ಕನ್ನಡ ಸುದ್ದಿ  /  Entertainment  /   A New Song From The Movie 'Sugar Factory' For The New Year

Sugar Factory Song Release: ಹೊಸ ವರ್ಷಕ್ಕೆ ‘ಶುಗರ್ ಫ್ಯಾಕ್ಟರಿ’ಯಿಂದ ಹೊಸ ಹಾಡು; ಕೃಷ್ಣನ ಕುಣಿತಕ್ಕೆ ಚಂದನ್‌ ಶೆಟ್ಟಿ ಮ್ಯೂಸಿಕ್..‌

‘ಶುಗರ್ ಫ್ಯಾಕ್ಟರಿ’ ಚಿತ್ರದ ಟೈಟಲ್ ಟ್ರ್ಯಾಕ್ ಬಿಡುಗಡೆಯಾಗಿದೆ. ಬೆಂಗಳೂರಿನ ಮಂತ್ರಿ ಸ್ಕೇರ್‌ನಲ್ಲಿ ನೆರದಿದ್ದ ಅಪಾರ ಜನಸ್ತೋಮ ಶೀರ್ಷಿಕೆ ಹಾಡು ಬಿಡುಗಡೆಗೆ ಸಾಕ್ಷಿಯಾದರು.

ಹೊಸ ವರ್ಷಕ್ಕೆ ‘ಶುಗರ್ ಫ್ಯಾಕ್ಟರಿ’ಯಿಂದ ಹೊಸ ಹಾಡು; ಕೃಷ್ಣನ ಕುಣಿತಕ್ಕೆ ಚಂದನ್‌ ಶೆಟ್ಟಿ ಮ್ಯೂಸಿಕ್..
ಹೊಸ ವರ್ಷಕ್ಕೆ ‘ಶುಗರ್ ಫ್ಯಾಕ್ಟರಿ’ಯಿಂದ ಹೊಸ ಹಾಡು; ಕೃಷ್ಣನ ಕುಣಿತಕ್ಕೆ ಚಂದನ್‌ ಶೆಟ್ಟಿ ಮ್ಯೂಸಿಕ್..

Sugar Factory: ಡಾರ್ಲಿಂಗ್ ಕೃಷ್ಣ ನಾಯಕರಾಗಿ ನಟಿಸಿರುವ ‘ಶುಗರ್ ಫ್ಯಾಕ್ಟರಿ’ ಚಿತ್ರ ಆರಂಭದ ದಿನದಿಂದಲೂ ಸಾಕಷ್ಟು ಕುತೂಹಲ ಹುಟ್ಟಿಸಿದೆ. ಇದೀಗ ಆ ಕುತೂಹಲಕ್ಕೆ ಮತ್ತಷ್ಟು ಒಗ್ಗರಣೆ ಹಾಕಿದೆ ಚಿತ್ರತಂಡ. ಅಂದರೆ, ಹೊಸ ವರ್ಷಕ್ಕೆ ಹೊಸ ಹಾಡಿನ ಮೂಲಕ ಆಗಮಿಸಿದೆ.

ಇತ್ತೀಚಿಗೆ ಈ ಚಿತ್ರದ ಟೈಟಲ್ ಟ್ರ್ಯಾಕ್ ಬಿಡುಗಡೆಯಾಗಿದೆ. ಬೆಂಗಳೂರಿನ ಮಂತ್ರಿ ಸ್ಕೇರ್‌ನಲ್ಲಿ ನೆರದಿದ್ದ ಅಪಾರ ಜನಸ್ತೋಮ ಶೀರ್ಷಿಕೆ ಹಾಡು ಬಿಡುಗಡೆಗೆ ಸಾಕ್ಷಿಯಾದರು. ಅಲ್ಲಿದ್ದ ಆರು ಜನ ಸಿನಿಪ್ರೇಕ್ಷಕರೇ, ಈ ಹಾಡನ್ನು ಬಿಡುಗಡೆ ಮಾಡಿದ್ದು ವಿಶೇಷವಾಗಿತ್ತು.

ಚಿತ್ರದಲ್ಲಿ ನಾಯಕ ಹಾಗೂ ನಾಯಕಿ ಪಾರ್ಟಿಯಲ್ಲಿ ಹಾಡಿ, ಕುಣಿಯುವ ಈ ಹಾಡು,‌ ಪಾರ್ಟಿ ಪ್ರಿಯರಿಗೆ ಸರ್ವಕಾಲಕ್ಕೂ ಮೆಚ್ಚುಗೆಯ ಗೀತೆಯಾಗಲಿದೆ. ತಮ್ಮ ವಿಶಿಷ್ಟ ಕಂಠದ ಮೂಲಕ ಜನಪ್ರಿಯರಾಗಿರುವ ಚಂದನ್ ಶೆಟ್ಟಿ, ಈ ಹಾಡನ್ನು ಬರೆದು ಹಾಡಿದ್ದಾರೆ.

