ಕನ್ನಡ ಸುದ್ದಿ  /  Entertainment  /  Bollywood Actress Celina Jaitly Hits Back At Troll Who Accused Her Of Sleeping With Fardeen Khan Feroz Khan Mnk

Celina Jaitly: ‘ಅವಕಾಶಕ್ಕಾಗಿ ನಿರ್ದೇಶಕನ ಮುಂದೆ ಬೆತ್ತಲಾದವಳು ನೀನು!’; ವಿಮರ್ಶಕ ಮತ್ತು ನಟಿ ಸೆಲೀನಾ ಜೇಟ್ಲಿ ಟ್ವಿಟ್‌ ಸಮರ..

ನಟ ಮತ್ತವರ ತಂದೆಯ ಜತೆಗೆ ಮಲಗಿದ ಏಕೈಕ ಬಾಲಿವುಡ್‌ ನಟಿ ಎಂದರೆ ಅದು ಸೆಲೀನಾ ಜೇಟ್ಲಿ ಎಂದು ಟ್ವಿಟ್‌ ಮಾಡಿದ ವಿಮರ್ಶಕನನ್ನು ತರಾಟೆಗೆ ತೆಗೆದುಕೊಂಡ ನಟಿ ಸೆಲೀನಾ.

‘ಅಪ್ಪ ಮಗನ ಜತೆಗೆ ನಟಿಯ ಹಾಸಿಗೆ ನಂಟು!; ಪೋಸ್ಟ್‌ ಹಾಕಿದವನ ಚಳಿ ಬಿಡಿಸಿದ ನಟಿ ಸೆಲೀನಾ ಜೇಟ್ಲಿ..
‘ಅಪ್ಪ ಮಗನ ಜತೆಗೆ ನಟಿಯ ಹಾಸಿಗೆ ನಂಟು!; ಪೋಸ್ಟ್‌ ಹಾಕಿದವನ ಚಳಿ ಬಿಡಿಸಿದ ನಟಿ ಸೆಲೀನಾ ಜೇಟ್ಲಿ..

Celina Jaitly: ಬಾಲಿವುಡ್ ನಟಿ ಸೆಲೀನಾ ಜೇಟ್ಲಿ ಬಾಲಿವುಡ್‌ನಲ್ಲಿ ನಿಷ್ಠುರತೆಗೆ ಹೆಸರುವಾಸಿಯಾಗಿದ್ದಾರೆ. ಸಾಮಾಜಿಕ ಜಾಲತಾಣಗಳಾಗಲಿ ಅಥವಾ ಸಾರ್ವಜನಿಕ ಸ್ಥಳವಾಗಲಿ ಪ್ರತಿ ವಿಚಾರದಲ್ಲೂ ತಮ್ಮ ಅಭಿಪ್ರಾಯವನ್ನು ಬಹಿರಂಗವಾಗಿಯೇ ವ್ಯಕ್ತಪಡಿಸುತ್ತಾರೆ. ಈಗಾಗಲೇ ಅದು ಸಾಕಷ್ಟು ಬಾರಿ ಸಾಬೀತಾಗಿದೆ. ಇದೀಗ ಟ್ವಿಟರ್‌ನಲ್ಲಿನ ಪೋಸ್ಟ್‌ವೊಂದು ಸೆಲಿನಾ ಅವರನ್ನು ನಿಗಿ ನಿಗಿ ಕೆಂಡದಂತೆ ಮಾಡಿದೆ. ಆ ಪೋಸ್ಟ್‌ಗೆ ತಕ್ಕ ಪ್ರತಿಕ್ರಿಯೆಯನ್ನೂ ನೀಡಿದ್ದಾರೆ ಸೆಲೀನಾ.

ಸೆಲೀನಾ ಜೇಟ್ಲಿ ಬಗ್ಗೆ ಉಮೈರ್‌ ಸಂಧು ಎಂಬ ಟ್ವಿಟರ್‌ ಬಳಕೆದಾರರೊಬ್ಬರು ಹೀಗೆ ಬರೆದಿದ್ದಾರೆ. 'ಸೆಲೀನಾಜೇಟ್ಲಿ ಅವರು ಫರ್ದೀನ್ ಖಾನ್ ಮತ್ತು ಅವರ ತಂದೆ ಫಿರೋಜ್ ಖಾನ್ ಅವರೊಂದಿಗೆ ಅನೇಕ ಬಾರಿ ಮಲಗಿರುವ ಏಕೈಕ ಬಾಲಿವುಡ್ ನಟಿ' ಎಂದು ಪೋಸ್ಟ್‌ ಹಾಕಿ ಆರೋಪಿಸಿದ್ದಾರೆ. ಇದನ್ನು ಗಮನಿಸಿದ ಸೆಲೀನಾ, ಕೊಂಚ ಖಾರವಾಗಿಯೇ ಪ್ರತಿಕ್ರಿಯೆ ನೀಡಿದ್ದಾರೆ. ಪೋಸ್ಟ್‌ ಹಾಕಿದ ಉಮೈರ್‌ ಸಂದುಗೆ ಪ್ರತ್ಯುತ್ತರ ನೀಡಿದ್ದಾರೆ.

