ಕನ್ನಡ ಸುದ್ದಿ  /  ಚುನಾವಣೆಗಳು  /  ಭಾರತದಲ್ಲಿ ನಡೆಯಲಿರುವ ಚುನಾವಣೆಗಳು

ಭಾರತದಲ್ಲಿ ನಡೆಯಲಿರುವ ಚುನಾವಣೆಗಳು

ವಿಧಾನಸಭೆ ಚುನಾವಣೆ 2024
2024 ರಲ್ಲಿ ಲೋಕಸಭೆಗೆ ಸಾರ್ವತ್ರಿಕ ಚುನಾವಣೆಯ ಜೊತೆಗೆ, ಹಲವು ರಾಜ್ಯಗಳ ವಿಧಾನಸಭೆಗಳಿಗೂ ಚುನಾವಣೆಗಳು ನಡೆಯಲಿವೆ. ನವೆಂಬರ್ 2023 ರಲ್ಲಿ, ತೆಲಂಗಾಣ, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್‌ಗಢ ರಾಜ್ಯಗಳ ವಿಧಾನಸಭೆಗಳಿಗೆ ಚುನಾವಣೆಗಳು ನಡೆದವು. ಈ ವರ್ಷದ (2024) ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಸಾರ್ವತ್ರಿಕ ಚುನಾವಣೆಗಳ ಜೊತೆಗೆ ಆಂಧ್ರ ಪ್ರದೇಶ, ಒಡಿಶಾ, ಸಿಕ್ಕಿಂ ಮತ್ತು ಅರುಣಾಚಲ ಪ್ರದೇಶ ರಾಜ್ಯಗಳ ವಿಧಾನಸಭೆಗಳಿಗೆ ಚುನಾವಣೆ ನಡೆಯಲಿದೆ. ಅಲ್ಲದೆ, ನವೆಂಬರ್‌ನಲ್ಲಿ ಹರಿಯಾಣ, ಮಹಾರಾಷ್ಟ್ರ ಮತ್ತು ಜಾರ್ಖಂಡ್ ರಾಜ್ಯಗಳ ವಿಧಾನಸಭೆಗಳಿಗೂ ಚುನಾವಣೆ ನಡೆಯಲಿದೆ.

ವಿವಿಧ ರಾಜ್ಯಗಳ ವಿಧಾನಸಭೆಗಳ ಮುಕ್ತಾಯ ದಿನಾಂಕ
2024ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗಳನ್ನು ಒಮ್ಮೆ ಪರಿಶೀಲಿಸೋಣ. ಆಂಧ್ರಪ್ರದೇಶ ಸರ್ಕಾರದ ಅವಧಿ ಜೂನ್ 11ಕ್ಕೆ ಕೊನೆಗೊಳ್ಳಲಿದೆ. ಅರುಣಾಚಲ ಪ್ರದೇಶದ ಅವಧಿ ಜೂನ್ 2 ರಂದು, ಒಡಿಶಾದ ಅವಧಿ ಜೂನ್ 24 ರಂದು ಮತ್ತು ಸಿಕ್ಕಿಂನ ಅವಧಿ ಜೂನ್ 2 ರಂದು ಕೊನೆಗೊಳ್ಳಲಿದೆ. ಅಷ್ಟರ ಒಳಗೆ ಚುನಾವಣೆಗಳು ನಡೆದು ಹೊಸ ಮುಖ್ಯಮಂತ್ರಿ, ನೂತನ ಶಾಸಕರು ಪ್ರಮಾಣ ವಚನ ಸ್ವೀಕರಿಸಬೇಕಿದೆ.

