ಬುಮ್ರಾ, ಪಾಂಡ್ಯ ಎಸೆತಗಳು ಹಣ್ಣುಗಾಯಿ-ನೀರುಗಾಯಿ; 2ನೇ ಬಾರಿ ದಾಖಲೆಯ ಅರ್ಧಶತಕ ಬಾರಿಸಿದ ಜೇಕ್ ಫ್ರೇಸರ್-ಮೆಕ್‌ಗುರ್ಕ್
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಬುಮ್ರಾ, ಪಾಂಡ್ಯ ಎಸೆತಗಳು ಹಣ್ಣುಗಾಯಿ-ನೀರುಗಾಯಿ; 2ನೇ ಬಾರಿ ದಾಖಲೆಯ ಅರ್ಧಶತಕ ಬಾರಿಸಿದ ಜೇಕ್ ಫ್ರೇಸರ್-ಮೆಕ್‌ಗುರ್ಕ್

ಬುಮ್ರಾ, ಪಾಂಡ್ಯ ಎಸೆತಗಳು ಹಣ್ಣುಗಾಯಿ-ನೀರುಗಾಯಿ; 2ನೇ ಬಾರಿ ದಾಖಲೆಯ ಅರ್ಧಶತಕ ಬಾರಿಸಿದ ಜೇಕ್ ಫ್ರೇಸರ್-ಮೆಕ್‌ಗುರ್ಕ್

  • Jake Fraser McGurk: ಮುಂಬೈ ಇಂಡಿಯನ್ಸ್ ವಿರುದ್ಧದ ಐಪಿಎಲ್‌ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ಆರಂಭಿಕ ಆಟಗಾರ ಜೇಕ್ ಫ್ರೇಸರ್-ಮ್ಯಾಕ್‌ಗುರ್ಕ್ ಅಬ್ಬರಿಸಿದ್ದಾರೆ. ಕೇವಲ 15 ಎಸೆತಗಳಲ್ಲಿ ಎರಡನೇ ಬಾರಿ ವೇಗವಾಗಿ ಅರ್ಧಶತಕ ಸಿಡಿಸಿದ್ದಾರೆ. ಶತಕದ ಅಂಚಿನಲ್ಲಿ ಎಡವಿದರೂ, ಮುಂಬೈ ತಂಡದ ಅನುಭವಿ ಬೌಲರ್‌ಗಳ ಬೆವರಿಳಿಸಿದ್ದಾರೆ.

ಪ್ರಸಕ್ತ ಆವೃತ್ತಿಯಲ್ಲಿ ಮ್ಯಾಕ್‌ಗುರ್ಕ್ ಎರಡನೇ ಬಾರಿಗೆ 15 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದಾರೆ. ಇದರೊಂದಿಗೆ ಟಿ20 ಕ್ರಕೆಟ್‌ನಲ್ಲಿ 15 ಅಥವಾ ಅದಕ್ಕಿಂತಲೂ ಕಡಿಮೆ ಎಸೆತಗಳಲ್ಲಿ ಎರಡು ಬಾರಿ ವೇಗದ ಅರ್ಧಶತಕ ಸಿಡಿಸಿದ ಕೇವಲ ಮೂರನೇ ಆಟಗಾರ ಎಂಬ ದಾಖಲೆ ಬರೆದಿದ್ದಾರೆ. ಆಂಡ್ರೆ ರಸೆಲ್‌ ಹಾಗೂ ಸುನಿಲ್‌ ನರೈನ್‌ ಮತ್ತಿಬ್ಬರು.
icon

(1 / 6)

ಪ್ರಸಕ್ತ ಆವೃತ್ತಿಯಲ್ಲಿ ಮ್ಯಾಕ್‌ಗುರ್ಕ್ ಎರಡನೇ ಬಾರಿಗೆ 15 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದಾರೆ. ಇದರೊಂದಿಗೆ ಟಿ20 ಕ್ರಕೆಟ್‌ನಲ್ಲಿ 15 ಅಥವಾ ಅದಕ್ಕಿಂತಲೂ ಕಡಿಮೆ ಎಸೆತಗಳಲ್ಲಿ ಎರಡು ಬಾರಿ ವೇಗದ ಅರ್ಧಶತಕ ಸಿಡಿಸಿದ ಕೇವಲ ಮೂರನೇ ಆಟಗಾರ ಎಂಬ ದಾಖಲೆ ಬರೆದಿದ್ದಾರೆ. ಆಂಡ್ರೆ ರಸೆಲ್‌ ಹಾಗೂ ಸುನಿಲ್‌ ನರೈನ್‌ ಮತ್ತಿಬ್ಬರು.(PTI)

ಡೆಲ್ಲಿ ಕ್ಯಾಪಿಟಲ್ಸ್‌ ಪರ ಸತತ ಎರಡು ಬಾರಿ ವೇಗದ ಅರ್ಧಶತಕ ಸಿಡಿಸಿದ ದಾಖಲೆ ಫ್ರೇಸರ್‌ ಹೆಸರಿಗೆ ದಾಖಲಾಯ್ತು.
icon

(2 / 6)

ಡೆಲ್ಲಿ ಕ್ಯಾಪಿಟಲ್ಸ್‌ ಪರ ಸತತ ಎರಡು ಬಾರಿ ವೇಗದ ಅರ್ಧಶತಕ ಸಿಡಿಸಿದ ದಾಖಲೆ ಫ್ರೇಸರ್‌ ಹೆಸರಿಗೆ ದಾಖಲಾಯ್ತು.(PTI)