ಸೆಲೀನಾ ಜೇಟ್ಲಿ ಪ್ರತ್ಯುತ್ತರ

ಟ್ವೀಟ್‌ಗೆ ಉತ್ತರಿಸಿದ ಸೆಲೀನಾ ಜೇಟ್ಲಿ, "ಆತ್ಮೀಯ ಸಂಧು, ನಿನಗಿರುವ ಲೈಂಗಿಕ ಸಮಸ್ಯೆಯನ್ನು ಪರಿಹರಿಸಿಕೋ. ಅದಕ್ಕೆ ಹತ್ತು ಹಲವು ದಾರಿಗಳಿವೆ. ಈ ಕೂಡಲೇ ವೈದ್ಯರ ಬಳಿ ತೆರಳಿ ಚಿಕಿತ್ಸೆ ಪಡೆದುಕೊಳ್ಳಿ" ಎಂದು ವಿಮರ್ಶಕನ ಪೋಸ್ಟ್‌ಗೆ ಕಮೆಂಟ್‌ ಮಾಡಿ, ಇಂಥವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಟ್ವಿಟರ್‌ ಸೇಫ್ಟಿಗೆ ಟ್ಯಾಗ್‌ ಸಹ ಮಾಡಿದ್ದಾರೆ ಸೆಲೀನಾ.

ಉಮೈರ್‌ ಸಂಧು ಮರು ಪ್ರತಿಕ್ರಿಯೆ

ನಟಿ ಸೆಲೀನಾ ಟ್ವಿಟ್‌ನಲ್ಲಿ ಪ್ರತಿಕ್ರಿಯೆ ನೀಡುತ್ತಿದ್ದಂತೆ, ಅದಕ್ಕೆ ಮರು ಉತ್ತರಿಸಿದ ಉಮೈರ್‌, ʼ2003ರಲ್ಲಿ ಜನಶೀನ್‌ ಸಿನಿಮಾದ ಆಡಿಷನ್‌ ವೇಳೆ ನಿರ್ದೇಶಕ ಫಿರೋಜ್‌ ಖಾನ್‌ ಅವರ ಕಚೇರಿಯಲ್ಲಿ ನೀನು ಬೆತ್ತಲಾಗಿದ್ದೆ" ಎಂದು ಟ್ವಿಟ್‌ ಮಾಡಿದ್ದಾರೆ. ಅಷ್ಟೇ ಅಲ್ಲದೇ ಇನ್ನೊಂದು ಟ್ವಿಟ್‌ನಲ್ಲಿ "ಬಾಯಿ ಮುಚ್ಚು ಸಾಕು, ನೀನು ಒಬ್ಬ ಸಿ ಗ್ರೇಡ್‌ ನಟಿ. ನೀವು ಮಾಡಿದ ಸಿನಿಮಾಗಳನ್ನೊಮ್ಮೆ ನೋಡಿ. ಅದರಲ್ಲಿ ಸಾಫ್ಟ್‌ ಪೋರ್ನ್‌ ಸಿನಿಮಾಗಳೇ ಹೆಚ್ಚಿವೆ. ಇದೀಗ ಶ್ರೀಮಂತ ಹುಡುಗನನ್ನು ಮದುವೆಯಾಗಿ ಸೆಟಲ್‌ ಆಗಿದ್ದೀಯಾ. ಸ್ವಾರ್ಥಿ ನೀನು" ಎಂದು ಆರೋಪಿಸಿದ್ದಾರೆ ಉಮೈರ್.‌

ಫರ್ದೀನ್-ಫಿರೋಜ್ ಸಿನಿಮಾದಲ್ಲಿ ಸೆಲೀನಾ ನಟನೆ...

ಜನಶೀನ್ (Janasheen) ಚಿತ್ರದ ಮೂಲಕ ಸೆಲೀನಾ ಜೇಟ್ಲಿ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಫಿರೋಜ್ ಖಾನ್ ನಿರ್ದೇಶನದ ಈ ಚಿತ್ರದಲ್ಲಿ ಸೆಲೀನಾ, ಫರ್ದೀನ್ ಖಾನ್ ಜೊತೆ ತೆರೆ ಹಂಚಿಕೊಂಡಿದ್ದಾರೆ. ಇದಲ್ಲದೆ 'ಟಾಮ್ ಡಿಕ್ ಹ್ಯಾರಿ', 'ಅಪ್ನಾ ಸಪ್ನಾ ಮನಿ ಮನಿ', 'ನೋ ಎಂಟ್ರಿ' ಮತ್ತು 'ಗೋಲ್ಮಾಲ್ ರಿಟರ್ನ್ಸ್' ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. 2020 ರಲ್ಲಿ ಸೀಸನ್ ಗ್ರೀಟಿಂಗ್ಸ್ ಚಿತ್ರದ ಮೂಲಕ ನಟಿ ಸೆಲೀನಾ ಜೇಟ್ಲಿ ಕಂಬ್ಯಾಕ್ ಮಾಡಿದ್ದರು.

