ಕನ್ನಡ ಸುದ್ದಿ  /  ಕ್ರಿಕೆಟ್  /  ವಿರಾಟ್ ಕೊಹ್ಲಿ ಆರಂಭಿಕರಾದರೆ...; ಭಾರತ ತಂಡದ ಆಯ್ಕೆಗೂ ಮುನ್ನ ಇರ್ಫಾನ್ ಪಠಾಣ್ ಮಹತ್ವದ ಹೇಳಿಕೆ

ವಿರಾಟ್ ಕೊಹ್ಲಿ ಆರಂಭಿಕರಾದರೆ...; ಭಾರತ ತಂಡದ ಆಯ್ಕೆಗೂ ಮುನ್ನ ಇರ್ಫಾನ್ ಪಠಾಣ್ ಮಹತ್ವದ ಹೇಳಿಕೆ

Irfan Pathan : ಟಿ20 ವಿಶ್ವಕಪ್ 2024 ಟೂರ್ನಿಗೆ ಭಾರತ ತಂಡವನ್ನು ಘೋಷಿಸುವುದಕ್ಕೂ ಮುನ್ನ ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್ ಅವರಿಗೆ ಭಾರತೀಯ ಕ್ರಿಕೆಟ್​​ನ ಅತಿದೊಡ್ಡ ಸವಾಲು ಏನೆಂಬುದರ ಕುರಿತು ಇರ್ಫಾನ್ ಪಠಾಣ್ ಎಚ್ಚರಿಕೆ ನೀಡಿದ್ದಾರೆ.

ಭಾರತ ತಂಡದ ಆಯ್ಕೆಗೂ ಮುನ್ನ ಇರ್ಫಾನ್ ಪಠಾಣ್ ಮಹತ್ವದ ಹೇಳಿಕೆ
ಭಾರತ ತಂಡದ ಆಯ್ಕೆಗೂ ಮುನ್ನ ಇರ್ಫಾನ್ ಪಠಾಣ್ ಮಹತ್ವದ ಹೇಳಿಕೆ

ಟಿ20 ವಿಶ್ವಕಪ್ ಟೂರ್ನಿಗೆ (T20 World Cup 2024) ಭಾರತ ತಂಡವನ್ನು ಪ್ರಕಟಿಸುವುದಕ್ಕೂ ಮುನ್ನ ವಿರಾಟ್ ಕೊಹ್ಲಿ (Virat Kohli) ಅವರ ಕ್ರಮಾಂಕ ತಲೆನೋವು ಹೆಚ್ಚಿಸಿದೆ. ಟಿ20 ಮತ್ತು ಏಕದಿನ ಮಾದರಿಯ ಕ್ರಿಕೆಟ್​​ನಲ್ಲಿ 3ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸುವ ಕೊಹ್ಲಿ, ಪ್ರಸಕ್ತ ಐಪಿಎಲ್​ನಲ್ಲಿ ಆರಂಭಿಕರಾಗಿ ಅದ್ಭುತ ಪ್ರದರ್ಶನ ನೀಡಿರುವ ಕಾರಣ ಮತ್ತೊಂದು ಚರ್ಚೆಯನ್ನು ಹುಟ್ಟುಹಾಕಿದೆ. ಟೀಮ್ ಇಂಡಿಯಾ ಪರವೂ ವಿರಾಟ್ ಓಪನರ್​​ ಆಗಿ ಆಡಬೇಕು ಎನ್ನುವುದರ ಕುರಿತಂತೆ ಮಾಜಿ ನಾಯಕ ಸೌರವ್ ಗಂಗೂಲಿ (Sourav Ganguly) ಸೇರಿದಂತೆ ಪ್ರಮುಖ ಆಟಗಾರರ ಬೆಂಬಲವೂ ವ್ಯಕ್ತವಾಗಿದೆ. 