ರುಚಿರ ವೈದ್ಯ English rapಗೆ ಧ್ವನಿಯಾಗಿದ್ದಾರೆ. ಕಬೀರ್ ರಫಿ ಸಂಗೀತ ನೀಡಿದ್ದಾರೆ. ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿರುವ ಈ ಹಾಡು ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗಿ ಮೆಚ್ಚುಗೆ ಪಡೆಯುತ್ತಿದೆ. ನಟಿ ಅಮೂಲ್ಯ, ಪತಿ ಜಗದೀಶ್ ಹಾಗೂ ರಾಜಕೀಯ ಮುಖಂಡ ರಾಮಚಂದ್ರಪ್ಪ ಸಮಾರಂಭಕ್ಕೆ ಆಗಮಿಸಿ, ಚಿತ್ರತಂಡಕ್ಕೆ ಶುಭ ಕೋರಿದರು.

"ಇದು ನನ್ನ ಸಿನಿ ಜರ್ನಿಯ ಬಿಗ್ ಬಜೆಟ್ ಚಿತ್ರ ಎನ್ನಬಹುದು. ನಿಜಜೀವನದಲ್ಲಿ ಪಾರ್ಟಿ ಮಾಡದ ನನ್ನ ಹತ್ತಿರ, ಈ ಚಿತ್ರದಲ್ಲಿ ಭರ್ಜರಿ ಪಾರ್ಟಿ ಮಾಡಿಸಿ, ಸಖತಾಗಿ ಕುಣಿಸಿದ್ದಾರೆ. ಚಂದನ್ ಶೆಟ್ಟಿ ಅವರ ಗಾಯನ ಹಾಡಿನ ಅಂದವನ್ನು ಮತ್ತಷ್ಟು ಹೆಚ್ಚಿಸಿದೆ" ಎಂದರು ನಾಯಕ ಡಾರ್ಲಿಂಗ್ ಕೃಷ್ಣ.

"ಶುಗರ್ ಫ್ಯಾಕ್ಟರಿ" ಈಗಿನ‌ ಜನರೇಶನ್ ಗೆ ಹೇಳಿಮಾಡಿಸಿದ ಕಥೆ. ಕಾಲೇಜು ವಿದ್ಯಾರ್ಥಿಗಳಿಗೆ ಈ ಚಿತ್ರ ಮತ್ತಷ್ಟು ಹತ್ತಿರವಾಗಲಿದೆ. ನಾವು ಆರಂಭದಲ್ಲಿ ಅಂದುಕೊಂಡಿದ್ದೆ ಬೇರೆ. ಈಗ ಆಗಿರುವ ಬಜೆಟ್ ಬೇರೆ. ನನ್ನ ಈ ಕನಸನ್ನು ನನಸು ಮಾಡಿದ ನಿರ್ಮಾಪಕ ಗಿರೀಶ್ ಅವರಿಗೆ ಹಾಗೂ ಚಿತ್ರ ಉತ್ತಮವಾಗಿ ಮೂಡಿಬರಲು ಸಹಕಾರ ನೀಡಿದ ನನ್ನ ಇಡೀ ತಂಡಕ್ಕೆ ತುಂಬು ಹೃದಯದ ಧನ್ಯವಾದ ಎಂದರು ನಿರ್ದೇಶಕ ದೀಪಕ್ ಅರಸ್.

ನಿರ್ಮಾಪಕ ಗಿರೀಶ್ ಹಾಡು ಹಾಗೂ ಚಿತ್ರ ಚೆನ್ನಾಗಿ ಬಂದಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. ಸಂಗೀತ ನಿರ್ದೇಶಕ ಕಬೀರ್ ರಫಿ ಹಾಡುಗಳ ಬಗ್ಗೆ ಮಾಹಿತಿ ನೀಡಿದರು. ನಾಯಕಿಯರಾದ ಸೋನಾಲ್ ಮೊಂತೆರೊ, ಅದ್ವಿತಿ ಶೆಟ್ಟಿ , ಶಿಲ್ಪ ಶೆಟ್ಟಿ ಮತ್ತು ಚಿತ್ರದಲ್ಲಿ ನಟಿಸಿರುವ ಶಶಿ ಹಾಗೂ ಮಹಂತೇಶ್ ಶುಗರ್ ಫ್ಯಾಕ್ಟರಿ ಬಗ್ಗೆ ಮಾತನಾಡಿದರು.

IPL_Entry_Point