ದೇವದತ್ ಪಡಿಕ್ಕಲ್ ಔಟ್; ಟೇಬಲ್ ಟಾಪರ್ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯಕ್ಕೆ ಲಕ್ನೋ ಪ್ಲೇಯಿಂಗ್ XI
LSG vs RR Playing XI : ಸೀಸನ್-17ರ ಐಪಿಎಲ್ನ 44ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ಲಕ್ನೋದ ಏಕನಾ ಕ್ರಿಕೆಟ್ ಮೈದಾನದಲ್ಲಿ ಸೆಣಸಾಟ ನಡೆಸಲಿವೆ.

ಸೀಸನ್-17ರ ಐಪಿಎಲ್ನ 44ನೇ ಪಂದ್ಯದಲ್ಲಿ ಟೇಬಲ್ ಟಾಪರ್ ರಾಜಸ್ಥಾನ್ ರಾಯಲ್ಸ್ ಮತ್ತು ಅಗ್ರ 4ನೇ ಸ್ಥಾನದಲ್ಲಿರುವ ಲಕ್ನೋ ಸೂಪರ್ ಜೈಂಟ್ಸ್ ತಂಡಗಳು (Lucknow Super Giants vs Rajasthan Royals) ಪರಸ್ಪರ ಮುಖಾಮುಖಿಯಾಗಲಿವೆ. ಲಕ್ನೋದ ಏಕನಾ ಕ್ರಿಕೆಟ್ ಮೈದಾನವು ಈ ಹೈವೋಲ್ಟೇಜ್ ಕದನಕ್ಕೆ ಆತಿಥ್ಯ ವಹಿಸಲಿದೆ. ಈ ಪಂದ್ಯದಲ್ಲಿ ಜಯಿಸಿ ಪ್ಲೇಆಫ್ ಪ್ರವೇಶಿಸಲು ಸಂಜು ಸ್ಯಾಮ್ಸನ್ (Sanju Samson) ನೇತೃತ್ವದ ತಂಡವು ಸಜ್ಜಾಗಿದೆ.
ರಾಜಸ್ಥಾನ್ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದೆ. ಈವರೆಗೂ ಆಡಿರುವ 8 ಪಂದ್ಯಗಳಲ್ಲಿ 7 ಪಂದ್ಯಗಳಲ್ಲಿ ಗೆಲುವು, 1ರಲ್ಲಿ ಸೋತ ಸಂಜು ಪಡೆ, 14 ಅಂಕ ಸಂಪಾದಿಸಿ ಅಗ್ರಸ್ಥಾನ ಪಡೆದಿದೆ. ಇನ್ನೊಂದು ಪಂದ್ಯ ಗೆದ್ದರೆ ಪ್ಲೇಆಫ್ಗೆ ಪ್ರವೇಶಿಸುವುದು ಖಚಿತ. ಮತ್ತೊಂದೆಡೆ ಲಕ್ನೋ ಆಡಿರುವ 8 ಪಂದ್ಯಗಳಲ್ಲಿ 5ರಲ್ಲಿ ಗೆದ್ದು, 3ರಲ್ಲಿ ಸೋತಿದೆ. 10 ಅಂಕ ಪಡೆದು ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ.
ದೇವದತ್ ಪಡಿಕ್ಕಲ್ ಔಟ್
ದೇವದತ್ ಪಡಿಕ್ಕಲ್ ಅವರನ್ನು ಕೈಬಿಡಲು ಲಕ್ನೋ ಸೂಪರ್ ಜೈಂಟ್ಸ್ ಟೀಮ್ ಮ್ಯಾನೇಜ್ಮೆಂಟ್ ಚಿಂತಿಸಿದೆ. ಇಲ್ಲಿಯವರೆಗೂ ಆಡಿರುವ 6 ಪಂದ್ಯಗಳಲ್ಲಿ ಕೇವಲ 38 ರನ್ ಗಳಿಸಿದ್ದಾರೆ. ಸಿಕ್ಕೆಲ್ಲಾ ಅವಕಾಶಗಳನ್ನು ಕೈ ಚೆಲ್ಲಿದ್ದಾರೆ. ಬದಲಿಗೆ ಬೌಲಿಂಗ್ ವಿಭಾಗವನ್ನು ಬಲಪಡಿಸಲು ಮಯಾಂಕ್ ಯಾದವ್ಗೆ ಚಾನ್ಸ್ ನೀಡಲು ನಿರ್ಧರಿಸಿದೆ. ಅಲ್ಲದೆ, ಮಯಾಂಕ್ ಇಂಜುರಿ ಕಾರಣ ಕೆಲ ಪಂದ್ಯಗಳಿಂದ ಆಡಿರಲಿಲ್ಲ.