ವಿವಿಧ ರಾಜ್ಯಗಳ ವಿಧಾನಸಭೆ ಚುನಾವಣೆಗಳ ವೇಳಾಪಟ್ಟಿ
ಕಳೆದ ವರ್ಷ ತೆಲಂಗಾಣ, ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಗಢ ಮತ್ತು ಮಿಜೋರಾಂ ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಗಳು ನಡೆದಿದ್ದವು. 2024ರಲ್ಲಿ ಲೋಕಸಭೆ ಚುನಾವಣೆ ಹೊರತಾಗಿ ವಿವಿಧ ರಾಜ್ಯಗಳ ವಿಧಾನಸಭೆ ಚುನಾವಣೆಯೂ ನಡೆಯಲಿದೆ. ಆಂಧ್ರಪ್ರದೇಶ, ಅರುಣಾಚಲ ಪ್ರದೇಶ, ಒಡಿಶಾ, ಸಿಕ್ಕಿಂ, ಹರಿಯಾಣ, ಮಹಾರಾಷ್ಟ್ರ, ಜಾರ್ಖಂಡ್ ಸೇರಿದಂತೆ 7 ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ.

ಚುನಾವಣೆಗಳು 2024

ಕ್ರ ಸಂರಾಜ್ಯಚುನಾವಣೆ ವರ್ಷಪ್ರಸ್ತುತ ಅವಧಿವಿಧಾನಸಭಾ ಕ್ಷೇತ್ರಲೋಕಸಭಾ ಕ್ಷೇತ್ರರಾಜ್ಯಸಭಾ ಕ್ಷೇತ್ರ
1
ಲೋಕಸಭೆ ಚುನಾವಣೆಲೋಕಸಭೆ ಚುನಾವಣೆ
2024ಏಪ್ರಿಲ್-ಮೇ 2024NA545NA
2
ಅರುಣಾಚಲ ಪ್ರದೇಶಅರುಣಾಚಲ ಪ್ರದೇಶ
2024ಏಪ್ರಿಲ್-ಮೇ 20246021
3
ಒಡಿಶಾಒಡಿಶಾ
2024ಏಪ್ರಿಲ್-ಮೇ 20241472110
4
ಸಿಕ್ಕಿಂಸಿಕ್ಕಿಂ
2024ಏಪ್ರಿಲ್-ಮೇ 20243211
5
ಹರಿಯಾಣಹರಿಯಾಣ
2024ಏಪ್ರಿಲ್-ಮೇ 202490105
6
ಮಹಾರಾಷ್ಟ್ರಮಹಾರಾಷ್ಟ್ರ
2024ನವೆಂಬರ್ 20242884819
7
ಜಾರ್ಖಂಡ್ಜಾರ್ಖಂಡ್
2024ಡಿಸೆಂಬರ್ 202481146

