ಹೀಗಿದೆ.

ನಾಳೆಯ ದಿನ ಭವಿಷ್ಯ
ನಾಳೆಯ ದಿನ ಭವಿಷ್ಯ

ನಾಳೆಯ ದಿನ ಭವಿಷ್ಯ: 'ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. (26th April 2024 Horoscope).

ನಾಳೆಯ ಪಂಚಾಂಗ

ಶ್ರೀ ಕ್ರೋಧಿನಾಮ ಸಂವತ್ಸರ-ಉತ್ತರಾಯಣ-ವಸಂತ ಋತು-ಚೈತ್ರ ಮಾಸ-ಕೃಷ್ಣಪಕ್ಷ-ಶುಕ್ರವಾರ

ತಿಥಿ: ದಿನಪೂರ್ತಿ ತದಿಗೆ ಇರುತ್ತದೆ.

ನಕ್ಷತ್ರ : ಅನೂರಾಧ ನಕ್ಷತ್ರವು ರಾತ್ರಿ 02.02 ರವರೆಗೂ ಇದ್ದು ನಂತರ ಜ್ಯೇಷ್ಠ ನಕ್ಷತ್ರ ಆರಂಭವಾಗುತ್ತದೆ.

ಸೂರ್ಯೋದಯ: ಬೆಳಗ್ಗೆ 05.57

ಸೂರ್ಯಾಸ್ತ: ಸಂಜೆ 06.32

ರಾಹುಕಾಲ: ಬೆಳಗ್ಗೆ 10.47 ರಿಂದ ಮಧ್ಯಾಹ್ನ 12.21ವರೆಗೆ

ರಾಶಿಫಲ

ಮೇಷ

ವಾದ ವಿವಾದಗಳನ್ನು ಸುಲಭವಾಗಿ ಗೆಲ್ಲುವಿರಿ. ಹಾಡುಗಾರರು ಮತ್ತು ಬರಹಗಾರರಿಗೆ ಸಂತೋಷದ ದಿನವಾಗಲಿದೆ. ಹಣಕಾಸಿನ ಸಂಸ್ಥೆಯನ್ನು ನಿರ್ವಹಣೆಯಲ್ಲಿ ಸಹನೆಯಿಂದ ವ್ಯವಹರಿಸಬೇಕು. ಬಹು ದಿನಗಳಿಂದ ಇದ್ದ ಮನದ ಚಿಂತೆ ದೂರವಾಗುತ್ತದೆ. ವ್ಯಾಪಾರ ವ್ಯವಹಾರಗಳು ಸುಗಮವಾಗಿ ನಡೆಯುತ್ತವೆ. ವಿದ್ಯಾರ್ಥಿಗಳಿಗೆ ಕಲಿಕೆಯಲ್ಲಿ ಸಂತೃಪ್ತಿ ಇರುವುದಿಲ್ಲ.

ಪರಿಹಾರ : ಪೂರ್ವಿಕರ ಮನೆಯಲ್ಲಿ ನೀರಿನ ವ್ಯವಸ್ಥೆಯನ್ನು ಮಾಡಿ ದಿನದ ಕೆಲಸ ಆರಂಭಿಸಿ.

ಅದೃಷ್ಟದ ಸಂಖ್ಯೆ : 11

ಅದೃಷ್ಟದ ದಿಕ್ಕು : ಪಶ್ಚಿಮ

ಅದೃಷ್ಟದ ಬಣ್ಣ: ಮಣ್ಣಿನ ಬಣ್ಣ

ವೃಷಭ

ಜನೋಪಕಾರಿ ಕಾರ್ಯವೊಂದನ್ನು ಆರಂಭಿಸುವಿರಿ. ಉದ್ಯೋಗದಲ್ಲಿನ ಬದಲಾವಣೆಗಳಿಂದ ಯಾವುದೇ ತೊಂದರೆ ಇರದು. ಅನಾವಶ್ಯಕವಾಗಿ ಬೇರೆಯವರ ಹಣದ ವ್ಯವಹಾರಗಳ ಮಧ್ಯೆ ಭಾಗಿಯಾಗದಿರಿ. ವಿದ್ಯಾರ್ಥಿಗಳು ಗೆಲುವಿನ ಹುಮ್ಮಸ್ಸಿನಿಂದ ಬದುಕುತ್ತಾರೆ. ಉನ್ನತ ವಿದ್ಯಾಭ್ಯಾಸದ ಅವಕಾಶ ನಿಮ್ಮದಾಗಿರುತ್ತದೆ. ದೂರದ ಸ್ಥಳದಲ್ಲಿ ಸ್ಥಿರಾಸ್ತಿ ಕೊಳ್ಳುವಿರಿ.

