ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಐಪಿಎಲ್​ ಇತಿಹಾಸದಲ್ಲಿ 150 ಗೆಲುವು ಸಾಧಿಸಿದ ಎಂಎಸ್ ಧೋನಿ; ಈ ಹೊಸ ದಾಖಲೆ ನಿರ್ಮಿಸಿದ ಮೊದಲ ಆಟಗಾರ

ಐಪಿಎಲ್​ ಇತಿಹಾಸದಲ್ಲಿ 150 ಗೆಲುವು ಸಾಧಿಸಿದ ಎಂಎಸ್ ಧೋನಿ; ಈ ಹೊಸ ದಾಖಲೆ ನಿರ್ಮಿಸಿದ ಮೊದಲ ಆಟಗಾರ

  • MS Dhoni Record : ಚೆನ್ನೈ ಸೂಪರ್ ಕಿಂಗ್ಸ್ ಮಾಜಿ ನಾಯಕ ಎಂಎಸ್ ಧೋನಿ, ಐಪಿಎಲ್​ನಲ್ಲಿ ಹೊಸ ದಾಖಲೆಯೊಂದನ್ನು ನಿರ್ಮಿಸಿದ್ದಾರೆ. ಬೇರೆ ಯಾವ ಕ್ರಿಕೆಟಿಗನೂ ಸಹ ಈ ದಾಖಲೆ ಬರೆದಿಲ್ಲ ಎಂಬುದು ವಿಶೇಷ.

ಚೆಪಾಕ್​ನಲ್ಲಿ ಏಪ್ರಿಲ್ 28ರಂದು ನಡೆದ ಸನ್​ರೈಸರ್ಸ್ ಹೈದರಾಬಾದ್ ವಿರುದ್ಧದ ಐಪಿಎಲ್​ನ 46ನೇ ಪಂದ್ಯದಲ್ಲಿ ಮಹೇಂದ್ರ ಸಿಂಗ್ ಧೋನಿ ಎದುರಿಸಿದ ಎರಡು ಎಸೆತಗಳಲ್ಲಿ 5 ರನ್ ಬಾರಿಸಿ ಔಟಾಗದೆ ಉಳಿದರು. ವಿಕೆಟ್ ಕೀಪಿಂಗ್​​ನಲ್ಲೂ 1 ಕ್ಯಾಚ್ ಪಡೆದರು. ಪಂದ್ಯದಲ್ಲಿ ಗಮನಾರ್ಹ ಪ್ರದರ್ಶನ ನೀಡದಿದ್ದರೂ ಈ ಪಂದ್ಯದಲ್ಲಿ ಧೋನಿ ಕ್ರಿಕೆಟ್ ಜಗತ್ತಿನಲ್ಲಿ ಬೇರೆ ಯಾರೂ ಮಾಡದ ದಾಖಲೆಯನ್ನು ನಿರ್ಮಿಸಿದ್ದಾರೆ.
icon

(1 / 7)

ಐಪಿಎಲ್ ಇತಿಹಾಸದಲ್ಲಿ 150 ಪಂದ್ಯಗಳನ್ನು ಗೆದ್ದ ವಿಶ್ವದ ಮೊದಲ ಮತ್ತು ಏಕೈಕ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಎಂಎಸ್ ಧೋನಿ ಪಾತ್ರರಾಗಿದ್ದಾರೆ. 2008ರ ಉದ್ಘಾಟನಾ ಆವೃತ್ತಿಯಿಂದ ಧೋನಿ, 259 ಐಪಿಎಲ್ ಪಂದ್ಯಗಳನ್ನು ಆಡಿದ್ದು, ಈ ಪೈಕಿ 150 ಪಂದ್ಯಗಳ ಗೆಲುವಿನ ಭಾಗವಾಗಿದ್ದಾರೆ. ಎಸ್​ಆರ್​​ಹೆಚ್ ವಿರುದ್ಧ ಚೆನ್ನೈ ಗೆಲುವು ಸಾಧಿಸಿದ ನಂತರ ಮಾಹಿ ಒಂದು ದೊಡ್ಡ ಮೈಲಿಗಲ್ಲನ್ನು ಸ್ಥಾಪಿಸಿದರು.
icon

(2 / 7)