ಮುಂಬರುವ ವಿಧಾನಸಭೆ ಚುನಾವಣೆ ವೇಳಾಪಟ್ಟಿ

ಕ್ರ ಸಂರಾಜ್ಯಚುನಾವಣೆ ವರ್ಷಪ್ರಸ್ತುತ ಅವಧಿವಿಧಾನಸಭಾ ಕ್ಷೇತ್ರಲೋಕಸಭಾ ಕ್ಷೇತ್ರರಾಜ್ಯಸಭಾ ಕ್ಷೇತ್ರ
1
ಛತ್ತೀಸ್‌ಗಡಛತ್ತೀಸ್‌ಗಡ
2023ಡಿಸೆಂಬರ್ 202390115
2
ಮಿಜೋರಾಂಮಿಜೋರಾಂ
2023ಡಿಸೆಂಬರ್ 20234011
3
ಮಧ್ಯಪ್ರದೇಶಮಧ್ಯಪ್ರದೇಶ
2023ಡಿಸೆಂಬರ್ 20232302911
4
ರಾಜಸ್ಥಾನರಾಜಸ್ಥಾನ
2023ಡಿಸೆಂಬರ್ 20232002510
5
ತೆಲಂಗಾಣತೆಲಂಗಾಣ
2023ಡಿಸೆಂಬರ್ 2023119177
6
ಆಂಧ್ರಪ್ರದೇಶಆಂಧ್ರಪ್ರದೇಶ
2023ಜೂನ್ 20231752511
7
ಅರುಣಾಚಲ ಪ್ರದೇಶಅರುಣಾಚಲ ಪ್ರದೇಶ
2024ಏಪ್ರಿಲ್-ಮೇ 20246021
8
ಒಡಿಶಾಒಡಿಶಾ
2024ಏಪ್ರಿಲ್-ಮೇ 20241472110
9
ಸಿಕ್ಕಿಂಸಿಕ್ಕಿಂ
2024ಏಪ್ರಿಲ್-ಮೇ 20243211
10
ಹರಿಯಾಣಹರಿಯಾಣ
2024ಏಪ್ರಿಲ್-ಮೇ 202490105
11
ಮಹಾರಾಷ್ಟ್ರಮಹಾರಾಷ್ಟ್ರ
2024ನವೆಂಬರ್ 20242884819
12
ಜಾರ್ಖಂಡ್ಜಾರ್ಖಂಡ್
2024ಡಿಸೆಂಬರ್ 202481146
13
ದೆಹಲಿದೆಹಲಿ
2025ಫೆಬ್ರುವರಿ 20257073
14
ಬಿಹಾರಬಿಹಾರ
2025ನವೆಂಬರ್ 20252434016
15
ಅಸ್ಸಾಂಅಸ್ಸಾಂ
2026ಮೇ 2026126147
16
ಕೇರಳಕೇರಳ
2026ಮೇ 2026140209
17
ತಮಿಳುನಾಡುತಮಿಳುನಾಡು
2026ಮೇ 20262343918
18
ಪಶ್ಚಿಮ ಬಂಗಾಳಪಶ್ಚಿಮ ಬಂಗಾಳ
2026ಮೇ 20262944216
19
ಪುದುಚೇರಿಪುದುಚೇರಿ
2026ಜೂನ್ 20263011
20
ಗೋವಾಗೋವಾ
2027ಮಾರ್ಚ್ 20274021
21
ಮಣಿಪುರಮಣಿಪುರ
2027ಮಾರ್ಚ್ 20276021
22
ಪಂಜಾಬ್ಪಂಜಾಬ್
2027ಮಾರ್ಚ್ 2027117137
23
ಉತ್ತರಾಖಂಡಉತ್ತರಾಖಂಡ
2027ಮಾರ್ಚ್ 20277053
24
ಉತ್ತರ ಪ್ರದೇಶಉತ್ತರ ಪ್ರದೇಶ
2027ಮೇ 20274038031
25
ಗುಜರಾತ್ಗುಜರಾತ್
2027ಡಿಸೆಂಬರ್ 20271822611
26
ಹಿಮಾಚಲ ಪ್ರದೇಶಹಿಮಾಚಲ ಪ್ರದೇಶ
2027ಡಿಸೆಂಬರ್ 20276843
27
ಮೇಘಾಲಯಮೇಘಾಲಯ
2028ಮಾರ್ಚ್ 20286021
28
ನಾಗಾಲ್ಯಾಂಡ್ನಾಗಾಲ್ಯಾಂಡ್
2028ಮಾರ್ಚ್ 20286011
29
ತ್ರಿಪುರತ್ರಿಪುರ
2028ಮಾರ್ಚ್ 20286021
30
ಕರ್ನಾಟಕಕರ್ನಾಟಕ
2028ಮೇ 20282242812