ಪರಿಹಾರ : ಧಾರ್ಮಿಕ ಕೇಂದ್ರಕ್ಕೆ ದೀಪದ ಎಣ್ಣೆಯನ್ನು ನೀಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ 2

ಅದೃಷ್ಟದ ದಿಕ್ಕು : ಉತ್ತರ

ಅದೃಷ್ಟದ ಬಣ್ಣ : ಕೆಂಪು

ಮಿಥುನ

ನಿಮ್ಮ ಹೆಸರಿನಲ್ಲಿನ ಜಮೀನನ್ನು ಮಾರಾಟ ಮಾಡಿ ಮನೆಯನ್ನು ನವೀಕರಿಸುವಿರಿ. ವಿದ್ಯಾಭ್ಯಾಸದಲ್ಲಿನ ತೊಂದರೆ ನಿವಾರಣೆ ಆಗುವುದು. ವೃತ್ತಿಯಲ್ಲಿ ಅನುಕೂಲಕರ ಬದಲಾವಣೆ ಕಂಡುಬರುತ್ತದೆ. ಮನೆಯಲ್ಲಿ ವಿವಾಹದ ಮಾತುಕತೆ ನಡೆಯುತ್ತದೆ. ಮನದಲ್ಲಿ ಒಂದು ರೀತಿಯ ಆತಂಕ ಇರುತ್ತದೆ. ಪ್ರಸಕ್ತ ಸನ್ನಿವೇಶಕ್ಕೆ ಹೊಂದುಕೊಂಡು ಹೋಗುವಿರಿ. ಆದುನಿಕ ತಂತ್ರಜ್ಞಾನದ ಬಗ್ಗೆ ಅಧ್ಯಯನ ಮಾಡುವಿರಿ.

ಪರಿಹಾರ : ತಾಯಿಯ ಆಶೀರ್ವಾದ ಪಡೆದು ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 5

ಅದೃಷ್ಟದ ದಿಕ್ಕು : ಈಶಾನ್ಯ

ಅದೃಷ್ಟದ ಬಣ್ಣ: ಕಿತ್ತಳೆ

ಕಟಕ

ಉದ್ಯೋಗದಲ್ಲಿ ಯಾವುದೇ ತೊಂದರೆ ಇರದು. ವ್ಯಾಪಾರ ವ್ಯವಹಾರದಲ್ಲಿ ಉತ್ತಮ ಲಾಭವಿರುತ್ತದೆ. ಆತುರದಿಂದ ಯಾವುದೇ ಕೆಲಸವನ್ನು ಮಾಡದಿರಿ. ವಿದ್ಯಾರ್ಥಿಗಳಿಗೆ ಸಂತಸದ ಸುದ್ಧಿಯೊಂದು ದೊರೆಯಲಿದೆ. ವಾಹನ ಚಾಲನೆ ಮಾಡುವಾಗ ಎಚ್ಚರಿಕೆ ಇರಲಿ. ಶೀತದ ಆಹಾರವನ್ನು ಸೇವಿಸದಿರಿ. ಆತ್ಮೀಯರ ಕುಟುಂಬ ಕಲಹವು ನಿಮ್ಮಿಂದ ಬಗೆಹರಿಯಲಿದೆ.

ಪರಿಹಾರ : ಕುಟುಂಬದ ಹಿರಿಯರ ಮಾರ್ಗದರ್ಶನದಲ್ಲಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 12

ಅದೃಷ್ಟದ ದಿಕ್ಕು : ಪೂರ್ವ

ಅದೃಷ್ಟದ ಬಣ್ಣ: ಹಳದಿ ಬಣ್ಣ

ಸಿಂಹ

ಉದ್ಯೋಗದಲ್ಲಿನ ಆಂತರಿಕ ಕಲಹವೊಂದು ಮಾತುಕತೆಯಿಂದ ಕೊನೆಯಾಗಲಿದೆ. ಕೃಷಿ ಉತ್ಪನ್ನಗಳ ವ್ಯಾಪಾರದಲ್ಲಿ ಉತ್ತಮ ಲಾಭಾಂಶ ದೊರೆಯಲಿದೆ. ಕಷ್ಟವಾದರೂ ವಿದ್ಯಾರ್ಥಿಗಳು ಯಶಸ್ಸನ್ನು ಕಾಣುತ್ತಾರೆ. ರಾಜಕೀಯ ಧುರೀಣರಿಗೆ ಆತಂಕದ ಪರಿಸ್ಥಿತಿ ಎದುರಾದರೂ ತೊಂದರೆ ಆಗದು. ಬೃಹತ್ ಪ್ರಮಾಣದಲ್ಲಿ ವ್ಯಾಪಾರ ಆರಂಭಿಸುವ ಯೋಜನೆ ಈಡೇರಲಿದೆ.

