Oscar Trophy Price: ಚಿನ್ನ ಲೇಪಿತ ಆಸ್ಕರ್ ಟ್ರೋಫಿ ತಯಾರಾಗೋದು ಹೇಗೆ? ಇದನ್ನು ಮಾರಿದ್ರೆ ನಿಮಗೆ ಎಷ್ಟು ಹಣ ಸಿಗಬಹುದು? ಇಲ್ಲಿದೆ VIDEO
ಆಸ್ಕರ್ ಅವಾರ್ಡ್ ಮಾರಿದ್ರೆ ಕೋಟಿ ಕೋಟಿ ಹಣ ಸಿಗಬಹುದು ಎಂಬ ಊಹೆ ನಿಮ್ಮದಾಗಿದ್ದರೆ, ಅದನ್ನು ಈಗಲೇ ಮರೆತುಬಿಡಿ. ಏಕೆಂದರೆ, ಈ ಟ್ರೋಫಿ ಮಾರಾಟ ಮಾಡಿದರೆ ಒಂದು ಬಿರಿಯಾನಿಯೂ ಸಿಗಲ್ಲ!
Oscar Trophy Price: ಸಿನಿಮಾ ಕ್ಷೇತ್ರದಲ್ಲಿನ ಸಾಧನೆಗಾಗಿ ಸಿಗುವ ಅತ್ಯುನ್ನತ ಪ್ರಶಸ್ತಿ ಎಂದರೆ ಅದು ಆಸ್ಕರ್! ಈ ಅವಾರ್ಡ್ ಪಡೆಯಬೇಕು ಎಂಬುದು ವಿಶ್ವದ ಎಲ್ಲ ಕಲಾವಿದರ ಬಹುದೊಡ್ಡ ಕನಸು. ಆದರೆ, ಅಷ್ಟು ಸುಲಭಕ್ಕೆ ದಕ್ಕುವ ಪ್ರಶಸ್ತಿ ಇದಲ್ಲ. ಇದೀಗ ಈ ಅವಾರ್ಡ್ ಎತ್ತಿ ಹಿಡಿಯುವ ಅವಕಾಶ ಭಾರತೀಯರಿಗೂ ಸಿಕ್ಕಿದೆ. ಆರ್‌ಆರ್‌ಆರ್ ಚಿತ್ರದ ನಾಟು ನಾಟು ಹಾಡಿಗೆ ಅತ್ಯುತ್ತಮ ಮೂಲ ಗೀತೆ ವಿಭಾಗದಲ್ಲಿ ಆಸ್ಕರ್ ಲಭಿಸಿದೆ. ಇನ್ನುಳಿದಂತೆ ದಿ ಎಲಿಫೆಂಟ್ ವಿಸ್ಪರರ್ಸ್ ಸಾಕ್ಷ್ಯಚಿತ್ರಕ್ಕೂ ಆಸ್ಕರ್ ದಕ್ಕಿದೆ.
ನಿಮ್ಮಷ್ಟದ ಬಿರಿಯಾನಿಯೂ ಸಿಗಲ್ಲ ಗುರು!?
ಹಾಗಾದರೆ ಈ ಟ್ರೋಫಿ ಚಿನ್ನದ್ದಾ? ಈ ಟ್ರೋಫಿ ಮಾರಿದರೆ ಕೈಗೆ ಎಷ್ಟು ಹಣ ಸಿಗಬಹುದು? ಈ ಟ್ರೋಫಿಯನ್ನೇ ಇಟ್ಟುಕೊಂಡು ಜೀವನ ದೂಡಬಹುದೇ? ನೀವು ಹೀಗೆ ಅಂದುಕೊಂಡಿದ್ದರೆ ಆ ನಿಮ್ಮ ಊಹೆ ತಪ್ಪಾಗಲಿದೆ. ಅಂದರೆ, ಈ ಟ್ರೋಫಿಯ ಬೆಲೆ ನಿಮಗೆ ತಿಳಿದರೆ ನೀವು ನಿಜಕ್ಕೂ ಅಚ್ಚರಿಗೆ ಒಳಗಾಗುತ್ತೀರಿ. ಒಂದು ವೇಳೆ ಈ ಟ್ರೋಫಿ ನಿಮ್ಮ ಕೈಗೆ ಸಿಕ್ಕರೆ, ಅದರ ಪ್ರತಿಯಾಗಿ ನಿಮಗೆ ಹೊಟ್ಟೆ ತುಂಬ ಒಂದೊಳ್ಳೆಯ ಊಟವೂ ಸಿಗುವುದಿಲ್ಲ. ನಿಮ್ಮಿಷ್ಟದ ಬಿರಿಯಾನಿಯೂ ಸಿಗುವುದು ಡೌಟು!
ಆಸ್ಕರ್ ಟ್ರೋಫಿಯ ಬೆಲೆ ಎಷ್ಟು?