ಟ್ರೆಂಡಿಂಗ್​ ಸುದ್ದಿ

ಜೂನ್​ 1ರಿಂದ ಶುರುವಾಗುವ ಮಿನಿ ವಿಶ್ವಕಪ್​​​ಗೆ ತಂಡವನ್ನು ಘೋಷಿಸುವ ಮೊದಲು, ಬಿಸಿಸಿಐ ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್ ಅವರಿಗೆ ಭಾರತದ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್, ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ. ಸ್ಟಾರ್ ಸ್ಪೋರ್ಟ್ಸ್ ಜೊತೆ ಮಾತನಾಡಿದ ಇರ್ಫಾನ್, ಅಗ್ರ ಆರು ಸ್ಥಾನಗಳಲ್ಲಿ ಬೌಲಿಂಗ್ ಆಯ್ಕೆಗಳ ಕೊರತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಇದು ಕಳೆದ ಕೆಲವು ವರ್ಷಗಳಿಂದ ಮೆನ್ ಇನ್ ಬ್ಲೂ ತಂಡವನ್ನು ಕಾಡುತ್ತಿದೆ. ಏಕದಿನ ವಿಶ್ವಕಪ್​ನಲ್ಲಿ ಹಾರ್ದಿಕ್ ಪಾಂಡ್ಯ ಹೊರಬಿದ್ದ ನಂತರ ಇದೇ ರೀತಿಯ ಚರ್ಚೆ ರೂಪುಗೊಂಡಿತ್ತು. ಮತ್ತೆ ಅದೇ ಚರ್ಚೆ ನಡೆಯುತ್ತಿದೆ.

ವಿರಾಟ್ ಕೊಹ್ಲಿ ಆರಂಭಿಕನಾಗಿ ಬೇಡ ಎಂದ ಇರ್ಫಾನ್ ಪಠಾಣ್

ಇತ್ತೀಚೆಗೆ ಮುಂಬೈ ಇಂಡಿಯನ್ಸ್ ವಿರುದ್ಧ ಶತಕ ಬಾರಿಸಿದ ಯಶಸ್ವಿ ಜೈಸ್ವಾಲ್ ಅವರು ನಾಯಕ ರೋಹಿತ್ ಶರ್ಮಾ ಅವರೊಂದಿಗೆ ಆರಂಭಿಕರಾಗಿ ಕಣಕ್ಕಿಳಿಯಬೇಕು ಎಂದು ಇರ್ಫಾನ್ ಪಠಾಣ್ ಬೆಂಬಲಿಸಿದ್ದಾರೆ. ‘ನನ್ನ ಪ್ರಕಾರ, ಭಾರತದ ಆರಂಭಿಕ ಆಟಗಾರರಾಗಿ ಜೈಸ್ವಾಲ್-ರೋಹಿತ್ ಇರಬೇಕು. ಬಲಗೈ ಮತ್ತು ಎಡಗೈ ಸಂಯೋಜನೆಯಿಂದ ತಂಡಕ್ಕೆ ಪ್ರಯೋಜನವಾಗಲಿದೆ. ಜೈಸ್ವಾಲ್ ಅಂತಾರಾಷ್ಟ್ರೀಯ ಸ್ಟ್ರೈಕ್​ರೇಟ್ 160 ಎಂಬುದನ್ನು ಮರೆಯಬೇಡಿ. ತಂಡಕ್ಕೆ ಅದು ಬೇಕು, ಆ ಫೈರ್​ ಪವರ್ ಬೇಕು’ ಎಂದು ಹೇಳಿದ್ದಾರೆ.

ಆದಾಗ್ಯೂ, ಇರ್ಫಾನ್ ಅವರು ಕೊಹ್ಲಿ, ಭಾರತಕ್ಕೆ ಓಪನಿಂಗ್ ಮಾಡುವ ಸಾಧ್ಯತೆ ತಳ್ಳಿ ಹಾಕಿದ್ದಾರೆ. ವಿರಾಟ್ ಬ್ಯಾಟಿಂಗ್ ಆರಂಭಿಸಿದರೆ, ಅದು 11 ರನ್​​ಗಳ ಸಂಯೋಜನೆ ನಿರ್ದಿಷ್ಟ ರೀತಿಯಲ್ಲಿರಲು ಅನುವು ಮಾಡಿಕೊಡುತ್ತದೆ. ಶಿವಂ ದುಬೆ ಮತ್ತು ರಿಂಕು ಸಿಂಗ್​​ ಅವರು ತಂಡಕ್ಕೆ ಆಯ್ಕೆಯಾದರೆ, ಈ ಪವರ್ ಹಿಟ್ಟರ್​ಗಳನ್ನು ತಂಡಕ್ಕೆ ಸೇರಿಸಲು ಅವಕಾಶ ನೀಡುತ್ತದೆ ಎಂದು ಅವರು ಹೇಳಿದ್ದಾರೆ. ಜೈಸ್ವಾಲ್ ಇನ್ನಿಂಗ್ಸ್ ಆರಂಭಿಸಿದರೆ, ಅರೆಕಾಲಿಕ ಸ್ಪಿನ್ನರ್ ಆಯ್ಕೆಗೆ ಅವಕಾಶ  ನೀಡುತ್ತದೆ ಎಂದು ಸಲಹೆ ನೀಡಿದ್ದಾರೆ.

