ಕನ್ನಡ ಸುದ್ದಿ  /  ಚುನಾವಣೆಗಳು  /  ಲೋಕಸಭೆ ಚುನಾವಣೆ, ಕರ್ನಾಟಕದ ಮೊದಲ ಹಂತದ 14 ಕ್ಷೇತ್ರದಲ್ಲಿ 247 ಅಭ್ಯರ್ಥಿಗಳು, ಚಿಕ್ಕಬಳ್ಳಾಪುರದಲ್ಲಿ ಅಧಿಕ

ಲೋಕಸಭೆ ಚುನಾವಣೆ, ಕರ್ನಾಟಕದ ಮೊದಲ ಹಂತದ 14 ಕ್ಷೇತ್ರದಲ್ಲಿ 247 ಅಭ್ಯರ್ಥಿಗಳು, ಚಿಕ್ಕಬಳ್ಳಾಪುರದಲ್ಲಿ ಅಧಿಕ

ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿ ಅಂತಿಮವಾಗಿದ್ದು, 247 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ.

ಕರ್ನಾಟಕದ ಮೊದಲ ಹಂತದ ಲೋಕಸಭೆ ಚುನಾವಣೆಗೆ ಅಭ್ಯರ್ಥಿಗಳ ಕಣ ಚಿತ್ರಣ ಅಂತಿಮಗೊಂಡಿದೆ.
ಕರ್ನಾಟಕದ ಮೊದಲ ಹಂತದ ಲೋಕಸಭೆ ಚುನಾವಣೆಗೆ ಅಭ್ಯರ್ಥಿಗಳ ಕಣ ಚಿತ್ರಣ ಅಂತಿಮಗೊಂಡಿದೆ.

ಬೆಂಗಳೂರು: ಲೋಕಸಭೆ ಚುನಾವಣೆಗೆ ಕರ್ನಾಟಕದ ಮೊದಲನೇ ಹಂತದ 14 ಕ್ಷೇತ್ರದಲ್ಲಿ 247 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ. ಇದರಲ್ಲಿ 21 ಮಹಿಳಾ ಅಭ್ಯರ್ಥಿಗಳೂ ಸೇರಿದ್ದಾರೆ. ಬೆಂಗಳೂರಿನ ನಾಲ್ಕು, ಮೈಸೂರು, ಚಾಮರಾಜನಗರ, ಮಂಡ್ಯ, ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ, ಹಾಸನ ಲೋಕಸಭಾ ಕ್ಷೇತ್ರಗಳಲ್ಲಿ ನಾಮಪತ್ರ ವಾಪಾಸ್‌ ಪಡೆಯಲು ಸೋಮವಾರ ಕಡೆಯ ದಿನವಾಗಿತ್ತು. ಕೊನೆ ದಿನವಾದ ಸೋಮವಾರ ಒಟ್ಟು 53 ಅಭ್ಯರ್ಥಿಗಳು ನಾಮಪತ್ರ ವಾಪಾಸ್‌ ಪಡೆದುಕೊಂಡರು. ಇದರಿಂದ 14 ಕ್ಷೇತ್ರಗಳಲ್ಲಿ ಅಂತಿಮ ಕಣ ಚಿತ್ರಣ ಅಂತಿಮಗೊಂಡಿದೆ.

ಟ್ರೆಂಡಿಂಗ್​ ಸುದ್ದಿ

ಇಬ್ಬರು ಮಂಜುನಾಥ್‌ ಕಣದಲ್ಲಿ

ಬೆಂಗಳೂರು ಗ್ರಾಮಾಂತರದಲ್ಲಿ ಡಾ.ಸಿ.ಎನ್‌.ಮಂಜುನಾಥ್‌ ಅವರಿಗೆ ಠಕ್ಕರ್‌ ನೀಡಲು ನಾಲ್ವರು ಮಂಜುನಾಥ್‌ ಎನ್ನುವವರು ನಾಮಪತ್ರ ಸಲ್ಲಿಸಿದ್ದರು. ಇದರಲ್ಲಿಇಬ್ಬರು ವಾಪಾಸ್‌ ಪಡೆದಿದ್ದು ಮತ್ತೊಬ್ಬರು ಸಿ.ಎನ್‌.ಮಂಜುನಾಥ್‌ ಪಕ್ಷೇತರರಾಗಿ ಉಳಿದಿದ್ದಾರೆ. ಇದೇ ರೀತಿ ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಶೋಭಾ ಕರಂದ್ಲಾಜೆ ಅವರಿಗೆ ಸ್ಪರ್ಧೆ ನೀಡಲು ಶೋಭಾ ಹೆಸರಿನ ಅಭ್ಯರ್ಥಿ ಕಣದಲ್ಲಿ ಉಳಿದಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ಅತಿ ಹಚ್ಚಿನ 29 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಬೆಂಗಳೂರು ಕೇಂದ್ರದಲ್ಲಿ 24, ಬೆಂಗಳೂರು ದಕ್ಷಿಣದಲ್ಲಿ 21, ಚಿತ್ರದುರ್ಗ 20 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ. ದಕ್ಷಿಣಕನ್ನಡದಲ್ಲಿ 9 ಹಾಗೂ ಉಡುಪಿ ಚಿಕ್ಕಮಗಳೂರಿನಲ್ಲಿ 10 ಅಭ್ಯರ್ಥಿಗಳು ಕಣದಲ್ಲಿದ್ಧಾರೆ ಎಂದು ಕರ್ನಾಟಕ ಚುನಾವಣಾಧಿಕಾರಿ ಮಾಹಿತಿ ನೀಡಿದ್ದಾರೆ.

