262 ರನ್ ಚೇಸ್; ಐಪಿಎಲ್ ಅಲ್ಲ, ಟಿ20 ಕ್ರಿಕೆಟ್ ಚರಿತ್ರೆಯಲ್ಲೇ ಹೊಸ ವಿಶ್ವದಾಖಲೆ ನಿರ್ಮಿಸಿದ ಪಂಜಾಬ್ ಕಿಂಗ್ಸ್
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  262 ರನ್ ಚೇಸ್; ಐಪಿಎಲ್ ಅಲ್ಲ, ಟಿ20 ಕ್ರಿಕೆಟ್ ಚರಿತ್ರೆಯಲ್ಲೇ ಹೊಸ ವಿಶ್ವದಾಖಲೆ ನಿರ್ಮಿಸಿದ ಪಂಜಾಬ್ ಕಿಂಗ್ಸ್

262 ರನ್ ಚೇಸ್; ಐಪಿಎಲ್ ಅಲ್ಲ, ಟಿ20 ಕ್ರಿಕೆಟ್ ಚರಿತ್ರೆಯಲ್ಲೇ ಹೊಸ ವಿಶ್ವದಾಖಲೆ ನಿರ್ಮಿಸಿದ ಪಂಜಾಬ್ ಕಿಂಗ್ಸ್

  • Punjab Kings World Record: ಕೋಲ್ಕತ್ತಾ ನೈಟ್​ ರೈಡರ್ಸ್ ವಿರುದ್ಧ 262 ರನ್​ಗಳ ದಾಖಲೆಯ ರನ್​ ಚೇಸ್ ಮಾಡುವ ಮೂಲಕ ಪಂಜಾಬ್ ಕಿಂಗ್ಸ್ ವಿಶ್ವದಾಖಲೆ ನಿರ್ಮಿಸಿದೆ.

ಐಪಿಎಲ್ 2024ರ 42ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ನೂತನ ಚರಿತ್ರೆ ಸೃಷ್ಟಿಸಿದೆ. ಈಡನ್ ಗಾರ್ಡನ್ಸ್ ಮೈದಾನದಲ್ಲಿ ಏಪ್ರಿಲ್ 26ರ ಶುಕ್ರವಾರ ನಡೆದ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಅತಿ ಹೆಚ್ಚು ರನ್ ಚೇಸ್ ಮಾಡಿದ ವಿಶ್ವದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.
icon

(1 / 7)

ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಕೆಕೆಆರ್ ನಿಗದಿತ 20 ಓವರ್​​ಗಳಲ್ಲಿ 6 ವಿಕೆಟ್ ನಷ್ಟಕ್ಕೆ 261 ರನ್ ಕಲೆ ಹಾಕಿತು. ಪಂಜಾಬ್ 18.4 ಓವರ್​​ಗಳಲ್ಲಿ 2 ವಿಕೆಟ್ ಕಳೆದುಕೊಂಡು 262 ರನ್ ಬಾರಿಸಿತು. 8 ಎಸೆತಗಳು ಬಾಕಿ ಇರುವಂತೆಯೇ ಪಿಬಿಕೆಎಸ್ 8 ವಿಕೆಟ್​ಗಳಿಂದ ಗೆದ್ದಿತು.
icon

(2 / 7)

261 ರನ್​ಗಳ ಗುರಿ ಬೆನ್ನಟ್ಟಿದ ಪಿಬಿಕೆಎಸ್, ಪ್ರಭುಸಿಮ್ರಾನ್ ಸಿಂಗ್​, ಜಾನಿ ಬೈರ್​ಸ್ಟೋ ಮತ್ತು ಶಶಾಂಕ್ ಸಿಂಗ್ ಅವರು ಸಿಡಿಲಾರ್ಭಟದ ಬ್ಯಾಟಿಂಗ್ ನಡೆಸಿದರು. ಪ್ರಭು 50 ಎಸೆತಗಳಲ್ಲಿ 54 ರನ್ ಗಳಿಸಿದರೆ, ಬೈರ್​ಸ್ಟೋ 48 ಎಸೆತಗಳಲ್ಲಿ ಅಜೇಯ 108 ರನ್ ಗಳಿಸಿದರು. ಶಶಾಂಕ್ 28 ಎಸೆತಗಳಲ್ಲಿ 68 ರನ್ ಗಳಿಸಿ ಔಟಾಗದೆ ಉಳಿದರು.
icon

(3 / 7)

ಇದು ಐಪಿಎಲ್ ಮಾತ್ರವಲ್ಲ, ಟಿ20 ಕ್ರಿಕೆಟ್​​​ ಇತಿಹಾಸದಲ್ಲಿ ಅತಿದೊಡ್ಡ ರನ್​ಚೇಸ್ ಆಗಿದೆ. 17 ಆವೃತ್ತಿಗಳ ಐಪಿಎಲ್​​ನಲ್ಲಿ 262 ರನ್​​​ಗಳ ಚೇಸ್ ಅತ್ಯಂತ ಯಶಸ್ವಿ ಚೇಸಿಂಗ್ ಆಗಿದೆ. ಈ ಹಿಂದೆ 2020ರಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ರಾಜಸ್ಥಾನ್ ರಾಯಲ್ಸ್ 224 ರನ್​​ ಗುರಿ ಬೆನ್ನಟ್ಟಿದ್ದೇ ಇದುವರೆಗಿನ ಗರಿಷ್ಠ ರನ್ ಚೇಸ್ ಆಗಿತ್ತು.
icon