ಪರಿಹಾರ : ಕಣ್ಣಿನ ತೊಂದರೆ ಇರುವವರಿಗೆ ಸಹಾಯ ಮಾಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ 3

ಅದೃಷ್ಟದ ದಿಕ್ಕು: ದಕ್ಷಿಣ

ಅದೃಷ್ಟದ ಬಣ್ಣ : ಹಸಿರು ಬಣ್ಣ

ಕನ್ಯಾ

ಉಷ್ಣದ ತೊಂದರೆ ನಿಮ್ಮನ್ನು ಕಾಡುತ್ತದೆ. ವೈಭವಯುತ ಕಾರನ್ನು ಕೊಳ್ಳುವ ಸಂಭವವಿದೆ. ವಾಹನಗಳ ದುರಸ್ತಿ ಮತ್ತು ಮಾರಾಟದಲ್ಲಿ ಲಾಭವಿದೆ. ಉದ್ಯೋಗ ಬದಲಿಸುವಿರಿ. ವಂಶದ ಆಸ್ಥಿಯೊಂದು ನಿಮ್ಮ ಪಾಲಾಗಲಿದೆ. ಹೊಸ ವ್ಯಾಪಾರ ಆರಂಭಿಸುವಿರಿ. ಸೋದರ ಅಥವ ಸೋದರಿಗೆ ಖ್ಯಾತ ಸಂಸ್ಥೆಯಲ್ಲಿ ಉದ್ಯೋಗ ದೊರೆಯಲಿದೆ. 

ಪರಿಹಾರ : ತಾಮ್ರದ ನಾಣ್ಯವನ್ನು ಖಾಕಿ ದಾರದಲ್ಲಿ ಕತ್ತಿನಲ್ಲಿ ಧರಿಸಿ.

ಅದೃಷ್ಟದ ಸಂಖ್ಯೆ : 6

ಅಷ್ಟದ ದಿಕ್ಕು : ನೈರುತ್ಯ

ಅದೃಷ್ಟದ ಬಣ್ಣ : ನೀಲಿ

ತುಲಾ

ಪರೋಪಕಾರದ ಗುಣ ನಿಮ್ಮಲ್ಲಿ ಇರುತ್ತದೆ. ಕುಟುಂಬದ ಆಂತರಿಕ ವಿಚಾರದಲ್ಲಿ ತೊಡಗಿಸಿಕೊಳ್ಳುವಿರಿ. ಬೇಸರದಿಂದ ಹೊರ ಬರಲು ಪ್ರವಾಸಕ್ಕೆ ತೆರಳುವಿರಿ. ನೌಕರಿಯಲ್ಲಿ ತೊಂದರೆ ಬಾರದು. ವ್ಯಾಪಾರದಲ್ಲಿಯೂ ಮಧ್ಯಮ ಗತಿಯ ಲಾಭ ಇರುತ್ತದೆ. ವಿದ್ಯಾರ್ಥಿಗಳು ಅನ್ಯರಿಗೆ ಉತ್ತಮ ಮಾದರಿ ಆಗುತ್ತಾರೆ. ಯಂತ್ರ ಸಂಬಂಧಿ ಸಂಸ್ಥೆಯಲ್ಲಿ ಉದ್ಯೋಗ ಲಭಿಸುತ್ತದೆ. ಸಂಬಂಧಿಯೊಬ್ಬರ ಜಮೀನನ್ನು ಕೊಳ್ಳುವಿರಿ.

ಪರಿಹಾರ : ಬೆಲ್ಲದಿಂದ ಮಾಡಿದ ಆಹಾರವನ್ನು ಸೇವಿಸಿ ದಿನದ ಕೆಲಸವನ್ನು ಆರಂಭಿಸಿ.