ಆಂಧ್ರ ಪ್ರದೇಶ: ಆಂಧ್ರ ಪ್ರದೇಶ ವಿಧಾನಸಭೆ ಚುನಾವಣೆ 2024 ವೇಳಾಪಟ್ಟಿ

ಆಂಧ್ರಪ್ರದೇಶ ವಿಧಾನಸಭೆಯ ಚುನಾವಣೆಯು 2024 ರ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ನಡೆಯಲಿದೆ. ಆಂಧ್ರದಲ್ಲಿ ಒಟ್ಟು 175 ಶಾಸಕ ಸ್ಥಾನಗಳಿದ್ದು, ಎಲ್ಲ ಸ್ಥಾನಗಳಿಗೂ ಚುನಾವಣೆ ನಡೆಯಲಿದೆ. ಆಂಧ್ರ ಪ್ರದೇಶ ವಿಧಾನಸಭೆಯ ಅವಧಿಯು 11 ಜೂನ್ 2024 ರಂದು ಕೊನೆಗೊಳ್ಳುತ್ತದೆ. ಈ ರಾಜ್ಯದ ಕೊನೆಯ ವಿಧಾನಸಭಾ ಚುನಾವಣೆಗಳು ಏಪ್ರಿಲ್ 2019 ರಲ್ಲಿ ನಡೆದಿತ್ತು. ವೈ.ಎಸ್.ಜಗನ್ ಮೋಹನ್ ರೆಡ್ಡಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷವು ಸರ್ಕಾರ ರಚನೆ ಮಾಡಿ ಆಡಳಿತ ನಡೆಸುತ್ತಿದೆ. 175 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಆಂಧ್ರಪ್ರದೇಶದಲ್ಲಿ 88 ಮ್ಯಾಜಿಕ್ ನಂಬರ್. 88 ಸದಸ್ಯ ಬಲ ಇರುವ ಪಕ್ಷವು ಸರ್ಕಾರ ರಚಿಸಲಿದೆ. ಚಂದ್ರಬಾಬು ನಾಯ್ಡು ನೇತೃತ್ವದ ತೆಲುಗು ದೇಶಂ ಪಕ್ಷ ಆಂಧ್ರದಲ್ಲಿ ಪ್ರಮುಖ ವಿರೋಧ ಪಕ್ಷವಾಗಿದೆ. ಇದರೊಂದಿಗೆ ಜನಸೇನಾ, ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳೂ ಆಂಧ್ರದಲ್ಲಿ ಅಸ್ತಿತ್ವ ಹೊಂದಿವೆ.

ಅರುಣಾಚಲ ಪ್ರದೇಶ: ಅರುಣಾಚಲ ಪ್ರದೇಶ ವಿಧಾನಸಭೆ ಚುನಾವಣೆ 2024 ವೇಳಾಪಟ್ಟಿ

ಅರುಣಾಚಲ ಪ್ರದೇಶ ವಿಧಾನಸಭೆಗೆ 2024 ರಲ್ಲಿ ಚುನಾವಣೆ ನಡೆಯಲಿದೆ. ಅರುಣಾಚಲ ಪ್ರದೇಶ ವಿಧಾನಸಭೆ ಅವಧಿಯು ಜೂನ್ 2, 2024 ಕ್ಕೆ ಕೊನೆಗೊಳ್ಳುತ್ತದೆ. ಈ ಹಿಂದೆ 2019ರ ಏಪ್ರಿಲ್‌ನಲ್ಲಿ ವಿಧಾನಸಭೆ ಚುನಾವಣೆ ನಡೆದಿತ್ತು. ಪ್ರಸ್ತುತ ಅರುಣಾಚಲ ಪ್ರದೇಶದಲ್ಲಿ ಬಿಜೆಪಿ (ಭಾರತೀಯ ಜನತಾ ಪಕ್ಷ) ಸರ್ಕಾರ ಅಸ್ತಿತ್ವದಲ್ಲಿದೆ. ಪೆಮಾ ಖಂಡು ಮುಖ್ಯಮಂತ್ರಿ. ಇಲ್ಲಿ ಕಾಂಗ್ರೆಸ್ ಪ್ರಮುಖ ಪ್ರತಿಪಕ್ಷವಾಗಿದೆ. 60 ಕ್ಷೇತ್ರಗಳಿರುವ ಅರುಣಾಚಲ ಪ್ರದೇಶದಲ್ಲಿ 31 ಮ್ಯಾಜಿಕ್ ನಂಬರ್. ಅಂದರೆ 31 ಸ್ಥಾನ ಗೆಲ್ಲುವ ಯಾವುದೇ ಪಕ್ಷವು ಸರ್ಕಾರ ರಚಿಸಬಹುದು. ಕಳೆದ ಬಾರಿ ಬಿಜೆಪಿ 49 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು.