ಆಸ್ಕರ್‌ನ ಹೊಳೆಯುವ ಮತ್ತು ಚಿನ್ನದ ಟ್ರೋಫಿಯನ್ನು ನೋಡಿ, ಇದು ತುಂಬಾ ದುಬಾರಿಯಾಗಿದೆ ಎಂದು ಎಲ್ಲರೂ ಭಾವಿಸುತ್ತಾರೆ, ಆದರೆ ಈ ಆಸ್ಕರ್ ಟ್ರೋಫಿಯ ಬೆಲೆ ಕೇವಲ ಒಂದು ಡಾಲರ್. ಭಾರತೀಯ ರೂಪಾಯಿ ಲೆಕ್ಕದಲ್ಲಿ ಹೇಳುವುದಾದರೆ, ಕೇವಲ 82 ರೂಪಾಯಿಗಳು ಮಾತ್ರ! ಹಾಗೆಂದ ಮಾತ್ರಕ್ಕೆ ಈ ಟ್ರೋಫಿಯನ್ನು ಮಾರಾಟ ಮಾಡುವುದಾಗಲಿ, ಹರಾಜು ಹಾಕುವುದಕ್ಕೆ ಸಾಧ್ಯವಿಲ್ಲ. ಹಾಗೇನಾದರೂ ಮಾಡಿದರೆ, ಅಕಾಡೆಮಿ ಇದರ ವಿರುದ್ಧ ಕ್ರಮಕ್ಕೆ ಮುಂದಾಗಲಿದೆ.
ತಯಾರಿಕೆಗೆ 32 ಸಾವಿರ.. ಮುಖಬೆಲೆ 82 ರೂ!
ಒಂದು ಆಸ್ಕರ್ ಟ್ರೋಫಿ ತಯಾರಿಸಲು ಬರೋಬ್ಬರಿ 32 ಸಾವಿರ ರೂ. ಖರ್ಚಾಗುತ್ತದೆಯಾದರೂ, ಇದನ್ನು ಅಕಾಡೆಮಿ ಕೇವಲ 82 ರೂ ನೀಡಿ ಖರೀದಿಸುತ್ತದೆ. ಆಸ್ಕರ್ ಟ್ರೋಫಿಯ ಮೇಲಿನ ಚಿನ್ನದ ವರ್ಣಕ್ಕೆ ಘನ ಕಂಚನ್ನು ಬಳಕೆ ಮಾಡಲಾಗಿದೆ. ಬಳಿಕ 24 ಕ್ಯಾರೆಟ್ ಚಿನ್ನವನ್ನು ಲೇಪಿಸಲಾಗುತ್ತದೆ. ಮೇಣದ ಲೇಪನವನ್ನೂ ಮಾಡಲಾಗುತ್ತದೆ. ಮೇಣವು ತಣ್ಣಗಾದಾಗ, ಸೆರಾಮಿಕ್ ಶೆಲ್ ಲೇಪಿಸಲಾಗುತ್ತದೆ. ಪ್ರತಿ ಟ್ರೋಫಿಯು 13.5 ಇಂಚು ಎತ್ತರ ಮತ್ತು 8.5 ಪೌಂಡ್‌ಗಳಷ್ಟು ತೂಕ ಹೊಂದಿರುತ್ತದೆ.
ಸಿನಿಮಾ ಸಂಬಂಧಿತ ಈ ಸುದ್ದಿಯನ್ನೂ ಓದಿ
Anoop Revanna Kabzaa: 'ಕಬ್ಜ' ಚಿತ್ರದಲ್ಲಿಉಪ್ಪಿಗೆ ಬಲಗೈ ಬಂಟನಾದ ಅನೂಪ್ ರೇವಣ್ಣ; 'ಲಕ್ಷ್ಮಣ' ಬಳಿಕ ಮತ್ತೆ ಆರ್. ಚಂದ್ರು ಜತೆ ಕೆಲಸ
Anoop Revanna Kabzaa: ಈ ಹಿಂದೆ 'ಲಕ್ಷ್ಮಣ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಮಾಜಿ ಸಚಿವ ಎಚ್.ಎಂ. ರೇವಣ್ಣ ಅವರ ಮಗ ಅನೂಪ್, ಆ ನಂತರ 2017ರಲ್ಲಿ ಬಿಡುಗಡೆಯಾದ 'ಪಂಟ' ಚಿತ್ರದಲ್ಲೂ ನಾಯಕನಾಗಿ ನಟಿಸಿದ್ದರು. ಈಗ ಸುಮಾರು ಏಳು ವರ್ಷಗಳ ಗ್ಯಾಪ್ನ ಬಳಿಕ ಪುನಃ ಆರ್. ಚಂದ್ರು ನಿರ್ದೇಶನದ 'ಕಬ್ಜ' ಚಿತ್ರದ ಮೂಲಕ ಅನೂಪ್ ರೀಎಂಟ್ರಿ ಕೊಡುತ್ತಿದ್ದಾರೆ. ಪೂರ್ಣ ಓದಿಗೆ ಇಲ್ಲಿ ಕ್ಲಿಕ್ ಮಾಡಿ
ವಿಭಾಗ