ಕನ್ನಡ ಸುದ್ದಿ  /  ಕ್ರಿಕೆಟ್  /  ಪೃಥ್ವಿ ಶಾ ಇನ್, ಕುಮಾರ್ ಕುಶಾಗ್ರಾ ಔಟ್; ಕೆಕೆಆರ್​ ವಿರುದ್ಧ ಸೇಡಿನ ಸಮರಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ಸಂಭಾವ್ಯ ಪ್ಲೇಯಿಂಗ್ Xi

ಪೃಥ್ವಿ ಶಾ ಇನ್, ಕುಮಾರ್ ಕುಶಾಗ್ರಾ ಔಟ್; ಕೆಕೆಆರ್​ ವಿರುದ್ಧ ಸೇಡಿನ ಸಮರಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ಸಂಭಾವ್ಯ ಪ್ಲೇಯಿಂಗ್ XI

DC vs KKR Playing XI : ಸೀಸನ್​-17ರ ಐಪಿಎಲ್​ನ 47ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಮುಖಾಮುಖಿಯಾಗುತ್ತಿವೆ. ಕೆಕೆಆರ್​ ಮತ್ತು ಡಿಸಿ ತಂಡಗಳ ಪ್ಲೇಯಿಂಗ್ ಇಲೆವೆನ್ ಇಲ್ಲಿದೆ.

ಪೃಥ್ವಿ ಶಾ ಇನ್, ಕುಮಾರ್ ಕುಶಾಗ್ರಾ ಔಟ್; ಕೆಕೆಆರ್​ ವಿರುದ್ಧ ಸೇಡಿನ ಸಮರಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ಸಂಭಾವ್ಯ ಪ್ಲೇಯಿಂಗ್ XI
ಪೃಥ್ವಿ ಶಾ ಇನ್, ಕುಮಾರ್ ಕುಶಾಗ್ರಾ ಔಟ್; ಕೆಕೆಆರ್​ ವಿರುದ್ಧ ಸೇಡಿನ ಸಮರಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ಸಂಭಾವ್ಯ ಪ್ಲೇಯಿಂಗ್ XI

17ನೇ ಆವೃತ್ತಿಯ ಐಪಿಎಲ್​ನ 47ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್-ಕೋಲ್ಕತ್ತಾ ನೈಟ್ ರೈಡರ್ಸ್ (DC vs KKR) ತಂಡಗಳು ಮುಖಾಮುಖಿಯಾಗಲಿವೆ. ಈ ಹೈವೋಲ್ಟೇಜ್ ಪಂದ್ಯಕ್ಕೆ ಈಡನ್ ಗಾರ್ಡನ್ಸ್ ಮೈದಾನ ಆತಿಥ್ಯ ವಹಿಸಲಿದೆ. ಕಳೆದ ಮುಖಾಮುಖಿಯಲ್ಲಿ ಕೆಕೆಆರ್ ವಿರುದ್ಧ ಸೋತಿದ್ದ ಡೆಲ್ಲಿ ಇದೀಗ ಸೇಡಿನ ಸಮರಕ್ಕೆ ಸಜ್ಜಾಗಿದೆ. ಕಳೆದ ಐದು ಪಂದ್ಯಗಳಲ್ಲಿ 4ರಲ್ಲಿ ಗೆದ್ದಿರುವ ಡೆಲ್ಲಿ ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿದೆ.