ಮೈಸೂರಲ್ಲಿ 18 ಅಭ್ಯರ್ಥಿಗಳು

ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಚುನಾವಣೆ ಯಲ್ಲಿ ಸ್ಪರ್ಧೆ ಬಯಸಿ ಉಮೇದುವಾರಿಕೆ ಸಲ್ಲಿಸಿರುವ ಅಭ್ಯರ್ಥಿಗಳ ನಾಮಪತ್ರ ಹಿಂಪಡೆಯಲು ಅಂತಿಮ ದಿನವಾಗಿದ್ದ ಇಂದು (ಏ.8) ಆರು ಅಭ್ಯರ್ಥಿಗಳು ನಾಮಪತ್ರ ವಾಪಸ್ ಪಡೆದಿದ್ದು, ಅಂತಿಮವಾಗಿ ಕಣದಲ್ಲಿ 18 ಅಭ್ಯರ್ಥಿಗಳು ಉಳಿದಿದ್ದಾರೆ.

ಮೈಸೂರಿನಲ್ಲಿ ಪಕ್ಷೇತರ ಅಭ್ಯರ್ಥಿಗಳಾದ ಆರ್. ಮಹೇಶ್, ಎಸ್.ದೊರೆಸ್ವಾಮಿ ನಾಯಕ, ರಾಜಣ್ಣ, ಶಿವನಂಜಯ್ಯ, ಶ್ರೀನಿವಾಸ್ ಬೋಗಾದಿ ಹಾಗೂ ಸಣ್ಣ ನಾಯಕ ನಾಮಪತ್ರ ವಾಪಸ್ ಪಡೆದಿದ್ದಾರೆ.

ಅಂತಿಮ ಕಣದಲ್ಲಿ 18 ಅಭ್ಯರ್ಥಿಗಳು: ಸುನಿಲ್ ಟಿ. ಆರ್ (ಸೋಶಿಯಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ ಪಕ್ಷ), ಎಂ.ಎಸ್ ಪ್ರವೀಣ್ (ಕರ್ನಾಟಕ ರಾಷ್ಟ್ರ ಸಮಿತಿ), ಎ.ಎಸ್ ಸತೀಶ್ (ಅಖಿಲ ಭಾರತ ಹಿಂದೂ ಮಹಾ ಸಭಾ ), ಪಿ.ಎಸ್ ಯಡಿಯೂರಪ್ಪ (ಪಕ್ಷೇತರ ), ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ (ಭಾರತೀಯ ಜನತಾ ಪಕ್ಷ), ಹೆಚ್.ಕೆ ಕೃಷ್ಣ (ಕರುನಾಡು ಪಾರ್ಟಿ ),ಲೀಲಾವತಿ ಜೆ ಎಸ್ (ಉತ್ತಮ ಪ್ರಜಾಕೀಯ ಪಕ್ಷ), ರಂಗಸ್ವಾಮಿ ಎಂ (ಪಕ್ಷೇತರ ), ರಾಮಮೂರ್ತಿ ಎಂ (ಪಕ್ಷೇತರ ), ಹರೀಶ್ ಎನ್ (ಸೋಶಿಯಲಿಸ್ಟ್ ಪಾರ್ಟಿ ), ಎಂ ಲಕ್ಷ್ಮಣ್ (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ), ಕ್ರಿಸ್ಟೋಫರ್ ರಾಜಕುಮಾರ್ (ಇಂಡಿಯನ್ ಮೂವ್ಮೆಂಟ್ ಪಾರ್ಟಿ ), ಪಿ ಕೆ ದರ್ಶನ್ ಶೌರಿ (ಪಕ್ಷೇತರ ), ರಾಜು (ಪಕ್ಷೇತರ), ಹೆಚ್ .ಎಂ. ನಂಜುಂಡಸ್ವಾಮಿ (ಸಮಾಜವಾದಿ ಜನತಾ ಪಾರ್ಟಿ -ಕರ್ನಾಟಕ ), ಎನ್.ಅಂಬರೀಷ್ (ಕರ್ನಾಟಕ ಜನತಾ ಪಕ್ಷ ), ಎ.ಜಿ ರಾಮಚಂದ್ರ ರಾವ್ (ಜಾತ್ಯತೀತ ಪ್ರಜಾಪ್ರಭುತ್ವ ಕಾಂಗ್ರೆಸ್ ), ಅಂಬೇಡ್ಕರ್ ಸಿ ಜೆ (ಪಕ್ಷೇತರ ) ಅಂತಿಮ ಕಣದ ಅಭ್ಯರ್ಥಿಗಳಾಗಿದ್ದಾರೆ.