ಪಂದ್ಯದಲ್ಲಿ ಬರೋಬ್ಬರಿ 311.11ರ ಸ್ಟ್ರೈಕ್‌ ರೇಟ್‌ನಲ್ಲಿ ಬ್ಯಾಟ್‌ ಬೀಸಿದ ಅವರು, ಅಂತಿಮವಾಗಿ ಕೇವಲ 27 ಎಸೆತಗಳಲ್ಲಿ 84 ರನ್‌ ಸಿಡಿಸಿ ಔಟಾದರು. ಇದರೊಂದಿಗೆ ವೇಗವಾಗಿ ಐಪಿಎಲ್‌ ಶತಕ ಸಿಡಿಸಿದ ದಾಖಲೆ ನಿರ್ಮಿಸುವ ಹಂತದಲ್ಲಿ ಎಡವಿದರು.
icon

(3 / 6)

ಪಂದ್ಯದಲ್ಲಿ ಬರೋಬ್ಬರಿ 311.11ರ ಸ್ಟ್ರೈಕ್‌ ರೇಟ್‌ನಲ್ಲಿ ಬ್ಯಾಟ್‌ ಬೀಸಿದ ಅವರು, ಅಂತಿಮವಾಗಿ ಕೇವಲ 27 ಎಸೆತಗಳಲ್ಲಿ 84 ರನ್‌ ಸಿಡಿಸಿ ಔಟಾದರು. ಇದರೊಂದಿಗೆ ವೇಗವಾಗಿ ಐಪಿಎಲ್‌ ಶತಕ ಸಿಡಿಸಿದ ದಾಖಲೆ ನಿರ್ಮಿಸುವ ಹಂತದಲ್ಲಿ ಎಡವಿದರು.(ANI)

ಫ್ರೇಸರ್‌ ಇನ್ನಿಂಗ್ಸ್‌ನಲ್ಲಿ 11 ಬೌಂಡರಿ ಹಾಗೂ 6 ಸ್ಫೋಟಕ ಸಿಕ್ಸರ್‌ಗಳು ಸೇರಿವೆ.
icon

(4 / 6)

ಫ್ರೇಸರ್‌ ಇನ್ನಿಂಗ್ಸ್‌ನಲ್ಲಿ 11 ಬೌಂಡರಿ ಹಾಗೂ 6 ಸ್ಫೋಟಕ ಸಿಕ್ಸರ್‌ಗಳು ಸೇರಿವೆ.(AP)

ಇನ್ನಿಂಗ್ಸ್‌ನಲ್ಲಿ ಮೊದಲ ಆರು ಓವರ್‌ಗಳ ಪವರ್‌ಪ್ಲೇ ಒಳಗಡೆ ಫ್ರೇಸರ್‌ 78 ರನ್‌ ಸಿಡಿಸಿದ್ದರು. ಐಪಿಎಲ್‌ ಪವರ್‌ಪ್ಲೇ ಒಳಗಡೆ ಅತಿ ಹೆಚ್ಚು ರನ್‌ ಗಳಿಸಿದ ಮೂರನೇ ಆಟಗಾರ ಫ್ರೇಸರ್.‌ ಈ ಹಿಂದೆ ಸುರೇಶ್‌ ರೈನಾ 87 ರನ್‌ ಗಳಿಸಿದ್ದರೆ, ಟ್ರಾವಿಸ್‌ ಹೆಡ್‌ ಪ್ರಸಕ್ತ ಆವೃತ್ತಿಯಲ್ಲಿಯೇ 84 ರನ್‌ ಗಳಿಸಿದ್ದರು.
icon

(5 / 6)

ಇನ್ನಿಂಗ್ಸ್‌ನಲ್ಲಿ ಮೊದಲ ಆರು ಓವರ್‌ಗಳ ಪವರ್‌ಪ್ಲೇ ಒಳಗಡೆ ಫ್ರೇಸರ್‌ 78 ರನ್‌ ಸಿಡಿಸಿದ್ದರು. ಐಪಿಎಲ್‌ ಪವರ್‌ಪ್ಲೇ ಒಳಗಡೆ ಅತಿ ಹೆಚ್ಚು ರನ್‌ ಗಳಿಸಿದ ಮೂರನೇ ಆಟಗಾರ ಫ್ರೇಸರ್.‌ ಈ ಹಿಂದೆ ಸುರೇಶ್‌ ರೈನಾ 87 ರನ್‌ ಗಳಿಸಿದ್ದರೆ, ಟ್ರಾವಿಸ್‌ ಹೆಡ್‌ ಪ್ರಸಕ್ತ ಆವೃತ್ತಿಯಲ್ಲಿಯೇ 84 ರನ್‌ ಗಳಿಸಿದ್ದರು.(PTI)

ಫ್ರೇಸರ್‌ ಅರ್ಧಶತಕದ ನೆರವಿಂದ ಪವರ್‌ಪ್ಲೇ ಬಳಿಕ ಡೆಲ್ಲಿ ಕ್ಯಾಪಿಟಲ್ಸ್‌ ವಿಕೆಟ್‌ ನಷ್ಟವಿಲ್ಲದೆ 92 ರನ್‌ ಗಳಿಸಿತು.
icon

(6 / 6)

ಫ್ರೇಸರ್‌ ಅರ್ಧಶತಕದ ನೆರವಿಂದ ಪವರ್‌ಪ್ಲೇ ಬಳಿಕ ಡೆಲ್ಲಿ ಕ್ಯಾಪಿಟಲ್ಸ್‌ ವಿಕೆಟ್‌ ನಷ್ಟವಿಲ್ಲದೆ 92 ರನ್‌ ಗಳಿಸಿತು.(PTI)


ಇತರ ಗ್ಯಾಲರಿಗಳು