ಟ್ರೆಂಡಿಂಗ್​ ಸುದ್ದಿ

ಮತ್ತೊಂದೆಡೆ ಕೋಲ್ಕತ್ತಾ ಕಳೆದ ಐದು ಪಂದ್ಯಗಳಲ್ಲಿ 3 ಸೋತಿದೆ. ಪ್ಲೇಆಫ್ ದೃಷ್ಟಿಯಿಂದ ಉಭಯ ತಂಡಗಳಿಗೂ ಈ ಪಂದ್ಯದ ಗೆಲುವು ಮಹತ್ವದ್ದಾಗಿದೆ. ಕೆಕೆಆರ್​ ಆಡಿರುವ 8 ಪಂದ್ಯಗಳಲ್ಲಿ 5 ಗೆಲುವು ಸಾಧಿಸಿ, 3 ಸೋತಿದೆ. 10 ಅಂಕ ಪಡೆದು ಅಂಕಪಟ್ಟಿಯಲ್ಲಿ 2ನೇ ಸ್ಥಾನ ಪಡೆದಿದೆ. ಡೆಲ್ಲಿ ಆಡಿರುವ 10 ಪಂದ್ಯಗಳಲ್ಲಿ 5 ಗೆಲುವು, 5 ಸೋಲು ಕಂಡಿದೆ. 10 ಅಂಕ ಪಡೆದಿರುವ ಡೆಲ್ಲಿ 6 ಸ್ಥಾನದಲ್ಲಿದೆ.

ಡೆಲ್ಲಿ ಕ್ಯಾಪಿಟಲ್ಸ್ ಸಂಭವನೀಯ XI

ಈ ಮಹತ್ವದ ಪಂದ್ಯಕ್ಕೂ ಮುನ್ನ ಡೆಲ್ಲಿಗೆ ಗಾಯದ ಹೊಡೆತ ಕಾಡುತ್ತಿದೆ. ಡೇವಿಡ್ ವಾರ್ನರ್ (ಬೆರಳಿನ ಗಾಯ) ಮತ್ತು ಇಶಾಂತ್ ಶರ್ಮಾ (ಬೆನ್ನುನೋವು) ಸಂಪೂರ್ಣ ಫಿಟ್ ಆಗಲು ಇನ್ನೊಂದು ವಾರದ ಅಗತ್ಯವಿದೆ. ಹಾಗಾಗಿ ಕೆಕೆಆರ್​​ ಘರ್ಷಣೆಗೆ ಲಭ್ಯವಾಗುವ ಸಾಧ್ಯತೆ ತೀರಾ ಕಡಿಮೆ. ಅನಾರೋಗ್ಯದ ಕಾರಣ ಪೃಥ್ವಿ ಶಾ ಹಿಂದಿನ ಪಂದ್ಯವನ್ನು ಕಳೆದುಕೊಂಡಿದ್ದು, ಅವರ ಲಭ್ಯತೆ ಬಗ್ಗೆ ಖಚಿತವಾಗಿಲ್ಲ.

ಆದರೆ ಪೃಥ್ವಿ ಅವರು ಶೇ 80ರಷ್ಟು ತಂಡಕ್ಕೆ ಮರಳುತ್ತಾರೆ ಎಂದು ಕೆಲವು ವರದಿಗಳು ಹೇಳುತ್ತಿವೆ. ಒಂದು ವೇಳೆ ಪೃಥ್ವಿ ಶಾ ಮರಳಿದರೆ, ಅಭಿಷೇಕ್ ಪೋರೆಲ್ ಮಧ್ಯಮ ಕ್ರಮಾಂಕಕ್ಕೆ ಜಾರುತ್ತಾರೆ. ಕುಮಾರ್ ಕುಶಾಗ್ರಾ ಪ್ಲೇಯಿಂಗ್ XIನಿಂದ ಅವಕಾಶ ಕಳೆದುಕೊಳ್ಳಲಿದ್ದಾರೆ. ಉಳಿದಂತೆ ಪ್ಲೇಯಿಂಗ್​ ಇಲೆವೆನ್​ನಲ್ಲಿ ಯಾವುದೇ ಬದಲಾವಣೆ ಕಾಣುವುದು ಅಸಂಭವ ಎಂದು ಹೇಳಲಾಗುತ್ತಿದೆ.