ಸಿಎಸ್​ಕೆ ತಂಡದ ಮತ್ತೊಬ್ಬ ಆಟಗಾರ ರವೀಂದ್ರ ಜಡೇಜಾ, ಅತಿ ಹೆಚ್ಚು ಐಪಿಎಲ್ ಪಂದ್ಯಗಳನ್ನು ಗೆದ್ದವರ ಪಟ್ಟಿಯಲ್ಲಿ ಧೋನಿ ನಂತರ ಎರಡನೇ ಸ್ಥಾನದಲ್ಲಿದ್ದಾರೆ. ಜಡೇಜಾ 2008 ರಿಂದ ಒಟ್ಟು 235 ಐಪಿಎಲ್ ಪಂದ್ಯಗಳನ್ನು ಆಡಿದ್ದು, 133 ಪಂದ್ಯಗಳ ಗೆಲುವಿನ ಭಾಗವಾಗಿದ್ದಾರೆ. ಹೈದರಾಬಾದ್ ವಿರುದ್ಧ.4 ಓವರ್​​ಗಳಲ್ಲಿ 22 ರನ್​ ಬಿಟ್ಟುಕೊಟ್ಟು 1 ವಿಕೆಟ್ ಪಡೆದರು.
icon

(3 / 7)

ಅತಿ ಹೆಚ್ಚು ಐಪಿಎಲ್ ಪಂದ್ಯಗಳನ್ನು ಗೆದ್ದವರ ಪಟ್ಟಿಯಲ್ಲಿ ರೋಹಿತ್ ಶರ್ಮಾ ಮತ್ತು ರವೀಂದ್ರ ಜಡೇಜಾ ಜಂಟಿಯಾಗಿ 2ನೇ ಸ್ಥಾನದಲ್ಲಿದ್ದಾರೆ. ಹಿಟ್​ಮ್ಯಾನ್ ಜಡೇಜಾಗಿಂತ ಹೆಚ್ಚು ಪಂದ್ಯಗಳನ್ನು ಆಡಿದ್ದರೂ 133 ಪಂದ್ಯಗಳ ಜಯದ ಭಾಗವಾಗಿದ್ದಾರೆ. ರೋಹಿತ್ 2008 ರಿಂದ ಒಟ್ಟು 252 ಐಪಿಎಲ್ ಪಂದ್ಯಗಳನ್ನು ಆಡಿದ್ದಾರೆ.
icon

(4 / 7)

ಸುರೇಶ್ ರೈನಾ ಮತ್ತು ದಿನೇಶ್ ಕಾರ್ತಿಕ್ ಅತಿ ಹೆಚ್ಚು ಐಪಿಎಲ್ ಪಂದ್ಯಗಳನ್ನು ಗೆದ್ದವರ ಪಟ್ಟಿಯಲ್ಲಿ ಜಂಟಿ 3ನೇ ಸ್ಥಾನದಲ್ಲಿದ್ದಾರೆ. ರೈನಾ ಒಟ್ಟು 205 ಐಪಿಎಲ್ ಪಂದ್ಯಗಳನ್ನು ಆಡಿದ್ದು, 125 ಗೆಲುವಿನ ಪಂದ್ಯಗಳ ಭಾಗವಾಗಿದ್ದಾರೆ. ಆದರೆ ದಿನೇಶ್ ಕಾರ್ತಿಕ್, 252 ಐಪಿಎಲ್ ಪಂದ್ಯಗಳಲ್ಲಿ 125ರಲ್ಲಿ ಗೆದ್ದಿದ್ದಾರೆ.
icon

(5 / 7)

ಐಪಿಎಲ್​ನಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಆಡಿದ ದಾಖಲೆಯೂ ಧೋನಿ ಹೆಸರಿನಲ್ಲಿದೆ. ನಾಯಕನಾಗಿಯೂ ಅತಿ ಹೆಚ್ಚು ಗೆಲುವುಗಳ ದಾಖಲೆಯನ್ನು ಹೊಂದಿದ್ದಾರೆ. ನಾಯಕನಾಗಿ 133 ಐಪಿಎಲ್ ಪಂದ್ಯಗಳಲ್ಲಿ ಜಯ ಸಾಧಿಸಿದ್ದಾರೆ. ಐಪಿಎಲ್​​ನಲ್ಲಿ ಇದುವರೆಗೆ ಬೇರೆ ಯಾವುದೇ ನಾಯಕರು 100 ಪಂದ್ಯಗಳನ್ನು ಗೆಲ್ಲಲು ಸಾಧ್ಯವಾಗಿಲ್ಲ.
icon

(6 / 7)

ಕ್ಷಣಕ್ಷಣದ ಅಪ್ಡೇಟ್ಸ್​ಗಾಗಿ ಹಿಂದೂಸ್ತಾನ್ ಟೈಮ್ಸ್ ಕನ್ನಡ ಓದಿ.
icon

(7 / 7)

ಕ್ಷಣಕ್ಷಣದ ಅಪ್ಡೇಟ್ಸ್​ಗಾಗಿ ಹಿಂದೂಸ್ತಾನ್ ಟೈಮ್ಸ್ ಕನ್ನಡ ಓದಿ.

IPL_Entry_Point

ಇತರ ಗ್ಯಾಲರಿಗಳು