ಒಡಿಶಾ: ಒಡಿಶಾ ವಿಧಾನಸಭೆ ಚುನಾವಣೆ 2024 ವೇಳಾಪಟ್ಟಿ

ಒಡಿಶಾ ವಿಧಾನಸಭೆಗೆ 2024ರಲ್ಲಿ ಚುನಾವಣೆ ನಡೆಯಲಿದೆ. ಒಡಿಶಾ ವಿಧಾನಸಭೆಯ ಅವಧಿ 24 ಜೂನ್ 2024 ರಂದು ಕೊನೆಗೊಳ್ಳುತ್ತದೆ. ಈ ಹಿಂದೆ 2019ರ ಏಪ್ರಿಲ್‌ನಲ್ಲಿ ವಿಧಾನಸಭೆ ಚುನಾವಣೆ ನಡೆದಿತ್ತು. ಚುನಾವಣೆ ನಂತರ ಬಿಜು ಜನತಾದಳ ರಾಜ್ಯ ಸರ್ಕಾರವನ್ನು ರಚಿಸಿತು ಮತ್ತು ನವೀನ್ ಪಟ್ನಾಯಕ್ ಮುಖ್ಯಮಂತ್ರಿಯಾದರು. ಒಟ್ಟು 147 ಕ್ಷೇತ್ರಗಳನ್ನು ಹೊಂದಿರುವ ಒಡಿಶಾದಲ್ಲಿ 74 ಮ್ಯಾಜಿಕ್ ನಂಬರ್. ಅಂದರೆ 74 ಸ್ಥಾನಗಳನ್ನು ಗೆಲ್ಲುವ ಪಕ್ಷವು ಸರ್ಕಾರ ರಚಿಸುತ್ತದೆ. ಕಳೆದ ಚುನಾವಣೆಯಲ್ಲಿ ಬಿಜು ಜನತಾ ದಳ 114 ಸ್ಥಾನಗಳನ್ನು ಗೆದ್ದಿತ್ತು. ಬಿಜೆಪಿ 22 ಮತ್ತು ಕಾಂಗ್ರೆಸ್ 9 ಸ್ಥಾನಗಳನ್ನು ಗೆದ್ದಿದೆ. ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ದೀರ್ಘಾವಧಿ ಮುಖ್ಯಮಂತ್ರಿಯಾಗಿದ್ದ ದಾಖಲೆ ಸೃಷ್ಟಿಸಿದ್ದಾರೆ. ನವೀನ್ ಪಟ್ನಾಯಕ್ ಅವರು ಸತತ 20 ವರ್ಷಗಳಿಗೂ ಹೆಚ್ಚು ಕಾಲ ಮುಖ್ಯಮಂತ್ರಿಯಾಗಿದ್ದಾರೆ.