ಯಶಸ್ವಿ ಜೈಸ್ವಾಲ್ ಬೌಲಿಂಗ್ ಮಾಡಬೇಕು ಎಂದ ಮಾಜಿ ಆಟಗಾರ

ವಿರಾಟ್ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದರೆ, ರಿಂಕು ಸಿಂಗ್​ ಮತ್ತು ಶಿವಂ ದುಬೆ ಇಬ್ಬರು ಆಡಲು ಸಾಧ್ಯವಿಲ್ಲ. ಒಬ್ಬರಿಗೆ ಅವಕಾಶ ಸಿಗುತ್ತದೆ. ಹಾಗಾಗಿ ಇದು ದೊಡ್ಡ ಸವಾಲಾಗಿದೆ. ಯಶಸ್ವಿ ಜೈಸ್ವಾಲ್ ಆಡಿಸಿ ಆತನನ್ನು ನೆಟ್ಸ್​ನಲ್ಲಿ ನಿಯಮಿತವಾಗಿ ಬೌಲಿಂಗ್ ಪ್ರಾಕ್ಟೀಸ್ ಮಾಡುವಂತೆ ಮಾಡಬೇಕು. ಆಗ ಸರಿಯಾದ ಐದು ಬೌಲರ್​​ಗಳನ್ನು ಆಡಿಸಿ, ಆತನನ್ನು ಆರನೇ ಬೌಲರ್​ ಆಗಿ ಆಡಿಸಬಹುದು. ಇಲ್ಲದಿದ್ದರೆ, ನೀವು ಬ್ಯಾಟಿಂಗ್​ನಲ್ಲಿ ಅಗ್ರ-6ರಲ್ಲಿ ಯಾರು ಬೌಲಿಂಗ್ ಮಾಡುವವರೇ ಇರುವುದಿಲ್ಲ ಎಂದಿದ್ದಾರೆ.

ಇದೇ ವಿಚಾರ ಭಾರತ ತಂಡಕ್ಕೆ ಇದೇ ದೊಡ್ಡ ಸವಾಲಾಗಿದೆ. ವಿರಾಟ್ ಕೊಹ್ಲಿ ಆರಂಭಿಕ ಅಥವಾ 3ನೇ ಕ್ರಮಾಂಕ ಆಡುತ್ತಾರೆ ಎನ್ನುವುದರ ಮೇಲೆ ತಂಡದ ಸಂಯೋಜನೆ ಇರಲಿದೆ. ಆದರೆ ನನ್ನ ಪಾಲಿಗೆ ಯಶಸ್ವಿ ಮತ್ತು ರೋಹಿತ್ ಇನ್ನಿಂಗ್ಸ್ ಆರಂಭಿಸಬೇಕು. ವಿರಾಟ್ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಬೇಕು ಎಂದು ಹೇಳಿದ್ದಾರೆ. ಪ್ರಸ್ತುತ ಭಾರತ ತಂಡದಲ್ಲಿ ಕೊಹ್ಲಿಯ ಪಾತ್ರವು ಪ್ರಮುಖ ಪಾತ್ರವಹಿಸುತ್ತದೆ ಎಂಬ ಸುಳಿವು ನೀಡುತ್ತಿದೆ. ಕೊಹ್ಲಿಯೊಂದಿಗೆ ಆರಂಭಿಕರಾಗಿ ಪ್ರಾರಂಭಿಸುವುದು ಭಾರತಕ್ಕೆ ಹೆಚ್ಚು ಸಂಭವನೀಯ ಆಯ್ಕೆಯಾಗಿದೆ. ಏಕೆಂದರೆ ಇದು ತಂಡಕ್ಕೆ ಸ್ವರೂಪದಲ್ಲಿ ಹೆಚ್ಚು ಆಕ್ರಮಣಕಾರಿ ವಿಧಾನವನ್ನು ಅಳವಡಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ.

ಇನ್ನಷ್ಟು ಕ್ರಿಕೆಟ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​​ ಮಾಡಿ

IPL_Entry_Point