ಪೃಥ್ವಿ ಶಾ, ಜೇಕ್ ಫ್ರೇಸರ್-ಮೆಕ್‌ಗುರ್ಕ್, ಶಾಯ್ ಹೋಪ್, ರಿಷಭ್ ಪಂತ್ (ನಾಯಕ/ವಿಕೆಟ್ ಕೀಪರ್), ಟ್ರಿಸ್ಟಾನ್ ಸ್ಟಬ್ಸ್, ಅಭಿಷೇಕ್ ಪೊರೆಲ್, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಲಿಜಾದ್ ವಿಲಿಯಮ್ಸ್, ಮುಕೇಶ್ ಕುಮಾರ್, ಖಲೀಲ್ ಅಹ್ಮದ್.

ಕೆಕೆಆರ್​ ಸಂಭವನೀಯ XI

24.75 ಕೋಟಿ ಒಡೆಯ ಮಿಚೆಲ್ ಸ್ಟಾರ್ಕ್, ಬೆರಳಿನ ಗಾಯದಿಂದ ಕೆಕೆಆರ್​​ನ ಹಿಂದಿನ ಪಂದ್ಯವನ್ನು ತಪ್ಪಿಸಿಕೊಂಡಿದ್ದರು. ಆದರೆ, ಇನ್ನೂ ಫಿಟ್ ಆಗಿದ್ದಾರೆಯೇ ಎಂಬುದು ಸ್ಪಷ್ಟವಾಗಿಲ್ಲ. ಒಂದು ವೇಳೆ ಅವರು ಫಿಟ್ ಆಗದಿದ್ದರೆ ದುಷ್ಮಂತ ಚಮೀರ ಮತ್ತೆ ಅವಕಾಶ ಪಡೆಯುವ ಸಾಧ್ಯತೆ ಇದೆ. ಉಳಿದಂತೆ ಕೆಕೆಆರ್​ ಕಳೆದ ಪಂದ್ಯದಲ್ಲಿ ಕಣಕ್ಕಿಳಿಸಿದ ಪ್ಲೇಯಿಂಗ್ ಇಲೆವೆನ್ ಅನ್ನೇ ಕಣಕ್ಕಿಳಿಸಲು ಚಿಂತಿಸಿದೆ.

ಫಿಲ್ ಸಾಲ್ಟ್ (ವಿಕೆಟ್ ಕೀಪರ್​), ಸುನಿಲ್ ನರೈನ್, ಆಂಗ್ಕ್ರಿಶ್ ರಘುವಂಶಿ, ಶ್ರೇಯಸ್ ಅಯ್ಯರ್ (ನಾಯಕ), ವೆಂಕಟೇಶ್ ಅಯ್ಯರ್, ರಿಂಕು ಸಿಂಗ್, ಆಂಡ್ರೆ ರಸೆಲ್, ರಮಣದೀಪ್ ಸಿಂಗ್, ದುಷ್ಮಂತ ಚಮೀರಾ/ಮಿಚೆಲ್ ಸ್ಟಾರ್ಕ್, ವರುಣ್ ಚಕ್ರವರ್ತಿ, ಹರ್ಷಿತ್ ರಾಣಾ.