ಸಿಕ್ಕಿಂ: ಸಿಕ್ಕಿಂ ವಿಧಾನಸಭೆ ಚುನಾವಣೆ 2024 ವೇಳಾಪಟ್ಟಿ

ಸಿಕ್ಕಿಂ ವಿಧಾನಸಭೆಗೆ 32 ಸದಸ್ಯರನ್ನು ಆಯ್ಕೆ ಮಾಡಲು 2024ರಲ್ಲಿ ಚುನಾವಣೆ ನಡೆಯಲಿದೆ. ಸಿಕ್ಕಿಂ ವಿಧಾನಸಭೆಯ ಅವಧಿಯು 2ನೇ ಜೂನ್ 2024 ರಂದು ಕೊನೆಗೊಳ್ಳುತ್ತದೆ. ಈ ಹಿಂದೆ 2019ರ ಏಪ್ರಿಲ್‌ನಲ್ಲಿ ವಿಧಾನಸಭೆ ಚುನಾವಣೆ ನಡೆದಿತ್ತು. ಚುನಾವಣೆಯ ನಂತರ ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ ಪಕ್ಷವು ಸರ್ಕಾರವನ್ನು ರಚಿಸಿತು. ಪ್ರೇಮ್ ಸಿಂಗ್ ತಮಾಂಗ್ ಮುಖ್ಯಮಂತ್ರಿಯಾದರು. ಸಿಕ್ಕಿಂ ಡೆಮಾಕ್ರಟಿಕ್ ಫ್ರಂಟ್ 16 ಸ್ಥಾನಗಳನ್ನು ಗೆದ್ದರೆ, ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ 19 ಸ್ಥಾನಗಳನ್ನು ಗೆದ್ದು ಸರ್ಕಾರ ರಚಿಸಿತು.

ಹರಿಯಾಣ: ಹರಿಯಾಣ ವಿಧಾನಸಭೆ ಚುನಾವಣೆ 2024 ವೇಳಾಪಟ್ಟಿ

ಹರಿಯಾಣ ವಿಧಾನಸಭೆ ಚುನಾವಣೆಯು ಅಕ್ಟೋಬರ್ ಅಥವಾ ಅದಕ್ಕಿಂತ ಮೊದಲು ನಡೆಯುವ ಸಾಧ್ಯತೆಯಿದೆ. ಹರಿಯಾಣ ವಿಧಾನಸಭೆಯ ಅವಧಿ 3 ನವೆಂಬರ್ 2024 ರಂದು ಕೊನೆಗೊಳ್ಳುತ್ತದೆ. ಈ ಹಿಂದೆ 2019ರ ಅಕ್ಟೋಬರ್‌ನಲ್ಲಿ ವಿಧಾನಸಭೆ ಚುನಾವಣೆ ನಡೆದಿತ್ತು. ಚುನಾವಣೆಯ ನಂತರ, ಭಾರತೀಯ ಜನತಾ ಪಾರ್ಟಿ ಮತ್ತು ಡೆಮಾಕ್ರಟಿಕ್ ಜನತಾ ಪಾರ್ಟಿಯ ಮೈತ್ರಿಕೂಟವು ರಾಜ್ಯದಲ್ಲಿ ಸರ್ಕಾರವನ್ನು ರಚಿಸಿತು, ಮನೋಹರ್ ಲಾಲ್ ಖಟ್ಟರ್ ಮುಖ್ಯಮಂತ್ರಿಯಾದರು. ಒಟ್ಟು 90 ಸ್ಥಾನಗಳ ಪೈಕಿ 46 ಕ್ಷೇತ್ರಗಳಲ್ಲಿ ಗೆಲ್ಲುವ ಪಕ್ಷ ಸರ್ಕಾರ ರಚಿಸಬಹುದು. ಹರಿಯಾಣ ವಿಧಾನಸಭಾ ಚುನಾವಣೆಯ ಮ್ಯಾಜಿಕ್ ನಂಬರ್ 46. ಕಳೆದ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ನ್ಯಾಷನಲ್ ಡೆಮಾಕ್ರಟಿಕ್ ಅಲಯನ್ಸ್ 41 ಸ್ಥಾನಗಳನ್ನು ಗೆದ್ದಿತ್ತು. ಕಾಂಗ್ರೆಸ್ 30 ಸ್ಥಾನಗಳನ್ನು ಗೆದ್ದಿತ್ತು.