ಮಂಡ್ಯ ಕ್ಷೇತ್ರದಲ್ಲಿ 14 ಅಭ್ಯರ್ಥಿಗಳು

ಮಂಡ್ಯ ಲೋಕಸಭಾ ಸಾರ್ವತ್ರಿಕ ಚುನಾವಣೆ-2024 ಕ್ಕೆ ಸಂಬಂಧಿಸಿ ಒಟ್ಟು 27 ಅಭ್ಯರ್ಥಿಗಳು ನಾಮಪತ್ರವನ್ನು ಸಲ್ಲಿಸಿದ್ದು, 08 ಅಭ್ಯರ್ಥಿಗಳ ನಾಮಪತ್ರಗಳು ತಿರಸ್ಕೃತವಾಗಿದೆ. 05 ಅಭ್ಯರ್ಥಿಗಳು ನಾಮಪತ್ರಗಳನ್ನು ಹಿಂಪಡೆದಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ.ಕುಮಾರ ತಿಳಿಸಿದ್ದಾರೆ.

ಪಕ್ಷೇತರ ಅಭ್ಯರ್ಥಿಗಳಾದ ಚಿಕ್ಕನಂಜಾಚಾರಿ, ಕೆ. ಶಿವಾನಂದ, ಲೋಲ, ಯೋಗೇಶ್ ಮತ್ತು ಶಿವನಂಜಪ್ಪ ನಾಮಪತ್ರ ಹಿಂಪಡೆದಿದ್ದಾರೆ.

ಅಂತಿಮ ಕಣದಲ್ಲಿರುವ 14 ಅಭ್ಯರ್ಥಿಗಳಿದ್ದಾರೆ. ಹೆಚ್. ಡಿ. ಕುಮಾರಸ್ವಾಮಿ - ಜನತಾ ದಳ (ಜಾತ್ಯತೀತ), ವೆಂಕಟರಮಣೇಗೌಡ - ಭಾರತೀಯ ರಾಷ್ಟೀಯ ಕಾಂಗ್ರೆಸ್, ಶಿವಶಂಕರ್.ಎಸ್ - ಬಹುಜನ ಸಮಾಜ ಪಾರ್ಟಿ, ಚಂದ್ರಶೇಖರ ಕೆ. ಆರ್ - ಕರ್ನಾಟಕ ರಾಷ್ಟ್ರ ಸಮಿತಿ, ಬೂದಯ್ಯ - ಕರುನಾಡು ಪಾರ್ಟಿ, ಹೆಚ್. ಡಿ. ರೇವಣ್ಣ - ಪೂರ್ವಾಂಚಲ್ ಮಹಾ ಪಂಚಾಯತ್ ಪಾರ್ಟಿ, ಲೋಕೇಶ ಎಸ್ - ಉತ್ತಮ ಪ್ರಜಾಕೀಯ ಪಕ್ಷ, ಎಸ್. ಅರವಿಂದ್ - ಪಕ್ಷೇತರ, ಚನ್ನಮಾಯಿಗೌಡ - ಪಕ್ಷೇತರ, ಚಂದನ್ ಗೌಡ. ಕೆ - ಪಕ್ಷೇತರ, ಎನ್. ಬಸವರಾಜು - ಪಕ್ಷೇತರ, ಬೀರೇಶ್. ಸಿ. ಟಿ - ಪಕ್ಷೇತರ, ರಾಮಯ್ಯ. ಡಿ - ಪಕ್ಷೇತರ ಹಾಗೂ ರಂಜಿತ. ಎನ್ - ಪಕ್ಷೇತರ, ಒಟ್ಟು 14 ಅಭ್ಯರ್ಥಿಗಳು ಅಂತಿಮ ಕಣದಲ್ಲಿರುವವರು.