ಈಡನ್ ಗಾರ್ಡನ್ಸ್ ಪಿಚ್ ವರದಿ

ಈ ವರ್ಷ ಈಡನ್ ಗಾರ್ಡನ್ಸ್‌ ಮೈದಾನದಲ್ಲಿ ರನ್‌ಗಳು ಹರಿದು ಬಂದಿವೆ. ಹಾಗಾಗಿ ಈ ಪಂದ್ಯದಲ್ಲೂ ರನ್​ ಮಳೆಯನ್ನೇ ನಿರೀಕ್ಷೆ ಮಾಡಲಾಗಿದೆ. ಅದರಲ್ಲೂ ಉಭಯ ತಂಡಗಳ ಬ್ಯಾಟರ್​​ಗಳು ರನ್ ಮಳೆ ಹರಿಸುತ್ತಿದ್ದಾರೆ. ಮತ್ತೊಮ್ಮೆ ಅಂತಹದ್ದೇ ರನ್ ಫೆಸ್ಟ್ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಇದುವರೆಗಿನ ಐದು ಪಂದ್ಯಗಳಲ್ಲಿ ಪ್ರತಿಯೊಂದರಲ್ಲೂ ಬೌಲಿಂಗ್ ಮಾಡಲು ತಂಡಗಳು ಆಯ್ಕೆ ಮಾಡಿಕೊಂಡಿವೆ. ಸಂಜೆ ಇಬ್ಬನಿ ಕಾಡಲಿದ್ದು, ಬೌಲರ್​ಗಳು ವಿಕೆಟ್ ಪಡೆಯಲು ಪರದಾಡುವ ಸಾಧ್ಯತೆ ಇದೆ.

ಅಂಕಿಅಂಶಗಳು ಮುಖ್ಯ

  • ಐಪಿಎಲ್​​ 2024ರಲ್ಲಿ ಡಿಸಿ ಸ್ಪಿನ್ನರ್‌ಗಳು ಅತಿ ಹೆಚ್ಚು ವಿಕೆಟ್ (21) ಪಡೆದಿದ್ದಾರೆ. ಆದರೆ ಕೆಕೆಆರ್​ ಈ ಪಟ್ಟಿಯಲ್ಲಿ 18 ನೇ ಸ್ಥಾನದಲ್ಲಿದೆ.
  • ಐಪಿಎಲ್‌ನಲ್ಲಿ 3000 ರನ್ ಪೂರೈಸಲು ಶ್ರೇಯಸ್ ಅಯ್ಯರ್‌ಗೆ ಆರು ರನ್‌ಗಳ ಅಗತ್ಯವಿದೆ.
  • ಶ್ರೇಯಸ್ ಅಯ್ಯರ್ 7 ಟಿ20 ಇನ್ನಿಂಗ್ಸ್‌ಗಳಲ್ಲಿ ಕುಲ್ದೀಪ್ ಯಾದವ್‌ಗೆ 2 ಬಾರಿ ಔಟ್ ಆಗಿದ್ದಾರೆ. ಆದರೆ, ಅವರ ವಿರುದ್ಧ 176.92 ಸ್ಟ್ರೈಕ್​ರೇಟ್ ಹೊಂದಿದ್ದಾರೆ.
  • ಐಪಿಎಲ್‌ನಲ್ಲಿ ಅಕ್ಷರ್ ಪಟೇಲ್ ವಿರುದ್ಧ ಅಯ್ಯರ್ ಅತ್ಯುತ್ತಮ ದಾಖಲೆಯನ್ನು ಹೊಂದಿದ್ದಾರೆ. ಸ್ಟ್ರೈಕ್ ರೇಟ್ 155 ಸ್ಟ್ರೈಕ್​ರೇಟ್, ಸರಾಸರಿ 62 ಇದೆ.
  • ಆಂಡ್ರೆ ರಸೆಲ್ ವಿರುದ್ಧ ರಿಷಭ್ ಪಂತ್ ಉತ್ತಮ ದಾಖಲೆ ಹೊಂದಿದ್ದಾರೆ. ಈವರೆಗೂ ರಸೆಲ್ ವಿರುದ್ಧ 24 ಎಸೆತಗಳಲ್ಲಿ 216.7 ಸ್ಟ್ರೈಕ್ ರೇಟ್‌ನಲ್ಲಿ 52 ರನ್‌ ಗಳಿಸಿದ್ದಾರೆ. ಆದರೆ 7 ಇನ್ನಿಂಗ್ಸ್‌ಗಳಲ್ಲಿ ಮೂರು ಬಾರಿ ಔಟ್ ಆಗಿದ್ದಾರೆ.

ಇನ್ನಷ್ಟು ಕ್ರಿಕೆಟ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

IPL_Entry_Point