ಅದೃಷ್ಟದ ಸಂಖ್ಯೆ : 1

ಅದೃಷ್ಟದ ದಿಕ್ಕು: ಪಶ್ಚಿಮ

ಅದೃಷ್ಟದ ಬಣ್ಣ: ಗುಲಾಬಿ ಬಣ್ಣ

ವೃಶ್ಚಿಕ

ವ್ಯಾಪಾರ ವ್ಯವಹಾರದಲ್ಲಿ ಅಭಿವೃದ್ಧಿ ಕಂಡು ಬರಲಿದೆ. ಶೀತ ವಾಯುವಿನ ದೋಷವಿರುತ್ತದೆ. ಮನಸ್ಸು ಒಳ್ಳೆಯದಾದರು ಆಡುವ ಮಾತಿನಲ್ಲಿ ಹರಿತವಿರುತ್ತದೆ. ಇದರಿಂದಾಗಿ ಬಂಧು ವರ್ಗದವರು ನಿಮ್ಮಿಂದ ದೂರ ಉಳಿಯುವ ಸಾಧ್ಯತೆಗಳಿವೆ. ಕೈಹಿಡಿದ ಕೆಲಸ ಕಾರ್ಯಗಳಲ್ಲಿ ಗುರಿ ಸಾಧಿಸುವವರೆಗೂ ನಿಮ್ಮ ಯೋಜನೆಯನ್ನು ರಹಸ್ಯವಾಗಿಡುವಿರಿ. ಸರ್ಕಾರಿ ಅನುದಾನದಲ್ಲಿ ನಡೆಸುವ ವ್ಯಾಪಾರದಲ್ಲಿ ತೊಂದರೆ ಇಲ್ಲ.

ಪರಿಹಾರ : ಸೋದರರಿಗೆ ಸಹಾಯ ಮಾಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 4

ಅದೃಷ್ಟದ ದಿಕ್ಕು : ಉತ್ತರ

ಅದೃಷ್ಟದ ಬಣ್ಣ: ಬಿಳಿ

ಧನಸ್ಸು

ವಿದ್ಯಾರ್ಥಿಗಳು ಬುದ್ದಿವಂತಿಕೆಯಿಂದ ಕಲಿಕೆಯಲ್ಲಿ ಮುಂದುವರಿಯುತ್ತಾರೆ. ಕುಟುಂಬದ ಸದಸ್ಯರ ನಡುವೆ ಮನಸ್ತಾಪವಿರುತ್ತದೆ. ನೌಕರ ವೃಂದಕ್ಕೆ ಯಾವುದೇ ತೊಂದರೆ ಇರದು. ಮಾರಾಟ ಪ್ರತಿನಿಧಿಗಳ ಆದಾಯದಲ್ಲಿ ಅಭಿವೃದ್ದಿಯಿರುತ್ತದೆ. ವ್ಯಾಪಾರ ವ್ಯವಹಾರದಲ್ಲಿ ಲಾಭವಿರುತ್ತದೆ. ಕಲುಷಿತ ಆಹಾರ ಸೇವನೆಯಿಂದ ಅನಾರೋಗ್ಯ ಇರುತ್ತದೆ. ಮನದಲ್ಲಿರುವ ಆಶೋತ್ತರಗಳನ್ನು ಈಡೇರಿಸಿಕೊಳ್ಳಲು ಪ್ರಯತ್ನಿಸುವಿರಿ.

ಪರಿಹಾರ : ಮಕ್ಕಳಿಗೆ ಗೋಧಿ ಮತ್ತು ಬೆಲ್ಲದಿಂದ ತಯಾರಿಸಿದ ಸಿಹಿ ತಿಂಡಿಯನ್ನು ನೀಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 7

ಅದೃಷ್ಟದ ದಿಕ್ಕು : ಈಶಾನ್ಯ

ಅದೃಷ್ಟದ ಬಣ್ಣ: ಬೂದು ಬಣ್ಣ

ಮಕರ

ಚುರುಕುತನದಿಂದ ಕುಟುಂಬದ ಅವಶ್ಯಕತೆಗಳನ್ನು ಪೂರೈಸುವಿರಿ. ಹಿರಿಯರ ಮಾರ್ಗದರ್ಶನದ ಅವಶ್ಯಕತೆ ಇದೆ. ಕಾನೂನಿನ ತೊಂದರೆಯೊಂದು ನಿಮ್ಮನ್ನು ವಿಚಲಿತರನ್ನಾಗಿ ಮಾಡುತ್ತದೆ. ನೋಡಲು ಶಾಂತಿಯಿಂದ ಇದ್ದರೂ ಸಿಟ್ಟು ಬಂದಲ್ಲಿ ಉಗ್ರವಾಗಿ ವರ್ತಿಸುವಿರಿ. ಕುಟುಂಬದಲ್ಲಿ ಘಟನೆಯೊಂದು ನಡೆಯಲಿದೆ. ನಿಷ್ಪಕ್ಷಪಾತಿಗಳಾದ ನಿಮಗೆ ಉದ್ಯೋಗದಲ್ಲಿ ಯಾವುದೆ ತೊಂದರೆ ಬಾರದು.