ಮಹಾರಾಷ್ಟ್ರ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆ 2024 ವೇಳಾಪಟ್ಟಿ

ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯು ಅಕ್ಟೋಬರ್ 2024 ಅಥವಾ ಅದಕ್ಕಿಂತ ಮೊದಲು ನಡೆಯಲಿದೆ. ಈ ಹಿಂದೆ 2019ರ ಅಕ್ಟೋಬರ್‌ನಲ್ಲಿ ವಿಧಾನಸಭೆ ಚುನಾವಣೆ ನಡೆದಿತ್ತು. ಭಾರತೀಯ ಜನತಾ ಪಾರ್ಟಿ ನೇತೃತ್ವದ ಒಕ್ಕೂಟವು ಎನ್‌ಡಿಎ ಸರ್ಕಾರವನ್ನು ರಚಿಸಲು ಸಂಪೂರ್ಣ ಬಹುಮತವನ್ನು ಪಡೆದುಕೊಂಡಿತು, ಆದರೆ ಒಳಜಗಳದಿಂದಾಗಿ, ಶಿವಸೇನೆಯು ಒಕ್ಕೂಟವನ್ನು ತೊರೆದು ರಾಜ್ಯ ಸರ್ಕಾರವನ್ನು ರಚಿಸಲು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ ಮತ್ತು ಕಾಂಗ್ರೆಸ್‌ನೊಂದಿಗೆ ಹೊಸ ಮೈತ್ರಿಯನ್ನು ರಚಿಸಿತು. ನಂತರ, ಈ ಮೈತ್ರಿ ಕುಸಿದು, ಏಕನಾಥ್ ಶಿಂಧೆ ನೇತೃತ್ವದಲ್ಲಿ ಶಿವಸೇನೆಯ ಒಂದು ಬಣವು ಬೇರ್ಪಟ್ಟು, ಬಿಜೆಪಿ ಬೆಂಬಲದೊಂದಿಗೆ ಅಧಿಕಾರವನ್ನು ಪಡೆದುಕೊಂಡಿತು.

ಚುನಾವಣೆ ಕುರಿತು ಪದೇಪದೆ ಕೇಳಲಾಗುವ ಪ್ರಶ್ನೆಗಳು (FAQs)

ಆಂಧ್ರಪ್ರದೇಶ ವಿಧಾನಸಭಾ ಚುನಾವಣೆಯ ವೇಳಾಪಟ್ಟಿ ಯಾವಾಗ ಬಿಡುಗಡೆಯಾಗುತ್ತದೆ?

ಸಾರ್ವತ್ರಿಕ ಚುನಾವಣೆ ಜೊತೆಗೆ ಆಂಧ್ರಪ್ರದೇಶ ವಿಧಾನಸಭಾ ಚುನಾವಣೆಯ ವೇಳಾಪಟ್ಟಿಯೂ ಬಿಡುಗಡೆಯಾಗಲಿದೆ. ಮಾರ್ಚ್ ಎರಡನೇ ವಾರದಲ್ಲಿ ವೇಳಾಪಟ್ಟಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಏಪ್ರಿಲ್ ಎರಡನೇ ವಾರದಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದೆ. ಮೇ ಎರಡನೇ ವಾರದಲ್ಲಿ ಫಲಿತಾಂಶ ಹೊರಬೀಳುವ ಸಾಧ್ಯತೆ ಇದೆ.

ಆಂಧ್ರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಯಾವ ಪಕ್ಷಗಳು ಮೈತ್ರಿ ಹೊಂದಿವೆ?

ಆಂಧ್ರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಇದುವರೆಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ ಟಿಡಿಪಿ ಮತ್ತು ಜನಸೇನಾ ನಡುವೆ ಮೈತ್ರಿ ಇದೆ. ಆದರೆ ಈ ಮೈತ್ರಿಯಲ್ಲಿ ಬಿಜೆಪಿ ಜನಸೇನಾ ಮಿತ್ರ ಪಕ್ಷವಾಗಿದೆ. ಈ ಮೈತ್ರಿಯೊಂದಿಗೆ ಬಿಜೆಪಿ ಕೂಡ ಕೈಜೋಡಿಸುವ ಸಾಧ್ಯತೆ ಇದೆ.