ರಾಜಸ್ಥಾನ್ ರಾಯಲ್ಸ್ ಸಂಭಾವ್ಯ ಪ್ಲೇಯಿಂಗ್ XI
ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್, ಸಂಜು ಸ್ಯಾಮ್ಸನ್ (ನಾಯಕ & ವಿಕೆಟ್ ಕೀಪರ್), ರಿಯಾನ್ ಪರಾಗ್, ಶಿಮ್ರಾನ್ ಹೆಟ್ಮೆಯರ್, ಧ್ರುವ್ ಜುರೆಲ್, ಆರ್ ಅಶ್ವಿನ್, ಟ್ರೆಂಟ್ ಬೋಲ್ಟ್, ಆವೇಶ್ ಖಾನ್, ಸಂದೀಪ್ ಶರ್ಮಾ, ಯುಜ್ವೇಂದ್ರ ಚಹಲ್.
ಎಲ್ಎಸ್ಜಿ ಸಂಭಾವ್ಯ ಪ್ಲೇಯಿಂಗ್ XI
ಕ್ವಿಂಟನ್ ಡಿ ಕಾಕ್, ಕೆಎಲ್ ರಾಹುಲ್, ಮಾರ್ಕಸ್ ಸ್ಟೋಯ್ನಿಸ್, ನಿಕೋಲಸ್ ಪೂರನ್, ದೀಪಕ್ ಹೂಡಾ, ಆಯುಷ್ ಬದೋನಿ, ಕೃನಾಲ್ ಪಾಂಡ್ಯ, ಮ್ಯಾಟ್ ಹೆನ್ರಿ, ರವಿ ಬಿಷ್ಣೋಯ್, ಮೊಹ್ಸಿನ್ ಖಾನ್, ಮಯಾಂಕ್ ಯಾದವ್.
ಎಲ್ಎಸ್ಜಿ vs ಆರ್ಆರ್ ಮುಖಾಮುಖಿ ದಾಖಲೆ
ಲಕ್ನೋ ಮತ್ತು ರಾಜಸ್ಥಾನ್ ತಂಡಗಳು ಇದುವರೆಗೆ ಪರಸ್ಪರ 4 ಐಪಿಎಲ್ ಪಂದ್ಯಗಳನ್ನು ಆಡಿವೆ. ಎಲ್ಎಸ್ಜಿ 1 ಮತ್ತು ಆರ್ಆರ್ 3 ಪಂದ್ಯಗಳಲ್ಲಿ ಗೆದ್ದಿದೆ. ಆರ್ಆರ್ ವಿರುದ್ಧ ಲಕ್ನೋದ ಗರಿಷ್ಠ ಮೊತ್ತ 173 ಆಗಿದ್ದರೆ, ಎಲ್ಎಸ್ಜಿ ವಿರುದ್ಧ ಆರ್ಆರ್ ಗರಿಷ್ಠ ಮೊತ್ತ 193.
ಏಕನಾ ಕ್ರಿಕೆಟ್ ಮೈದಾನದ ಪಿಚ್ ವರದಿ
ಲಕ್ನೋದ ಏಕಾನಾ ಕ್ರಿಕೆಟ್ ಸ್ಟೇಡಿಯಂ ಸಾಮಾನ್ಯವಾಗಿ ಬೌಲರ್‌ಗಳಿಗೆ ಸಹಾಯ ಮಾಡುವ ಮೈದಾನವಾಗಿದೆ. ಈ ವರ್ಷ ಇದುವರೆಗೆ ಕೇವಲ 4 ಐಪಿಎಲ್ ಪಂದ್ಯಗಳನ್ನು ಆಯೋಜಿಸಿದೆ. ಒಟ್ಟು 156 ಓವರ್‌ಗಳಲ್ಲಿ 1,363 ರನ್ ಗಳಿಸಲಾಗಿದೆ. ಬೌಲರ್‌ಗಳು 47 ವಿಕೆಟ್ ಪಡೆದಿದ್ದಾರೆ. ಬ್ಯಾಟಿಂಗ್ ಮತ್ತು ಬೌಲಿಂಗ್ ನಡುವೆ ಸಮಾನ ಪೈಪೋಟಿ ನಡೆದಿದೆ.
ಹವಾಮಾನ ವರದಿ
ಕಳೆದ ಕೆಲವು ದಿನಗಳಿಂದ ಲಕ್ನೋ ವಿಪರೀತ ಬಿಸಿಯಿಂದ ಬಳಲುತ್ತಿದೆ. ಸಂಜೆ, ಲಕ್ನೋದಲ್ಲಿ ತಾಪಮಾನವು ಸುಮಾರು 30 ಡಿಗ್ರಿ ಇರುತ್ತದೆ. ಆರ್ದ್ರತೆಯು ಸುಮಾರು 21% ಆಗಿರುತ್ತದೆ. ಮಳೆ ಬರುವ ಸಾಧ್ಯತೆ ಇಲ್ಲ.
ಮತ್ತಷ್ಟು ಕ್ರಿಕೆಟ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