ಪರಿಹಾರ : ಇರುವೆಗಳಿಗೆ ಆಹಾರ ಧಾನ್ಯವನ್ನು ಹಾಕಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 2

ಅದೃಷ್ಟದ ದಿಕ್ಕು : ಪೂರ್ವ

ಅದೃಷ್ಟದ ಬಣ್ಣ: ಕಂದು

ಕುಂಭ

ಸಮಾಜದಲ್ಲಿ ಉನ್ನತ ಸ್ಥಾನ ದೊರೆಯುತ್ತದೆ. ಕುಟುಂಬಕ್ಕಾಗಿ ಯಾವುದೇ ತ್ಯಾಗಕ್ಕೆ ಸಿದ್ದರಾಗುವಿರಿ. ಕೃಷಿ ಕಾರ್ಯದಲ್ಲಿ ಆಸಕ್ತಿ ಮೂಡುತ್ತದೆ. ಬೃಹತ್ ಯಂತ್ರಗಳ ತಂತ್ರಜ್ಞಾನದಲ್ಲಿ ಪರಿಣಿತಿ ಪಡೆಯುವಿರಿ. ಸುಲಭವಾಗಿ ನೀವು ಯಾರನ್ನೂ ನಂಬುವುದಿಲ್ಲ. ನೌಕರರಿಗೆ ಶುಭವಿದೆ. ವ್ಯಾಪಾರದಲ್ಲಿ ನಷ್ಟವಾಗುವುದಿಲ್ಲ. ನಿಮ್ಮ ಸೋದರ ಅಥವ ಸೋದರಿಯ ದಾಂಪತ್ಯ ಕಲಹ ಸುಖಾಂತ್ಯ ಹೊಂದುತ್ತದೆ. ಅನಿವಾರ್ಯವಾಗಿ ಆತ್ಮೀಯರಿಂದ ಹಣವನ್ನು ಪಡೆಯುವಿರಿ.

ಪರಿಹಾರ : ತಾಯಿಯವರಿಗೆ ಸಿಹಿತಿಂಡಿ ನೀಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 5

ಅದೃಷ್ಟದ ದಿಕ್ಕು : ದಕ್ಷಿಣ

ಅದೃಷ್ಟದ ಬಣ್ಣ: ತಿಳಿ ಹಸಿರು

ಮೀನ

ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದುವ ಮುನ್ನವೇ ಉದ್ಯೋಗ ದೊರೆಯುತ್ತದೆ, ಪರೋಪಕಾರಿಗಳಾದ ನಿಮಗೆ ಗಣ್ಯವ್ಯಕ್ತಿಗಳ ಆಶ್ರಯ ದೊರೆಯುತ್ತದೆ. ಸಂತೋಷವನ್ನಷ್ಟೇ ಹಂಚುವ ನೀವು ನೋವನ್ನು ಮರೆಯಲು ಪ್ರವ್ಯತ್ನಿಸುವಿರಿ. ಅನಾವಶ್ಯಕ ಚಿಂತೆಯೊಂದು ನಿಮ್ಮನ್ನು ಭಾದಿಸುತ್ತದೆ. ಹೊಸ ಮನೆಯನ್ನು ಕೊಳ್ಳುವ ಬಗ್ಗೆ ಮನೆಯಲ್ಲಿ ಮಾತುಕತೆ ನಡೆಯಲಿದೆ. ಉದ್ಯೋಗದಲ್ಲಿ ಪರಸ್ಪರ ಸಮನ್ವಯದ ಭಾವನೆ ಇರುತ್ತದೆ.

ಪರಿಹಾರ : ಪಕ್ಷಿಗಳಿಗೆ ಆಹಾರ ನೀಡಿ ದಿನದ ಕೆಲಸ ಆರಂಭಿಸಿ.

ಅದೃಷ್ಟದ ಸಂಖ್ಯೆ : 8

ಅದೃಷ್ಟದ ದಿಕ್ಕು : ನೈರುತ್ಯ

ಅದೃಷ್ಟದ ಬಣ್ಣ : ನೇರಳೆ

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).