ಕನ್ನಡದ ಶ್ರೀನಿಧಿ ಶೆಟ್ಟಿ ಬಗ್ಗೆಯೂ ಟ್ವಿಟ್‌..

ಕೆಜಿಎಫ್‌ ಸಿನಿಮಾದ ಶೂಟಿಂಗ್‌ ಸೆಟ್‌ನಲ್ಲಿ ನಟ ಯಶ್‌ ಅವರಿಂದ ಶ್ರೀನಿಧಿ ಶೆಟ್ಟಿ ಕಿರುಕುಳ ಅನುಭವಿಸಿದ್ದಾರೆ ಎಂಬ ಸುದ್ದಿ ಸೋಷಿಯಲ್‌ ಮೀಡಿಯಾದಲ್ಲಿ ಕಳೆದ ತಿಂಗಳಯ ವೈರಲ್‌ ಆಗಿತ್ತು. ಇದೇ ವಿಮರ್ಶಕ ಉಮೈರ್‌ ಸಂಧು ಈ ವಿಚಾರವನ್ನು ಟ್ವಿಟರ್‌ನಲ್ಲಿ ಪೋಸ್ಟ್‌ ಮಾಡಿದ್ದರು. "ಕೆಜಿಎಫ್‌ ಚಾಪ್ಟರ್‌ 2 ಶೂಟಿಂಗ್‌ ಸೆಟ್‌ನಲ್ಲಿ ಯಶ್‌ ಅವರಿಂದ ನಾನು ಸಾಕಷ್ಟು ಮುಜುಗರಕ್ಕೊಳಗಾಗಿದ್ದೇನೆ. ಇನ್ನೆಂದೂ ನಾನು ಯಶ್‌ ಜೊತೆ ಕೆಲಸ ಮಾಡಲ್ಲ. ಆತ ವಿಷಕಾರಿ, ಕಿರುಕುಳ ನೀಡುವ ವ್ಯಕ್ತಿತ್ವ" ಎಂದು ಉಮೈರ್‌ ಸಂಧು ಶ್ರೀನಿಧಿ ಹೇಳಿದ್ದಾರೆಂದು ಪೋಸ್ಟ್‌ ಮಾಡಿದ್ದರು.

ಶ್ರೀನಿಧಿ ಸ್ಪಷ್ಟನೆ..

ಈ ಟ್ವಿಟರ್‌ ಪೋಸ್ಟ್‌ ವೈರಲ್‌ ಆಗುತ್ತಿದ್ದಂತೆ, ಯಶ್‌ ಅಭಿಮಾನಿಗಳು ಗರಂ ಆಗಿದ್ದರು. ನಟಿಯ ವಿರುದ್ಧ ತಿರುಗಿ ಬಿದ್ದಿದ್ದರು. ಅಭಿಮಾನಿಗಳ ಈ ವರ್ತನೆ ಕಂಡು ಸುದ್ದಿಯ ಸತ್ಯಾಸತ್ಯತೆ ತಿಳಿದ ಶ್ರೀನಿಧಿ, ಸೋಷಿಯಲ್‌ ಮೀಡಿಯಾದಲ್ಲಿ ಸ್ಪಷ್ಟನೆ ಸಹ ನೀಡಿದ್ದರು. ಇದೊಂದು ಸುಳ್ಳು ಸುದ್ದಿ, ಆ ರೀತಿಯ ಯಾವ ಅನುಭವವವೂ ನನಗಾಗಿಲ್ಲ. ಇದೆಲ್ಲವೂ ಸುಳ್ಳು ಎಂದಿದ್ದಾರೆ.

'ಕೆಲವರು ಸುಳ್ಳು ಪ್ರಚಾರ ಮತ್ತು ವದಂತಿಗಳನ್ನು ಹಬ್ಬಿಸಲು ಸೋಷಿಯಲ್‌ ಮೀಡಿಯಾ ಬಳಸುತ್ತಾರೆ. ಇದು ಪ್ರೀತಿಯನ್ನು ಹರಡುವ ತಾಣ ಎಂದು ನಾನು ಭಾವಿಸುತ್ತೇನೆ. ಯಶ್‌ ಜತೆ ಕೆಲಸ ಮಾಡಲು ನಾನು ನಿಜಕ್ಕೂ ಅದೃಷ್ಟಮಾಡಿದ್ದೆ. ಅವರೊಬ್ಬ ರಿಯಲ್‌ ಜೆಂಟಲ್‌ಮ್ಯಾನ್, ಒಬ್ಬ ಮೆಂಟರ್‌, ಅಷ್ಟೇ ಒಳ್ಳೆಯ ಸ್ನೇಹಿತ, ನನ್ನ ಸ್ಫೂರ್ತಿ. ಇದೆಲ್ಲದಕ್ಕಿಂತ ಹೆಚ್ಚಾಗಿ ನಾನು ರಾಕಿಂಗ್‌ ಸ್ಟಾರ್‌ ಯಶ್‌ ಅವರ ಬಹುದೊಡ್ಡ ಅಭಿಮಾನಿ" ಎಂದಿದ್ದರು ಶ್ರೀನಿಧಿ.

IPL_Entry_Point