(4 / 7)

ಇದೀಗ ಅತ್ಯಧಿಕ ರನ್ ಚೇಸ್ ಮಾಡಿದ್ದ ಆರ್​​ಆರ್​ ದಾಖಲೆ ಮುರಿದಿರುವ ಪಂಜಾಬ್ ಕಿಂಗ್ಸ್, ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲೂ ಹೊಸ ಮೈಲಿಗಲ್ಲು ತಲುಪಿದೆ. 2023ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 259 ರನ್ ಚೇಸ್ ಮಾಡಿದ್ದ ಸೌತ್ ಆಫ್ರಿಕಾ ವಿಶ್ವ ದಾಖಲೆ ಬರೆದಿತ್ತು. ಇದೀಗ ಇದನ್ನೂ ಪಂಜಾಬ್ ಕಿಂಗ್ಸ್ ಮುರಿದಿದೆ.
icon

(5 / 7)

2023ರಲ್ಲಿ ಸೆಂಚೂರಿಯನ್​ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ದಕ್ಷಿಣ ಆಫ್ರಿಕಾ 259 ರನ್​​ಗಳ ಗುರಿ ಬೆನ್ನಟ್ಟಿತ್ತು. ಪಂಜಾಬ್ ಈಗ ಆ ದಾಖಲೆ ಮುರಿದಿದೆ. 2023ರ ಟಿ20 ಬ್ಲಾಸ್ಟ್​​ನಲ್ಲಿ ಮಿಡ್ಲ್​ಸೆಕ್ಸ್​ ಚೇಸಿಂಗ್​ನಲ್ಲಿ 253 ರನ್ ಬೆನ್ನಟ್ಟಿ ಸರ್ರೆಯನ್ನು ಸೋಲಿಸಿತು. ಪಿಎಸ್​ಎಲ್​​ನಲ್ಲಿ ಪೇಶಾವರ್ ಝಲ್ಮಿ ನೀಡಿdfd 243 ರನ್​​ಗಳ ಗುರಿ ಬೆನ್ನಟ್ಟುವ ಮೂಲಕ ಮುಲ್ತಾನ್ ಸುಲ್ತಾನ್ಸ್ ಪಿಎಸ್ಎಲ್ ಅನ್ನು ಗೆದ್ದುಕೊಂಡಿತು. 
icon

(6 / 7)

2023ರಲ್ಲಿ ಸೆಂಚೂರಿಯನ್​ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ದಕ್ಷಿಣ ಆಫ್ರಿಕಾ 259 ರನ್​​ಗಳ ಗುರಿ ಬೆನ್ನಟ್ಟಿತ್ತು. ಪಂಜಾಬ್ ಈಗ ಆ ದಾಖಲೆ ಮುರಿದಿದೆ. 2023ರ ಟಿ20 ಬ್ಲಾಸ್ಟ್​​ನಲ್ಲಿ ಮಿಡ್ಲ್​ಸೆಕ್ಸ್​ ಚೇಸಿಂಗ್​ನಲ್ಲಿ 253 ರನ್ ಬೆನ್ನಟ್ಟಿ ಸರ್ರೆಯನ್ನು ಸೋಲಿಸಿತು. ಪಿಎಸ್​ಎಲ್​​ನಲ್ಲಿ ಪೇಶಾವರ್ ಝಲ್ಮಿ ನೀಡಿdfd 243 ರನ್​​ಗಳ ಗುರಿ ಬೆನ್ನಟ್ಟುವ ಮೂಲಕ ಮುಲ್ತಾನ್ ಸುಲ್ತಾನ್ಸ್ ಪಿಎಸ್ಎಲ್ ಅನ್ನು ಗೆದ್ದುಕೊಂಡಿತು. (PTI)

ಇದು ಟಿ20 ಕ್ರಿಕೆಟ್​ ರನ್ ಚೇಸ್​​ನಲ್ಲಿ ಗರಿಷ್ಠ ಸ್ಕೋರ್ ದಾಖಲಿಸಿ ಆರ್​ಸಿಬಿ ದಾಖಲೆ ಸರಿಗಟ್ಟಿದೆ. ಪಂಜಾಬ್ 2 ವಿಕೆಟ್ ನಷ್ಟಕ್ಕೆ 262 ರನ್ ಸಿಡಿಸಿದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 8 ವಿಕೆಟ್ ನಷ್ಟಕ್ಕೆ 262 ರನ್ ಗಳಿಸಿತ್ತು. ಆದಾಗ್ಯೂ, ಆರ್​​​ಸಿಬಿ ಸನ್​​ರೈಸರ್ಸ್​ ಹೈದರಾಬಾದ್ ವಿರುದ್ಧ ಸೋತಿತ್ತು.
icon

(7 / 7)

ಇತರ ಗ್ಯಾಲರಿಗಳು